ಮಂಗಳೂರಿನಂತೆ ಮೈಸೂರಲ್ಲೂ ವಿಶೇಷ ಪೊಲೀಸ್ ತಂಡ ರಚನೆ: ಡಿಸಿ ಮೂಲಕ ಸಿಎಂ ಗೆ ಕನ್ನಡ ಒಕ್ಕೂಟ ಮನವಿ

Spread the love

ಮೈಸೂರು: ಮಂಗಳೂರಿನಲ್ಲಿ ನಡೆದ ರೌಡಿ ಶೀಟರ್ ಕೊಲೆ ಪ್ರಕರಣದ ನಂತರ ಎರಡು ಜಿಲ್ಲೆಗಳಿಗೆ ಸೀಮಿತವಾಗಿ ರಚನೆ ಮಾಡಿದ ಕೋಮು ಹಿಂಸಾಚಾರ‌ ನಿಗ್ರಹ ಪಡೆ ವಿಶೇಷ ಪೋಲಿಸ್ ತಂಡದ ಮಾದರಿಯಲ್ಲೇ ಮೈಸೂರಿನಲ್ಲೂ ರಚಿಸಬೇಕೆಂದು ಕನ್ನಡಪರ ಸಂಘಟನೆಗಳು ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಗೆ ಮನವಿ ಸಲ್ಲಿಸಿವೆ.

ಮೈಸೂರು ಜಿಲ್ಲಾ ವಿವಿಧ ಕನ್ನಡಪರ ಸಂಘಟನೆಗಳ ಕನ್ನಡ ಒಕ್ಕೂಟ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಡಿಸಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದವು.

ಮೈಸೂರು ಜಿಲ್ಲೆಯಲ್ಲೂ ಕೂಡ ಹಲವಾರು ವರ್ಷಗಳಿಂದ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವ ಘಟನೆಗಳು ನಡೆದಿವೆ,
ಪ್ರಸ್ತುತ ದಿನಗಳಲ್ಲಿ ಕೂಡ ಸೂಕ್ಷ್ಮಾತಿ ಸೂಕ್ಷ್ಮ ನಗರವಾಗಿದೆ.

ಅಲ್ಲದೆ ರೌಡಿ ಶೀಟರ್ ಗಳ ಗ್ಯಾಂಗ್ ವಾರ್ ಗಳು, ಆಗಾಗ್ಗೆ ನಡೆಯುತ್ತಿರುವ ರೌಡಿ ಶೀಟರ್ ಗಳ ಕೊಲೆ ಪ್ರಕರಣಗಳು ಮತ್ತು ಹಫ್ತಾ ನೀಡುವಂತೆ ಬೆದರಿಕೆಗಳು ಮತ್ತು ಖಾಲಿ ಜಾಗಗಳಿಗೆ ಬೇಲಿ ಹಾಕಿ ಕಿರುಕುಳ ನೀಡುವಂತಹ ಕೃತ್ಯಗಳು ನಡೆಯುತ್ತಲೇ ಇವೆ ಎಂದು ಮನವಿ ಪತ್ರದಲ್ಲಿ ಒಕ್ಕೂಟದವರು ತಿಳಿಸಿದ್ದಾರೆ.

ಇಂತಹ ಘಟನೆಗಳಿಂದ ಸಾಂಸ್ಕೃತಿಕ ನಗರಿಯ ಜನರು ಆತಂಕಕ್ಕೆ ಒಳಗಾಗಿದ್ದಾರೆ,
ರೌಡಿ ಚಟುವಟಿಕೆಗಳನ್ನು ಶಾಶ್ವತವಾಗಿ ಮಟ್ಟಹಾಕಲು ಮೇಲಿನ ಈ ಎಲ್ಲ ಘಟನೆಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಕನ್ನಡಪರ ಸಂಘಟನೆಗಳ ಕನ್ನಡ ಒಕ್ಕೂಟದವರು ಆಗ್ರಹಿಸಿದ್ದಾರೆ

ಕನ್ನಡ ಚಳವಳಿಗಾರರ ತೇಜಸ್ವಿ ನಾಗಲಿಂಗ ಸ್ವಾಮಿ,ಜಗದೀಶ್ ಎಂ ಪಿ ಜಿಲ್ಲಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ,ಉಮೇಶ್ ರಾಜ್ಯಾಧ್ಯಕ್ಷರು ಕರ್ನಾಟಕ ಯುವ ಘರ್ಜನೆ ವೇದಿಕೆ ರಾಜ್ಯಾಧ್ಯಕ್ಷರು,
ಪಳನಿ ಸ್ವಾಮಿ ಜಿಲ್ಲಾಧ್ಯಕ್ಷರು ಕರುನಾಡ ಕಾರ್ಮಿಕರ ವೇದಿಕೆ ಮೈಸೂರು,
ನಿತ್ಯ ಎನ್ ಮಹಿಳಾ ಜಿಲ್ಲಾಧ್ಯಕ್ಷರು ಕರ್ನಾಟಕ ಯುವ ಘರ್ಜನೆ ವೇದಿಕೆ ಮೈಸೂರು,
ಅಶೋಕ್ ರಾಜ್ ರಾಜ್ಯಾಧ್ಯಕ್ಷರು ಕರ್ನಾಟಕ ಪ್ರಜಾಶಕ್ತಿ ವೇದಿಕೆ,ನಾಗರಾಜ್ ಎಂ ನಾಯಕ್ ಅಧ್ಯಕ್ಷರು ವಿಷ್ಣು ಅಭಿಮಾನಿಗಳ ಬಳಗ ಮೈಸೂರು.ಇವರುಗಳ ನೇತೃತ್ವದಲ್ಲಿ ಜಿಜನಲ್ಲಾಧಿಕಾರಿಗಳ ಮೂಲಕ ಸಿಎಂ ಗೆ ಮನವಿ ಸಲ್ಲಿಸಲಾಯಿತು.