ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮರಣೆ

Spread the love

ಮೈಸೂರು: ಮೈಸೂರು ಮಹಾರಾಜ ಮನೆ ಮನೆ ದೀಪ, ರಾಜಋಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 141ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಕರ್ನಾಟಕ ಸೇನಾಪಡೆಯವರು ರಾಜರನ್ನು ವಿಶೇಷವಾಗಿ ಸ್ಮರಿಸಿದರು.

ಮೈಸೂರಿನ ಮಧುವನದಲ್ಲಿರುವ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ
ಸ್ಮಾರಕ ಖಾಸಾ ಬೃಂದಾವನಕ್ಕೆ ತೆರಳಿ ಪೂಜೆ ಸಲ್ಲಿಸಿ ಮಹಾರಾಜರನ್ನು ಸ್ಮರಿಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕ ಟಿ ಎಸ್ ಸುಬ್ರಹ್ಮಣ್ಯ ಅಮರನಾಥ ರಾಜೇ ಅರಸ್, ರಾಘವೇಂದ್ರ, ತೇಜೇಶ್ ಲೋಕೇಶ್ ಗೌಡ, ಸಂದೀಪ್, ಪ್ರಭುಶಂಕರ್, ಹನುಮಂತಯ್ಯ, ಪ್ರಭಾಕರ್, ಬಸವರಾಜು, ಕುಮಾರ್, ಅರಸು ಮತ್ತಿತರರು ಹಾಜರಿದ್ದರು.