ಆಗಸ್ಟ್ 30 ರಾಜ್ಯಮಟ್ಟದಒಡೆಯರ್ ಕಪ್ ದೇಹದಾರ್ಢ್ಯ ಸ್ಪರ್ಧೆ

Spread the love

ಮೈಸೂರು: ಜಿ ಎಚ್ ಫಿಟ್ನೆಸ್ ಅಂಡ್ ಜಿಮ್ ಹಾಗೂ ಲಯನ್ಸ್ ಕ್ಲಬ್ ಆಫ್ ಮೈಸೂರ್ ಗೋಲ್ಡನ್ ಸಿಟಿ ಮತ್ತು ಭುವನ್ ರಾಜ್ ಫೌಂಡೇಶನ್ ಸಹಯೋಗದೊಂದಿಗೆ
ಆಗಸ್ಟ್ 30 ರಂದು ರಾಜ್ಯಮಟ್ಟದ
ಒಡೆಯರ್ ಕಪ್ ದೇಹದಾರ್ಢ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಪ್ರೆಸ್ ಕ್ಲಬ್ ನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಒಡೆಯರ್ ಕಪ್ ದೇಹದಾರ್ಡ್ಯ ಸ್ಪರ್ಧೆಯ ಪೋಸ್ಟರ್ ಮತ್ತು ಪ್ರಚಾರ ಸಾಮಗ್ರಿಗಳನ್ನು ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ್ ಬಿಡುಗಡೆ ಮಾಡಿದರು.

ಆಗಸ್ಟ್ 30ರ ಶುಕ್ರವಾರ ನಗರದ‌ ಜಗಮ್ಮೋಹನ ಅರಮನೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ
ರಾಜ್ಯ ಮಟ್ಟದ ಒಡೆಯರ್ ಕಪ್ ದೇಹದಾರ್ಡ್ಯ ಸ್ಪರ್ಧೆ ನಡೆಯಲಿದೆ.

ಈ ವೇಳೆ ಮಾತನಾಡಿದ ಲೋಹಿತ್, ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಮಾಡಲಾಗುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ಪರ್ಧಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಅಂದು ಬೆಳಗ್ಗೆ 11ಗಂಟೆ ಯಿಂದ ಸಂಜೆ 5ರ ವರೆಗೂ ದೇಹದ ತೂಕ ಹಾಗೂ ಶರೀರದ ಪರೀಕ್ಷೆ ಮಾಡಿ ಐದು ಮುವತ್ತಕ್ಕೆ ಸ್ಪರ್ಧೆ ನಡೆಯಲಿದೆ,ಸ್ಥಳದಲ್ಲೇ ಹೆಸರು ನೊಂದಾಯಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಸದ ಯದುವೀರ‌ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಜಿ ಟಿ ದೇವೇಗೌಡ, ಹರೀಶ್ ಗೌಡ, ಟಿ ಎಸ್ ಶ್ರೀವತ್ಸ, ಸಿ ಎನ್ ಮಂಜೇಗೌಡ, ಮಂತರ್ ಗೌಡ,
ಬಿಜೆಪಿ ಮುಖಂಡರಾದ ಕವಿಶ್ ಗೌಡ, ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಘಟಕದ ಅಧ್ಯಕ್ಷರಾದ ನಾಗರಾಜ್ ವಿ ಬೈರಿ, ಭುವನ್ ರಾಜ್ ಫೌಂಡೇಶನ್ ಸಂಸ್ಥಾಪಕ ಚೇತನ್ ರಾಜ್ ಎನ್‌ ಮತ್ತಿತರರು ಆಗಮಿಸಲಿದ್ದಾರೆ ಎಂದು ಹೇಳಿದರು.

ಅದೇ ದಿನ ರಾತ್ರಿ 9 ಗಂಟೆಗೆ ವಿಜೇತ ಸ್ಪರ್ಧಿಗಳಿಗೆ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು ಎಂದು ತಿಳಿಸಿದರು.

ಲಯನ್ಸ್ ಆಫ್ ಮೈಸೂರ್ ಗೋಲ್ಡ್ ಸಿಟಿ ಕಾರ್ಯದರ್ಶಿ ಸುರೇಶ್ ಗೋಲ್ಡ್ ಮಾತನಾಡಿ, ರಾಜ್ಯ ಮಟ್ಟದ ಬಾಡಿ ಬಿಲ್ಡರ್ ಒಡೆಯರ್ ಕಪ್ಪ್ ನಲ್ಲಿ ಬಾಡಿ ಬಿಲ್ಡಿಂಗ್ ಕೆಟಗರಿ ಹಾಗೂ ಮೆನ್ ಫಿಸಿಕ್ ಕೆಟಗರಿ ಭಾಗವಹಿಸಲು ಎರಡು ವಿಭಾಗದಲ್ಲೂ 1,500 ರೂ ಪ್ರವೇಶ ಶುಲ್ಕ ಇದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿ ಎಚ್ ಫಿಟ್ನೆಸ್ ಅಂಡ್ ಜಿಮ್ ಮಾಲಿಕ ಹರೀಶ್ ಇ, ಉದ್ಯಮಿ ವಿಕ್ರಂ, ಮೈಸೂರು ಡಿಸ್ಟ್ರಿಕ್ಟ್‌ ಅಮೆಚೂರ್ ಬಾಡಿ ಬಿಲ್ಡರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನವೀನ್ ಚಂದ್ರ ಉಪಸ್ಥಿತರಿದ್ದರು.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ
ಹರೀಶ್ : 9164757596 ನಂಬರ್ ನಲ್ಲಿ ಸಂಪರ್ಕಿಸಬಹುದಾಗಿದೆ.