ಜಾನಪದ, ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಶ್ರೀಮಂತಗೊಳಿಸಬೇಕು:ರಾಮಲಿಂಗಾರೆಡ್ಡಿ

Spread the love

ಬೆಂಗಳೂರು: ಮಹಿಳೆಯರು ಜಾನಪದ, ಕಲೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಶ್ರೀಮಂತ ಗೊಳಿಸಬೇಕಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಕರೆ ನೀಡಿದರು.

ಬೆಂಗಳೂರು ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು ದಕ್ಷಿಣ ತಾಲೂಕು ಮಹಿಳಾ ಘಟಕ ಹಾಗೂ ಪದಗ್ರಹಣ ಸಮಾರಂಭ ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ದೇಸಿ ಕಲೆಗಳನ್ನು ಉಳಿಸಿ ಬೆಳೆಸುವುದರಲ್ಲಿ ಮಹಿಳೆಯ ಪಾತ್ರ ಬಹಳ ಮುಖ್ಯವಾದದ್ದು, ಈಗ ಕನ್ನಡ ಜಾನಪದ ಪರಿಷತ್ ರಾಜ್ಯಾದ್ಯಂತ ಮಹಿಳಾ ಘಟಕಗಳ ಮೂಲಕ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಮಾತನಾಡಿ ವೇದಗಳ ಕಾಲದಿಂದಲೂ ಮಹಿಳೆಯರಿಗೆ ಎಲ್ಲಿಲ್ಲದ ಸ್ವಾತಂತ್ರ್ಯವಿದೆ, ಪಾಶ್ಚಾತ್ಯ ಸಂಸ್ಕೃತಿಯಲ್ಲೂ ಸಹ ಮಹಿಳೆಯರಿಗೆ ಕೆಲವೊಂದು ಅವಕಾಶಗಳನ್ನು ಉದಾರವಾಗಿ ನೀಡಲಾಗಿದೆ ಇವುಗಳನ್ನು ಬಳಸಿಕೊಂಡು ಯುವ ಜನರಿಗೆ ಜಾನಪದ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯ ಆಗಬೇಕಾಗಿದೆ ಎಂದು ತಿಳಿಸಿದರು.

ಕನ್ನಡ ಜಾನಪದ ಪರಿಷತ್ ಬೆಂಗಳೂರು ನಗರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಡಾ ನಂದಿನಿ ಅವರು ಮಾತನಾಡಿ ಮಹಿಳಾ ಸಬಲೀಕರಣದಲ್ಲಿ ಜಾನಪದ ಪಾತ್ರವು ಬಹಳ ಮುಖ್ಯವಾದದ್ದು, ಜಾನಪದದ ಮೂಲಕ ಸಬಲೀಕರಣ ಮಾಡುವ ಪ್ರಯತ್ನ ನಿರಂತರವಾಗಿ ನಡೆಯುವುದು ಎಂದು ಹೇಳಿದರು.

ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಡಾ ರಿಯಾಸ್ ಪಾಷಾ ಮಾತನಾಡಿ ಕನ್ನಡ ಜಾನಪದ ಪರಿಷತ್ ನಿರಂತರವಾಗಿ ಜನಪದ ಕಲೆ ಮತ್ತು ತರಬೇತಿಯ ಮೂಲಕ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ನೀಡುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ತಾಲೂಕು ಮಹಿಳಾ ಘಟಕದ ತಾಲೂಕಾಧ್ಯಕ್ಷರು ಸುನಿತಾ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಗೀತಾಂಜಲಿ, ಖಜಾಂಜಿ ಸಂಧ್ಯಾ ಪೃಥ್ವಿ, ಜಂಟಿ ಕಾರ್ಯದರ್ಶಿ ವಿಜಯ ಕುಮಾರಿ, ಪತ್ರಿಕಾ ಕಾರ್ಯದರ್ಶಿ ಸುಮಾ ನಂದ, ಸಂಚಾಲಕಿ ಗಾಯತ್ರಿ ಕೃಷ್ಣಮೂರ್ತಿ, ಸದಸ್ಯರಾದ ಶೋಭಾ, ಸರಸ್ವತಿ, ಕವಿತಾ ರವಿ, ಸುಮಲತಾ ಇವರಿಗೆ ರಾಜ್ಯಾಧ್ಯಕ್ಷರು ಪದವಿ ಪತ್ರ ವಿತರಿಸಿದರು.

ಅಂತರಾಷ್ಟ್ರೀಯ ಜನಪದ ಕಲಾವಿದ ಸವೀತಾ ಅವರನ್ನು ಗೌರವಿಸಲಾಯಿತು.


ಕನ್ನಡ ಜಾನಪದ ಪರಿಷತ್ತಿನ ಬೆಂಗಳೂರು ಪೂರ್ವ ತಾಲೂಕು ಅಧ್ಯಕ್ಷ ನಾಗೇಶ್, ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ತ್ಯಾಗರಾಜ್, ಸಾಹಿತಿ ಮಾದೇವ ಉಪಸ್ಥಿತರಿದ್ದರು.

ಈ ವೇಳೆ ರಾಮಲಿಂಗಾರೆಡ್ಡಿ ಮತ್ತು ಜಾನಪದ ಎಸ್ ಬಾಲಾಜಿ ಅವರನ್ನು ಗೌರವಿಸಲಾಯಿತು.