ದುಬೈ,ಮಾ.9: ಅಜೇಯ ದಾಖಲೆಯೊಂದಿಗೆ ಫೈನಲ್ ಪ್ರವೇಶಿಸಿದ ಭಾರತ ಕ್ರಿಕೆಟ್ ತಂಡ ಬಲಿಷ್ಟ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಭರ್ಜರಿ ಜಯ ಸಾದಿಸುವ ಮೂಲಕ ಚಾಂಪಿಯನ್ ಟ್ರೋಪಿಗೆ ಮುತ್ತಿಟ್ಟು ಕೋಟ್ಯಂತರ ಅಭಿಮಾನಿಗಳ ಮನತಣಿಸಿದೆ.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 253ರನ್ ಗಳಿಸಿತು.

ನ್ಯೂಜಿಲೆಂಡ್ ತಂಡವನ್ನು ಬೆನ್ನಟ್ಟಿದ ಭಾರತ ತಂಡ 6 ವಿಕೆಟ್ ಕಳೆದುಕೊಂಡು ವಿಜಯ ಪತಾಕೆ ಹಾರಿಸಿತು.
ಇನ್ನೂ ಐದು ಬಾಲ್ ಗಳು ಇರುವಂತೆಯೇ ನಾಲ್ಕು ವಿಕೆಟ್ ಗಳ ಅಂತರದಿಂದ ಭಾರತ ಗೆಲುವಿನ ನಗೆ ಬೀರಿತು.
ದೇಶಾದ್ಯಂತ ಭಾರತದ ಗೆಲುವಿಗೆ ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ,ಹೋಮ, ಹವನ ತೆಂಗಿನಕಾಯಿ ಈಡುಗಾಯಿ ಎಲ್ಲಾ ಮಾಡಿಸಿ ಪ್ರಾರ್ಥಿಸಿದ್ದರು

ಅಭಿಮಾನಿಗಳ ಪ್ರಾರ್ಥನೆ ಈಡೇರಿದೆ ನಾಯಕ ರೋಹಿತ್ ಶರ್ಮಾ ಪಡೆ ಭಾರತೀಯರ ಅಭಿಮಾನವನ್ನು ದುಪ್ಪಟ್ಟು ಮಾಡಿದೆ.
ಭಾರತ ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿ ಕುಣಿದು ಕುಪ್ಪಳಿಸಿದರು.