ವಾಷಿಂಗ್ಟನ್: ಲಕ್ಷಾಂತರ ವಲಸಿಗರ ಕಾನೂನುಬದ್ಧ ರಕ್ಷಣೆಯನ್ನು ರದ್ದುಗೊಳಿಸುವುದಾಗಿ ಅಮೆರಿಕ ಹೇಳಿದ್ದು, ಅವರಿಗೆ ದೇಶ ತೊರೆಯಲು ವಾರಗಳ ಕಾಲಾವಕಾಶ ನೀಡಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಇತಿಹಾಸದಲ್ಲಿಯೇ ಅತಿದೊಡ್ಡ ಗಡಿಪಾರು ಅಭಿಯಾನವನ್ನು ಕೈಗೊಳ್ಳುವುದಾಗಿ ಅದರಲ್ಲೂ ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಿಂದ ಅಕ್ರಮ ವಲಸೆ ತಡೆಯುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಅಕ್ಟೋಬರ್ 2022ರ ನಂತರ ಅಮೆರಿಕ್ಕೆ ಬಂದಿರುವ ಕ್ಯೂಬಾ, ಹೈಟಿ, ನಿಕರಾಗುವಾ ಮತ್ತು ವೆನೆಜುವೆಲಾ ಸೇರಿದಂತೆ ನಾಲ್ಕು ದೇಶಗಳ ಸುಮಾರು 5,32,000 ಜನರಿಗೆ ಅನ್ವಯಿಸುತ್ತದೆ ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಅವರು ಹೇಳಿದ್ದಾರೆ.
ಈ ನಾಲ್ಕು ದೇಶದ ಲಕ್ಷಾಂತರ ನಾಗರಿಕರು ಏಪ್ರಿಲ್ 24ರಂದು ಅಥವಾ ಫೆಡರಲ್ ರಿಜಿಸ್ಟರ್‌ನಲ್ಲಿ ನೋಟಿಸ್ ಪ್ರಕಟವಾದ 30 ದಿನಗಳಲ್ಲಿ ಅಮೆರಿಕದಲ್ಲಿ ಉಳಿಯುವ ತಮ್ಮ ಕಾನೂನು ರಕ್ಷಣೆಯನ್ನು ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.