ಹುಣಸೂರು: ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ತವರು ಹುಣಸೂರು ಗುಂಡಿ ಮಯವಾಗಿ ಕುಖ್ಯಾತಿಗೆ ಒಳಗಾಗಿದೆ.
ಈ ಬಗ್ಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರು ಪದೇ ಪದೇ ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗಮನ ಸೆಳೆದಿದ್ದಾರೆ.
ಹಾಗಾಗಿ ಇತ್ತೀಚೆಗಷ್ಟೇ ರಸ್ತೆ ಗುಂಡಿಗಳ ಬಗ್ಗೆ ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ವಿಸ್ತಾರವಾಗಿ ಸುದ್ದಿ ಪ್ರಸ್ತುತಪಡಿಸಲಾಗಿತ್ತು.
ಸುದ್ದಿ ಪ್ರಕಟವಾದ ಬೆನ್ನಲ್ಲೇ ಕೆಲ ರಸ್ತೆಗಳಿಗೆ ಮಣ್ಣು ತುಂಬಿ ತೇಪೆ ಹಾಕಿ ಸರಿಪಡಿಸಲಾಗಿದೆ ಆದರೂ ಬಹಳಷ್ಟು ರಸ್ತೆಗಳು ಗುಂಡಿ ಬಿದ್ದಿವೆ.
ಈಗ ಪಟ್ಟಣದ ಪೊಲೀಸ್ ಠಾಣೆ ಮುಂಭಾಗದಿಂದ ಹಿಡಿದು ಸಂವಿಧಾನ ವೃತ್ತದ ವರೆಗೂ ರಸ್ತೆ ಹದಗೆಟ್ಟು ಹೋಗಿದೆ.
ಈಗಾಗಲೇ ಹಲವಾರು ಮಂದಿ ಈ ರಸ್ತೆಯಲ್ಲಿ ವಾಹನಗಳಲ್ಲಿ ಹೋಗುವಾಗ ಗುಂಡಿಗೆ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಉದಾಹರಣೆಗಳು ಬೇಕಾದಷ್ಟಿವೆ. ಆದರೂ ಸ್ಥಳೀಯ ಜನ ಪ್ರತಿನಿಧಿಗಳಾಗಲಿ ನಗರಸಭೆ ಅಧಿಕಾರಿಗಳಾಗಲಿ ಇತ್ತ ಗಮನ ಹರಿಸದೆ ಇರುವುದು ದುರ್ದೈವದ ಸಂಗತಿ.
ಪೊಲೀಸ್ ಠಾಣೆ ಸಮೀಪದಲ್ಲೆ ರಸ್ತೆ ಹದಗೆಟ್ಟಿದೆ ಅವರಾದರೂ ಇದರ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆಯಬಹುದಿತ್ತು.
ಇದೇ ರಸ್ತೆಯಲ್ಲಿ ಬ್ಯಾಂಕ್‌ಗಳು,ಸರ್ಕಾರಿ ಆಸ್ಪತ್ರೆ, ಸರ್ಕಾರಿ ಕಚೇರಿ ಕೂಡಾ ಇದೆ.ಹಾಗಾಗಿ ಸದಾ ಜನರ ಓಡಾಟ ವಾಹನಗಳ ಸಂಚಾರ ಬಹಳಷ್ಟು ಇರುತ್ತದೆ.
ಇಂತಹ ಜನದಟ್ಟಣೆ,ವಾಹನ ದಟ್ಟಣೆ ಇರುವ ಪ್ರಮುಖ ರಸ್ತೆಗಳೆ ಗುಂಡಿಮಯವಾದರೆ ಹೇಗೆ.ಹುಣಸೂರಿಗೆ ಕಪ್ಪು ಚುಕ್ಕಿ ಬರದೆ ಇರುತ್ತದೆಯೆ?.
ಮೊದಲು ರಸ್ತೆಗಳಿಗೆ ಗುಣಮಟ್ಟದ ಕಾಮಗಾರಿ ಮಾಡಿ ಜನರ ಪ್ರಾಣ ರಕ್ಷಿಸಬೇಕೆಂದು ಚಲುವರಾಜು ಒತ್ತಾಯಿಸಿದ್ದಾರೆ.
ಈಗಲಾದರೂ ರಸ್ತೆಗಳಿಗೆ ಜಲ್ಲಿ,ಮಣ್ಣು ತುಂಬಿ ಡಾಂಬರು ಹಾಕಿ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಲಿ.