ರಾಜಕೀಯ ಮುತ್ಸದ್ಧಿ ರಾಮಕೃಷ್ಣ ಹೆಗಡೆ:ಸಂದೇಶ್ ಸ್ವಾಮಿ

Spread the love

ಮೈಸೂರು:ಮಾಜಿ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆ ಅವರು ಮೌಲ್ಯಾಧಾರಿತ ರಾಜಕಾರಣಿ ಎಂದೇ ಜನಪ್ರಿಯತೆ ಗಳಿಸಿದ್ದ ರಾಜಕೀಯ ಮುತ್ಸದ್ಧಿ ಎಂದು ‌ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ಬಣ್ಣಿಸಿದರು.

ಕೃಷ್ಣರಾಜ ಯುವ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ರಾಮಕೃಷ್ಣ ಹೆಗಡೆ ಅವರ ಜನ್ಮದಿನಾಚರಣೆ ವೇಳೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆಯ ಮೂಲಕ ನಾಡಿನ ಗ್ರಾಮೀಣ ಭಾಗದ ಜನರ ಹೊಸ ಚರಿತ್ರೆಯನ್ನು ಬರೆದವರು ರಾಮಕೃಷ್ಣ ಹೆಗಡೆಯವರು ಎಂದು ಸ್ಮರಿಸಿದರು.

ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ರಚನೆ ಮಾಡಿ, ರಾಜ್ಯದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು ಎಂದು ಹೇಳಿದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಮಾತನಾಡಿ
ಹೆಗಡೆಯವರು ಸಣ್ಣ ಆಪಾದನೆ ಬಂದ ಕೂಡಲೇ 1985 ರಲ್ಲಿ ರಾಜೀನಾಮೆ ನೀಡಿ ಚುನಾವಣೆ ಘೋಷಣೆ ಮಾಡಿದರು, ಆನಂತರ ಬಾರಿ ಬಹುಮತದಿಂದ ಗೆದ್ದು ಪುನಹ ಮುಖ್ಯಮಂತ್ರಿ ಆಗಿದ್ದರು ಎಂದು ತಿಳಿಸಿದರು.

ಮತ್ತೆ ಕೆಲವೊಂದು ಹಗರಣದಲ್ಲಿ ಆರೋಪ ಬಂದ ಕೂಡಲೇ ಮತ್ತೊಮ್ಮೆ ರಾಜೀನಾಮೆ ನೀಡಿ ಆಗಿನ ಮುಖ್ಯಮಂತ್ರಿ ಆಗಿ ಎಸ್ ಆರ್ ಬೊಮ್ಮಾಯಿ ರವರಿಗೆ ಅಧಿಕಾರ ವಹಿಸಿದ್ದರು, ಈ ತರಹದ ಅಪರೂಪದ ರಾಜಕಾರಣಿಗಳು ನಮ್ಮ ರಾಜ್ಯಕ್ಕೆ ಮುಂದಿನ ದಿನಗಳಲ್ಲಿ ಬರಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಅವರು ಮಾತನಾಡಿ ಕರ್ನಾಟಕ ಕಂಡ ಸಜ್ಜನ ಹಾಗೂ ಮೌಲ್ಯಾಧಾರಿತ ರಾಜಕಾರಣಿ ದಿ.ರಾಮಕೃಷ್ಣ ಹೆಗಡೆ ಯವರು. ಅವರ ಅವಧಿಯಲ್ಲಿ ಕರ್ನಾಟಕ ಸಾಮಾಜಿಕ ಹಾಗೂ ಸಾಂಸ್ಕ್ರತಿಕ ಅಭಿವೃದ್ಧಿ ಯನ್ನು ಕಂಡಿದೆ ಎಂದು‌ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಇಂದ್ರ ಗಾಂಧಿ ಬ್ಲಾಕ್ ಅಧ್ಯಕ್ಷರಾದ ಮಂಚೇಗೌಡನ ಕೊಪ್ಪಲು ರವಿ, ಜೆಡಿಎಸ್ ಕಾರ್ಯದಕ್ಷ ಪ್ರಕಾಶ್ ಪ್ರಿಯದರ್ಶನ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಜಿ ರಾಘವೇಂದ್ರ, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ಎಸ್ ಎನ್ ರಾಜೇಶ್, ರವಿಚಂದ್ರ, ಸುಚಿಂದ್ರ ಮತ್ತಿತರರು ಹಾಜರಿದ್ದರು.