ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎರಡನೇ ವರ್ಷದ ಒಡೆಯರ್ ಕಪ್ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ನಡೆಯುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದು ಶಾಸಕ ಜಿ.ಟಿ ದೇವೇಗೌಡ ಹೇಳಿದರು.
ಜಿ ಎಚ್ ಫಿಟ್ನೆಸ್ ಅಂಡ್ ಜಿಮ್ ಹಾಗೂ
ಲಯನ್ಸ್ ಕ್ಲಬ್ ಆಫ್ ಮೈಸೂರ್ ಗೋಲ್ಡನ್ ಸಿಟಿ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಕ್ರೀಡಾ ದಿನಾಚರಣೆ ಪ್ರಯುಕ್ತ ನಗರದ ಜಗಮ್ಮೋಹನ ಅರಮನೆಯಲ್ಲಿ ಹಮ್ಮಿಕೊಂಡಿದ್ದ
ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಒಡೆಯರ್ ಕಪ್ ಅನ್ನು ಆಂಜನೇಯ ಮೂರ್ತಿಗೆ ಪೂಜೆ ಸಲ್ಲಿಸಿ ಉದ್ಘಾಟಿಸಿ ಜಿ ಟಿ ದೇವೇಗೌಡ ಮಾತನಾಡಿ ನಮ್ಮ ಮೈಸೂರಿನಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆಯುವುದು ಅತಿ ಮುಖ್ಯ ಎಂದು ಹೇಳಿದರು

ದೇಹದಾರ್ಢ್ಯ ಸ್ಪರ್ಧೆ ಮೈಸೂರಿನಲ್ಲಿ ಅದರಲ್ಲೂ ಮಹಾರಾಜರು ಕಟ್ಟಿದ ಈ ಜಗನ್ಮೋಹನ ಅರಮನೆಯಲ್ಲಿ ನಡೆಯುತ್ತಿರುವುದು ನನಗೆ ಅತೀವ ಸಂತಸ ತಂದಿದೆ ದೇಹದಾಢ್ಯ ಸ್ಪರ್ಧೆ ಯಶಸ್ವಿಯಾಗಿ ನಡೆಯಬೇಕು ಎಂದು ಆಶಿಸಿದರು.
ನಮ್ಮ ನಗರದಲ್ಲಿ ಸ್ಪರ್ಧಿಸುತ್ತಿರುವ ಎಲ್ಲಾ ದೇಹದಾರ್ಢ್ಯ ಸ್ಪರ್ಧಿಗಳು ರಾಜ್ಯ ಮಟ್ಟದಲ್ಲಿ, ರಾಷ್ಟ್ರಮಟ್ಟ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಲಿ, ತಾಯಿ ಚಾಮುಂಡೇಶ್ವರಿ ಮತ್ತು ಆಂಜನೇಯನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಕಾರ್ಯಕ್ರಮ ಯಶಸ್ವಿಯಾಗಲಿ ಒಳ್ಳೆಯದಾಗಿ ನಡೆಯಲಿ ಎಂದು ಜಿ.ಟಿ ದೇವೇಗೌಡ ಶುಭ ಕೋರಿದರು.
ಇನ್ನೇನು ಮೈಸೂರು ದಸರಾ ಕೂಡ ಪ್ರಾರಂಭವಾಗುತ್ತಿದೆ ಇಂತಹ ಸಂದರ್ಭದಲ್ಲೇ ಸಂಘಟನೆಗಳು ದೇಹದಾರ್ಢ್ಯ ಸ್ಪರ್ಧೆ ಹಮ್ಮಿಕೊಂಡಿರುವುದು ಒಳ್ಳೆಯದು ಎಂದು ಜಿಟಿಡಿ ಹೇಳಿದರು.
ಈ ವೇಳೆ ಬಿಜೆಪಿ ಮುಖಂಡ ಕವಿಶ್ ಗೌಡ,
ಲಯನ್ಸ್ ಆಫ್ ಮೈಸೂರು ಗೋಲ್ಡನ್ ಸಿಟಿ ಕಾರ್ಯದರ್ಶಿ ಸುರೇಶ್ ಗೋಲ್ಡ್, ಜಿ ಎಚ್ ಫಿಟ್ನೆಸ್ ಅಂಡ್ ಜಿಮ್ ಮಾಲಿಕರಾದ ಹರೀಶ್ ಇ, ಉದ್ಯಮಿ ವಿಕ್ರಂ, ಮೈಸೂರು ಡಿಸ್ಟ್ರಿಕ್ಟ್ ಅಮೆಚೂರ್ ಬಾಡಿ ಬಿಲ್ಡರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನವೀನ್ ಚಂದ್ರ, ಸಮಾಜ ಸೇವಕರಾದ ವಿದ್ಯಾ ಮತ್ತಿತರರು ಹಾಜರಿದ್ದರು.