ಬಿಸಿಬಿಸಿ ಮಲ್ಲಿಗೆ ಇಡ್ಲಿಗೆ ದಸರಾ ವಸ್ತು ಪ್ರದರ್ಶನದಲ್ಲಿ ಭಾರಿ ಬೇಡಿಕೆ!

Spread the love

ಮೈಸೂರು: ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಜನಸಾಗರ ಹರಿದುಬಂದಿದೆ.

ಅದರಲ್ಲೂ ಶುಕ್ರವಾರ ಜನಸಾಗರ ಲಕ್ಷಾಂತರ ಸಂಖ್ಯೆಯಲ್ಲಿ ಹರಿಬಂದಿದ್ದು ದಾಖಲೆಯೇ ನಿರ್ಮಾಣವಾಗಿದೆ.

ಎಲ್ಲಾ ಮಳಿಗೆಗಳು ಆಕರ್ಶಕವಾಗಿದ್ದು, ಆಹಾರ ಮಳಿಗೆ ಪೈಕಿ ಮಲ್ಲಿಗೆ ಇಡ್ಲಿಗೆ ಭಾರೀ ಡಿಮಾಂಡ್ ಕಂಡುಬಂದಿತು.

ಮ್ಯೂಸಿಕಲ್ ಫೌಂಟೇನ್, ಹೊಯ್ಸಳ ಪಾರಂಪರಿಕ ಶೈಲಿಯಲ್ಲಿ ಗೃಹಬಳಕೆ ಅಲಾಂಕಾರಿಕ 154ಶಾಫಿಂಗ್ ಮಳಿಗೆಗಳು, ದಸರಾ ವಸ್ತುಪ್ರದರ್ಶನ ಅತಿದೊಡ್ಡ ವಿವಿಧ ಬಗೆಯ ಆಹಾರ ಮಳಿಗೆಗೆಳು, ಅಮ್ಯೂಸ್ಮೆಂಟ್ ಆಟೋಟಗಳು, ವಿದ್ಯುತ್ ದೀಪಾಲಂಕಾರ, ಸರ್ಕಾರಿ ಮಳಿಗೆಗಳು ಎಲ್ಲವೂ ಅತ್ಯಾಕರ್ಷಕ ವಾಗಿದ್ದು, ವೀಕ್ಷಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಪ್ರವಾಸಿಗರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಜನರನ್ನು ನಿಯಂತ್ರಿಸಲು ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ಮತ್ತು ಸಿಇಒ ಕೆ.ರುದ್ರೇಶ್ ಅವರು ಖುದ್ದಾಗಿ ಮಧ್ಯರಾತ್ರಿಯವರೆಗೆ ಕೈಯಲ್ಲಿ ವಾಕಿ ಟಾಕಿ ಹಿಡಿದು ಎಲ್ಲೂ ನೂಕುನುಗ್ಗಲು ಆಗದ ರೀತಿ ಕಾರ್ಯ ನಿರ್ವಹಿಸಿದ್ದು ವಿಶೇಷವಾಗಿತ್ತು.

ಶುದ್ಧ ಕುಡಿಯುವ ನೀರು, ಶೌಚಾಲಯ, ಆಂಬ್ಯುಲೆನ್ಸ್ ವೈದ್ಯರ ತಂಡ, ಪ್ರವಾಸಿಗರ ಜಾಗೃತಿಗಾಗಿ ರೇಡಿಯೋ ರೂಂ ಮೂಲಕ ನಿರೂಪಕರು ಅಪಾಯದ ಸ್ಥಳಗಳಲ್ಲಿ ಸೆಲ್ಫಿ ಪೋಟೋಗೆ ಹೋಗದಂತೆ ಮತ್ತು ಸರಗಳ್ಳರು ಮೊಬೈಲ್ ಕಳ್ಳರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪದೇ ಪದೇ ಮನವಿ ಮಾಡಿದರು.

ಅದೇ ರೀತಿ ಮಕ್ಕಳು ಹಿರಿಯನಾಗರೀಕರು ತಪ್ಪಿಸಿಕೊಳ್ಳದಂತೆ ವಿನೂತನವಾಗಿ ತುರ್ತು ಜಾಗೃತಿ ಅನೌನ್ಸ್ಮೆಂಟ್ ಗಳನ್ನು ಆಗ್ಗಿಂದಾಗ ನೀಡುತ್ತಿದ್ದರು.

ಅಗ್ನಿಶಾಮಕದಳ, ಆರಕ್ಷಕ ಇಲಾಖೆ, ಭದ್ರತಾ ಸಿಬ್ಬಂದಿ ಸಿಸಿ ಕ್ಯಾಮೆರಾ ಮೂಲಕ ಚಲನವಲನಗಳ ಬಗ್ಗೆ ನಿಗವಹಿಸುತ್ತಲೇ ಇರುತ್ತಾರೆ.ಒಟ್ಟಾರೆ ಈ ಬಾರಿ ವಸ್ತುಪ್ರದರ್ಶನದಲ್ಲಿ ಎಲ್ಲವೂ ಅಚ್ಚುಕಟ್ಟಾಗಿದ್ದು ಜನಸ ನಗರ ಹರಿದು ಬರುತ್ತಿದೆ.