ಯುರೋಪ್: ನಮ್ಮ ದೇಶದಲ್ಲಷ್ಟೇ ಅಲ್ಲಾ,ಸ್ವಚ್ಛ ನಗರಗಳಲ್ಲಿ ಒಂದಾದ ಯುರೋಪ್ನ ಪ್ರಮುಖ ನದಿಗಳಲ್ಲೂ ಕಲುಶಿತ ಕಂಡು ಬಂದಿದೆ.
ಅಲ್ಲಿನ ನದಿಗಳಲ್ಲಿ ಆತಂಕಕಾರಿ ಮಟ್ಟದ ಮೈಕ್ರೋಪ್ಲಾಸ್ಟಿಕ್ ಇರುವುದಾಗಿ ವಿಜ್ಞಾನಿಗಳು ನಡೆಸಿದ ಅಧ್ಯಯನಗಳಲ್ಲಿ ಬಯಲಾಗಿದೆ.
ವಿಜ್ಞಾನಿಗಳು ನಡೆಸಿದ 14 ಅಧ್ಯಯನಗಳು ನಿನ್ನೆ ಏಕಕಾಲದಲ್ಲಿ ಪ್ರಕಟವಾಗಿದ್ದು, ಎಲ್ಲ ಅಧ್ಯಯನಗಳು ಈ ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿವೆ.
ಯುರೋಪ್ನ ಎಲ್ಲಾ ನದಿಗಳು ಮಲಿನಗೊಂಡಿರುವುದು ಅಧ್ಯಯನದಲ್ಲಿ ಗೊತ್ತಾಗಿದೆ ಎಂದು ಥೇಮ್ಸ್ನಿಂದ ಟೈಬರ್ವರೆಗಿನ ಒಂಬತ್ತು ಪ್ರಮುಖ ನದಿಗಳಲ್ಲಿ ದೊಡ್ಡ ಪ್ರಮಾಣದ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಫ್ರೆಂಚ್ ವಿಜ್ಞಾನಿ ಜೀನ್ – ಫ್ರಾಂಕೋಯಿಸ್ ಘಿಗ್ಲಿಯೋನ್ ತಿಳಿಸಿದ್ದಾರೆ.
ಪರಿಸರ ವಿಜ್ಞಾನ ಮತ್ತು ಮಾಲಿನ್ಯ ಸಂಶೋಧನಾ ಜರ್ನಲ್‌ನಲ್ಲಿ ಪ್ರಕಟವಾದ ವರದಿಯಲ್ಲಿ, ಮಲಿನಗೊಂಡಿರುವ ನದಿಗಳೆಲ್ಲದರಲ್ಲೂ ಸರಾಸರಿ ಪ್ರತಿ ಘನ ಮೀಟರ್ ನೀರಿಗೆ 3 ಮೈಕ್ರೋಪ್ಲಾಸ್ಟಿಕ್ ಗಳಿರುವುದು ಗೊತ್ತಾಗಿದೆ.
ವಿಶ್ವದ ಅತ್ಯಂತ ಕಲುಷಿತ ನದಿಗಳಾದ ಯೆಲ್ಲೋ ನದಿ, ಯಾಂಗ್ಟ್ಜೆ, ಮೆಕಾಂಗ್, ಗಂಗಾ, ನೈಲ್, ನೈಜರ್, ಸಿಂಧೂ, ಅಮುರ್, ಪರ್ಲ್ ಮತ್ತು ಹೈ ಗಳಲ್ಲಿ ಪ್ರತಿ ಘನ ಮೀಟರ್‌ಗೆ 40 ಮೈಕ್ರೋಪ್ಲಾಸ್ಟಿಕ್‌ಗಳಿರುವುದು ಈ ಹಿಂದಿನ ಹಲವು ಅಧ್ಯಯನ ವರದಿಗಳಿಂದ ತಿಳಿದು ಬಂದಿದೆ.
ಅತ್ಯಂತ ಕಲುಷಿತ 10 ನದಿಗಳು, ಹೆಚ್ಚಿನ ಪ್ಲಾಸ್ಟಿಕ್ ಉತ್ಪಾದಿಸುವ ಅಥವಾ ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಿಸುವ ದೇಶಗಳಲ್ಲಿ ಹರಿಯುತ್ತವೆ. ಆದರೆ, ಈ ಸಂಖ್ಯೆಗೆ ಹೋಲಿಸಿದರೆ ಯುರೋಪ್ನ ನದಿಗಳು ಕಲುಷಿತ ಮಟ್ಟದಲ್ಲಿ ಬಹಳ ದೂರ ಇವೆ.
ಸೆಕೆಂಡಿಗೆ ಪ್ಲಾಸ್ಟಿಕ್ 3000 ಕಣಗಳು: ಫ್ರಾನ್ಸ್ನ ವ್ಯಾಲೆನ್ಸ್ನಲ್ಲಿರುವ ರೋನ್ ನದಿಯ ವೇಗದ ಹರಿವಿನಲ್ಲಿ ಪ್ರತಿ ಸೆಕೆಂಡಿಗೆ 3000 ಪ್ಲಾಸ್ಟಿಕ್ ಕಣಗಳಿದ್ದರೆ, ಪ್ಯಾರಿಸ್ನ ಸೀನ್ ನದಿಯಲ್ಲಿ ಪ್ರತಿ ಸೆಕೆಂಡಿಗೆ ಸುಮಾರು 900 ಪ್ಲಾಸ್ಟಿಕ್ ಕಣಗಳು ಪತ್ತೆಯಾಗಿವೆ ಎಂದು ವಿಜ್ಞಾನಿ ಘಿಗ್ಲಿಯೋನ್ ತಿಳಿಸಿದ್ದಾರೆ.
ಬರಿಗಣ್ಣಿಗೆ ಕಾಣದ ಮೈಕ್ರೋಪ್ಲಾಸ್ಟಿಕ್‌ಗಳ ದ್ರವ್ಯರಾಶಿ ಗೋಚರಿಸುವ ಮೈಕ್ರೋಪ್ಲಾಸ್ಟಿಕ್ಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿವೆ ಎಂದೂ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.