ಮೈಸೂರು: ದಸರಾ ಸಾಂಸ್ಕೃತಿಕ ಹಬ್ಬ, ಧರ್ಮಾತೀತವಾದ ಹಬ್ಬ.
ಇದು ಎಲ್ಲಾ ಜಾತಿ ಧರ್ಮಕ್ಕೆ ಸೇರಿದ್ದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಬಿಜೆಪಿ ಗೆ ಟಾಂಗ್ ನೀಡಿದರು.
ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿಎಂ,ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಕವಿ ನಿಸಾರ್ ಅಹಮದ್ ಕೂಡ ದಸರಾ ಉದ್ಘಾಟನೆ ಮಾಡಿದ್ದಾರೆ,
ಟಿಪ್ಪು ,ಹೈದಾರಲಿ ಕೂಡ ದಸರಾ ನಡೆಸಿದ್ದಾರೆ,ದಿವಾನ್ ಮಿರ್ಜಾ ಇಸ್ಮಾಯಿಲ್ ಕೂಡ ದಸರಾ ನಡೆಸಿದ್ದಾರೆ.
ಇದಕ್ಕೆ ಧರ್ಮದ ಲೇಪನ ಬಳಿಯುವುದು ಸರಿಯಲ್ಲಾ ಎಂದು ತಿರುಗೇಟು ನೀಡಿದರು.
ಕನ್ನಡಾಂಬೆಯ ಬಗ್ಗೆ ಬಾನು ಮುಷ್ತಾಕ್ ನೀಡಿರುವ ಹಳೇ ಹೇಳಿಕೆಗೂ ದಸರಾ ಉದ್ಘಾಟನೆ ವಿಷಯಕ್ಕೂ ಏನು ಸಂಬಂಧ,
ಬೆಜೆಪಿಯವರು ಕುಂಟ ನೆಪ ಹುಡುಕುತ್ತಿದ್ದಾರೆ ಅಷ್ಟೇ.ಯಾವತ್ತು ಏನೋ ಹೇಳಿದ್ದಾರೆ ಎಂದು ಅದನ್ನ ಇಲ್ಲಿದೆ ಲಿಂಕ್ ಮಾಡುವುದು ಎಷ್ಟು ಸರಿ ಎಂದು ಸಿಎಂ ಪ್ರಶ್ನಿಸಿದರು.
ಬೆರಳಣಿಕೆ ಮಂದಿಗೆ ಮಾತ್ರ ಬೂಕರ್ ಪ್ರಶಸ್ತಿ ಬಂದಿದೆ,ನಾನೇ ಅವರ ಹೆಸರನ್ನ ಆಯ್ಕೆ ಮಾಡಿದ್ದೇನೆ,ಧರ್ಮಾಂದರು ಮಾತ್ರ ಬಾನು ಮುಷ್ತಾಕ್ ಹೆಸರನ್ನ ವಿರೋಧಿಸುತ್ತಾರೆ ಎಂದು ಅಸಮಾಧಾನದಿಂದ ಸಿದ್ದು ನುಡಿದರು.
ಧರ್ಮಸ್ಥಳ ಪ್ರಕರಣ ಸಂಬಂಧ ಎಸ್ ಐ ಟಿ ತನಿಖೆ ನಡೆಯುತ್ತಿದೆ,ಸ್ವತಃ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಇದನ್ನು ಸ್ವಾಗತಿಸಿದ್ದಾರೆ.ಬಿಜೆಪಿ ಯವರು ಕೂಡಾ ಎಸ್ಐಟಿ ತನಿಖೆ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ,ತನಿಖೆ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.