ಮೈಸೂರು: ಮುಂದಿನ ದಿನಗಳಲ್ಲಿ ನಡೆಯಲಿರುವ ಸೆನ್ಸಸ್ ಸಮಯದಲ್ಲಿ ವಿಪ್ರರು, ಬ್ರಾಹ್ಮಣರು ಒಂದೇ ಕ್ಯಾಟಗರಿಗೆ ಸೇರಿದವರೆಂದು ಬರೆಸುವಂತೆ ನಿವೃತ್ತ ಎಡಿ ಜಿಪಿ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರೂ ಆದ ಭಾಸ್ಕರ್ ರಾವ್ ಸಲಹೆ ನೀಡಿದರು.
ಎನ್ ಎಂ ನವೀನ್ ಕುಮಾರ್ ವಿಪ್ರ ಮಿತ್ರ ಬಳಗ ವತಿಯಿಂದ ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಕಲ್ಯಾಣ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಸಾಮಾನ್ಯವಾಗಿ ನಾವು ಮಾಡಿದ ಸಾಧನೆ ಮತ್ತು ನೀಡಿದ ಕೊಡುಗೆಗಳನ್ನು ಸಮಾಜ ಗುರುತಿಸಿ ಸನ್ಮಾನ ಮಾಡಲಾಗುತ್ತದೆ ಇಂತಹ ಸನ್ಮಾನಗಳು ಇನ್ನು ಹೆಚ್ಚಿನ ಕೆಲಸಗಳನ್ನು ಮಾಡಲು ಪ್ರೋತ್ಸಾಹ ಸಿಗುತ್ತದೆ ಎಂದು ತಿಳಿಸಿದರು.
ನಮ್ಮ ಬ್ರಾಹ್ಮಣ ಸಮುದಾಯದಲ್ಲಿ 40 ರಿಂದ 50 ಪಂಗಡಗಳಿವೆ. ಸಮುದಾಯದಲ್ಲಿ ವೈಷ್ಣವರು,ಶ್ರೀವೈಷ್ಣವರು ಬ್ರಾಹ್ಮಣರು,ಸ್ಮಾರ್ಥರು ಹೀಗೆ ಅನೇಕ ಪಂಗಡಗಳೆಂದು ಬರೆಸುವ ಬದಲು ವಿಪ್ರರು ಬ್ರಾಹ್ಮಣರು ಒಂದೇ ಕ್ಯಾಟಗರಿ ಎಂದು ಬರೆಸಿದಾಗ ನಮ್ಮ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ನಮ್ಮ ಸಂಘಟನೆಗೆ ಶಕ್ತಿ ಬರುತ್ತದೆ ಎಂದು ತಿಳಿ ಹೇಳಿದರು.
ನಮಗೆ ದೈವ ಕೃಪೆ ಇದೆ ಹಾಗಾಗಿ ಮನುಷ್ಯ ಕೃಪೆ ಬೇಕಾಗಿಲ್ಲ, ನಾವೆಲ್ಲಾ ನಮ್ಮ ಪೂಜೆ ಪುರಸ್ಕಾರಗಳನ್ನು ಬಿಟ್ಟಾಗ ನಾವು ಬೇರೆಯವರಂತೆಯೇ ಆಗಿಬಿಡುತ್ತೇವೆ ನಮಗೂ ಅವರಿಗೂ ವ್ಯತ್ಯಾಸ ಇರುವುದಿಲ್ಲ ನಮ್ಮತನವನ್ನು ಉಳಿಸಿಕೊಳ್ಳಬೇಕು ನಾವು ಬ್ಯಾಕ್ ವರ್ಡ್ ಅಲ್ಲ, ಮುಂದುವರೆದವರು. ರಾಮಾಯಣ, ಮಹಾಭಾರತ ಕಾಲದಲ್ಲೂ ನಮ್ಮ ಸಮುದಾಯ ಮುಂಚೂಣಿಯಲ್ಲಿತ್ತು ನಾವು ಯಾರ ಓಲೆಯನ್ನು ಮಾಡಬೇಕಾಗಿಲ್ಲ ಎಂದು ತಿಳಿಸಿದರು.
ನಮ್ಮ ಮಕ್ಕಳಿಗೆ ಒಳ್ಳೆಯ ಭವಿಷ್ಯವನ್ನು ರೂಪಿಸಬೇಕು. ಈಗಿನ ಮಕ್ಕಳು ಬಹಳ ಸೆನ್ಸಿಟಿವ್ ಇರುತ್ತಾರೆ ಸ್ವಲ್ಪ ಒತ್ತಾಯ ಮಾಡಿದರು ಅದು ವಿಕೋಪಕ್ಕೆ ಹೋಗಿಬಿಡುತ್ತದೆ ಹಾಗಾಗಿ ಅವರನ್ನು ಒಳ್ಳೆಯ ದಾರಿಗೆ ತಂದು ಉತ್ತಮ ಭವಿಷ್ಯ ರೂಪಿಸಿ ಎಂದು ಸಲಹೆ ನೀಡಿದರು.
ಬ್ರಾಹ್ಮಣ ಸಮುದಾಯ ಸಂಖ್ಯೆ ಸಂಘಟನೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಈಗಿನ ಪ್ರಪಂಚದ ಪೈಪೋಟಿಯಲ್ಲಿ ನಾವು ಕೂಡ ರೇಸ್ನಲ್ಲಿ ಮುನ್ನುಗ್ಗಬೇಕು ಎಂದು ಭಾಸ್ಕರ್ ರಾವ್ ಕರೆಕೊಟ್ಟರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರಾಗಿ ನೇಮಕರಾದ ಎನ್ ಎಂ ನವೀನ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಮುಡಾ ಅಧ್ಯಕ್ಷರಾದ ಕೆ ಆರ್ ಮೋಹನ್ ಕುಮಾರ್ ವಹಿಸಿದ್ದರು.
ವಿಪ್ರ ಮುಖಂಡರಾದ ಸತ್ಯನಾರಾಯಣ,ರವೀಂದ್ರ ಸೇರಿದಂತೆ ಅನೇಕ ವಿಪ್ರ ಮುಖಂಡು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೂತನ ನೂತನ ಸದಸ್ಯರಿಗೆ ಐ ಡಿ ಕಾರ್ಡ್ ವಿತರಿಸಲಾಯಿತು.