ಕೊಲಂಬಿಯಾ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಉರಿಬೆ ಮೇಲೆ ಗುಂಡಿನ ದಾಳಿ

Spread the love

ಕೊಲಂಬಿಯಾ: ಕೊಲಂಬಿಯಾದ ಬೊಗೋಟಾದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದ ವೇಳೆ ಕೊಲಂಬಿಯಾ ಬಲಪಂಥೀಯ ವಿರೋಧ ಪಕ್ಷದ ಸೆನೆಟರ್ ಮತ್ತು ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಮಿಗುಯೆಲ್ ಉರಿಬೆ ಮೇಲೆ ಗುಂಡಿನ ದಾಳಿ ನಡೆದಿದೆ.

ಮಿಗುಯೆಲ್ ಉರಿಬೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2026ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ 39 ವರ್ಷದ ಉರಿಬೆ, ಮಾಜಿ ಕೊಲಂಬಿಯಾದ ಅಧ್ಯಕ್ಷ ಅಲ್ವಾರೊ ಉರಿಬೆ ಸ್ಥಾಪಿಸಿದ ಡೆಮಾಕ್ರಟಿಕ್ ಸೆಂಟ‌ರ್ ಪಕ್ಷದ ಸದಸ್ಯರಾಗಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊವೊಂದರಲ್ಲಿ ಮಿಗುಯೆಲ್ ಉರಿಬೆ ಹಲವಾರು ಜನರ ಮುಂದೆ ಭಾಷಣ ಮಾಡುತ್ತಿರುವುದು, ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಗುಂಡು ಹಾರಿರುವುದು,ಕೂಗಾಟ,ಚೀರಾಟ ಕೇಳುತ್ತದೆ.

ರಕ್ತದಿಂದ ತೋಯ್ದು ಬಿಳಿ ಕಾರಿನ ಹುಡ್‌ಗೆ ಬಿದ್ದುಕೊಂಡಿರುವಂತೆ ಉರುಬೆ ಕಾಣುತ್ತಾರೆ, ಗುಂಪೊಂದು ಅವರನ್ನು ಎತ್ತಿ ಹಿಡಿಯಲು ಪ್ರಯತ್ನಿಸಿದೆ.ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಯಿತು.ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುಂಡು ಹಾರಿಸಿದ ಶಂಕಿತ ವ್ಯಕ್ತಿಯ
ಹದಿಹರೆಯದವನಾಗಿದ್ದು, ಆತನನ್ನು ಬಂಧಿಸಲಾಗಿದೆ.