ನಾಳೆ ಸುಗಮ ಸಂಗೀತ ತರಬೇತಿ ಕಾರ್ಯಕ್ರಮ ಉದ್ಘಾಟನೆ

Spread the love

ಮೈಸೂರು: ನಕ್ಷತ್ರ ಅಕಾಡೆಮಿ ಆಫ್ ಆರ್ಟ್ಸ್ ಮಲ್ಟಿ ಟ್ಯಾಲೆಂಟ್ ಕ್ರಿಯೇಟರ್ಸ್ ವತಿಯಿಂದ ಸುಗಮ ಸಂಗೀತ ತರಬೇತಿ ಕಾರ್ಯಕ್ರಮ ಉದ್ಘಾಟನೆ ಹಾಗೂ ಕಲಾವಿದರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಾಳೆ ನಡೆಯಲಿದೆ.

ಬುಧವಾರ ಬೆಳಿಗ್ಗೆ 10.30ಕ್ಕೆ ಕುವೆಂಪುನಗರ ಒಂದನೇ ಹಂತದ ಸರಸ್ವತಿ ರಸ್ತೆಯ ನಕ್ಷತ್ರ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ರಾಗ ಕ್ರಿಯೇಷನ್ಸ್ ಅಧ್ಯಕ್ಷ ಆನಂದಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾ‌ರ್ ಉದ್ಘಾಟಿಸುವರು.

ಸ್ತ್ರೀರೋಗ ತಜ್ಞೆ ಡಾ.ರೇಖಾ ಅರುಣ್‌, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮುಖ್ಯ ಅತಿಥಿಗಳು.

ಮನೋಶಾಸ್ತ್ರಜ್ಞೆ ಡಾ. ರೇಖಾ ಮನಶಾಂತಿ, ಕೆಪಿಎ ಡಿವೈಎಸ್ಪಿ ಕುಮಾರ, ಜಯದೇವ ಆಸ್ಪತ್ರೆ ವೈದ್ಯ ಡಾ.ಕೆ.ಆರ್. ಮಂಜುನಾಥ್, ಖ್ಯಾತ ಗಾಯಕ ಅಮ್ಮರಾಮಚಂದ್ರ ವಿಶೇಷ ಆಹ್ವಾನಿತರು.

ಇದೇ ಸಂದರ್ಭದಲ್ಲಿ ಗಾಯಕರಾದ ಆಶಾ ಮಹದೇವ್‌, ಪ್ರೇಮಲತಾ, ಭಾರ್ಗವಿ, ಪ್ರಿಯಾ, ಸೌಮ್ಯಾ, ಗೌರಿ ಒಸ್ಲಾಲ್, ಅಪೂರ್ವ, ಗುರುರಾಜ್, ಕುಮಾರಸ್ವಾಮಿ, ಆರ್. ಲಕ್ಷ್ಮಣ್, ಆದಿಲ್ ಪಾಷ, ನಾರಾಯಣಸ್ವಾಮಿ, ಪ್ರೇಮ್ ಅವರನ್ನು ಸನ್ಮಾನಿಸಲಾಗುವುದು ಎಂದು ಕ್ರಿಯೇಟರ್ಸ್ ಅಧ್ಯಕ್ಷೆ ಮೋಹನ ಮಾಧುರ್ಯ ತಿಳಿಸಿದ್ದಾರೆ.