ಮೈಸೂರು: ಧರ್ಮಸ್ಥಳ ಪ್ರಕರಣ ಕುರಿತು
ಎಸ್ಐಟಿ ತನಿಖೆ ನಡೆಯುತ್ತಿದೆ ನಮ್ಮ ಪೊಲೀಸ್ ಮೇಲೆ ನಂಬಿಕೆ ಇಲ್ಲವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಾರವಾಗಿ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಸಿಎಂ,ಬಿಜೆಪಿಯವರು ಧರ್ಮಯಾತ್ರೆ ಮಾಡಲಿ,ಅವರಿಗೆ
ನಮ್ಮ ಪೊಲೀಸ್ ಮೇಲೆ ನಂಬಿಕೆ ಇಲ್ವಾ ಎಂದು ಪ್ರಶ್ನಿಸಿದರು.
ಆರಂಭದಲ್ಲಿ ತನಿಖೆ ಮಾಡಿ ಎಂದು ಹೇಳಲೇ ಇಲ್ಲ,ಶವಗಳು ಸಿಗದಿದ್ದಾಗ ತನಿಖೆ ಮಾಡಿ ಎಂದು ಹೇಳಿದರು.ವೀರೇಂದ್ರ ಹೆಗೆಡೆ ಅವರೇ ತನಿಖೆಯನ್ನ ಸ್ವಾಗತ ಮಾಡಿದ್ದಾರೆ.
ಸತ್ಯ ಹೊರಬರಬೇಕು, ಎಲ್ಲವೂ ಜನರಿಗೆ ಗೊತ್ತಾಗಬೇಕೆಂದು ಹೆಗೆಡೆಯವರೇ ಎಸ್ಐಟಿ ತನಿಖೆಯನ್ನ ಸ್ವಾಗತ ಮಾಡಿದ್ದಾರೆ ಎಂದು ಸಿಎಂ ಹೇಳಿದರು.
ನಾವು ಯಾರೂ ಕುಯಡಾ ತನಿಖೆ ಬಗ್ಗೆ ಮಧ್ಯಪ್ರವೇಶ ಮಾಡುತ್ತಿಲ್ಲ ಸಂಪೂರ್ಣವಾಗಿ ಸ್ವತಂತ್ರವಾಗಿ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ವಿದೇಶಿ ಹಣ ಬಳಕೆ ಆಗುತ್ತಿದೆ ಎಂಬ ಆರೋಪವಿದೆಯಲ್ಲಾ ಎಂಬ ವರದಿಗಾರರ ಪ್ರಶ್ನೆಗೆ,ಬಿಜೆಪಿಗೆ ಹಣ ಬಂದಿದೆ.
ಇಷ್ಟೆಲ್ಲಾ ಮಾಡಬೇಕಾದರೆ ಬಿಜೆಪಿಗೆ ಹಣ ಎಲ್ಲಿಂದ ಬರಬೇಕು,ಯಾರು ಹಣ ಕೊಡುತ್ತಿದ್ದಾರೆ ಇವರಿಗೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು
ಎಲ್ಲಾ ವಿಚಾರಗಳನ್ನ ರಾಜಕೀಯವಾಗಿ ಬಳಸಿಕೊಳ್ಳಬಾರದು,ವಿಪಕ್ಷಗಳ ಆರೋಪದಲ್ಲಿ ಸತ್ಯ ಇಲ್ಲ ಎಂದು ಹೇಳಿದರು.
ಸೌಜನ್ಯ ಕೇಸ್ ಮರು ತನಿಖೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ,
ಸಿಬಿಐ ಯಾರ ಅಧೀನದಲ್ಲಿದೆ,
ಕೇಂದ್ರದವರೇ ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ.ಈಗ ಸುಪ್ರೀಂ ಕೋರ್ಟ್ ಗೆ ಹೋಗಿ ಅಂತ ಹೇಳುತ್ತಿರುವುದು ಯಾರು
ಸೌಜನ್ಯ ಕೇಸ್ ನಲ್ಲಿ ಯಾರ ಮೇಲೆ ಆರೋಪ ಬಂದಿದೆ,ಹಾಗಾದ್ರೆ ಬಿಜೆಪಿ ಯಾರ ಪರ?
ಒಂದು ಕಡೆ ವಿರೇಂದ್ರ ಹೆಗೆಡೆ ಪರ ಅನ್ನುತ್ತಾರೆ ಮತ್ತೊಂದು ಕಡೆ ಸೌಜನ್ಯ ಪರ ಅಂತಾರೆ
ಹಾಗಾದ್ರೆ ಯಾರ ಪರ ಇದ್ದಾರೆ ಬಿಜೆಪಿಗರು ಎಂದು ಸಿದ್ದರಾಮಯ್ಯ ಕಾರವಾಗಿ ಪ್ರಶ್ನಿಸಿದರು.
ಸೌಜನ್ಯ ಅಪಹರಣವನ್ನ ನೋಡಿದ್ದೇನೆ ಎಂದು ಎಸ್ಐಟಿಗೆ ಮಹಿಳೆ ದೂರು ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,
ಕೋರ್ಟ್ ನಲ್ಲಿ ಆ ಮಹಿಳೆ ಯಾಕೆ ಸಾಕ್ಷಿ ಹೇಳಲಿಲ್ಲ.ಸಿಬಿಐ ತನಿಖೆ ನಡೆದಾಗ ಯಾಕೆ ಹೇಳಿಲ್ಲ,ಸಾಕ್ಷಿಯನ್ನ ಬಚ್ಚಿಡುವುದು ಸಹ ಒಂದು ಅಫೆನ್ಸ್, ಸತ್ಯ ಗೊತ್ತಿರುವುದನ್ನ ಬಚ್ಚಿಡುವುದು ಸಹ ಅಫೆನ್ಸ್ ಎಂದು ತಿಳಿಸಿದರು.
ದಸರಾ ಉದ್ಘಾಟಕರ ಆಯ್ಕೆ ವಿರೋಧಿಸಿ ಬಿಜೆಪಿಗರು ಚಾಮುಂಡಿ ಚಲೋ ಹಮ್ಮಿಕೊಂಡಿದ್ದಾರಲ್ಲಾ ಎಂಬ ಇನ್ನೊಂದು ಪ್ರಶ್ನೆಗೆ,ಮಿರ್ಜಾ ಇಸ್ಮಾಯಿಲ್ ಅವರನ್ನು ಮಹರಾಜರು ಅಂಬಾರಿಯಲ್ಲಿ ಕೂರಿಸಿಕೊಂಡು ಮೆರವಣಿಗೆ ಮಾಡಿದ್ದಾರೆ.
ಆಗ ಆರ್ ಎಸ್ ಎಸ್ ನವರು ಎಲ್ಲಿಗೆ ಹೋಗಿದ್ದರು ಪ್ರಶ್ನಿಸಿದರು
ಕನ್ನಡಾಂಬೆ ಕುಂಕುಮದ ಬಗ್ಗೆ ಬಾನು ಮುಷ್ತಾಕ್ ಮಾತನಾಡಿರುವ ಬಗ್ಗೆ ನನಗೆ ಗೊತ್ತಿಲ್ಲ,ಆಕೆ ಕನ್ನಡದ ಬರಹಗಾರ್ತಿ.
ಕನ್ನಡದ ಪ್ರೀತಿ ಅಭಿಮಾನ ಇಲ್ಲದಿದ್ದರೆ ಪುಸ್ತಕಗಳನ್ನ ಬರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಕುಂಕುಮ ಹಾಕುವುದು ಅವರ ಧರ್ಮದಲ್ಲಿ ಇದ್ಯಾ,ಮತ್ತೊಂದು ಧರ್ಮದವರನ್ನ ಉದ್ಘಾಟನೆಗೆ ಕರೆದು ಕುಂಕುಮ ಹಾಕಿಕೊಳ್ಳಿ ಎಂದು ಹೇಳಲು ಸಾಧ್ಯನಾ,
ಫತ್ವಾ ಹೊರಡಿಸಿರುವುದು ಸುಳ್ಳು ಈ ಬಗ್ಗೆ ಮುಸ್ಮಿಂ ಧರ್ಮಗುರುಗಳು ಸ್ಪಷ್ಟಪಡಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.