2.8 ಕೋಟಿ ರೂ. ವೆಚ್ಚದ ಸಿ.ಸಿ.ರಸ್ತೆ, ಚರಂಡಿ ಕಾಮಗಾರಿಗೆ ಮಂಜುನಾಥ್ ಚಾಲನೆ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಹನೂರು ತಾಲ್ಲೂಕಿನ ಚನ್ನಾಲಿಂಗನಹಳ್ಳಿ, ಕಣ್ಣೂರು ಗ್ರಾಮಗಳಲ್ಲಿ ಸುಮಾರು 2.8 ಕೋಟಿ ರೂ. ವೆಚ್ಚದ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಆರ್. ಮಂಜುನಾಥ್ ಗುದ್ದಲಿಪೂಜೆ ನೆರವೇರಿಸಿದರು.

ಕಳೆದ 20 ವರ್ಷಗಳಿಂದ ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆಯಿಂದ ವಂಚಿತವಾಗಿದ್ದ ಈ ಗ್ರಾಮಗಳ ಜನತೆಯ ಭಾವನೆ ಅರಿತ ಎಂ.ಆರ್. ಮಂಜುನಾಥ್ ಅವರು ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಕಾಲೋನಿ ಯೋಜನೆಯಡಿ 1.50 ಕೋಟಿ ರೂ. ವೆಚ್ಚದಲ್ಲಿ ಚನ್ನಾಲಿಂಗನಹಳ್ಳಿ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ ಕಣ್ಣೂರು ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಒಟ್ಟು 2.8 ಕೋಟಿ ರೂ. ವೆಚ್ಚದ
ಕಾಮಗಾರಿಗಳಿಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು ಈ ಎರಡು ಗ್ರಾಮಗಳ ಅಭಿವೃದ್ಧಿಗೆ ಮತ್ತಷ್ಟು ಅನುಧಾನದ ಅಗತ್ಯವಿದೆ. ಈ ಗ್ರಾಮಗಳಷ್ಟೇ ಅಲ್ಲ ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಗುರಿ ಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಣ್ಣೂರು ಗ್ರಾ.ಪಂ ಅಧ್ಯಕ್ಷೆ ಪಿಡಿಒ ಸಿದ್ದರಾಜು, ನಿರ್ಮಿತಿ ಕೇಂದ್ರದ ಅಭಿಯಂತರ ರವಿಕುಮಾರ್, ಮುಖಂಡರಾದ ಹನೂರು ಮಂಜೇಶ್, ಗೋವಿಂದ, ಚನ್ನಾಲಿಂಗನಹಳ್ಳಿಯ ವೆಂಕಟೇಶ್, ನಾಗರಾಜು ಗುತ್ತಿಗೆದಾರ ಸಲ್ಮಾನ್ ಮತ್ತಿತರರು ಹಾಜರಿದ್ದರು.