ಮೋದಿ ಹೆಸರು ಹೇಳಲು ಹೆದರುವ‌‌ ಪ್ರಧಾನಿ:ಶೆಹಬಾಜ್‌ ವಿರುದ್ಧ ಪಾಕ್ ಸಂಸದ ಕಿಡಿ

ಇಸ್ಲಾಮಾಬಾದ್: ಭಾರತದ ಪ್ರಧಾನಿ ಮೋದಿ ಹೆಸರು ಹೇಳುವುದಕ್ಕೂ ನಮ್ಮ ನಾಯಕ ಹೆದರುತ್ತಿದ್ದಾರೆ ಎಂದು ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ವಿರುದ್ಧ ಸಂಸದ ಶಾಹಿದ್‌ ಖಟ್ಟಕ್‌ ಗುಡುಗಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೂ ಭಾರತದೊಂದಿಗೆ ನಡೆಯುತ್ತಿರುವ ಸಂಘರ್ಷವನ್ನು ಸರ್ಕಾರ ಹೇಗೆ ನಿಭಾಯಿಸುತ್ತಿದೆ ಎಂಬುದರ ಕುರಿತು ಶುಕ್ರವಾರ ನಡೆದ ಚರ್ಚೆಯಲ್ಲಿ ಪಾಕಿಸ್ತಾನ ಸಂಸತ್ತು ರಣಾಂಗಣವಾಗಿತ್ತು.

ಶುಕ್ರವಾರ ನಡೆದ ಸಂಸತ್ ಅಧಿವೇಶನದಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ದಕ್ಷಿಣ ವಲಯ ಖೈಬರ್ ಪಖ್ತುನ್ಖ್ವಾ ಅಧ್ಯಕ್ಷನೂ ಆಗಿರುವ ಪಾಕಿಸ್ತಾನ ಸಂಸದ ಶಾಹಿದ್ ಖಟ್ಟಕ್, ಪ್ರಧಾನಿ ಶೆಹಬಾಜ್ ಷರೀಫ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.

ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡದ ಹೇಡಿ ಎಂದು ಆತ ಜರಿದಿದ್ದಾರೆ.

ಗಡಿಯಲ್ಲಿ ನಿಂತಿರುವ ಪಾಕಿಸ್ತಾನಿ ಸೈನಿಕರು ಸರ್ಕಾರ ಧೈರ್ಯದಿಂದ ಹೋರಾಡುತ್ತದೆ ಎಂದು ನಿರೀಕ್ಷಿಸುತ್ತಾರೆ. ನಮ್ಮ ನಾಯಕ, ಮೋದಿಯ ಹೆಸರನ್ನು ಸಹ ಉಚ್ಚರಿಸಲಾಗದ ಹೇಡಿ. ಗಡಿಯಲ್ಲಿ ಹೋರಾಡುವ ಸೈನಿಕನಿಗೆ ನೀವು ಯಾವ ಸಂದೇಶವನ್ನು ನೀಡುತ್ತಿದ್ದೀರಿ ಎಂದು ಪಾಕ್‌ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾನೆ.

ಮೋದಿ ಹೆಸರು ಹೇಳಲು ಹೆದರುವ‌‌ ಪ್ರಧಾನಿ:ಶೆಹಬಾಜ್‌ ವಿರುದ್ಧ ಪಾಕ್ ಸಂಸದ ಕಿಡಿ Read More

ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆ ಧ್ವಂಸ

ಲಾಹೋರ್: ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದ್ದು ಪಾಕ್ ನ ಲಾಹೋರ್‌ನಲ್ಲಿರುವ ವಾಯು ರಕ್ಷಣಾ ವ್ಯವಸ್ಥೆಯನ್ನು ಧ್ವಂಸಗೊಳಿಸಲಾಗಿದೆ.

ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಮುಂದುವರೆದ ಭಾಗವಾಗಿ, ಭಾರತೀಯ ಸೇನೆಯು ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಗಳ ಮೇಲೆ ದಾಳಿ ಮಾಡಿದೆ.

ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದ ಪಾಕಿಸ್ತಾನ, ಭಾರತದ ಗಡಿ ಭಾಗದ 15 ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಆದರೆ ಪಾಕಿಸ್ತಾನದ ಕ್ಷಿಪಣಿ ದಾಳಿ ವಿಫಲಗೊಳಿಸಿರುವ ಭಾರತೀಯ ಸೇನೆ, ಈ ದಾಳಿಗೆ ಪ್ರತಿಯಾಗಿ ಲಾಹೋರ್‌ನಲ್ಲಿರುವ ಪಾಕಿಸ್ತಾನ ಏರ್‌ ಡಿಫೆನ್ಸ್‌ ಸಿಸ್ಟಮ್‌ಗಳನ್ನು ಧ್ವಂಸಗೊಳಿಸಿದೆ.

ಈ ಕುರಿತು ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಟ್ವೀಟ್‌ ಮಾಡಿ ಮಾಹಿತಿ ನೀಡಿರುವ ಭಾರತೀಯ ಸೇನೆಯ ಪತ್ರಿಕಾ ಮಾಹಿತಿ ಹೆಚ್ಚುವರಿ ಮಹಾನಿರ್ದೇಶಕ, “ಪಾಕಿಸ್ತಾನದ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಲಾಹೋರ್‌ನ ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತದ ರಕ್ಷಣಾ ಸಚಿವಾಲಯ ಕೂಡ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಪಾಕಿಸ್ತಾನದ ಪ್ರಚೋದನಾತ್ಮಕ ದಾಳಿಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲಾಗುವುದು ಎಂದು ತಿಳಿಸಿದೆ.

ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಗೆ ಪ್ರತಿಕ್ರಿಯೆ ಎಂಬಂತೆ, ಉತ್ತರ ಮತ್ತು ಪಶ್ಚಿಮ ಭಾರತದ ಹಲವು ಮಿಲಿಟರಿ ನೆಲೆಗಳ ಮೇಲೆ, ಪಾಕಿಸ್ತಾನವು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಆದರೆ ಭಾರತದ ಸಮಗ್ರ ಪ್ರತಿರೋಧ ವ್ಯವಸ್ಥೆ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು, ಈ ದಾಳಿಯನ್ನು ಸಂಪೂರ್ಣವಾಗಿ ವಿಫಲಗೊಳಿಸಿವೆ.

ಈ ದಾಳಿಗೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ಮೇ.8 ರಂದು ಬೆಳಗ್ಗೆ ಪಾಕಿಸ್ತಾನದ ಹಲವು ಸ್ಥಳಗಳಲ್ಲಿನ ವಾಯು ರಕ್ಷಣಾ ರಾಡಾರ್‌ಗಳು ಮತ್ತು ವ್ಯವಸ್ಥೆಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ. ಇದರಲ್ಲಿ ಲಾಹೋರ್‌ ಏರ್‌ ಡಿಫೆನ್ಸ್‌ ಸಿಸ್ಟಮ್‌ ಕೂಡ ಸೇರಿದೆ ಎಂದು ಸೇನಾ ಮೂಲಗಳು ಖಚಿತಪಡಿಸಿವೆ.

ಲಾಹೋರ್‌ ಏರ್‌ ಡಿಫೆನ್ಸ್‌ ಸಿಸ್ಟಮ್‌ ಮೇಲೆ ನಡೆದ ಕ್ಷಿಪಣಿ ದಾಳಿಯನ್ನು ಪಾಕಿಸ್ತಾನ ಕೂಡ ಅಧಿಕೃತಪಡಿಸಿದೆ.

ಲಾಹೋರ್‌ನಲ್ಲಿ ನಡೆದಿರುವ ದಾಳಿಯನ್ನು ಪಾಕಿಸ್ತಾನದ ದಾಳಿಗೆ ಪ್ರತಿಕ್ರಿಯೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ನಮ್ಮ ನಗರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಲಾಹೋರ್‌ ಸೇರಿದಂತೆ ನೆರೆ ರಾಷ್ಟ್ರದ ಹಲವು ನಗರಗಳ ವಾಯು ರಕ್ಷಣಾ ವ್ಯವಸ್ಥೆಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಭಾರತೀಯ ಸೇನೆ ಎಡಿಜಿಪಿ-ಪಿಐ ಟ್ವೀಟ್‌ ಮಾಡಿದೆ.

ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆ ಧ್ವಂಸ Read More

ಆಪರೇಷನ್ ಸಿಂಧೂರ ಬೆನ್ನಲ್ಲೇಗುಂಡಿನ ದಾಳಿ ಮಾಡಿದ ಪಾಕ್: 7 ಸಾವು

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು 7 ಮಂದಿ ಮೃತಪಟ್ಟಿದ್ದಾರೆ.

ಎಂದು ಸೇನಾ ಮೂಲಗಳು ತಿಳಿಸಿವೆ.

ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ತಾಣಗಳನ್ನು ಗುರಿಯಾಗಿರಿಸಿಕೊಂಡು ಭಾರತ ಆಪರೇಷನ್ ಸಿಂಧೂರ ನಡೆಸಿದ ಬೆನ್ನಲ್ಲೇ ಪಾಕಿಸ್ತಾನ ಎಲ್‌ಒಸಿಯಲ್ಲಿ ಶೆಲ್ ದಾಳಿ ನಡೆಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ

ಈ ವೇಳೆ ಏಳು ಮಂದಿ ಭಾರತೀಯ ನಾಗರಿಕರು ಮೃತಪಟ್ಟಿದ್ದು, ಶೆಲ್ ದಾಳಿಯಿಂದಾಗಿ ಹಲವಾರು ಮಂದಿ ಗಾಯಗೊಂಡಿದ್ದಾರೆ.

ಆಪರೇಷನ್ ಸಿಂಧೂರ ಬೆನ್ನಲ್ಲೇಗುಂಡಿನ ದಾಳಿ ಮಾಡಿದ ಪಾಕ್: 7 ಸಾವು Read More

ಸಿಂಗಾಪುರ ಸಾರ್ವತ್ರಿಕ ಚುನಾವಣೆ:ಪೀಪಲ್ಸ್ ಆಕ್ಷನ್ ಪಾರ್ಟಿಗೆ ಭರ್ಜರಿ ಗೆಲುವು

ಸಿಂಗಾಪುರ: ಸಿಂಗಾಪುರ ಸಾರ್ವತ್ರಿಕ ಚುನಾವಣೆಯಲ್ಲಿ ದೀರ್ಘಕಾಲ ಆಡಳಿತ ನಡೆಸುತ್ತಿದ್ದ ಪೀಪಲ್ಸ್ ಆಕ್ಷನ್ ಪಾರ್ಟಿ ಅಭೂತಪೂರ್ವ ಗೆಲುವು ಸಾಧಿಸಿದೆ.

ಒಂದು ವರ್ಷದ ಹಿಂದೆ ಅಧಿಕಾರ ವಹಿಸಿಕೊಂಡ ಪ್ರಧಾನಿ ಲಾರೆನ್ಸ್ ವಾಂಗ್ ಅವರಿಗೆ ಬೆಂಬಲ ನೀಡುವ ಮೂಲಕ ಪಿಎಪಿ 66 ವರ್ಷಗಳ ಆಡಳಿತವನ್ನು ವಿಸ್ತರಿಸಿದೆ.

ಮತ ಎಣಿಕೆ ಮುಗಿದ ನಂತರ ಪಿಎಪಿ 82 ಸಂಸದೀಯ ಸ್ಥಾನಗಳನ್ನು ಗೆದ್ದಿದೆ ಎಂದು ಚುನಾವಣಾ ಆಯೋಗ ಘೋಷಿಸಿತು.

ಪಕ್ಷವು ಈ ಹಿಂದೆ ಐದು ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿತ್ತು, ಒಟ್ಟು 97 ಸ್ಥಾನಗಳಲ್ಲಿ 87 ಸ್ಥಾನಗಳನ್ನು ಗಳಿಸಿತ್ತು. ವಿರೋಧ ಪಕ್ಷ ವರ್ಕರ್ಸ್ ಪಾರ್ಟಿ 10 ಸ್ಥಾನಗಳನ್ನು ಉಳಿಸಿಕೊಂಡಿದೆ.

ಪಿಎಪಿಯ ಜನಪ್ರಿಯ ಮತಗಳು ಶೇಕಡಾ 65.6 ಕ್ಕೆ ಏರಿತು, ಇದು 2020 ರ ಚುನಾವಣೆಯಲ್ಲಿ ದಾಖಲೆಯ ಕನಿಷ್ಠ ಶೇಕಡಾ 61ರಿಂದ ಹೆಚ್ಚಾಗಿದೆ. 1959 ರಿಂದ ಸಿಂಗಾಪುರವನ್ನು ಆಳುತ್ತಿದ್ದ ಪಿಎಪಿಯ ಬೆಂಬಲಿಗರು ಕ್ರೀಡಾಂಗಣಗಳಲ್ಲಿ ಧ್ವಜಗಳನ್ನು ಬೀಸುತ್ತಾ ಸಂಭ್ರಮಿಸಿದರು.

ಸಿಂಗಾಪುರ ಸಾರ್ವತ್ರಿಕ ಚುನಾವಣೆ:ಪೀಪಲ್ಸ್ ಆಕ್ಷನ್ ಪಾರ್ಟಿಗೆ ಭರ್ಜರಿ ಗೆಲುವು Read More

ಆಸ್ಟ್ರೇಲಿಯಾ ಚುನಾವಣೆ:ಗೆಲುವು ಸಾಧಿಸಿಮತ್ತೆ ಪ್ರಧಾನಿ ಗಾದಿಗೇರಿದ ಅಲ್ಬನೀಸ್

ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ನಡೆದ ಚುನಾವಣೆಯಲ್ಲಿ ಆಂಥೋನಿ ಅಲ್ಬನೀಸ್ ಅವರ ನೇತೃತ್ವದ ಲೇಬ‌ರ್ ಪಕ್ಷ ಭಾರೀ ಗೆಲುವು ಸಾಧಿಸಿದೆ.

ಈ ಗೆಲುವಿನ ಹಿನ್ನೆಲೆಯ ಅಲ್ಬನೀಸ್ ಅವರು ಮತ್ತೆ ಆಸ್ಟ್ರೇಲಿಯಾ ಪ್ರಧಾನಿಯಾಗಿ ಆಯ್ಕೆಯಾಗಿದ್ದು ಅಧಿಕಾರದ ಗದ್ದುಗೆ ಅಲಂಕರಿಸಿದ್ದಾರೆ.

ಕಳೆದ 21 ವರ್ಷಗಳಲ್ಲಿ ಎರಡನೇ ಅವಧಿಗೆ ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಅಲ್ಬನೀಸ್ ಪಾತ್ರರಾಗಿದ್ದಾರೆ.

ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರದ ವಿಜಯೋತ್ಸವದಲ್ಲಿ ಮಾತನಾಡಿದ ಅಲ್ಬನೀಸ್ ಅವರು, ಇಂದು ನಮ್ಮ ಜನರು ದೇಶದ ಮೌಲ್ಯಗಳಿಗಾಗಿ ಮತ ಹಾಕಿದ್ದಾರೆ ಎಂದು ತಿಳಿಸಿದರು.

150 ಸದಸ್ಯಬಲದ ಸಂಸತ್ತಿನಲ್ಲಿ ಲೇಬ‌ರ್ ಪಕ್ಷವು 85 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ವಿರೋಧ ಪಕ್ಷವಾದ ಕನ್ಸರ್‌ವೇಟಿವ್ 41 ಕ್ಷೇತ್ರಗಳಲ್ಲಿ, 9 ಕ್ಷೇತ್ರಗಳಲ್ಲಿ ಇತರರು ಜಯ ಸಾಧಿಸಿದ್ದಾರೆ.15 ಕ್ಷೇತ್ರಗಳಲ್ಲಿ ಯಾರು ಗೆಲುವಿನ ನಗೆ ಬೀರಬಹುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಸುದ್ದಿಸಂಸ್ಥೆ ಅಂದಾಜಿಸಿದೆ.

ಅಲ್ಬನೀಸ್ ಅವರ ಸ್ಥಿರವಾದ ನಾಯಕತ್ವವು ಅವರನ್ನು ಗೆಲುವಿಗೆ ಮುಖ್ಯ ಕಾರಣ ಎಂದು ಪ್ರಮುಖ ನಾಯಕರು ಬಣ್ಣಿಸಿದ್ದಾರೆ.

ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಲ್ಬನೀಸ್ ಅವರು ಎರಡನೆ ಬಾರಿಗೆ ಆಸ್ಟ್ರೇಲಿಯಾ ದೇಶದ ಪ್ರಧಾನಿಯಾಗಿರುವುದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ದೇಶಗಳ ಅಗ್ರಗಣ್ಯ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.

ಆಸ್ಟ್ರೇಲಿಯಾ ಚುನಾವಣೆ:ಗೆಲುವು ಸಾಧಿಸಿಮತ್ತೆ ಪ್ರಧಾನಿ ಗಾದಿಗೇರಿದ ಅಲ್ಬನೀಸ್ Read More

ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಭಾರತದೊಂದಿಗೆ ನಿಲ್ಲುತ್ತೇವೆ:ಅಮೆರಿಕಾ

ವಾಶಿಂಗ್ಟನ್, ಮೇ. 2: ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಭಾರತದೊಂದಿಗೆ ನಿಲ್ಲುತ್ತೇವೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಅಮೆರಿಕಾ ಸ್ಪಷ್ಟವಾಗಿ‌ ಹೇಳಿದೆ.

ಭಾರತ-ಪಾಕ್ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಸ್ಥಿತಿಯನ್ನು ಅಮೆರಿಕ ನಿಕಟವಾಗಿ ಗಮನಿಸುತ್ತಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರರಾದ ಟ್ಯಾಮಿ ಬ್ರೂಸ್ ಹೇಳಿದ್ದಾರೆ.

ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ.

ದಕ್ಷಿಣ ಏಷ್ಯಾದಲ್ಲಿ ದೀರ್ಘಕಾಲೀನ ಶಾಂತಿ ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವ ಜವಾಬ್ದಾರಿಯುತ ನಿರ್ಣಯದತ್ತ ಕೆಲಸ ಮಾಡುವಂತೆ ಭಾರತ ಮತ್ತು ಪಾಕಿಸ್ತಾನವನ್ನು ಅವರು ಒತ್ತಾಯಿಸಿದ್ದಾರೆ.

ನಮ್ಮ ಸರ್ಕಾರ ನಿರಂತರ ಸಂವಹನದಲ್ಲಿದೆ. ಎರಡೂ ದೇಶಗಳಿಂದ ಜವಾಬ್ದಾರಿಯುತ ಪರಿಹಾರವನ್ನು ಕೇಳುತ್ತಿದ್ದೇವೆ. ಅದನ್ನು ಮೀರಿ, ನಾನು ನಿಮಗೆ ಏನನ್ನೂ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಅಮೆರಿಕ ಪ್ರೋತ್ಸಾಹಿಸಿದೆ, ಭಯೋತ್ಪಾದನೆಯ ವಿರುದ್ಧ ದೆಹಲಿಯೊಂದಿಗೆ ಸಹಕರಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ತನಿಖೆಯಲ್ಲಿ ಇಸ್ಲಾಮಾಬಾದ್‌ನ ಸಹಕಾರವನ್ನು ಒತ್ತಾಯಿಸಿದೆ.

ಕಳೆದ ವಾರ ವಿದೇಶಾಂಗ ಸಚಿವ ಜೈಶಂಕರ್ ಅವರೊಂದಿಗಿನ ತಮ್ಮ ದೂರವಾಣಿ ಮಾತುಕತೆಯಲ್ಲಿ ರುಬಿಯೊ ಪಹಲ್ಗಾಮ್‌ನಲ್ಲಿ 26 ನಾಗರಿಕರನ್ನು ಕೊಂದ ಭಯಾನಕ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ತನ್ನ ದುಃಖವನ್ನು ವ್ಯಕ್ತಪಡಿಸಿದ್ದರು.

ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಭಾರತದೊಂದಿಗೆ ನಿಲ್ಲುತ್ತೇವೆ:ಅಮೆರಿಕಾ Read More

ಮಾರ್ಕ್‌ ಕಾರ್ನೇ ಕೆನಡಾ ಪ್ರಧಾನಿ

ಒಟ್ಟಾವ: ಕೆನಡಾದಲ್ಲಿ ನಡೆದ ಚುನಾವಣೆಯಲ್ಲಿ ಲಿಬರಲ್ ಪಕ್ಷ ಗೆಲುವು ಸಾಧಿಸಿದೆ, ಮಾರ್ಕ್‌ ಕಾರ್ನೇ ಪ್ರಧಾನಿಯಾಗಿದ್ದು ಜಗತ್ತಿನ ಹಲವು ರಾಷ್ಟ್ರಗಳ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

ಅಮೆರಿಕ ಹೇರಿದ ಪ್ರತಿಸುಂಕದ ನಂತರ ಉಂಟಾದ ವ್ಯಾಪಾರ ಯುದ್ಧದ ನಂತರ ಲಿಬರಲ್ ಪಕ್ಷವು ಗೆಲುವು ಸಾಧಿಸಿರುವುದು ಸಾಕಷ್ಟು ಸದ್ದು ಮಾಡಿದೆ.

‘ಜಿ7 ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ಮತ್ತು ಜತೆಗೂಡಿ ಕೆಲಸ ಮಾಡಲು ಉತ್ಸುಕರಾಗಿದ್ದೇವೆ. ನಮ್ಮ ಪ್ರಜಾತಾಂತ್ರಿಕ ಮೌಲ್ಯಗಳನ್ನು ಹಂಚಿಕೊಂಡು ಕೆಲಸ ಮಾಡಲು ಸಿದ್ಧ. ಮುಕ್ತ ವ್ಯಾಪಾರಕ್ಕೆ ಬದ್ಧ. ಯುರೋಪ್‌ನೊಂದಿಗೆ ಕೆನಡಾ ಉತ್ತಮ ಬಾಂಧವ್ಯ ಹೊಂದಿದೆ. ಅದು ಇನ್ನಷ್ಟು ವೃದ್ಧಿಸುತ್ತಿದೆ ಎಂದು ಕಾರ್ನೆ ಹೇಳಿದ್ದಾರೆ.

ಕಾರ್ನೇಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ದೇಶದ ಜನರ ಹಿತಕ್ಕಾಗಿ ನಮ್ಮ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸುವ ನಿಟ್ಟಿನಲ್ಲಿ ಸಂಬಂಧವನ್ನು ಗಟ್ಟಿಗೊಳಿಸೋಣ. ಆ ನಿಟ್ಟಿನಲ್ಲಿ ಕೆನಡಾದೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ‌ ಎಂದಿದ್ದಾರೆ.

ಚೀನಾ ಕೂಡಾ ಕಾರ್ನೇಗೆ ಅಭಿನಂದನೆ ಸಲ್ಲಿಸಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರಾನ್ ಸೇರಿದಂತೆ ಹಲವು ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.

ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಕೆನಡಾದ ಗವರ್ನರ್ ಆಗಿದ್ದ ಕಾರ್ನೇ ಈಗ ಪ್ರಧಾನಿ ಹುದ್ದೆಗೇರಿದ್ದಾರೆ.

ಮಾರ್ಕ್‌ ಕಾರ್ನೇ ಕೆನಡಾ ಪ್ರಧಾನಿ Read More

ಪಾಕಿಸ್ತಾನಕ್ಕೆ ಸೈನಿಕರ ನಿರಂತರ ರಾಜೀನಾಮೆ ಶಾಕ್

ಇಸ್ಲಾಮಾಬಾದ್‌: ಭಾರತದ ವಿರುದ್ಧ ಯುದ್ಧಕ್ಕೆ ತಯಾರಾದಂತೆ ಪೋಸ್‌ ನೀಡುತ್ತಿರುವ ಪಾಕಿಸ್ತಾನಕ್ಕೆ ಅಲ್ಲಿನ ಸೈನಿಕರೇ ಶಾಕ್‌ ನೀಡಿದ್ದಾರೆ.

ಈಗಾಗಲೇ ಹಲವು ಸೈನಿಕರು, ಸೇನಾ ಅಧಿಕಾರಿಗಳು ರಾಜೀನಾಮೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.

ಕೇವಲ ಎರಡು ದಿನಗಳಲ್ಲಿ ಸುಮಾರು 5,000 ಅಧಿಕಾರಿಗಳು ಮತ್ತು ಸೈನಿಕರು ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

ಭಾರತವು ಯಾವುದೇ ಕ್ಷಣದಲ್ಲಿ ಪ್ರಬಲ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಬಹುದು ಎಂಬ ಭಯದಿಂದ ಪಾಕಿಸ್ತಾನಿ ಸೈನಿಕರ ಕುಟುಂಬಗಳು ಉದ್ಯೋಗಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿವೆಯಂತೆ.

ಕೆಲವು ಸೈನಿಕರು ತಮ್ಮ ಸುರಕ್ಷತೆಯ ಬಗ್ಗೆ ಭಯಗೊಂಡು ಕರ್ತವ್ಯದಿಂದ ಹಿಂದೆ ಸರಿಯುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಖ್ಯೆಯಲ್ಲಿ ಸೈನಿಕರು ರಾಜೀನಾಮೆ ನೀಡಲಿದ್ದಾರೆ ಎಂದು ವರದಿಯಾಗಿದೆ.

ರಾಜೀನಾಮೆ ನೀಡುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ಪಾಕ್‌ ಸೇನೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ. ಸೇನೆಯ ನಿಯಮವನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಪಾಕಿಸ್ತಾನ ಸೇನಾ ಕಾಯ್ದೆ ಅಡಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಆರ್ಥಿಕವಾಗಿ ಈಗಾಗಲೇ ತತ್ತರಿಸಿ ಹೋಗಿರುವ ಪಾಕಿಸ್ತಾನದ ಮೇಲೆ ಒಂದು ಕಡೆಯಿಂದ ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳು ಮತ್ತೊಂದು ಕಡೆಯಿಂದ ತಾಲಿಬಾನ್‌ ನವರು ದಾಳಿ ಮಾಡುತ್ತಿದ್ದಾರೆ.

ಬಲೂಚಿಸ್ತಾನ, ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಬಲೂಚಿಸ್ತಾನ ಲಿಬರೇಷನ್ ಆರ್ಮಿ ಬಂಡುಕೋರರು ಸೇನೆಯನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿ ನಡೆಸುತ್ತಲೇ ಇದ್ದಾರೆ. ಈ ದಾಳಿಗಳಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರು ಮೃತಪಟ್ಟಿರುವುದು ಸೈನಿಕರು ರಾಜೀನಾಮೆ ನೀಡಲು ಮತ್ತೊಂದು ಕಾರಣ ಎನ್ನಲಾಗಿದೆ.

ಪಾಕಿಸ್ತಾನಕ್ಕೆ ಸೈನಿಕರ ನಿರಂತರ ರಾಜೀನಾಮೆ ಶಾಕ್ Read More

ಪಾಕಿಸ್ತಾನದಲ್ಲಿ ಪ್ರಬಲ ಬಾಂಬ್‌ ಸ್ಪೋಟ7 ಮಂದಿ ಸಾವು

ಪೇಶಾವರ: ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದ ಬಾಂಬ್ ಸ್ಫೋಟಗೊಂಡ ಪರಿಣಾಮ ಏಳಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು,ಹಲವಾರು ಮಂದಿ ಗಾಯಗೊಂಡಿದ್ದಾರೆ.

ದಕ್ಷಿಣ ವಜೀರಿಸ್ತಾನ್ ಜಿಲ್ಲೆಯ ಪ್ರಧಾನ ಕಚೇರಿ ವಾನಾದಲ್ಲಿರುವ ಸ್ಥಳೀಯ ಶಾಂತಿ ಸಮಿತಿ ಕಚೇರಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದ ನಂತರ 16 ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ

ಇಲ್ಲಿಯವರೆಗೆ, ಯಾವುದೇ ಉಗ್ರ ಸಂಘಟನೆ ಸ್ಫೋಟದ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ.

ಸ್ಫೋಟದ ತೀವ್ರತೆಗೆ ಶಾಂತಿ ಸಮಿತಿಯ ಕಚೇರಿಯ ಕಟ್ಟಡ ಸಂಪೂರ್ಣ ಧ್ವಂಸಗೊಂಡಿದೆ ಮತ್ತು ಹಲವಾರು ಜನ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದು ಸಾವು,ನೋವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿ ಪಡೆದ ನಂತರ ರಕ್ಷಣಾ ತಂಡಗಳು ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ದಾವಿಸಿ ಗಾಯಾಳುಗಳನ್ನು ಅವಶೇಷಗಳಿಂದ ಹೊರತೆಗೆಯುವ ಕಾರ್ಯದಲ್ಲಿ ತೊಡಗಿದರು

ಪಾಕಿಸ್ತಾನದಲ್ಲಿ ಪ್ರಬಲ ಬಾಂಬ್‌ ಸ್ಪೋಟ7 ಮಂದಿ ಸಾವು Read More

ಭಾರತಕ್ಕೆ ಪರಮಾಣು ಪ್ರತೀಕಾರದ ಬೆದರಿಕೆ ಒಡ್ಡಿದ ಪಾಕ್

ಇಸ್ಲಾಮಾಬಾದ್: ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಕೋಫೋದ್ರಿಕ್ತವಾಗಿರುವ ಭಾರತವನ್ನ ಪಾಕ್ ಮತ್ತೆ ಕೆಣಕಿದೆ.

ಪಾಕಿಸ್ತಾನ ಸಚಿವ ಹನೀಫ್ ಅಬ್ಬಾಸಿ ಭಾರತಕ್ಕೆ ಪರಮಾಣು ಪ್ರತೀಕಾರದ ಬೆದರಿಕೆ ಹಾಕಿದ್ದಾರೆ. ಘೋರಿ, ಶಾಹೀನ್ ಮತ್ತು ಘಜ್ನವಿ ಕ್ಷಿಪಣಿಗಳು ಸೇರಿದಂತೆ ಪಾಕಿಸ್ತಾನದ ಕ್ಷಿಪಣಿ ಶಸ್ತ್ರಾಸ್ತ್ರಗಳು ಮತ್ತು 130 ಪರಮಾಣು ಬಾಂಬ್ ಗಳನ್ನು ಭಾರತಕ್ಕಾಗಿಯೇ ಇಡಲಾಗಿದೆ ಎಂದು ಉದ್ದಟತನದ ಮಾತನಾಡಿದ್ದು ಬಾರೀ ಆಕ್ರೋಶ ವ್ಯಕ್ತವಾಗಿದೆ.

26 ಜನರ ಸಾವಿಗೆ ಕಾರಣವಾದ ಮಾರಕ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ಇತ್ತೀಚಿನ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಅಬ್ಬಾಸಿ ಈ ಪರಮಾಣು ಬಾಂಬ್ ಬೆದರಿಕೆ ಹಾಕಿದ್ದಾರೆ.

ಭಾರತವು ಪಾಕಿಸ್ತಾನದ ನೀರು ಸರಬರಾಜನ್ನು ನಿಲ್ಲಿಸಲು ನಿರ್ಧರಿಸಿದರೆ, ಅದು ಪೂರ್ಣ ಪ್ರಮಾಣದ ಯುದ್ಧಕ್ಕೆ ಸಿದ್ಧವಾಗಬೇಕು ಎಂದು ಅಬ್ಬಾಸಿ ಬಹಿರಂಗವಾಗಿ ಘೋಷಿಸಿದ್ದಾರೆ.

ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳು ಕೇವಲ ಸಾಂಕೇತಿಕವಾಗಿಲ್ಲ ದೇಶಾದ್ಯಂತ ಇಡಲಾಗಿದೆ ಜತೆಗೆ ಬಳಸಲು ಸಿದ್ಧವಾಗಿವೆ ಎಂದು ಹೇಳಿದ್ದಾರೆ.

ಅಬ್ಬಾಸಿ ಈ ರೀತಿ ಬೆದರಿಕೆ ಹಾಕುದರೆ ಸಿಂಧೂ ನದಿ ನೀರು ಬಿಡದಿದ್ದರೆ ನಿಮ್ಮ ರಕ್ತ ಹರಿಯುತ್ತದೆ ಎಂದು ಭಾರತಕ್ಕೆ ಪಾಕ್ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಎಚ್ಚರಿಕೆ ನೀಡಿದ್ದಾರೆ.

ನಮ್ಮಲ್ಲಿರುವ ಮಿಲಿಟರಿ ಉಪಕರಣಗಳು, ಕ್ಷಿಪಣಿಗಳು ಪ್ರದರ್ಶನಕ್ಕೆ ಇಟ್ಟಿಲ್ಲ. ನಾವು ದೇಶಾದ್ಯಂತ ನಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಎಲ್ಲಿ ಇರಿಸಿದ್ದೇವೆ ಎಂದು ಯಾರಿಗೂ ತಿಳಿದಿಲ್ಲ, ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳೆಲ್ಲವೂ ನಿಮ್ಮ ಮೇಲೆ ಗುರಿಯಾಗಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

1960ರ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವುದು ಮತ್ತು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾಗಳನ್ನು ರದ್ದುಗೊಳಿಸುವುದು ಸೇರಿದಂತೆ ಪಹಲ್ಗಾಮ್ ದಾಳಿಗೆ ಭಾರತ ತೆಗೆದುಕೊಂಡ ಪ್ರತಿಕ್ರಮಗಳ ನಂತರ ಅಬ್ಬಾಸಿ ಈ ರೀತಿಯ ತೀಕ್ಷ್ಣವಾದ ಬೆದರಿಕೆಗಳನ್ನು ಒಡ್ಡಿದ್ದಾರೆ.

ಪಾಕಿಸ್ತಾನವು ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ಉಂಟಾದ ಅಡಚಣೆಯನ್ನು ಉಲ್ಲೇಖಿಸಿರುವ ಅಬ್ಬಾಸಿ ಇನ್ನೂ 10 ದಿನಗಳ ಕಾಲ ಹೀಗೆ ಮುಂದುವರಿದರೆ, ಭಾರತದ ವಿಮಾನಯಾನ ಸಂಸ್ಥೆಗಳು ದಿವಾಳಿಯಾಗುತ್ತವೆ ಎಂದು ಟೀಕಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತವು ತನ್ನದೇ ಆದ ಭದ್ರತಾ ಲೋಪಗಳನ್ನು ಸರಿಪಡಿಸುವ ಬದಲು ಪಾಕಿಸ್ತಾನದ ಮೇಲೆ ಆರೋಪ ಹೊರಿಸುತ್ತಿದೆ ಎಂದು ಅಬ್ಬಾಸಿ ಟೀಕಿಸಿ ಇದ್ದಾರೆ.

ಭಾರತಕ್ಕೆ ಪರಮಾಣು ಪ್ರತೀಕಾರದ ಬೆದರಿಕೆ ಒಡ್ಡಿದ ಪಾಕ್ Read More