ನವದೆಹಲಿ: ಏಪ್ರಿಲ್ 22 ರ ಪಹಲ್ಗಾಮ್ ಉಗ್ರ ದಾಳಿ ಎಸಗಿದ ಪಾಕಿಸ್ತಾನ ಮೂಲದ ದಿ ರೆಸಿಸ್ಟೆನ್ಸ್ ಫ್ರಂಟ್ ಅನ್ನು ಅಮೆರಿಕದ ವಿದೇಶಾಂಗ ಇಲಾಖೆ ಭಯೋತ್ಪಾದಕ ಸಂಘಟನೆ ಪಟ್ಟಿಗೆ ಸೇರಿಸಿದ್ದು,ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಮುಖಭಂಗವಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರ ಪ್ರಾಣ ಬಲಿ ಪಡೆದ ಘಟನೆಯ ಹೊಣೆಗಾರಿಕೆಯನ್ನು ದಿ ರೆಸಿಸ್ಟೆನ್ಸ್ ಫ್ರಂಟ್ ಸಂಘಟನೆ ವಹಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ತಿಳಿಸಿದ್ದಾರೆ.
ವಿದೇಶಾಂಗ ಇಲಾಖೆಯು ದಿ ರೆಸಿಸ್ಟೆನ್ಸ್ ಫ್ರಂಟ್ ಅನ್ನು ಗೊತ್ತುಪಡಿಸಿದ ವಿದೇಶಿ ಭಯೋತ್ಪಾದಕ ಸಂಘಟನೆ ಮತ್ತು ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ ಎಂದು ಹೆಸರಿಸುತ್ತದೆ. ಲಷ್ಕರ್-ಎ-ತೊಯ್ ಬಾ ಸಂಸ್ಥೆಯ ಭಾಗವಾಗಿರುರುವ ಟಿಆರ್‌ಎಫ್ ಪಹಲ್ಗಾಮ್ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.
2008 ರ ಮುಂಬೈ ದಾಳಿಯ ನಂತರ ಭಾರತದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಮಾರಕ ದಾಳಿ ಇದಾಗಿದೆ. ಭಾರತೀಯ ಭದ್ರತಾ ಪಡೆಗಳ ವಿರುದ್ಧದ ಹಲವಾರು ದಾಳಿಯ ಹೊಣೆಯನ್ನು ಟಿಆರ್‌ಎಫ್ ಹೊತ್ತುಕೊಂಡಿದೆ ಎಂದು ಮಾರ್ಕೊ ರುಬಿಯೊ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಈ ಕ್ರಮವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಭಯೋತ್ಪಾದನೆಯನ್ನು ಎದುರಿಸುವ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಟೆಕ್ಸಾಸ್,ಜುಲೈ.13: ಎಸ್ ಜಿ ಎಸ್ ಗೀತಾ ಫೌಂಡೇಶನ್ ಮತ್ತು ಗೀತಾ ಮಹಾಯಜ್ಞ ಕಾರ್ಯಕ್ರಮದ 10 ನೇ ವಾರ್ಷಿಕೋತ್ಸವವನ್ನು ಈ ಬಾರಿ ಟೆಕ್ಸಾಸ್ ನ ಸಿಯುಟಿಎಕ್ಸ್ ಈವೆಂಟ್ ಸೆಂಟರ್ ನಲ್ಲಿ ಆಚರಿಸಲಾಯಿತು.
ಮೈಸೂರಿನ ಅವಧೂತ ದತ್ತ ಪೀಠದ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಿಯುಟಿಎಕ್ಸ್ ಈವೆಂಟ್ ಸೆಂಟರ್ ನಲ್ಲಿ ನಡೆದ ಗೀತಾ ಉತ್ಸವ ಎಲ್ಲರ ಮನ ಸೂರೆಗೊಂಡಿತು.
ಎಸ್ ಜಿ ಎಸ್ ಗೀತಾ ಫೌಂಡೇಶನ್ ಮತ್ತು ಕಾರ್ಯ ಸಿದ್ಧಿ ಹನುಮಾನ್ ದೇವಾಲಯವು ಸಿಯುಟೆಕ್ಸ್ ಕಾರ್ಯಕ್ರಮದಲ್ಲಿ ಯುಎಸ್ ನ ಅತಿದೊಡ್ಡ ಗೀತಾ ಆಚರಣೆಗಳಾದ ಗುರು ಪೂರ್ಣಿಮಾ ಮತ್ತು ಗೀತಾ ಉತ್ಸವವನ್ನು ಆಯೋಜಿಸಿದವು.
ಗೀತಾ ಉತ್ಸವದ ವೇಳೆ ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್ ಅವರು ಭಗವದ್ಗೀತೆಯ ಕಾರ್ಯಕ್ರಮಕ್ಕಾಗಿ ತಮ್ಮ ಶುಭಾಶಯಗಳು ಮತ್ತು ಅಭಿನಂದನಾ ಸಂದೇಶಗಳನ್ನು ಕಳುಹಿಸಿದ್ದರು.
ಪೂಜ್ಯ ಶ್ರೀ ಸ್ವಾಮೀಜಿಯವರ 2015 ರ ದೈವಿಕ ಪ್ರತಿಜ್ಞೆ ಯಿಂದ ಎಸ್ ಜಿ ಎಸ್ ಗೀತಾ ಫೌಂಡೇಶನ್ ನಡೆಸುತ್ತಿರುವ ಗೀತಾ ಮಹಾಯಜ್ಞ ಕಾರ್ಯಕ್ರಮದ ಭಾಗವಾಗಿ ಕೇವಲ 10 ತಿಂಗಳಲ್ಲಿ ವಿದ್ಯಾರ್ಥಿಗಳು ಭಗವದ್ಗೀತೆಯ ಎಲ್ಲಾ 700 ಶ್ಲೋಕಗಳನ್ನು ಕಂಠಪಾಠ ಮಾಡಿರುವುದು ವಿಶೇಷ.
ಗೀತಾ ಮಹಾಯಜ್ಞ ಕಾರ್ಯಕ್ರಮವು ಜಾಗತಿಕವಾಗಿ 7,000 ಕಂಠಪಾಠ ಮಾಡುವವರನ್ನು ಮತ್ತು 10,000 ನಿರರ್ಗಳ ಓದುಗರನ್ನು ಹೊಂದಿದೆ.
3,000 ಕಂಠಪಾಠ ಮಾಡುವವರು 10 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರು ಇರುವುದು ವಿಶೇಷ. 2,000 ಕಂಠಪಾಠ ಮಾಡುವವರು ವಯಸ್ಕರಾಗಿದ್ದಾರೆ.
ಈ ಜಾಗತಿಕ ಆಂದೋಲನವನ್ನು ಸಕ್ರಿಯಗೊಳಿಸಲು ಎಸ್ ಜಿ ಎಸ್ ಗೀತಾ ಫೌಂಡೇಶನ್ 500 ಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಿದೆ.
ಈ ಸಂದರ್ಭದಲ್ಲಿ ಮೈಸೂರಿನ ಅವಧೂತ ದತ್ತಪೀಠದ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಟೆಕ್ಸಾಸ್ ಜನತೆಗೆ ಆಶೀರ್ವಚನ ನೀಡಿ ಮಾತನಾಡಿದರು.
ಇಂದು ವಿದ್ಯಾರ್ಥಿಗಳು, ಪ್ರೇಕ್ಷಕರು ಮತ್ತು ದೊಡ್ಡ ಸನಾತನ ಧರ್ಮ ಸಮುದಾಯಕ್ಕೆ ಮಹತ್ವದ ಮೈಲಿಗಲ್ಲು. ನಾವು ಮೊದಲ ಸಂಪೂರ್ಣ ಭಗವದ್ಗೀತೆ ಪಾರಾಯಣವನ್ನು ವೀಕ್ಷಿಸಿದ ನಂತರ ಇದು ಹತ್ತನೇ ವರ್ಷ. ಈ ದಶಕದಲ್ಲಿ, ಇದು ಜಾಗತಿಕ ಚಳವಳಿಯಾಗಿದೆ ಎಂದು ಬಣ್ಣಿಸಿದರು.
ಚಿಕ್ಕ ಮಕ್ಕಳು, ಯುವಕರು, ದುಡಿಯುವ ಜನರು, ನಿವೃತ್ತ ಜನರು,ಎಲ್ಲಾ ವಯಸ್ಸಿನ ಜನರು ಸನಾತನ ಧರ್ಮದ ಶ್ರೇಷ್ಠ ನಿಧಿಯಾದ ಭಗವದ್ಗೀತೆಯನ್ನು ಕಲಿಯಲು ಶ್ರಮಿಸಿದ್ದಾರೆ ಎಂಬುದು ನಿಜವಾಗಿಯೂ ವಿಶೇಷವಾಗಿದೆ.ಪಾರಾಯಣದ ಸಮಯದಲ್ಲಿ, ನಾನು ಶ್ರೀ ಕೃಷ್ಣನು ಪ್ರತಿಯೊಬ್ಬರ ಮುಖದಲ್ಲೂ ಪ್ರಜ್ವಲಿಸುತ್ತಿರುವುದನ್ನು ಕಂಡೆ ಎಂದು ಶ್ರೀಗಳು ಮನದುಂಬಿ ನುಡಿದರು.
ಭಗವದ್ಗೀತೆಯು ನಮ್ಮ ಆತ್ಮಸಾಕ್ಷಾತ್ಕಾರದ ಪ್ರಯಾಣದಲ್ಲಿ ನಮಗೆ ಮಾರ್ಗದರ್ಶನ ನೀಡುತ್ತದೆ, ನಿಜವಾದ, ಶಾಶ್ವತ ಸಂತೋಷವನ್ನು ಕ್ಷಣಿಕ ಆನಂದದಿಂದ ಪ್ರತ್ಯೇಕಿಸುತ್ತದೆ ಎಂದು ಪೂಜ್ಯ ಸ್ವಾಮೀಜಿ ತಿಳಿಸಿದರು.
ಭಗವದ್ಗೀತೆಯ ಈ ಉತ್ಸವ ಟೆಕ್ಸಾಸ್ ನ ಬಹಳಷ್ಟು ಕುಟುಂಬಗಳು, ಸ್ವಯಂಸೇವಕರು ಮತ್ತು ಇಡೀ ಕಾರ್ಯಕ್ರಮದ ತಂಡದ ಸಮರ್ಪಣೆ ನನ್ನ ಮನ ತುಂಬಿದೆ ಎಂದು ಶ್ರೀಗಳು ತಿಳಿಸಿದರು.
ಭಗವದ್ಗೀತೆಯ ಬೋಧನೆಗಳು ಶಾಂತಿಯುತ ಜೀವನ ಸಾಗಿಸಲು ನೆರವಾಗುತ್ತದೆ, ಇಡೀ ಕಾರ್ಯಕ್ರಮ ನನ್ನನ್ನು ಭಾವಪರವಶನನ್ನಾಗಿಸಿದೆ. ಶೀಘ್ರದಲ್ಲೇ ಈ ಪವಿತ್ರ ಆಂದೋಲನದಲ್ಲಿ 100,000 ಜನರನ್ನು ಒಳಗೊಂಡಿರುವ ಕಾರ್ಯಕ್ರಮವಾಗಿ ವಿಸ್ತರಿಸಲು ಬಯಸುತ್ತೇವೆ ಎಂದು ಶ್ರೀಗಳು ನುಡಿದರು.
ಸ್ವಾಮೀಜಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಎಸ್ ಜಿ ಎಸ್ ಗೀತಾ ಫೌಂಡೇಶನ್ ಮುಂದಿನ ದಿನಗಳಲ್ಲಿ 100,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದೆ.
20 ಮಹಾಯಜ್ಞಗಳ ಬ್ಯಾಚ್‌ನಿಂದ 500 ಕಂಠಪಾಠ ಮತ್ತು 500 ನಿರರ್ಗಳವಾಗಿ ಓದುವ ಪದವೀಧರರು ಸಾವಿರಾರು ಹಳೆಯ ವಿದ್ಯಾರ್ಥಿಗಳ ಜೊತೆಗೆ ಗೀತೆಯನ್ನು ಒಗ್ಗಟ್ಟಿನಿಂದ ಪಠಿಸಿದರು,ಇದು ಸಿಯುಟಿಎಕ್ಸ್ ಈವೆಂಟ್ ಸೆಂಟರ್ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವಂತೆ ಮಾಡಿತು.
ಯಮೆನ್: ಕೇರಳದ ನಿಮಿಷಾ ಪ್ರಿಯಾ ಎಂಬ ನರ್ಸ್ ಒಬ್ಬರಿಗೆ ಯೆಮೆನ್ ನಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ನಿಮಿಷಾ ಪ್ರಿಯಾ ಗೆ ಜುಲೈ 16 ರಂದು ಗಲ್ಲು ವಿಧಿಸಲು ದಿನ ನಿಗದಿಪಡಿಸಲಾಗಿದೆ. ಯೆಮೆನ್ ಪ್ರಜೆಯ ಕೊಲೆ ಆರೋಪದ ಮೇಲೆ ನರ್ಸ್ ದೋಷಿ ಎಂದು ಸಾಬೀತಾಗಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿವಾಸಿ ನಿಮಿಷಾ ಪ್ರಿಯಾ ಅವರು ಕೊಲೆ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದು, 2017 ರಿಂದ ಯೆಮೆನ್ ಜೈಲಿನಲ್ಲಿದ್ದಾರೆ.
ನರ್ಸ್ ನಿಮಿಷಾ ಪ್ರಿಯಾ ಒಂದು ದಶಕದಿಂದ ಯೆಮೆನ್‌ನಲ್ಲಿ ನೆಲೆಸಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು. ಆರ್ಥಿಕ ಕಾರಣಗಳಿಂದಾಗಿ ಅವರ ಪತಿ ಮತ್ತು ಮಗಳು ಭಾರತಕ್ಕೆ ಮರಳಿದ ನಂತರ, ಪ್ರಿಯಾ ಯಮೆನ್ ಪ್ರಜೆ ಲಾಲ್ ಅಬೊ ಮೆಹದಿ ಅವರ ಸಹಾಯದಿಂದ ಯೆಮೆನ್‌ನಲ್ಲಿ ತನ್ನದೇ ಆದ ಕ್ಲಿನಿಕ್ ಇಟ್ಟುಕೊಂಡಿದ್ದರು.
ನಿಮಿಷಾ ಪ್ರಿಯಾಗೆ ಸೇರಿದ ಪಾಸ್ಪೋರ್ಟ್ ಅನ್ನು ಕಿತ್ತುಕೊಂಡಿದ್ದ ಲಾಲ್ ಅಬೊ ಮೆಹದಿ ಎಂಬಾತನಿಂದ ಪಾಸ್‌ಪೋರ್ಟ್ ವಾಪಸ್ ಪಡೆಯಲು ನರ್ಸ್ ಪ್ರಯತ್ನಿಸಿದ್ದರು ಆದರೆ ಆತ ಕೊಟ್ಟಿರಲಿಲ್ಲ.
ಕಡೆಗೆ ಆಕೆ ಹತಾಶಳಾಗಿ ಮೆಹದಿಗೆ ಮತ್ತು ಬರುವ ಇಂಜೆಕ್ಷನ್ ಚುಚ್ಚಿದ್ದಳು.ಅದು ಓವರ್ ಡೋಸ್ ಆಗಿ ಆತ ಮೃತಪಟ್ಟಿದ್ದ. ಇದಾದ ನಂತರ ಆಕೆ ದೇಶ ತೆರೆಯಲು ಮುಂದಾಗಿದ್ದರು.ವಿಷಯ ಗೊತ್ತಾಗುತ್ತಿದ್ದಂತೆ ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದರು.
2020 ರಲ್ಲಿ ವಿಚಾರಣಾ ನ್ಯಾಯಾಲಯವು ಮರಣದಂಡನೆ ವಿಧಿಸಿತು ಮತ್ತು ಯೆಮೆನ್‌ನ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ನವೆಂಬರ್ 2023 ರಲ್ಲಿ ನರ್ಸ್ ಮನವಿಯನ್ನು ತಿರಸ್ಕರಿಸಿತು.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್‌ನ ನರ್ಸ್ ನಿಮಿಷಾ ಪ್ರಿಯಾ 2008 ರಲ್ಲಿ ಯೆಮೆನ್‌ಗೆ ತೆರಳಿದ್ದರು.
ಯೆಮೆನ್ ಪ್ರಜೆಯನ್ನು ಹತ್ಯೆಗೈದ ಆರೋಪದಲ್ಲಿ ಯೆಮೆನ್ ನಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಅವರು ಕೇರಳದ ನರ್ಸ್‌ಗೆ ಮರಣದಂಡನೆ ಶಿಕ್ಷೆಯನ್ನು ಅನುಮೋದಿಸಿದ ನಂತರ. ಯೆಮೆನ್ ಪ್ರಜೆಯನ್ನು ಕೊಂದಿದ್ದಕ್ಕಾಗಿ ಆಕೆಗೆ ಶಿಕ್ಷೆ ವಿಧಿಸಲು ನಿರ್ಧರಿಸಿ ದಿನಾಂಕ ನಿಗದಿಗೊಳಿಸಲಾಗಿದೆ.
ದುಬೈ: ಹೊರ ದೇಶದಲ್ಲಿ ನೆಲೆಸಿ ತಾಯ್ನಾಡಿಗೆ ಅನನ್ಯ ಕೊಡುಗೆ ನೀಡುತ್ತಿರುವ ಚೈತನ್ಯಶೀಲ ಕನ್ನಡಿಗರ ಸಾಧನೆ ಅತ್ಯಂತ ಶ್ಲಾಘನೀಯ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ಉಕ್ಕು ಸಚಿವಾಲಯದ ಕಾರ್ಯಕ್ರಮದ ನಿಮಿತ್ತ ದುಬೈ ಪ್ರವಾಸದಲ್ಲಿರುವ ಅವರು ಅಲ್ಲಿನ ಅನಿವಾಸಿ ಕನ್ನಡಿಗರನ್ನು ಭೇಟಿ ಮಾಡಿ ಸೌಹಾರ್ದ ಯುತ ಮಾತುಕತೆ ನಡೆಸಿದರು ಮತ್ತು ಅವರ ಕಾರ್ಯಗಳನ್ನು ಶ್ಲಾಘಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಜಗತ್ತಿನ 4ನೇ ದೈತ್ಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ,ಈಗ 3ನೇ ಸ್ಥಾನದತ್ತ ನಮ್ಮ ದೇಶ ನಾಗಾಲೋಟದಲ್ಲಿದೆ. ಈ ಹಿನ್ನೆಲೆಯಲ್ಲಿ ಬಲಿಷ್ಠ, ಸಮೃದ್ಧ ಭಾರತ ನಿರ್ಮಾಣಕ್ಕೆ ಕನ್ನಡಿಗರ ಕೊಡುಗೆ ನನಗೆ ಸಂತಸ ಉಂಟು ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದರು.
ಬೀಜಿಂಗ್: ಚೀನಾದಲ್ಲಿ ಉಂಟಾದ ಭಾರೀ ಪ್ರವಾಹದಿಂದ ಜನ ತತ್ತರಿಸಿ ಹೋಗಿದ್ದಾರೆ.
ಗುವಾಂಗ್ಕ್ಸಿಯಲ್ಲಿನ ಪ್ರಮುಖ ನದಿಯ ದಡದಲ್ಲಿರುವ ಪಟ್ಟಣಗಳು ಮತ್ತು ಹಳ್ಳಿಗಳು ಅರ್ಧದಷ್ಟು ಮುಳುಗಿಹೋಗಿವೆ, ಮೇಲಿನ ಪ್ರಾಂತ್ಯದಿಂದ ಪರ್ವತ ಪ್ರದೇಶಕ್ಕೆ ಪ್ರವಾಹದ ನೀರು ನುಗ್ಗಿದೆ.ಸಾವಿರಾರು ಜನರು ಕೊಚ್ವಿ ಹೋಗಿದ್ದಾರೆ.
ಜೂನ್ 26 ರ ನಂತರ ಉಷ್ಣವಲಯದ ಚಂಡಮಾರುತವು ಭೂಕುಸಿತವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಚೀನಾದಲ್ಲಿನ ಪ್ರವಾಹವು ಆರು ಜನರನ್ನು ಬಲಿ ತೆಗೆದುಕೊಂಡಿದೆ, ಈ ವಾರ 80,000 ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ
ಜೂನ್ 24 ರಂದು ಗುಯಿಝೌ ಪ್ರಾಂತ್ಯದ ರೊಂಗ್ಜಿಯಾಂಗ್ ಮತ್ತು ಕಾಂಗ್ಜಿಯಾಂಗ್ ಕೌಂಟಿಗಳನ್ನು ಪ್ರವಾಹ ಮುಳುಗಿಸಿದೆ.
ಮೈಲಿನ್‌ನ ಗುವಾಂಗ್‌ಕ್ಸಿ ಪಟ್ಟಣವು ಅತೀ ಹೆಚ್ಚು ಹಾನಿಗೊಳಗಾಗಿದೆ ಪ್ರವಾಹದ ನೀರು ಸುರಕ್ಷಿತವೆಂದು ಪರಿಗಣಿಸಲಾದ ಮಟ್ಟಕ್ಕಿಂತ 4 ಮೀಟರ್ (13 ಅಡಿ) ಗಿಂತ ಹೆಚ್ಚು ದಾಟಿದೆ.
ನೈಋತ್ಯ ಚೀನಾ – ಗೈಝೌ ಮತ್ತು ಗುವಾಂಗ್‌ಕ್ಸಿಯಿಂದ ಚಾಂಗ್‌ಕಿಂಗ್, ಯುನ್ನಾನ್ ಮತ್ತು ಸಿಚುವಾನ್‌ವರೆಗೆ ರಸ್ತೆ ಕುಸಿತ, ಭೂಕುಸಿತ ಮತ್ತು ಜಲ-ಅಣೆಕಟ್ಟು ಉಕ್ಕಿ ಹರಿಯುವಿಕೆಯಂತಹ ವಿಪತ್ತುಗಳ ಆತಂಕವಿದೆ.
ಸೀಮಿತ ಮೂಲಸೌಕರ್ಯ ಮತ್ತು ಸಂಪನ್ಮೂಲಗಳಿಂದಾಗಿ ಗ್ರಾಮೀಣ ಪ್ರದೇಶಗಳು ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿವೆ ಎಂದು ಚೆಂಗ್ಡುವಿನ ನೈಋತ್ಯ ವಿಶ್ವವಿದ್ಯಾಲಯದ ಹಣಕಾಸು ಮತ್ತು ಅರ್ಥಶಾಸ್ತ್ರದ ಪ್ರಾಧ್ಯಾಪಕ ಚೆನ್ ಕ್ಸಿಯೊಗುವಾಂಗ್ ತಿಳಿಸಿದ್ದಾರೆ.
ಬೀಜಿಂಗ್: ಗಡಿಯಾಚೆಗಿನ ಭಯೋತ್ಪಾದನೆ ಮಾನವೀಯತೆಯ ವಿರುದ್ಧದ ಅಪರಾಧ ಎಂದು ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್ ಅಜಿತ್ ದೋವಲ್ ಹೇಳಿದ್ದಾರೆ.
ಎಸ್ ಸಿ ಒ ಉನ್ನತ ಭದ್ರತಾ ಅಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದ ಅಜಿತ್ ದೋವಲ್, ವಿಶ್ವಸಂಸ್ಥೆ ನಿಷೇಧಿಸಿದ ಭಯೋತ್ಪಾದಕ ಗುಂಪುಗಳಾದ ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್, ಅಲ್ ಖೈದಾ, ಐಎಸ್ಐಎಸ್ ಮತ್ತು ಅದರ ಅಂಗಸಂಸ್ಥೆಗಳಿಂದ ನಿರಂತರ ಬೆದರಿಕೆಯ ಬಗ್ಗೆ ಭಾರತವು ತೀವ್ರ ಕಳವಳ ಹೊಂದಿದೆ ಎಂದು ತಿಳಿಸಿದ್ದಾರೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಇಂದು ಚೀನಾದಲ್ಲಿ ನಡೆದ ಎಸ್ಸಿಒ ಸಭೆಯನ್ನುದ್ದೇಶಿಸಿ ಮಾತನಾಡಿ,ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಯಾವುದೇ ಭಯೋತ್ಪಾದಕ ಕೃತ್ಯವು ಮಾನವೀಯತೆಯ ವಿರುದ್ಧದ ಅಪರಾಧ ಎಂದು ಹೇಳಿದ್ದಾರೆ.
ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದವನ್ನು ಎದುರಿಸಲು ಜಂಟಿ ಮಾಹಿತಿ ಕಾರ್ಯಾಚರಣೆ ನಡೆಸಬೇಕಿದೆ ಎಂದು ಕರೆ ನೀಡಿದರು.ಜತೆಗೆ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ದ್ವಿಮುಖ ನೀತಿಗಳನ್ನು ತ್ಯಜಿಸುವಂತೆಯೂ ಅಜಿತ್ ದೋವಲ್ ತಿಳಿಸಿದ್ದಾರೆ.
ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಡಬಲ್ ಮಾನದಂಡಗಳನ್ನು ದೂರವಿಡಬೇಕು, ಹಾಗೇ, ವಿಶ್ವಸಂಸ್ಥೆಯ ನಿಷೇಧಿತ ಭಯೋತ್ಪಾದಕರು ಮತ್ತು ಎಲ್‌ಇಟಿ, ಜೆಇಎಂ ಮತ್ತು ಅವರ ಪ್ರಾಕ್ಸಿಗಳಂತಹ ಸಂಸ್ಥೆಗಳ ವಿರುದ್ಧ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಅವರ ಭಯೋತ್ಪಾದಕ ಪರಿಸರ ವ್ಯವಸ್ಥೆಗಳನ್ನು ಕೆಡವುವಂತೆ ಎನ್‌ಎಸ್‌ಎ ದೋವಲ್ ಸದಸ್ಯ ರಾಷ್ಟ್ರಗಳಲ್ಲಿ ಮನವಿ ಮಾಡಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಮಾಡಲು ಮತ್ತು ಭಾರತದಲ್ಲಿ ದಾಳಿ ನಡೆಸದಂತೆ ಭಯೋತ್ಪಾದಕರನ್ನು ತಡೆಯಲು ನವದೆಹಲಿ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದೆ ಎಂದು ಅಜಿತ್ ದೋವಲ್ ಹೇಳಿದ್ದಾರೆ.
ಕೆನಡಾ: ಪ್ರಧಾನಿ ನರೇಂದ್ರ ಮೋದಿ ಸೈಪ್ರಸ್ ಭೇಟಿ ಮುಗಿಸಿ ಜಿ7 ಶೃಂಗಸಭೆಗಾಗಿ ಕೆನಡಾಗೆ ಆಗಮಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮೂರು ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಆಪರೇಷನ್ ಸಿಂಧೂರದ ಬಳಿಕ ಇದು ಮೋದಿಯವರ ಮೊದಲ ವಿದೇಶಿ ಪ್ರವಾಸವಾಗಿದೆ.
ಖಲಿಸ್ತಾನಿ ಸಮಸ್ಯೆಯಿಂದಾಗಿ ನವದೆಹಲಿ ಮತ್ತು ಒಟ್ಟಾವಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿದ್ದು ಇದನ್ನು ಪುನರ್ ಸ್ಥಾಪಿಸಲು ಕೇಂದ್ರ ಪ್ರಯತ್ನಿಸುತ್ತಿದೆ.
ಹಾಗಾಗಿ ಪ್ರಧಾನಿಯವರ ಈ ವಿದೇಶಿ ಪ್ರವಾಸದಲ್ಲಿ ಕೆನಡಾ ಭೇಟಿ ಮಹತ್ವದ್ದಾಗಿದೆ. ಶೃಂಗಸಭೆಯ ಸಮಯದಲ್ಲಿ,ಇಂಧನ ಭದ್ರತೆ, ತಂತ್ರಜ್ಞಾನ ಮತ್ತು ನಾವೀನ್ಯತೆ ಸೇರಿದಂತೆ ಪ್ರಮುಖ ಜಾಗತಿಕ ವಿಷಯಗಳಲ್ಲಿ ಭಾರತದ ನಿಲುವನ್ನು ಪ್ರಧಾನಿ ಮಂಡಿಸಲಿದ್ದಾರೆ.
ಟೆಲ್ ಅವೀವ್: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಇರಾನ್ ಮೇಲೆ ಇಸ್ರೇಲ್ ಭಯಾನಕ ದಾಳಿ ನಡೆಸುತ್ತಿದ್ದು,ಭಾರೀ ಸಾವು ನೋವು ಉಂಟಾಗಿದೆ.
ಇರಾನ್‌ನ ಇಂಧನ ಕೈಗಾರಿಕೆ ಮತ್ತು ರಕ್ಷಣಾ ಸಚಿವಾಲಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡಾ ಕ್ಷಿಪಣಿ ದಾಳಿ ನಡೆಸಿದೆ.
ಇರಾನ್‌ನ ವೇಗವಾಗಿ ವೃದ್ಧಿಗೊಳ್ಳುತ್ತಿದ್ದ ಪರಮಾಣು ಶಕ್ತಿಯನ್ನು ನಾಶಮಾಡಲು ಎರಡು ದಿನಗಳ ಹಿಂದೆ ಇಸ್ರೇಲ್ ನಡೆಸಿದ ಹಠಾತ್ ದಾಳಿ ಬಳಿಕ ಸಂಘರ್ಷ ಮತ್ತೆ ಬಿಗಡಾಯಿಸಿದೆ. ಈ ದಾಳಿಯಲ್ಲಿ ಇರಾನ್‌ನ ಮೂವರು ಪರಮಾಣು ವಿಜ್ಞಾನಿಗಳು ಮೃತಪಟ್ಟಿದ್ದಾರೆ.
ಈ ದಾಳಿಯಲ್ಲಿ ಇಸ್ರೇಲ್‌ನ ಗಲಿಲೀ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ನಾಲ್ಕು ಜನರು ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಇಸ್ರೇಲ್ ಸಹ ಟೆಹ್ರಾನ್ ಮೇಲೆ ಪ್ರತಿದಾಳಿ ನಡೆಸಿದೆ. ಟೆಹ್ರಾನ್‌ನಲ್ಲಿರುವ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿಯನ್ನು ಮತ್ತು ದೇಶದ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಸ್ಥಳಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ.ಇಲ್ಲೂ ಸಾಕಷ್ಟುಸಾವು ನೋವು ಆಗಿದೆ.
ಟೆಹ್ರಾನ್ ಹೊತ್ತಿ ಉರಿಯುತ್ತಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಸ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಇರಾನ್, ಟೆಲ್ ಅವಿವ್: ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮುಖ್ಯಸ್ಥ ಜನರಲ್ ಹುಸೇನ್ ಸಲಾಮಿ ಅವರು ಮೃತಪಟ್ಟಿದ್ದಾರೆ.
ಇರಾನ್ ನ ಪರಮಾಣು ಸ್ಥಾವರಗಳು ಮತ್ತು ಮಿಲಿಟರಿ ನೆಲೆಗಳ ಮೇಲೆ ಶುಕ್ರವಾರ ಇಸ್ರೇಲ್ ದಾಳಿ ನಡೆಸಿದ್ದು, ದಾಳಿಯಲ್ಲಿ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮುಖ್ಯಸ್ಥ ಜನರಲ್ ಹುಸೇನ್ ಸಲಾಮಿ ಅವರು ಸಾವನ್ನಪ್ಪಿದ್ದಾರೆ.
ರೆವಲ್ಯೂಷನರಿ ಗಾರ್ಡ್ಸ್, ಇರಾನ್ ದೇಶದ ಶಕ್ತಿಕೇಂದ್ರ ಎಂದು ಬಿಂಬಿತವಾಗಿದೆ. ಹಾಗಾಗಿ, ಇದನ್ನೇ ಕೇಂದ್ರೀಕರಿಸಿ ಇಸ್ರೇಲ್ ದಾಳಿ ನಡೆಸಿದ್ದು, ಇರಾನ್ ದೊಡ್ಡ ಪೆಟ್ಟು ಬಿದ್ದಂತಾಗಿದೆ.
ಸಲಾಮಿ ಆರು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಿದ್ದರು ಮತ್ತು ಅಮೆರಿಕ ಹಾಗೂ ಇಸ್ರೇಲ್‌ಗೆ ಬೆದರಿಕೆ ಒಡ್ಡಿ ಹೆಸರಾಗಿದ್ದರು. ಹಾಗಾಗಿ, ಉದ್ದೇಶಪೂರ್ವಕವಾಗಿಯೇ ಇಸ್ರೇಲ್ ಅವರನ್ನು ಟಾರ್ಗೆಟ್ ಮಾಡಿದೆ.
1979ರ ಇಸ್ಲಾಮಿಕ್ ಕ್ರಾಂತಿಯ ನಂತರ ರೆವಲ್ಯೂಷನರಿ ಗಾರ್ಡ್ಸ್ ಅಸ್ತಿತ್ವಕ್ಕೆ ಬಂದಿತ್ತು. ಇದಾದ ನಂತರ, ಇದು ದೇಶೀಯ ಭದ್ರತಾ ಪಡೆಯಾಗಿ ಮುಂದುವರಿಯಿತು.