ಮಧ್ಯ ಫಿಲಿಪೈನ್ಸ್‌ ನಲ್ಲಿ ಭೂಕಂಪನ:ಸಾವಿನ ಸಂಖ್ಯೆ 70ಕ್ಕೆ ಏರಿಕೆ

ಮನಿಲಾ: ಮಧ್ಯ ಫಿಲಿಪೈನ್ಸ್ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ ಸಂಭವಿಸಿ ಮೃತಪಟ್ಟವರ ಸಂಖ್ಯೆ 70ಕ್ಕೆ ಏರಿಕೆಯಾಗಿದೆ.

ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಸಂಭವಿಸಿದ 6.9 ತೀವ್ರತೆಯ ಭೂಕಂಪದಿಂದಾಗಿ ಬೊಗೊ ನಗರ ಮತ್ತು ಸೆಬು ಪ್ರಾಂತ್ಯದ ಹೊರವಲಯದ ಗ್ರಾಮೀಣ ಪಟ್ಟಣಗಳಲ್ಲಿ ಮನೆಗಳು ನೈಟ್‌ಕ್ಲಬ್‌ಗಳು ಕುಸಿದು ಬಿದ್ದು ನೂರಾರು ನಿವಾಸಿಗಳು ನಿರಾಶ್ರಿತರಾಗಿದ್ದಾರೆ‌

ಬ್ಯಾಕ್‌ಹೋ ಮತ್ತು ಸ್ನಿಫರ್ ನಾಯಿಗಳ ಬೆಂಬಲದೊಂದಿಗೆ ಸೇನಾ ಪಡೆಗಳು, ಪೊಲೀಸರು ಮತ್ತು ನಾಗರಿಕ ಸ್ವಯಂಸೇವಕರನ್ನು ಬದುಕುಳಿದವರಿಗಾಗಿ ಮನೆ-ಮನೆಗೆ ಹುಡುಕಾಟ ನಡೆಸಲು ನಿಯೋಜಿಸಲಾಗಿದೆ.

ಸೆಬು ಪ್ರಾಂತ್ಯದಲ್ಲಿ ಸುಮಾರು 90,000 ಜನರಿರುವ ಕರಾವಳಿ ನಗರವಾದ ಬೊಗೊದ ಈಶಾನ್ಯಕ್ಕೆ ಸುಮಾರು 19 ಕಿಲೋಮೀಟರ್ ದೂರದಲ್ಲಿ ಭೂಕಂಪನ ಸಂಭವಿಸಿದೆ,

ಬೊಗೊದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೊಗೊ ಬಳಿಯ ಮೆಡೆಲಿನ್ ಪಟ್ಟಣದಲ್ಲಿ ಮನೆಗಳ ಛಾವಣಿಗಳು ಮತ್ತು ಗೋಡೆಗಳು ಕುಸಿದು ಕನಿಷ್ಠ 12 ಜನರು ಮೃತಪಟ್ಟಿದ್ದಾರೆ.

ಮಧ್ಯ ಫಿಲಿಪೈನ್ಸ್‌ ನಲ್ಲಿ ಭೂಕಂಪನ:ಸಾವಿನ ಸಂಖ್ಯೆ 70ಕ್ಕೆ ಏರಿಕೆ Read More

ಅಮೆರಿಕಾದಲ್ಲಿ ತೆಲಂಗಾಣದ ಟೆಕ್ಕಿ ಪೊಲೀಸರ ಗುಂಡಿಗೆ ಬಲಿ

ಅಮೆರಿಕ: ರೂಮ್ ಮೇಟ್ ಜೊತೆಗೆ ಹೊಡೆದಾಟದ ನಂತರ ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯ 29 ವರ್ಷದ ಟೆಕ್ಕಿ ಅಮೆರಿಕದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ಸಾಫ್ಟ್‌ವೇರ್ ವೃತ್ತಿ ಮಾಡುತ್ತಿದ್ದ ಮೊಹಮ್ಮದ್ ನಿಜಾಮುದ್ದೀನ್ ಎಂಬಾತ ಮೃತಪಟ್ಟಿದ್ದಾರೆ.

ಸೆಪ್ಟೆಂಬರ್ 3 ರಂದು ಸಾಂಟಾ ಕ್ಲಾರಾ ಪೊಲೀಸರು ಕೊಂದಿದ್ದಾರೆ ಎಂದು ಹೇಳಲಾಗಿದೆ.

ಏನಾಯಿತು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಕ್ಷುಲಕ ವಿಚಾರಕ್ಕೆ ರೂಮ್‌ಮೇಟ್‌ನೊಂದಿಗೆ ಜಗಳ ನಡೆದಿದೆ. ಗುರುವಾರ ಬೆಳಗ್ಗೆ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಗೊತ್ತಾಗಿದೆ.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿರುವ ಮೃತ ಮೊಹಮ್ಮದ್ ನಿಜಾಮುದ್ದೀನ್ ತಂದೆ ಹಸ್ನುದ್ದೀನ್ ತಮ್ಮ ಮಗನ ಮೃತದೇಹವನ್ನು ಮಹಬೂಬ್‌ನಗರಕ್ಕೆ ತರಲು ನೆರವು ನೀಡುವಂತೆ ಕೋರಿದ್ದಾರೆ. ವಾಷಿಂಗ್ಟನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಅಧಿಕಾರಿಗಳಿಂದ ತುರ್ತು ಸಹಾಯವನ್ನು ಕೋರಿದ್ದು, ಅಮೆರಿಕದ ಪೊಲೀಸರು ತನ್ನ ಮಗನನ್ನು ಯಾಕೆ ಗುಂಡಿಕ್ಕಿ ಕೊಂದಿದ್ದಾರೆ ಎಂಬುದಕ್ಕೆ ನಿಜವಾದ ಕಾರಣಗಳು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಐಸೆನ್‌ಹೋವರ್ ಡ್ರೈವ್‌ನಲ್ಲಿರುವ ಮನೆಯೊಳಗೆ ತನ್ನ ರೂಮ್‌ಮೇಟ್‌ಗೆ ಇರಿದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ಅಧಿಕಾರಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಸಾಂಟಾ ಕ್ಲಾರಾ ಪೋಲೀಸರು ತಿಳಿಸಿದ್ದಾರೆ.

ಅಮೆರಿಕಾದಲ್ಲಿ ತೆಲಂಗಾಣದ ಟೆಕ್ಕಿ ಪೊಲೀಸರ ಗುಂಡಿಗೆ ಬಲಿ Read More

ನೇಪಾಳದಲ್ಲಿ ಹಿಂಸಾಚಾರ:ಮಾಜಿ ಪ್ರಧಾನಿ ಪತ್ನಿ ಜೀವಂತ‌ ದಹನ

ಕಠ್ಮಂಡು: ನೇಪಾಳದಲ್ಲಿ ಸಾಮಾಜಿಕ ಜಾಲತಾಣದ ಮೇಲಿನ ನಿಷೇಧವನ್ನು ಖಂಡಿಸಿ ಆರಂಭವಾದ ಪ್ರತಿಭಟನೆ ಹಿಂಸಾರೂಪ ಪಡೆದಿದೆ.

ಪ್ರತಿಭಟನಾಕಾರರ ಕ್ರೌರ್ಯಕ್ಕೆ ಹೆದರಿ ನೇಪಾಳದ ಪ್ರಧಾನಿ ಕೆ.ಪಿ ಶರ್ಮಾ ಓಲಿ ಈಗಾಗಲೇ ರಾಜೀನಾಮೆ ನೀಡಿ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ.

ನೇಪಾಳ ಸಂಸತ್, ಅಧ್ಯಕ್ಷರ ನಿವಾಸ, ಪ್ರಧಾನಿ ಬಂಗಲೆ, ವಿವಿಧ ರಾಜಕೀಯ ನಾಯಕರ ಮನೆಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ.

ಈ ವೇಳೆ ನೇಪಾಳದ ಮಾಜಿ ಪ್ರಧಾನಿ ಜಲನಾಥ್ ಖಾನಲ್ ಅವರ ಮನೆಗೂ ಬೆಂಕಿ ಹಚ್ಚಲಾಗಿದ್ದು,ಮನೆಯ ಒಳಗಿದ್ದ ಜಲನಾಥ್ ಖಾನಲ್ ಅವರ ಪತ್ನಿ ರಾಜಲಕ್ಷ್ಮಿ ಜೀವಂತವಾಗಿ ಸುಟ್ಟುಹೋಗಿದ್ದಾರೆ.

ಈ ಹಿಂಸಾಚಾರದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೇಪಾಳದ ಜನರ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚಾಗಿದೆ.

ನೇಪಾಳದಲ್ಲಿ ಹಿಂಸಾಚಾರ:ಮಾಜಿ ಪ್ರಧಾನಿ ಪತ್ನಿ ಜೀವಂತ‌ ದಹನ Read More

ಕಠ್ಮಂಡುವಿನಲ್ಲಿ ಪ್ರತಿಭಟನೆ:19 ಮಂದಿ‌ ಸಾವು

ಕಠ್ಮಂಡು: ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ಹೇರಿರುವ ನಿಷೇಧ ತೆಗೆದುಹಾಕಬೇಕು ಮತ್ತು ಭ್ರಷ್ಟಾಚಾರ ಸಂಸ್ಕೃತಿಯನ್ನು ಕೊನೆಗೊಳಿಸಬೇಕು ಎಂದು ಒತ್ತಾಯಿಸಿ ಯುವಕರು ಸೋಮವಾರ ಕಠ್ಮಂಡುವಿನಲ್ಲಿ ನಡೆಸಿದ ಬೃಹತ್ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಹಿಂಸಾಚಾರದಲ್ಲಿ‌‌ ಮೃತೊಟ್ಟವರ ಸಂಖ್ಯೆ19 ಕ್ಕೆ ಏರಿದೆ ಮತ್ತು 250 ಮಂದಿ ಗಾಯಗೊಂಡಿದ್ದಾರೆ.

ಡಮಾಕ್‌ನಲ್ಲಿ, ಪ್ರತಿಭಟನಾಕಾರರು ಡಮಾಕ್ ಚೌಕ್‌ನಿಂದ ಪುರಸಭೆ ಕಚೇರಿವರೆಗೆ ಮೆರವಣಿಗೆ ನಡೆಸಿದರು.ಈ‌ ವೇಳೆ ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ಪ್ರತಿಕೃತಿ ಸುಟ್ಟು ಕಚೇರಿಯ ಬಾಗಿಲುಗಳನ್ನು ಮುರಿಯಲು ಪ್ರಯತ್ನಿಸಿದರು.

ಆಗ ಪೊಲೀಸರು ಜಲಫಿರಂಗಿ, ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದರು. ಹಲವಾರು ಬೈಕ್​ಗಳಿಗೂ ಬೆಂಕಿ ಹಚ್ಚಲಾಯಿತು.ಹಾಗಾಗಿ ಆ ಪ್ರದೇಶದಲ್ಲಿ ಉದ್ವಿಗ್ನತೆ ತೀವ್ರವಾಯಿತು.

ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಮತ್ತು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್, ಯೂಟ್ಯೂಬ್ ಮತ್ತು ಸ್ನ್ಯಾಪ್‌ಚಾಟ್,ಲಿಂಕ್ಡ್ ಇನ್ ಸೇರಿದಂತೆ ಹಲವಾರು ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ನಿಷೇಧದ ವಿರುದ್ಧ ಕಠ್ಮಂಡುವಿನಲ್ಲಿ ಜನರೇಷನ್ ಝಡ್ ಪ್ರತಿಭಟನಾಕಾರರ ನೇತೃತ್ವದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನಾಕಾರರು ನಿರ್ಬಂಧಿತ ವಲಯವನ್ನು ಉಲ್ಲಂಘಿಸಿ ಸಂಸತ್ತಿನ ಆವರಣವನ್ನು ಪ್ರವೇಶಿಸಿದ ನಂತರ ಪರಿಸ್ಥಿತಿ ಉಲ್ಬಣಗೊಂಡಿತು. ಪೊಲೀಸರು ಜಲಫಿರಂಗಿ, ಅಶ್ರುವಾಯು ಮತ್ತು ಜೀವಂತ ಮದ್ದುಗುಂಡುಗಳೊಂದಿಗೆ ಹೋರಾಟಗಾರರಿಗೆ ಬಿಸಿ ಮುಟ್ಟಿಸಿದರು.ಆಗ ಗಲಭೆ ತೀವ್ರಗೊಂಡು ಸಾವುನೋವಿಗೆ ಕಾರಣವಾಯಿತು.

ಕಠ್ಮಂಡುವಿನಲ್ಲಿ ಪ್ರತಿಭಟನೆ:19 ಮಂದಿ‌ ಸಾವು Read More

ಸೈಮ ಅವಾರ್ಡ್: ಕಿಚ್ಚ ಅತ್ಯುತ್ತಮ ನಟ

ದುಬೈ: ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೈಮ 2025 ಕ್ಕೆ ಕಿಚ್ಚ ಸುದೀಪ್ ಅತ್ಯುತ್ತಮ ನಟ ಭಾಜನರಾಗಿದ್ದಾರೆ.

ಮ್ಯಾಕ್ಸ್ ಸಿನಿಮಾ ನಟನೆಗೆ ಸುದೀಪ್ ಅವರಿಗೆ ಅತ್ಯುತ್ತಮ ನಟ ಅವಾರ್ಡ್ ದೊರೆತಿದೆ. ಉಪೇಂದ್ರ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶುಕ್ರವಾರ ರಾತ್ರಿ ದುಬೈಯಲ್ಲಿ ನೆರವೇರಿದ ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಿತು.

2024ರಲ್ಲಿ ಬಿಡುಗಡೆಯಾದ ಚಿತ್ರಗಳಿಗೆ ಪ್ರಶಸ್ತಿ ನೀಡಲಾಗಿದ್ದು, ‘ಮ್ಯಾಕ್ಸ್’ ಸಿನಿಮಾದಲ್ಲಿ ಸುದೀಪ್ ಅವರು ಪೊಲೀಸ್ ಅಧಿಕಾರಿಯಾಗಿ ಅಭಿಮಾನಿಗಳ ಮನಸೂರೆಗೊಂಡಿದ್ದರು.

ಯುಐ ಚಿತ್ರದ ನಿರ್ದೇಶನಕ್ಕೆ ಉಪೇಂದ್ರ ಅವರು ಅತ್ಯುತ್ತಮ ನಿರ್ದೇಶಕ ಅವಾರ್ಡ್ ಪಡೆದಿದ್ದಾರೆ.

‘02’ ನಟನೆಗೆ ಆಶಿಕಾ ರಂಗನಾಥ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ‘ಭೀಮ’ ಸಿನಿಮಾ ನಟನೆಗೆ ದುನಿಯಾ ವಿಜಯ್​ಗೆ ಅತ್ಯುತ್ತಮ ನಟ (ಕ್ರಿಟಿಕ್ಸ್) ಅವಾರ್ಡ್ ದೊರೆತರೆ,ಕೃಷ್ಣಂ ಪ್ರಣಯ ಸಖಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗಳಿಸಿದೆ.

ಅತ್ಯುತ್ತಮ ಸಂಗೀತ ಸಂಯೋಜನೆ: ಬಿ. ಅಜನೀಶ್ ಲೋಕನಾಥ್ (ಮ್ಯಾಕ್ಸ್)
ಅತ್ಯುತ್ತಮ ಹಾಸ್ಯನಟ: ಜಾಕ್ ಸಿಂಗಂ (ಭೀಮ)
ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ: ಸಂದೀಪ್ ಸುಂಕದ್ (ಶಾಖಾಹಾರಿ)
ಅತ್ಯುತ್ತಮ ಚೊಚ್ಚಲ ನಟ- ಸಮರ್ಜಿತ್ ಲಂಕೇಶ್ (ಗೌರಿ)
ಭರವಸೆ ಮೂಡಿಸಿದ ಹೊಸ ಪ್ರತಿಭೆ- ಸನ್ಯಾ ಅಯ್ಯರ್ (ಗೌರಿ)
ಅತ್ಯುತ್ತಮ ಚೊಚ್ಚಲ ನಟಿ – ಅಂಕಿತಾ ಅಮರ್ (ಇಬ್ಬನಿ ತಬ್ಬಿದಾ ಇಳೆಯಲಿ)
ಅತ್ಯುತ್ತಮ ಸಾಂಗ್ ಡಿಸೈನ್- ಇಮ್ರಾನ್ ಎಸ್ ಸರ್ಧಾರಿಯಾ
ಅತ್ಯುತ್ತಮ ಛಾಯಾಗ್ರಹಣ: ಶ್ರೀವತ್ಸನ್ ಸೆಲ್ವರಾಜನ್ (ಇಬ್ಬನಿ ತಬ್ಬಿದ ಇಳೆಯಲಿ)
ಅತ್ಯುತ್ತಮ ಹಿನ್ನೆಲೆ ಗಾಯಕಿ – ಐಶ್ವರ್ಯ ರಂಗರಾಜನ್
ಅತ್ಯುತ್ತಮ ಗಾಯಕ – ಜಸ್ಕರನ್
ಅತ್ಯುತ್ತಮ ಚಿತ್ರ ಸಾಹಿತಿ – ಡಾ. ವಿ. ನಾಗೇಂದ್ರ ಪ್ರಸಾದ್ ಪ್ರಶಸ್ತಿ ಪಡೆದಿದ್ದಾರೆ.

ಸೈಮ ಅವಾರ್ಡ್: ಕಿಚ್ಚ ಅತ್ಯುತ್ತಮ ನಟ Read More

ಭಾರತ-ಚೀನಾ ನಡುವಿನ ಸಹಕಾರ2.8 ಶತಕೋಟಿ ಜನರ ಕಲ್ಯಾಣಕ್ಕೆ ಅಗತ್ಯ:ಮೋದಿ

ಬೀಜಿಂಗ್: ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆಯ ಆಧಾರದ ಮೇಲೆ ನಮ್ಮ ಸಂಬಂಧಗಳನ್ನು ಮುನ್ನಡೆಸಲು ನಾವು ಬದ್ಧರಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಭಾರತ ಮತ್ತು ಚೀನಾ ನಡುವಿನ ಸಹಕಾರವು ಉಭಯ ರಾಷ್ಟ್ರಗಳಿಗೆ ಮಾತ್ರವಲ್ಲದೆ 2.8 ಶತಕೋಟಿ ಜನರ ಕಲ್ಯಾಣಕ್ಕೂ ಅತ್ಯಗತ್ಯ ಎಂದು ಒತ್ತಿ ಹೇಳಿದರು.

ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಉನ್ನತ ಮಟ್ಟದ ಮಾತುಕತೆಯ ಸಂದರ್ಭದಲ್ಲಿ ಮೋದಿ ಈ ಸಂದೇಶ ನೀಡಿದರು.

ಭಯೋತ್ಪಾದನೆಯ ವಿಷಯವನ್ನು ದೃಢವಾಗಿ ಪ್ರಸ್ತಾಪಿಸಿದ ಮೋದಿ, ಅದನ್ನು ಜಾಗತಿಕ ಪಿಡುಗು ಎಂದು ಬಣ್ಣಿಸಿ, ಈ ಬೆದರಿಕೆಯನ್ನು ಎದುರಿಸುವಲ್ಲಿ ಚೀನಾ ಒಟ್ಟಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು.

ವಿವಾದಿತ ಗಡಿಯಲ್ಲಿ ಇತ್ತೀಚೆಗೆ ಸೈನ್ಯವನ್ನು ವಾಪಸ್ ಕರೆಸಿಕೊಂಡಿರುವುದು ಶಾಂತಿ ಮತ್ತು ಸ್ಥಿರತೆಯ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

2026 ರಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಆಹ್ವಾನಿಸಿದ್ದಾರೆ.

ಭಾರತ ಮತ್ತು ಚೀನಾ ಪ್ರತಿಸ್ಪರ್ಧಿಗಳಲ್ಲ ಅಭಿವೃದ್ಧಿ ಪಾಲುದಾರರು ಎಂದು ಪ್ರಧಾನಿ ಮೋದಿ ಮತ್ತು ಷಿ ಪುನರುಚ್ಚರಿಸಿದ್ದಾರೆ .

ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ನೇರ ವಿಮಾನಗಳ ಪುನರಾರಂಭ ಮತ್ತು ಕೈಲಾಸ ಮಾನಸ ಸರೋವರ ಯಾತ್ರೆ ನಿರ್ಣಾಯಕವಾಗಿದೆ ಎಂದು ಬಣ್ಣಿಸಲಾಗುತ್ತಿದೆ.

ಭಾರತ-ಚೀನಾ ನಡುವಿನ ಸಹಕಾರ2.8 ಶತಕೋಟಿ ಜನರ ಕಲ್ಯಾಣಕ್ಕೆ ಅಗತ್ಯ:ಮೋದಿ Read More

7 ವರ್ಷಗಳ ನಂತರ ಚೀನಾಗೆ ಮೋದಿ ಭೇಟಿ

ಬೀಜಿಂಗ್: ಏಳು ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚೀನಾಕ್ಕೆ ಭೇಟಿ ನೀಡಿದ್ದಾರೆ.

ಶನಿವಾರ ಟಿಯಾಂಜಿನ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರಿಗೆ ಅಲ್ಲಿನ ಆಡಳಿತದಿಂದ ಭವ್ಯ ಸ್ವಾಗತ ನೀಡಲಾಯಿತು. ಪ್ರಧಾನಿ ಮೋದಿ 2018ರಲ್ಲಿ ಚೀನಾ ಪ್ರವಾಸ ಕೈಗೊಂಡಿದ್ದರು.

ವಾಷಿಂಗ್ಟನ್‌ನ ಸುಂಕ ನೀತಿಗಳಿಂದ ಉಂಟಾದ ಭಾರತ-ಅಮೆರಿಕ ಸಂಬಂಧಗಳಲ್ಲಿನ ಹಠಾತ್ ಕುಸಿತದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಚೀನಾದ ಈ ಭೇಟಿ ಹೆಚ್ಚು ಮಹತ್ವ ಪಡೆದಿದೆ.

ಎರಡು ದಿನಗಳ ಜಪಾನ್ ಭೇಟಿ ಮುಗಿಸಿದ ಪ್ರಧಾನಿ ಮೋದಿ ಅವರು, ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ನಡೆಯಲಿರುವ ಶಾಂಘೈ ಸಹಕಾರ ಒಕ್ಕೂಟ ಎಸ್‌ಸಿ ಒ ದ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.ಈ ಹಿನ್ನೆಲೆಯಲ್ಲಿಯೇ ಅವರು ಇಲ್ಲಿಗೆ ಆಗಮಿಸಿದ್ದಾರೆ.

ಅಮೆರಿಕದ ಸುಂಕ ಸಂಘರ್ಷ ಪ್ರಪಂಚದಾದ್ಯಂತದ ಬಹುತೇಕ ಎಲ್ಲಾ ಪ್ರಮುಖ ಆರ್ಥಿಕತೆಗಳ ಮೇಲೆ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ಭಾನುವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಪ್ರಧಾನಿ ಮೋದಿಯವರ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಮಾತುಕತೆಯಲ್ಲಿ, ಮೋದಿ ಮತ್ತು ಕ್ಸಿ ಭಾರತ-ಚೀನಾ ಆರ್ಥಿಕ ಸಂಬಂಧಗಳನ್ನು ಪರಿಶೀಲಿಸುವ ನಿರೀಕ್ಷೆಯಿದೆ.

7 ವರ್ಷಗಳ ನಂತರ ಚೀನಾಗೆ ಮೋದಿ ಭೇಟಿ Read More

ನ್ಯೂಯಾರ್ಕ್ ನಲ್ಲಿ ಬಸ್ ಉರುಳಿ ಮಂದಿ ದುರ್ಮರಣ

ನ್ಯೂಯಾರ್ಕ್: ನ್ಯೂಯಾರ್ಕ್ ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು,ಐದು ಮಂದಿ ಮೃತಪಟ್ಟಿದ್ದಾರೆ.

ಭಾರತೀಯರು ಸೇರಿದಂತೆ 54 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರವಾಸಿ ಬಸ್ ನ್ಯೂಯಾರ್ಕ್ ಸಮೀಪ ಉರುಳಿಬಿದ್ದಿದೆ.

ನಯಾಗರಾ ಜಲಪಾತವನ್ನು ವೀಕ್ಷಿಸಿದ ನಂತರ ಪ್ರವಾಸಿಗರು ನ್ಯೂಯಾರ್ಕ್ ನಗರಕ್ಕೆ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಅಪಘಾತಕ್ಕೀಡಾದ ಬಸ್ಸಿನಲ್ಲಿ ಭಾರತೀಯ, ಚೀನೀ ಮತ್ತು ಫಿಲಿಪಿನೋ ಮೂಲದವರು ಇದ್ದರು ಎಂದು ತಿಳಿದುಬಂದಿದೆ.

ಅಪಘಾತದ ವೇಳೆ ಹಲವರು ಬಸ್ಸಿನಿಂದ ಹೊರಗೆ ಬಿದ್ದಿದ್ದಾರೆ. ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಎಲ್ಲರೂ ವಯಸ್ಕರೆಂದು ಪೊಲೀಸ್ ಅಧಿಕಾರಿ ಮೇಜರ್ ಆಂಡ್ರೆ ರೇ ಅವರು ತಿಳಿಸಿದ್ದಾರೆ.

ಹಲವರನ್ನು ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಪಘಾತದವೇಳೆ ಹೆಚ್ಚಿನ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಯಾರ್ಕ್ ನಲ್ಲಿ ಬಸ್ ಉರುಳಿ ಮಂದಿ ದುರ್ಮರಣ Read More

ಪಾಕಿಸ್ತಾನದಲ್ಲಿ ಮೇಘಸ್ಫೋಟ:300 ಕ್ಕೂ ಹೆಚ್ವು ಮಂದಿ ಸಾವು;ಮನೆಗಳು ನಾಶ

ಪಾಕಿಸ್ತಾನ: ಮಳೆ ಮತ್ತು ಪ್ರವಾಹದಿಂದ ಪಾಕಿಸ್ತಾನದಲ್ಲಿ ಭಾರಿ ವಿನಾಶ ಉಂಟಾಗಿದೆ.

ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 300 ಕ್ಕೂ ಹೆಚ್ಚು ಮಂದಿ.

ಶುಕ್ರವಾರ ಧಾರಾಕಾರ ಮಳೆಯಿಂದಾಗಿ ಪ್ರಾಂತ್ಯದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದಾಗಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.ಮನೆಗಳೆಲ್ಲಾ ಕುಸಿದು ಜನ ನಾಪತ್ತೆಯಾಗಿದ್ದಾರೆ.

ಬುನೇರ್ ಜಿಲ್ಲೆ ಹೆಚ್ಚು ಹಾನಿಗೊಳಗಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ, ಶುಕ್ರವಾರ ಸಂಭವಿಸಿದ ಹಠಾತ್ ಮೇಘಸ್ಫೋಟದಿಂದಾಗಿ ನೀರಿನ ಪ್ರವಾಹವು ಹಳ್ಳಿಗಳ ಕಡೆಗೆ ನುಗ್ಗಿದೆ. ಜನರು ತಪ್ಪಿಸಿಕೊಳ್ಳಲು ಕೂಡಾ ಆಗಲಿಲ್ಲ. ಈ ಜಿಲ್ಲೆಯಲ್ಲಿ ಮಾತ್ರ ಇಲ್ಲಿಯವರೆಗೆ 180ಕ್ಕೂ ಹೆಚ್ಚು ಸಾವುಗಳು ದೃಢಪಟ್ಟಿವೆ. ಹಳ್ಳಿಗಳಲ್ಲಿ ಮನೆಗಳು ಸಂಪೂರ್ಣವಾಗಿ ಕೊಚ್ಚಿಹೋಗಿದ್ದು ಬಹಳ ಕುಟುಂಬಗಳು ನಿರಾಶ್ರಿತವಾಗಿವೆ.

ಪಾಕಿಸ್ತಾನದಲ್ಲಿ ಮೇಘಸ್ಫೋಟ:300 ಕ್ಕೂ ಹೆಚ್ವು ಮಂದಿ ಸಾವು;ಮನೆಗಳು ನಾಶ Read More

ಕಲುಷಿತ ಮದ್ಯದಿಂದ ವಿಷವಾದ ಮೆಥನಾಲ್ ಸೇವಿಸಿ 13 ಸಾವು

ಕುವೈತ್‌: ಕಲುಷಿತ ಮದ್ಯದಿಂದ ವಿಷವಾದ ಮೆಥನಾಲ್ ಸೇವಿಸಿದ 63 ಜನರಲ್ಲಿ 13 ಮಂದಿ ಮೃತಪಟ್ಟಿದ್ದು, 21 ಜನ ಶಾಶತ್ವವಾಗಿ ಕುರುಡರಾದ ಪ್ರಕರಣ ಕುವೈತ್‌ ನಲ್ಲಿ ನಡೆದಿದ್ದು,ಇದನ್ನು ಅಲ್ಲಿನ ಆರೋಗ್ಯ ಸಚಿವಾಲಯವು ಸ್ಪಷ್ಟಪಡಿಸಿದೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ಮಾಹಿತಿ ನೀಡಿರುವ ಸಚಿವಾಲಯವು, ಇವರೆಲ್ಲರೂ ಏಷ್ಯಾ ಖಂಡಕ್ಕೆ ಸೇರಿದವರಾಗಿದ್ದಾರೆ. ಇವರಲ್ಲಿ 50 ಜನರಿಗೆ ತಕ್ಷಣ ಡಯಾಲಿಸಿಸ್‌ ಅಗತ್ಯವಿದೆ. ಬದುಕಿರುವ 31 ಜನರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿದೆ ಎಂದು ಸ್ಪಸ್ಟಪಡಿಸಿದೆ.

ಮದ್ಯ ತಯಾರಿಕೆ ಅಥವಾ ಆಮದು ಮಾಡಿಕೊಳ್ಳುವುದಕ್ಕೆ ಕುವೈತ್‌ನಲ್ಲಿ ನಿಷೇಧ ಹೇರಲಾಗಿದೆ. ಹಾಗಿದ್ದರೂ, ಕೆಲವರು ಅಕ್ರಮವಾಗಿ ಮದ್ಯ ತಯಾರಿಸುತ್ತಾರೆ. ಯಾವುದೇ ಗುಣಮಟ್ಟ ಕಾಯ್ದುಕೊಳ್ಳದ ಇಂಥ ಮದ್ಯವನ್ನು ಗ್ರಾಹಕರು ಸೇವಿಸಿದ್ದರಿಂದ ಅನಾಹುತ ಸಂಭವಿಸಿದೆ ಎಂದೂ‌ಸಚಿವಾಲಯ ತಿಳಿಸಿದೆ.

ಕಳೆದ ಐದು ದಿನಗಳಲ್ಲಿ ಇಂಥ ಕಳಪೆ ಗುಣಮಟ್ಟದ ಮದ್ಯ ಸೇವಿಸಿ 40 ಭಾರತೀಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ. ಕೆಲವರು ಮೃತಪಟ್ಟಿದ್ದಾರೆ ಎಂದು ಭಾರತದ ರಾಯಭಾರ ಕಚೇರಿಗೆ ಕುವೈತ್‌ ಸಚಿವಾಲಯ ಮಾಹಿತಿ ನೀಡಿದೆ.

ಕಲುಷಿತ ಮದ್ಯದಿಂದ ವಿಷವಾದ ಮೆಥನಾಲ್ ಸೇವಿಸಿ 13 ಸಾವು Read More