ಟ್ರಂಪ್ ಮಾಜಿ ಸೊಸೆಯೊಂದಿಗಿನ ಸಂಬಂಧ ಸ್ಪಷ್ಟಪಡಿಸಿದ ಟೈಗರ್ ವುಡ್ಸ್

ಲಾಸ್ ಏಂಜಲೀಸ್(ಯುಎಸ್‌ಎ): ತಾವು ವನೆಸ್ಸಾ ಟ್ರಂಪ್ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವುದಾಗಿ ಅಮೆರಿಕದ ವೃತ್ತಿಪರ ಪ್ರಸಿದ್ಧ ಗಾಲ್ಫರ್ ಟೈಗರ್ ವುಡ್ಸ್ ಹೇಳಿಕೊಂಡಿದ್ದಾರೆ.

ವನೆಸ್ಸಾ ಟ್ರಂಪ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಸೊಸೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಎರಡು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವನೆಸ್ಸಾ ಟ್ರಂಪ್ ಅವರೊಂದಿಗಿನ ಸಂಬಂಧವನ್ನು ವುಡ್ಸ್ ದೃಢಪಡಿಸಿದ್ದಾರೆ. ಆ ಫೋಟೋಗಳಿಗೆ, “ಎಲ್ಲೆಡೆ ಪ್ರೀತಿ ತುಂಬಿದೆ” ಎಂದು ಬರೆದಿದ್ದಾರೆ.

ನೀನು ನನ್ನ ಪಕ್ಕದಲ್ಲಿದ್ದರೆ ನಮ್ಮ ಜೀವನ ಇನ್ನಷ್ಟು ಉತ್ತಮ ಅನ್ನಿಸುತ್ತದೆ. ನಮ್ಮ ಭವಿಷ್ಯದ ಪ್ರಯಾಣವನ್ನು ಒಟ್ಟಿಗೆ ನಡೆಯಲು ಎದುರು ನೋಡುತ್ತಿದ್ದೇವೆ” ಎಂದು ವುಡ್ಸ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ. ಟೈಗರ್ ವುಡ್ಸ್ ಅವರಿಗೆ ಎಕ್ಸ್ ಖಾತೆಯಲ್ಲಿ 6.4 ಮಿಲಿಯನ್ ಅನುಯಾಯಿಗಳಿದ್ದಾರೆ.

ಒಂದು ಫೋಟೋದಲ್ಲಿ, ಟೈಗರ್ ವುಡ್ಸ್ ಮತ್ತು ವನೆಸ್ಸಾ ಟ್ರಂಪ್ ಒಟ್ಟಿಗೆ ಪೋಸ್ ನೀಡುತ್ತಿರುವುದು ಕಂಡುಬಂದರೆ, ಎರಡನೇ ಫೋಟೋದಲ್ಲಿ, ವನೆಸ್ಸಾ ಟ್ರಂಪ್ ಅವರ ಕೈಗಳನ್ನು ಎದೆಯ ಮೇಲಿಟ್ಟುಕೊಂಡು ಉಯ್ಯಾಲೆಯಲ್ಲಿ ಮಲಗಿ ಆಕಾಶದೆಡೆಗೆ ನೋಡುತ್ತಿರುವುದನ್ನು ನೋಡಬಹುದು.

ಟೈಗರ್ ವುಡ್ಸ್ ಮತ್ತು ವನೆಸ್ಸಾ ಟ್ರಂಪ್ ಜೋಡಿ ಕಳೆದ ಕೆಲವು ಹಲವು ದಿನಗಳಿಂದ ಇದೇ ವಿಚಾರವಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದರು. ನೆಟ್ಟಿಗರ ಕುತೂಹಲಕ್ಕೂ ಕಾರಣರಾಗಿದ್ದರು. ಸದ್ಯ ಈ ಜೋಡಿ ಫೋಟೋಗಳ ಸಹಿತ ತಮ್ಮ ಖಾಸಗಿ ಜೀವನವನ್ನು ದೃಢಪಡಿಸಿದ್ದಾರೆ.

2005ರಲ್ಲಿ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರನ್ನು ಮದುವೆಯಾದ ವನೆಸ್ಸಾ ಟ್ರಂಪ್ 12 ವರ್ಷ ಸಂಸಾರ ನಡೆಸಿ 5 ಮಕ್ಕಳನ್ನು ಹೊಂದಿದ್ದರೆ, ಟೈಗರ್ ವುಡ್ಸ್ ಅವರಿಗೆ ಸ್ಯಾಮ್ ಮತ್ತು ಚಾರ್ಲಿ ಎಂಬಿಬ್ಬರು ಮಕ್ಕಳಿದ್ದಾರೆ. ಇಬ್ಬರೂ ಎಲಿನ್ ನಾರ್ಡೆಗ್ರೆನ್ ಮೂಲದವರು. ವನೆಸ್ಸಾ 2018ರಲ್ಲಿ ಜೂ.ಟ್ರಂಪ್​ ಅವರಿಂದ ವಿಚ್ಛೇದನ ಪಡೆದರೆ, ವುಡ್ಸ್, 2010ರಲ್ಲಿ ಎಲಿನ್ ನಾರ್ಡೆಗ್ರೆನ್ ಅವರೊಂದಿಗಿನ ಸಂಬಂಧ ಮುರಿದುಕೊಂಡಿದ್ದರು.

ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಗೌಪ್ಯವಾಗಿಟ್ಟುಕೊಳ್ಳುತ್ತಿದ್ದ ವುಡ್ಸ್, ಈ ಸಂಬಂಧವನ್ನು ಬಹಿರಂಗವಾಗಿ ದೃಢೀಕರಿಸುವ ಫೋಟೋಗಳನ್ನು ಪ್ರಕಟಿಸಲು ಕಾರಣವೇನು ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. 2013ರಲ್ಲಿ ವುಡ್ಸ್‌ ಮತ್ತು ಲಿಂಡ್ಸೆ ವಾನ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ದೃಢೀಕರಿಸಲು ಒಟ್ಟಿಗಿರುವ ಫೋಟೋ ಹಂಚಿಕೊಂಡಿದ್ದರು.

ಹಲವು ವಿವಾಹೇತರ ಸಂಬಂಧಗಳನ್ನು ಹೊಂದಿದ್ದ ವುಡ್ಸ್, 2010ರ ಎಲಿನ್ ನಾರ್ಡೆಗ್ರೆನ್ ಅವರೊಂದಿಗಿನ ಸಂಬಂಧವನ್ನು ಮುಗಿಸಿದ ನಂತರ ಅವರು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದ ಏಕೈಕ ಸಂಬಂಧ ಎರಿಕಾ ಹರ್ಮನ್ ಅವರೊಂದಿಗೆ ಆಗಿತ್ತು. ಇದು ಸುಮಾರು ಏಳು ವರ್ಷಗಳ ಕಾಲ ಮುಂದುವರಿದು 2022ರಲ್ಲಿ ವಿಚ್ಛೇದನ ಪಡೆದಿದ್ದರು. ಹರ್ಮನ್ ಅಂತಿಮವಾಗಿ ಟೈಗರ್ ವುಡ್ಸ್ ಮತ್ತು ವಾಸಿಸುತ್ತಿದ್ದ ಅವರ ದಕ್ಷಿಣ ಫ್ಲೋರಿಡಾ ಎಸ್ಟೇಟ್​ನಲ್ಲಿ ಜೀವನ ನಡೆಸಲು ಆರಂಭಿಸಿದರು.

ಟ್ರಂಪ್ ಮಾಜಿ ಸೊಸೆಯೊಂದಿಗಿನ ಸಂಬಂಧ ಸ್ಪಷ್ಟಪಡಿಸಿದ ಟೈಗರ್ ವುಡ್ಸ್ Read More

ಸುನಿತಾ ವಿಲಿಯಮ್ಸ್ ಗೆ‌ ಹೆಚ್ಚುವರಿ ವೇತನ-ಟ್ರಂಪ್

ವಾಷಿಂಗ್ಟನ್: 8 ದಿನಗಳ ಅಧ್ಯಯನಕ್ಕಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಹೆಚ್ಚುವರಿಯಾಗಿ 278 ದಿನಗಳು ಅಲ್ಲೇ ಉಳಿದಿದ್ದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸ್ವಂತ ಹಣದಿಂದ ಹೆಚ್ಚುವರಿ ವೇತನ ನೀಡುವುದಾಗಿ ತಿಳಿಸಿದ್ದಾರೆ.

ಹೆಚ್ಚುವರಿ ಸಂಬಳದ ಬಗ್ಗೆ ಯಾರೂ ನನ್ನ ಬಳಿ ಬಂದು ಕೇಳಿಕೊಂಡಿಲ್ಲ. ಒಂದು ವೇಳೆ ಅದರ ಅವಶ್ಯಕತೆ ಇದ್ದಲ್ಲಿ ನನ್ನ ಸ್ವಂತ ಹಣದಿಂದಲೇ ಅವರಿಗೆ ಸಂಬಳ ನೀಡುತ್ತೇನೆ ಎಂದು ಹೇಳಿದ್ದಾರೆ ‌

ಬೇರೆ ಖಾಸಗಿ ವಲಯಗಳಂತೆ ನಾಸಾದ ಗಗನಯಾತ್ರಿಗಳಿಗೆ ಹೆಚ್ಚುವರಿ ಕೆಲಸಕ್ಕೆ ಹೆಚ್ಚು ಸಂಬಳ ಸಿಗುವುದಿಲ್ಲ,ಬದಲಿಗೆ ಅಮೆರಿಕದ ಫೆಡರಲ್(ಸರ್ಕಾರಿ) ಉದ್ಯೋಗಿಗಳಂತೆ ಅವರಿಗೆ ಸೌಲಭ್ಯಗಳು ದೊರೆಯುತ್ತವೆ.

ಸುನಿತಾ ವಿಲಿಯಮ್ಸ್ ಗೆ‌ ಹೆಚ್ಚುವರಿ ವೇತನ-ಟ್ರಂಪ್ Read More

ಲಕ್ಷಾಂತರ ವಲಸಿಗರ ಕಾನೂನುಬದ್ಧ ರಕ್ಷಣೆ ರದ್ದು:ಟ್ರಂಪ್‌

ವಾಷಿಂಗ್ಟನ್: ಲಕ್ಷಾಂತರ ವಲಸಿಗರ ಕಾನೂನುಬದ್ಧ ರಕ್ಷಣೆಯನ್ನು ರದ್ದುಗೊಳಿಸುವುದಾಗಿ ಅಮೆರಿಕ ಹೇಳಿದ್ದು, ಅವರಿಗೆ ದೇಶ ತೊರೆಯಲು ವಾರಗಳ ಕಾಲಾವಕಾಶ ನೀಡಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಇತಿಹಾಸದಲ್ಲಿಯೇ ಅತಿದೊಡ್ಡ ಗಡಿಪಾರು ಅಭಿಯಾನವನ್ನು ಕೈಗೊಳ್ಳುವುದಾಗಿ ಅದರಲ್ಲೂ ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಿಂದ ಅಕ್ರಮ ವಲಸೆ ತಡೆಯುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಅಕ್ಟೋಬರ್ 2022ರ ನಂತರ ಅಮೆರಿಕ್ಕೆ ಬಂದಿರುವ ಕ್ಯೂಬಾ, ಹೈಟಿ, ನಿಕರಾಗುವಾ ಮತ್ತು ವೆನೆಜುವೆಲಾ ಸೇರಿದಂತೆ ನಾಲ್ಕು ದೇಶಗಳ ಸುಮಾರು 5,32,000 ಜನರಿಗೆ ಅನ್ವಯಿಸುತ್ತದೆ ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಅವರು ಹೇಳಿದ್ದಾರೆ.

ಈ ನಾಲ್ಕು ದೇಶದ ಲಕ್ಷಾಂತರ ನಾಗರಿಕರು ಏಪ್ರಿಲ್ 24ರಂದು ಅಥವಾ ಫೆಡರಲ್ ರಿಜಿಸ್ಟರ್‌ನಲ್ಲಿ ನೋಟಿಸ್ ಪ್ರಕಟವಾದ 30 ದಿನಗಳಲ್ಲಿ ಅಮೆರಿಕದಲ್ಲಿ ಉಳಿಯುವ ತಮ್ಮ ಕಾನೂನು ರಕ್ಷಣೆಯನ್ನು ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಲಕ್ಷಾಂತರ ವಲಸಿಗರ ಕಾನೂನುಬದ್ಧ ರಕ್ಷಣೆ ರದ್ದು:ಟ್ರಂಪ್‌ Read More

ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಭೂಮಿಗೆ ವಾಪಸ್

ಕೇಪ್ ಕೆನವೆರಲ್: ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ 9 ತಿಂಗಳ ನಂತರ ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3.27ಕ್ಕೆ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.

ಇಬ್ಬರೂ ಕಳೆದ ವರ್ಷ ಜೂನ್‌ನಲ್ಲಿ ಬಾಹ್ಯಾಕಾಶಕ್ಕೆ ಪಯಣಿಸಿದ್ದರು. ತಾಂತ್ರಿಕ ತೊಂದರೆಗಳು ಮತ್ತು ವೇಳಾಪಟ್ಟಿಯಲ್ಲಿನ ಬದಲಾವಣೆಗಳಿಂದಾಗಿ ಅವರ ಮರಳುವಿಕೆ ವಿಳಂಬವಾಗಿತ್ತು.

ಕೇವಲ ಒಂದು ವಾರದ ಮಟ್ಟಿಗೆ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದರು.ಆದರೆ, ಅವರಿದ್ದ ಬೋಯಿಂಗ್ ಸ್ಟಾರ್‌ಲೈನರ್ ನೌಕೆಯಲ್ಲಿ ದೋಷ ಕಂಡುಬಂದಿದ್ದರಿಂದ ಅವರು ಅಲ್ಲೇ ಉಳಿಯಬೇಕಾಯಿತು.

ಇದಲ್ಲದೆ, ಜೂನ್ 2024ರಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿದ್ದ ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೋರ್ಬುನೋವ್ ಕೂಡಾ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಅವರೊಂದಿಗೆ ಮರಳಿದ್ದಾರೆ.

ಐಎಸ್‌ಎಸ್‌ ಕ್ರೂ-9 ಸದಸ್ಯರನ್ನು ಹೊತ್ತ ಸ್ಪೇಸ್‌ಎಕ್ಸ್ ಡ್ರ್ಯಾಗನ್ ನೌಕೆ ಫ್ಲೋರಿಡಾದ ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿಯಿತು.

ಕ್ರೂ-9 ಮಾರ್ಚ್ 18, 2025ರಂದು ಬೆಳಗ್ಗೆ 10:35ಕ್ಕೆ (ಭಾರತೀಯ ಕಾಲಮಾನ) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹ್ಯಾಚ್ ಅನ್ನು ಮುಚ್ಚಿ ಅನ್‌ಡಾಕ್ ಮಾಡುವ ಮೂಲಕ ಭೂಮಿಯ ಕಡೆಗೆ ಪ್ರಯಾಣ ಪ್ರಾರಂಭಿಸಿತು. ಅದಾದ ನಂತರ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭೂಮಿಗೆ ಮರಳಲು ವಿಶೇಷ ವಿಧಾನ ಅಳವಡಿಸಿಕೊಂಡಿತು. ಇದರಿಂದಾಗಿ ನೌಕೆ ಭೂಮಿಯ ವಾತಾವರಣವನ್ನು ಸುರಕ್ಷಿತವಾಗಿ ಪ್ರವೇಶಿಸಿ, ಗೊತ್ತುಪಡಿಸಿದ ಸ್ಥಳದಲ್ಲಿಳಿಯಲು ಸಾಧ್ಯವಾಯಿತು.

ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಭೂಮಿಗೆ ವಾಪಸ್ Read More

ಗಾಜಾ ಪಟ್ಟಿಯಲ್ಲಿ ವೈಮಾನಿಕ ದಾಳಿ:400 ಪ್ಯಾಲೆಸ್ತೇನಿಯರು ಸಾವು

ದೀರ್ ಅಲ್-ಬಲಾಹ್: ಇಸ್ರೇಲ್ ಮತ್ತೆ ಮಂಗಳವಾರ ಬೆಳಗ್ಗೆ ಗಾಜಾ ಪಟ್ಟಿಯಾದ್ಯಂತ ವೈಮಾನಿಕ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 404 ಪ್ಯಾಲೆಸ್ತೀನಿಯನ್ನರು ಅನುಮತಿ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಅನಿರೀಕ್ಷಿತ ಬಾಂಬ್ ದಾಳಿಯು ಜನವರಿಯಿಂದ ಜಾರಿಯಲ್ಲಿದ್ದ ಕದನ ವಿರಾಮವನ್ನು ಉಲ್ಲಂಘಿಸಿದೆ. ಕದನ ವಿರಾಮ ಉಲ್ಲಂಘಿಸಿ ಮತ್ತೆ ಯುದ್ಧ ಆರಂಭಿಸಿರುವ ಇಸ್ರೇಲ್ ಗೆ ತಕ್ಕ ಉತ್ತರ ನೀಡುತ್ತೇವೆ. ಈ ದಾಳಿ ಒತ್ತೆಯಾಳುಗಳ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಹಮಾಸ್ ಎಚ್ಚರಿಸಿದೆ.

ಹಮಾಸ್​ ಆರೋಗ್ಯ ಸಚಿವಾಲಯದ ಪ್ರಕಾರ, ಈ ದಾಳಿಗಳಲ್ಲಿ ಮಕ್ಕಳು ಸೇರಿದಂತೆ ಅನೇಕರು ಮೃತಪಟ್ಟಿದ್ದಾರೆ ಮತ್ತು ಗಾಜಾ ಪಟ್ಟಿಯ ಆಸ್ಪತ್ರೆಗಳಲ್ಲಿ ಈವರೆಗೆ 326 ಮೃತದೇಹಗಳು ದಾಖಲಾಗಿವೆ. ಆದರೆ, ಇನ್ನೂ ಹಲವಾರು ಶವಗಳು ಧ್ವಂಸಗೊಂಡ ಸ್ಥಳದ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಸಚಿವಾಲಯ ಹೇಳಿದೆ.

ಕದನ ವಿರಾಮ ವಿಸ್ತರಿಸುವ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ದಾಳಿಗೆ ಆದೇಶ ನೀಡಿರುವುದಾಗಿ ಇಸೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹೇಳಿದ್ದಾರೆ.

ಇಸ್ರೇಲ್, ಇಂದಿನಿಂದ, ಹೆಚ್ಚುತ್ತಿರುವ ಮಿಲಿಟರಿ ಬಲದೊಂದಿಗೆ ಹಮಾಸ್ ವಿರುದ್ದ ಕಾರ್ಯನಿರ್ವಹಿಸುತ್ತದೆ ಎಂದು ನೆತನ್ಯಾಹು ಅವರ ಕಚೇರಿ ತಿಳಿಸಿದೆ.

ಈ ಮಧ್ಯೆ, ಕಾರ್ಯಾಚರಣೆಯು ಮುಕ್ತವಾಗಿದೆ ಮತ್ತು ಅದನ್ನು ವಿಸ್ತರಿಸುವ ನಿರೀಕ್ಷೆಯಿದೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ.

ಈಜಿಪ್ಟ್ ಮತ್ತು ಕತಾರ್ ಜೊತೆಗೆ ಮಧ್ಯಸ್ಥಿಕೆ ಪ್ರಯತ್ನಗಳನ್ನು ಮುನ್ನಡೆಸುತ್ತಿರುವ ಅಮೆರಿಕ ರಾಯಭಾರಿ ಸ್ಟೀವ್ ವಿಟ್ಕಾಫ್, ಒತ್ತೆಯಾಳುಗಳನ್ನು ಹಮಾಸ್ ತಕ್ಷಣವೇ ಬಿಡುಗಡೆ ಮಾಡಬೇಕು ಇಲ್ಲವಾದಲ್ಲಿ ತೀವ್ರ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಗಾಜಾ ಪಟ್ಟಿಯಲ್ಲಿ ವೈಮಾನಿಕ ದಾಳಿ:400 ಪ್ಯಾಲೆಸ್ತೇನಿಯರು ಸಾವು Read More

ಭಾರತ ಮೂಲದ ನಾಲ್ವರು ಸಾಧಕಿಯರಿಗೆ ಗೌರವ

ನ್ಯೂಯಾರ್ಕ್: ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಹಾಗೂ ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್‌ (ಎಫ್‌ಐಎ), ವಿಶ್ವ ಮಹಿಳಾ ದಿನದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಭಾರತ ಮೂಲದ ನಾಲ್ವರು ಸಾಧಕಿಯರನ್ನು ಸನ್ಮಾನಿಸಿ ಗೌರವಿಸಿದೆ.

ಜೆಪಿ ಮಾರ್ಗನ್ ಕಂಪನಿಯ ಸಲಹೆ, ವಿಲೀನ ಹಾಗೂ ಸ್ವಾಧೀನ ಕುರಿತ ಜಾಗತಿಕ ಮುಖ್ಯಸ್ಥೆ ಅನು ಅಯ್ಯಂಗಾರ್, ಎ-ಸೀರಿಸ್ ಮ್ಯಾನೇಜ್‌ಮೆಂಟ್ ಮತ್ತು ಇನ್ವೆಸ್ಟ್‌ಮೆಂಟ್ ಸಿಇಒ ಅಂಜುಲಾ ಆಚಾರ್ಯ, ಎಲ್‌ಡಿಪಿ ವೆಂಚರ್ಸ್‌ ಸಂಸ್ಥಾಪಕಿ ವೆಂಡಿ ಡೈಮಂಡ್ ಮತ್ತು ಸಿಎನ್‌ಬಿಸಿಯ ನಿರೂಪಕಿ ಸೀಮಾ ಮೋದಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅವರು ಮುಖ್ಯ ಅತಿಥಿಯಾಗಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅನ್ನಪೂರ್ಣ ದೇವಿ ಅವರು, ‘ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವಲ್ಲಿ ಉಭಯ ದೇಶಗಳ ಮಹಿಳೆಯರು ಮುಂಚೂಣಿ ಪಾತ್ರ ವಹಿಸಿದ್ದಾರೆ’ ಎಂದು ಹೇಳಿದರು.

ಭಾರತ ಮೂಲದ ನಾಲ್ವರು ಸಾಧಕಿಯರಿಗೆ ಗೌರವ Read More

ಮಧ್ಯ ಅಮೆರಿಕದಲ್ಲಿ ಭಾರಿ ಸುಂಟರಗಾಳಿ:32 ಮಂದಿ ಸಾವು

ಹೂಸ್ಟನ್: ಮಧ್ಯ ಅಮೆರಿಕದಲ್ಲಿ ಭಾರಿ ಸುಂಟರಗಾಳಿ ಉಂಟಾಗಿ ಸುಮಾರು 32 ಮಂದಿ ಮೃತಪಟ್ಟಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ.

ಅದೆಷ್ಟರ ಮಟ್ಟಿಗೆ ಗಾಳಿ ಬೀಸುತ್ತಿದೆ ಎಂದರೆ
ಗಾಳಿಯ ರಭಸಕೆ ಮನೆಗಳ ಹೆಂಚುಗಳು ಹಾರಿಹೋಗಿವೆ.ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳು ಉರುಳಿವೆ,ಕೆಲವೆಡೆ ವಾಹನಗಳು ಚಲಿಸುತ್ತಿದ್ದಾಗಲೇ ಉರುಳಿವೆ.

ಬೃಹತ್‌ ಟ್ರಕ್‌ಗಳು ಪಲ್ಟಿಯಾಗುವ ದೃಶ್ಯಗಳನ್ನು ಸ್ಥಳೀಯ ವಾಹಿನಿಗಳು ಪ್ರಸಾರ ಮಾಡಿವೆ. ಭಾರಿ ಸುಂಟರಗಾಳಿ ಅಪ್ಪಳಿಸಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದರು.

ಮಧ್ಯ ಅಮೆರಿಕದಲ್ಲಿ ಭಾರಿ ಸುಂಟರಗಾಳಿ:32 ಮಂದಿ ಸಾವು Read More

ಉತ್ತರ ಮೆಕೆಡೊನಿಯಾನಲ್ಲಿ ಅಗ್ನಿ ದುರಂತ 59 ಮಂದಿ ಸಜೀವ ದಹನ

ಕೊಕಾನಿ: ಉತ್ತರ ಮೆಕೆಡೊನಿಯಾದ ಪೂರ್ವ ಪಟ್ಟಣವಾದ ಕೊಕಾನಿಯಾದ ನೈಟ್‌ಕ್ಲಬ್‌ನಲ್ಲಿ ಭಾನುವಾರ ಬೆಳಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದೆ.

ಈ ಅವಘಡದಲ್ಲಿ 59 ಜನ ಮೃತಪಟ್ಟಿದ್ದು, 155 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಲಬ್ ಪಲ್ಸ್‌ನಲ್ಲಿ ಸ್ಥಳೀಯ ಪಾಪ್ ಗುಂಪಿನ ಸಂಗೀತ ಕಚೇರಿಯ ಸಮಯದಲ್ಲಿ ಇಂದು ಬೆಳಗಿನ ಜಾವ 2.30 ರ ವೇಳೆ ಬೆಂಕಿ ಕಾಣಿಸಿಕೊಂಡಿದೆ ಎಂದು ಆಂತರಿಕ ಸಚಿವ ಪಂಚೆ ತೋಷ್ಕೋವ್ಸ್ಕಿ ತಿಳಿಸಿದ್ದಾರೆ.

ಒಟ್ಟು 59 ಮಂದಿ ಸಜೀವ ದಹನವಾಗಿದ್ದು, ಇದುವರೆಗೆ ಮೃತಪಟ್ಟವರ ಪೈಕಿ 39 ಜನರನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪೈರೋಟೆಕ್ನಿಕ್‌ಗಳು ಕ್ಲಬ್ ನ ಸೀಲಿಂಗ್ ಗೆ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿರಬಹುದು ಎಂದು ಅವರು ತಿಳಿಸಿದ್ದಾರೆ.

ಗಾಯಾಳುಗಳನ್ನು ರಾಜಧಾನಿ ಸ್ಕೋಪ್ಜೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಅವರಲ್ಲಿ ಹಲವರು ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

118 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಬೇನಿಯಾ, ಬಲ್ಗೇರಿಯಾ, ಗ್ರೀಸ್ ಮತ್ತು ಸೆರ್ಬಿಯಾ ಸೇರಿದಂತೆ ನೆರೆಯ ದೇಶಗಳು ನೆರವಿನ ಹಸ್ತ ಚಾಚಿವೆ ಎಂದು ಆರೋಗ್ಯ ಸಚಿವ ಅರ್ಬೆನ್ ತಾರಾವರಿ ಅವರು ಹೇಳಿದ್ದಾರೆ.

ಉತ್ತರ ಮೆಕೆಡೊನಿಯಾನಲ್ಲಿ ಅಗ್ನಿ ದುರಂತ 59 ಮಂದಿ ಸಜೀವ ದಹನ Read More

ಸುನಿತಾ ವಿಲಿಯಮ್ಸ್, ಬುಚ್ ಮಾ.19ಕ್ಕೆ ಭೂಮಿಗೆ ವಾಪಸಾಗುವ ಸಾಧ್ಯತೆ

ಫ್ಲಾರಿಡಾ (ಅಮೆರಿಕ): ಕಳೆದ ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ನೋರ್ ಅವರು ಮಾರ್ಚ್ 19ರಂದು ಭೂಮಿಗೆ ವಾಪಸಾಗುವ ಸಾಧ್ಯತೆಯಿದೆ.

10 ಮಿಷನ್‌ ಅನ್ನು ಶುಕ್ರವಾರ ಯಶಸ್ವಿಯಾಗಿ ಉಡಾವಣ ಮಾಡಲಾಯಿತು. ‘ಕ್ರೂ ಡ್ರಾಗನ್’ ಹೆಸರಿನ ಗಗನನೌಕೆಯನ್ನು ಹೊತ್ತುಕೊಂಡ ಸ್ಪೇಸ್‌ಎಕ್ಸ್‌ನ ‘ಫಾಲ್ಕನ್ 9’ ರಾಕೆಟ್ ಇಲ್ಲಿನ ಕೆನಡಿ ಸ್ಪೇಸ್ ಸೆಂಟರ್‌ನಿಂದ ಸ್ಥಳೀಯ ಕಾಲಮಾನ ಶುಕ್ರವಾರ ರಾತ್ರಿ 7.03ಕ್ಕೆ ನಭಕ್ಕೆ ಚಿಮ್ಮಿತು.

ಈ ಗಗನನೌಕೆಯಲ್ಲಿ ನಾಲ್ವರು ಗಗನಯಾನಿಗಳು ಐಎಸ್‌ಎಸ್‌ಗೆ ಪ್ರಯಾಣಿಸಿದ್ದಾರೆ.

ಗಗನನೌಕೆಯು ಮರಳುವಾಗ ಸುನಿತಾ ಮತ್ತು ವಿಲ್ನೋರ್ ಅಲ್ಲದೆ, ಐಎಸ್‌ಎಸ್‌ನಲ್ಲಿರುವ ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೊರ್ಬನೊವ್ ಅವರನ್ನೂ ಕರೆತರಲಿದೆ.

ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕಳೆದ ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಮೂಲಕ ಕೇವಲ ಎಂಟು ದಿನಗಳಿಗಾಗಿ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಿದ್ದರು. ಆದರೆ ಸ್ಟಾರ್‌ಲೈನರ್‌ನಲ್ಲಿನ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಇನ್ನೂ ಹಿಂತಿರುಗಲು ಸಾಧ್ಯವಾಗಲಿಲ್ಲ.

ಎಲ್ಲವೂ ಅಂದ್ಕೊಂಡಂತೆ ನಡೆದರೆ ಸುನಿತಾ ವಿಲಿಯಮ್ಸ್, ವಿಲ್ಮೋರ್ ಮಾರ್ಚ್​ನಲ್ಲೇ ಭೂಮಿ ಮೇಲೆ ಇರುತ್ತಾರೆ.

ಸುನಿತಾ ವಿಲಿಯಮ್ಸ್, ಬುಚ್ ಮಾ.19ಕ್ಕೆ ಭೂಮಿಗೆ ವಾಪಸಾಗುವ ಸಾಧ್ಯತೆ Read More

ಪಾಕಿಸ್ತಾನದಲ್ಲಿ ಪ್ರಬಲ ಬಾಂಬ್ ಸ್ಫೋಟ:ಹಲವರಿಗೆ ಗಂಭೀರ ಗಾಯ

ಪಾಕಿಸ್ತಾನ: ಪಾಕಿಸ್ತಾನದಲ್ಲಿ ರೈಲು ಹೈಜಾಕ್ ಬೆನ್ನಲ್ಲೇ ಶುಭ ಶುಕ್ರವಾರ ಮಸೀದಿಯಲ್ಲಿ ಪ್ರಬಲ ಬಾಂಬ್ ಸ್ಫೋಟವಾಗಿದೆ.

ರಮ್ಜಾನ್ ನ ಶುಭ ಶುಕ್ರವಾರದಂದೇ ಮಸೀದಿಯಲ್ಲಿ ಪ್ರಬಲ ಬಾಂಬ್ ಸ್ಫೋಟಗೊಳಿಸಲಾಗಿದೆ.

ವಾಯುವ್ಯ ಪಾಕಿಸ್ತಾನದ ಪೆಶಾವರದ ಮಸೀದಿಯಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದೆ. ಇದರಲ್ಲಿ ಇಸ್ಲಾಮಿಕ್ ಪಕ್ಷದ ನಾಯಕ ಮತ್ತು ಮಕ್ಕಳು ಸೇರಿದಂತೆ ಇತರ ಹಲವರು ಗಾಯಗೊಂಡಿದ್ದಾರೆ.

ಪಾಕಿಸ್ತಾನದಲ್ಲಿ ಪ್ರಬಲ ಬಾಂಬ್ ಸ್ಫೋಟ:ಹಲವರಿಗೆ ಗಂಭೀರ ಗಾಯ Read More