ಬಾಂಗ್ಲಾದೇಶ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಭೇಟಿಯಾದ ಮೋದಿ

ಬ್ಯಾಂಕಾಕ್,ಏ.4: ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಅವರನ್ನು
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು
ಭೇಟಿ ಮಾಡಿದ್ದಾರೆ.

ಮೊಹಮ್ಮದ್ ಯೂನುಸ್ ಅವರನ್ನು ಬ್ಯಾಂಕಾಕ್ ನಲ್ಲಿ ಭೇಟಿ ಮಾಡಿದ್ದಾರೆ.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡ ನಂತರ ಇದು ಮೊದಲ ಭೇಟಿ ಆಗಿದೆ.

ಬಂಗಾಳ ಕೊಲ್ಲಿ ಬಹು-ವಲಯ ಮತ್ತು ತಾಂತ್ರಿಕ ಸಹಕಾರ ಗುಂಪಿನ ನಾಯಕರ ಶೃಂಗಸಭೆಯ ಹೊರಗೆ ಉಭಯ ನಾಯಕರು ಭೇಟಿ ಮಾಡಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

ಮುಂಬರುವ BIMSTEC ಶೃಂಗಸಭೆಯ ಆತಿಥ್ಯವನ್ನು ಬಾಂಗ್ಲಾದೇಶ ವಹಿಸಲಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಶೇಖ್ ಹಸೀನಾ ಅವರನ್ನು ಪ್ರಧಾನಿ ಸ್ಥಾನದಿಂದ ಪದಚ್ಯುತಗೊಳಿಸಿದ ನಂತರ ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಿಂಸಾಚಾರ ಮತ್ತು ಅಲ್ಲಿ ಕಟ್ಟಾ ಇಸ್ಲಾಮಿಕ್ ಶಕ್ತಿಗಳ ಬಲವರ್ಧನೆ ಬಗ್ಗೆ ಭಾರತದ ಆತಂಕ ನಡುವೆ ಉಭಯ ದೇಶಗಳ ಸಂಬಂಧ ಕುಸಿದಿದೆ.

ಇದೀಗ ಮೊಹಮ್ಮದ್ ಯೂನುಸ್ ಅವರನ್ನು ಪ್ರಧಾನಿ ಭೇಟಿಯಾಗಿದ್ದಾರೆ ಇನ್ನು ಮುಂದೆ ಏನು ಹೇಗೆ ಎಂಬುದನ್ನು ಕಾದು ನೋಡಬೇಕಿದೆ.

ಬಾಂಗ್ಲಾದೇಶ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಭೇಟಿಯಾದ ಮೋದಿ Read More

ಶುಭಾಂಶು ಶುಕ್ಲಾ ಅಂತರಾಷ್ಟ್ರೀಯ ಬಾಹ್ಯಾಕಾಶ‌ ನಿಲ್ದಾಣದಲ್ಲಿ ಮೊದಲ ಭಾರತೀಯ ಗಗನಯಾತ್ರಿ

ನಾಸಾ,ಏ.3: ಇನ್ನು ಮುಂದೆ ಶುಭಾಂಶು ಶುಕ್ಲಾ ಅಂತರಾಷ್ಟ್ರೀಯ ಬಾಹ್ಯಾಕಾಶ‌ ನಿಲ್ದಾಣದಲ್ಲಿ ಮೊದಲ ಭಾರತೀಯ ಗಗನಯಾತ್ರಿಯಾಗಲಿದ್ದಾರೆ.

ನಾಸಾದ ಮಾಜಿ ಗಗನಯಾತ್ರಿ ಪೆಗ್ಗಿ ವಿಟ್ಸನ್ ಆಕ್ಸ್-4 ಕಾರ್ಯಾಚರಣೆಯನ್ನು ಮುನ್ನಡೆಸಲಿದ್ದು, ಶುಭಾನ್ಶು ಶುಕ್ಲಾ ಪೈಲಟ್ ಆಗಿ ಮತ್ತು ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ (ಪೋಲೆಂಡ್) ಮತ್ತು ಟಿಬೋರ್ ಕಾಪು (ಹಂಗೇರಿ) ಮಿಷನ್ ತಜ್ಞರಾಗಿ ಕಾರ್ಯನಿರ್ವಹಿಸಲಿದ್ದಾರೆ.

ನಾಸಾ ಮತ್ತು ಅದರ ಅಂತರರಾಷ್ಟ್ರೀಯ ಪಾಲುದಾರರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಐಎಸ್ಎಸ್ ಗೆ ಆಕ್ಸಿಯಮ್ ಸ್ಪೇಸ್‌ನ ನಾಲ್ಕನೇ ಖಾಸಗಿ ಗಗನಯಾತ್ರಿ ಮಿಷನ್ (Ax-4) ಗಾಗಿ ಸಿಬ್ಬಂದಿಯನ್ನು ಖಚಿತಪಡಿಸಿದ್ದಾರೆ.

2025 ರ ವಸಂತಕಾಲದ ಮೊದಲು ಫ್ಲೋರಿಡಾದಿಂದ ಉಡಾವಣೆಗೊಳ್ಳಲಿರುವ ಈ ಮಿಷನ್, ಶುಭಾಂಶು ಶುಕ್ಲಾ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯಿಂದ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ಗಗನಯಾತ್ರಿಯನ್ನಾಗಿ ಮಾಡುತ್ತಿದೆ.

ಆಕ್ಸ್-4 ಕಾರ್ಯಾಚರಣೆಯನ್ನು ಮಾಜಿ ನಾಸಾ ಗಗನಯಾತ್ರಿ ಮತ್ತು ಆಕ್ಸಿಯಮ್ ಸ್ಪೇಸ್‌ನಲ್ಲಿ ಮಾನವ ಬಾಹ್ಯಾಕಾಶ ಹಾರಾಟದ ನಿರ್ದೇಶಕಿ ಪೆಗ್ಗಿ ವಿಟ್ಸನ್ ನೇತೃತ್ವ ವಹಿಸಲಿದ್ದಾರೆ. ಶುಕ್ಲಾ ಪೈಲಟ್ ಆಗಲಿದ್ದಾರೆ, ಆದರೆ ಇಬ್ಬರು ಮಿಷನ್ ತಜ್ಞರು ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ (ಇಎಸ್ಎ ಯೋಜನೆಯ ಗಗನಯಾತ್ರಿ) ಮತ್ತು ಹಂಗೇರಿಯ ಟಿಬೋರ್ ಕಪು.

ಇತ್ತೀಚೆಗೆ ನಡೆದ ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ, ಶುಕ್ಲಾ ತಮ್ಮ ಉತ್ಸಾಹ ಮತ್ತು ಭಾರತಕ್ಕೆ ಈ ಕಾರ್ಯಾಚರಣೆಯ ಮಹತ್ವವನ್ನು ವ್ಯಕ್ತಪಡಿಸಿದರು.

ಈ ಕಾರ್ಯಾಚರಣೆಯನ್ನು ಅತ್ಯಂತ ವೃತ್ತಿಪರತೆಯಿಂದ ಕಾರ್ಯಗತಗೊಳಿಸುವುದು ನಮ್ಮ ಪ್ರಯತ್ನವಾಗಿದೆ. ನನ್ನ ಕಾರ್ಯಾಚರಣೆಯ ಮೂಲಕ ನನ್ನ ದೇಶದಲ್ಲಿ ಇಡೀ ಪೀಳಿಗೆಯ ಕುತೂಹಲವನ್ನು ಹುಟ್ಟುಹಾಕಲು ಮತ್ತು ಭವಿಷ್ಯದಲ್ಲಿ ಅಂತಹ ಅನೇಕ ಕಾರ್ಯಾಚರಣೆಗಳನ್ನು ಸಾಧ್ಯವಾಗಿಸುವ ನಾವೀನ್ಯತೆಯನ್ನು ಚಾಲನೆ ಮಾಡಲು ನಾನು ಆಶಿಸುತ್ತೇನೆ ಎಂದು ಶುಕ್ಲ ಹೇಳಿದ್ದಾರೆ.

ಶುಭಾಂಶು ಶುಕ್ಲಾ ಅಂತರಾಷ್ಟ್ರೀಯ ಬಾಹ್ಯಾಕಾಶ‌ ನಿಲ್ದಾಣದಲ್ಲಿ ಮೊದಲ ಭಾರತೀಯ ಗಗನಯಾತ್ರಿ Read More

ಭಾರತ ಮತ್ತಿತರ ದೇಶಗಳ ಸರಕುಗಳ ಮೇಲೆ ಪ್ರತಿ ಸುಂಕ ನೀತಿ ಇಂದಿನಿಂದ ಜಾರಿಗೆ

ವಾಷಿಂಗ್ಟನ್: ಅಮೆರಿಕದ ಕೃಷಿ ಉತ್ಪನ್ನಗಳ ಮೇಲೆ ಭಾರತವು ಶೇ.100ರಷ್ಟು ಸುಂಕ ವಿಧಿಸುತ್ತದೆ,ಹಾಗೆಯೇ ಇತರ ದೇಶಗಳು ಹೆಚ್ಚು ಸುಂಕ ವಿಧಿಸುವುದರಿಂದ ಅಮೆರಿಕದ ಉತ್ಪನ್ನಗಳನ್ನು ಆ ರಾಷ್ಟ್ರಗಳಿಗೆ ರಫ್ತು ಮಾಡುವುದು ಅಸಾಧ್ಯ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.

ಭಾರತ ಮತ್ತು ಇತರ ದೇಶಗಳು ಅಮೆರಿಕದ ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುತ್ತಿರುವುದನ್ನು ಡೊನಾಲ್ಡ್ ಟ್ರಂಪ್‌ ಹಲವು ಸಲ ಟೀಕಿಸಿದ್ದರು.

ಭಾರತ ಒಳಗೊಂಡಂತೆ ಕೆಲವು ದೇಶಗಳ ಸರಕುಗಳ ಮೇಲೆ ಟ್ರಂಪ್‌ ಘೋಷಿಸಿರುವ ಪ್ರತಿ ಸುಂಕ ನೀತಿಯು ಏಪ್ರಿಲ್ 2ರಿಂದ ಜಾರಿಗೆ ಬರಲಿದೆ,ಇದು ಅಮೆರಿಕದ ವಿಮೋಚನಾ ದಿನ ಎಂದು ಹೇಳಿದ್ದಾರೆ.

ದುರದೃಷ್ಟವಶಾತ್, ಈ ದೇಶಗಳು ಹಲವು ವರ್ಷಗಳಿಂದ ನಮ್ಮ ಹಣವನ್ನು ಸುಲಿಗೆ ಮಾಡುತ್ತಿವೆ ಮತ್ತು ಅಮೆರಿಕದ ಕಾರ್ಮಿಕರ ಬಗ್ಗೆ ಅವುಗಳು ತಿರಸ್ಕಾರ ಮನೋಭಾವ ಹೊಂದಿವೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೆವಿಟ್ ಟೀಕಿಸಿದ್ದಾರೆ.

ಎಷ್ಟು ಪ್ರಮಾಣದಲ್ಲಿ ಪ್ರತಿ ಸುಂಕ ವಿಧಿಸಲಾಗುತ್ತದೆ ಮತ್ತು ಅವು ಯಾವೆಲ್ಲಾ ದೇಶಗಳ ಮೇಲೆ ಪರಿಣಾಮ ಬೀರಲಿವೆ ಎಂಬುದನ್ನು ಲೆವಿಟ್ ವಿವರಿಸಲಿಲ್ಲ.

ಅಮೆರಿಕದ ಡೇರಿ ಉತ್ಪನ್ನಗಳ ಮೇಲೆ ಯುರೋಪಿಯನ್ ಯೂನಿಯನ್ ಶೇ 50 ಸುಂಕ ವಿಧಿಸುತ್ತಿದ್ದರೆ, ನಾವು ಕಳುಹಿಸುವ ಅಕ್ಕಿಯ ಮೇಲೆ ಜಪಾನ್ ಶೇ 700ರಷ್ಟು ಸುಂಕ ವಿಧಿಸುತ್ತದೆ. ಅಮೆರಿಕದ ಕೃಷಿ ಉತ್ಪನ್ನಗಳ ಮೇಲೆ ಭಾರತವು ಶೇ 100ರಷ್ಟು ಸುಂಕ ಮತ್ತು ಅಮೆರಿಕದ ಬೆಣ್ಣೆ ಹಾಗೂ ಚೀಸ್ ಮೇಲೆ ಕೆನಡಾ ಶೇ 300ರಷ್ಟು ಸುಂಕ ವಿಧಿಸುತ್ತಿವೆ ಎಂದು ಲೆವಿಟ್ ಹೇಳಿದ್ದಾರೆ.

ಈ ರೀತಿಯ ಹೆಚ್ಚಿನ ಪ್ರಮಾಣದ ಸುಂಕದಿಂದ ಕಳೆದ ಕೆಲವು ದಶಕಗಳಲ್ಲಿ ಅಮೆರಿಕದ ಹಲವು ವ್ಯಾಪಾರಿಗಳು ನಷ್ಟ ಅನುಭವಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಭಾರತ ಮತ್ತಿತರ ದೇಶಗಳ ಸರಕುಗಳ ಮೇಲೆ ಪ್ರತಿ ಸುಂಕ ನೀತಿ ಇಂದಿನಿಂದ ಜಾರಿಗೆ Read More

ಇಮ್ರಾನ್ ಖಾನ್ ಅವರಿಗೆ ನೊಬೆಲ್‌ ಶಾಂತಿಪುರಸ್ಕಾರದ ಕೂಗು

ಇಸ್ಲಾಮಾಬಾದ್,ಏ.1: ಪಾಕಿಸ್ತಾನದ ಮಾಜಿ ಮುಖ್ಯ ಮಂತ್ರಿ ಮಾಜಿ ಕ್ರಿಕೆಟಿಗರಾದ ಇಮ್ರಾನ್ ಖಾನ್ ಅವರಿಗೆ ನೊಬೆಲ್‌ ಶಾಂತಿ ಪುರಸ್ಕಾರ ನೀಡಬೇಕು ಎಂಬ ಕೂಗು ಕೇಳಿಬಂದಿದೆ.

ನಾರ್ವೆಯಲ್ಲಿ ಪ್ರಮುಖ ರಾಜಕೀಯ ಪಕ್ಷವಾದ ಪಾರ್ಟಿಯಟ್‌ ಸೆಂಟ್ರಮ್ ಜೊತೆ ನಂಟು ಹೊಂದಿರುವ ಮೇಂಬರ್ ಆಫ್ ಪಾಕಿಸ್ತಾನ್ ವರ್ಲ್ಡ್ ಅಲಯನ್ಸ್ ಸಂಘಟನೆ ಕೂಡಾ ಇಮ್ರಾನ್ ಖಾನ್ ಅವರಿಗೆ ನೊಬೆಲ್‌ ಶಾಂತಿ ಪುರಸ್ಕಾರ ನೀಡಬೇಕು ಎಂದು ಅವರ ಹೆಸರನ್ನು ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಗೆ ನಾಮನಿರ್ದೇಶನ ಮಾಡಿದೆ.

ಪಾಕಿಸ್ತಾನದ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಕುರಿತಾದ ಖಾನ್ ಅವರ ಕೆಲಸಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ನಾಮನಿರ್ದೇಶನ ಮಾಡುವ ಹಕ್ಕು ಹೊಂದಿರುವ ಪಾರ್ಟಿಯಟ್‌ ಸೆಂಟ್ರಮ್ ಜೊತೆ PWA ಮೈತ್ರಿ ಮಾಡಿಕೊಂಡು ನಾಮನಿರ್ದೇಶನ ಮಾಡಲಾಗಿದೆ ಎಂದು ಆ ಪಕ್ಷ ಎಕ್ಸ್‌ನಲ್ಲಿ ಹೇಳಿಕೊಂಡಿದೆ.

ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆ ಮಾಡಲು ಇಮ್ರಾನ್ ಖಾನ್ ಸಾಕಷ್ಟು ಶ್ರಮಿಸಿದ್ದಾರೆ. ಹೀಗಾಗಿ ಅವರಿಗೆ ನೊಬೆಲ್‌ ಶಾಂತಿ ಪುರಸ್ಕಾರ ನೀಡಬೇಕು ಎಂದು 2019ರಲ್ಲೂ ಕೆಲವರು ನಾಮನಿರ್ದೇಶನ ಮಾಡಿದ್ದರು.

ಅಧಿಕಾರ ದುರುಪಯೋಗ ಹಾಗೂ ಭ್ರಷ್ಟಾಚಾರದ ಆರೋಪದ ಮೇಲೆ ಇಮ್ರಾನ್ ಖಾನ 14 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದು,ಸಧ್ಯ ಜೈಲಿನಲ್ಲಿದ್ದಾರೆ.

ಇಮ್ರಾನ್ ಖಾನ್ ಅವರಿಗೆ ನೊಬೆಲ್‌ ಶಾಂತಿಪುರಸ್ಕಾರದ ಕೂಗು Read More

ರಷ್ಯಾ, ಉಕ್ರೇನಿಯನ್ ನಾಯಕರ ವಿರುದ್ಧ ಟ್ರಂಪ್ ಟೀಕೆ

ಅಮೇರಿಕ: ಯುದ್ಧ ಕೊನೆಗೊಳಿಸಲು ಕದನ ವಿರಾಮವನ್ನು ರೂಪಿಸಲು ರಷ್ಯಾ ಮತ್ತು ಉಕ್ರೇನಿಯನ್ ನಾಯಕರು ಹೆಣಗಾಡುತ್ತಿದ್ದರೆ‌ ಇತ್ತ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇಬ್ಬರನ್ನೂ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಕದನ ವಿರಾಮ ವಿಚಾರದಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸುತ್ತಿದ್ದೇವೆ ಇಬ್ಬರ ನಡುವೆ ಅಗಾಧ ದ್ವೇಷವಿದೆ ಪುಟಿನ್ ಝೆಲೆನ್ಸ್ಕಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಕ್ಕೆ ಅವರು ಕೋಪಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಅಂತೆಯೇ ಈಗಾಗಲೇ ತೀವ್ರ ಆರ್ಥಿಕ ನಿರ್ಬಂಧಗಳನ್ನು ಎದುರಿಸುತ್ತಿರುವ ರಷ್ಯಾದ ಮೇಲೆ ಹೊಸ ನಿರ್ಬಂಧಗಳನ್ನು ಸೇರಿಸುವುದನ್ನು ಮತ್ತು ಅದರ ತೈಲ ರಫ್ತನ್ನು ದುರ್ಬಲಗೊಳಿಸಲು ಸುಂಕಗಳನ್ನು ಬಳಸುವುದನ್ನು ಪರಿಗಣಿಸುವುದಾಗಿ ಟ್ರಂಪ್ ಹೇಳಿದರು.

ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಝೆಲೆನ್ಸ್ಕಿ ಕಾನೂನು ಬದ್ಧತೆಯನ್ನು ಹೊಂದಿಲ್ಲ ಎಂದು ರಷ್ಯಾ ಅಧ್ಯಕ್ಷ ಪುಟಿನ್ ತಕರಾರು ತೆಗೆದಿದ್ದಾರೆ. ಅಲ್ಲದೆ ಉಕ್ರೇನ್‌ಗೆ ಬಾಹ್ಯ ಆಡಳಿತದ ಅಗತ್ಯವಿದೆ ಎಂದು ಮತ್ತೆ ಪುನರುಚ್ಚರಿಸಿದ್ದಾರೆ.

ರಷ್ಯಾ, ಉಕ್ರೇನಿಯನ್ ನಾಯಕರ ವಿರುದ್ಧ ಟ್ರಂಪ್ ಟೀಕೆ Read More

ಅಮೆರಿಕದಲ್ಲಿ ವಿಮಾನ ಪತನ

ವಾಷಿಂಗ್ಟನ್: ಅಮೆರಿಕದಲ್ಲಿ ಮತ್ತೊಂದು ವಿಮಾನ ಅಪಘಾತ ಸಂಭವಿಸಿದ್ದು, ವಿಮಾನವೊಂದು ಜನವಸತಿ ಕಟ್ಟಡಕ್ಕೆ ಅಪ್ಪಳಿಸಿದ ಪರಿಣಾಮ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ಅಮೆರಿಕದ ಅಯೋವಾದಿಂದ ಮಿನ್ನೇಸೋಟಕ್ಕೆ ತೆರಳುತ್ತಿದ್ದ ಸಣ್ಣ ವಿಮಾನವೊಂದು ಮಿನ್ನಿಯಾಪೋಲಿಸ್ ಉಪನಗರದಲ್ಲಿರುವ ಕಟ್ಟಡಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಸ್ಪೋಟವಾಗಿದೆ.

ಇದರಿಂದಾಗಿ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ವಿಮಾನವು ಡಿಕ್ಕಿ ಹೊಡೆದ ಕಾರಣ ಕಟ್ಟಡಕ್ಕೆ ಬಹಳ ಹಾನಿಯಾಗಿದೆ. ಅದೃಷ್ಟವಶಾತ ಮನೆಯಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ.

ಸಿಂಗಲ್ ಎಂಜಿನ್ ಹೊಂದಿರುವ ವಿಮಾನದಲ್ಲಿ ಎಷ್ಟು ಜನರಿದ್ದರು ಎಂಬುದು ಗೊತಗತಾಗಿಲ್ಲ ಆದರೆ ಇದ್ದವರು ಯಾರೂ ಬದುಕುಳಿದಿಲ್ಲ ಎಂದು ವರದಿಯಾಗಿದೆ.

ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (FAA) ಪ್ರಕಾರ, ವಿಮಾನವು ಡೆಸ್ ಮೊಯಿನ್ಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮತ್ತೊಂದು ಮಿನ್ನಿಯಾಪೋಲಿಸ್ ಉಪನಗರದಲ್ಲಿರುವ ಅನೋಕಾ ಕೌಂಟಿ-ಬ್ಲೇನ್ ವಿಮಾನ ನಿಲ್ದಾಣಕ್ಕೆ ತೆರಳಿತ್ತು. ಮಾರ್ಗಮಧ್ಯೆ ವಿಮಾನ ತಾಂತ್ರಿಕ ಸಮಸ್ಯೆಯಿಂದಾಗಿ ಜನವಸತಿ ಕಟ್ಟಡಕ್ಕೆ ಢಿಕ್ಕಿಯಾಗಿದೆ.

ಅಮೆರಿಕದಲ್ಲಿ ವಿಮಾನ ಪತನ Read More

ಮ್ಯಾನ್ಮಾರ್ ನಲ್ಲಿ ಇಂದು ಮತ್ತೆ ಕಂಪಿಸಿದ ಭೂಮಿ

ಮ್ಯಾನ್ಮಾರ್: ಪ್ರಕೃತಿಯ ರಕ್ಕಸತನದಿಂದ ಸಾವಿರಕ್ಕೂ ಅಧಿಕ ಜನರು ಸಾವಿಗೀಡಾಗಿರುವ ಮ್ಯಾನ್ಮಾರ್‌​ನಲ್ಲಿ ಶನಿವಾರ ಮತ್ತೆ ಭೂಮಿ ಕಂಪಿಸಿದ್ದು ಜನ ಭಯದಿಂದ ಹೊರಗೆ ಓಡಿ ಬಂದಿದ್ದಾರೆ.

ಇಂದು ಮಧ್ಯಾಹ್ನ 2.50 ರ ಸುಮಾರಿಗೆ ಭೂಮಿ ಅಲುಗಾಡಿದ್ದು, ರಿಕ್ಟರ್​ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ ಎಂದು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

10 ಕಿಮೀ ಆಳದಲ್ಲಿ ಕಂಪನದ ಅಲೆಗಳು ಎದ್ದಿವೆ ಎಂದು ತನ್ನ ಎಕ್ಸ್​ ಖಾತೆಯಲ್ಲಿ ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪೋಸ್ಟ್​ ಹಂಚಿಕೊಂಡಿದೆ. ಶುಕ್ರವಾರವಷ್ಟೇ 7.7 ರ ತೀವ್ರತೆಯಲ್ಲಿ ಭೂಮಿ ಕಂಪಿಸಿ ಮುಗಿಲೆತ್ತರದ ಕಟ್ಟಡಗಳು, ಸೇತುವೆಗಳು ನೆಲಸಮವಾಗಿದ್ದವು, ಇದರ ಬೆನ್ನಲ್ಲೇ ಮತ್ತೆ ಭೂಮಿ ಕಂಪಿಸಿದೆ.

ಮ್ಯಾನ್ಮಾರ್‌ನಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1 ಸಾವಿರ ಗಡಿ ದಾಟಿದೆ. 2,376 ಜನರು ಗಾಯಗೊಂಡಿದ್ದಾರೆ. ಕುಸಿದ ಹಲವಾರು ಕಟ್ಟಡಗಳ ಅವಶೇಷಗಳಿಂದ ಶವಗಳನ್ನು ಹೊರತೆಗೆಯಲಾಗುತ್ತಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಮ್ಯಾನ್ಮಾರ್ ನಲ್ಲಿ ಇಂದು ಮತ್ತೆ ಕಂಪಿಸಿದ ಭೂಮಿ Read More

ಮ್ಯಾನ್ಮಾರ್‌ನಲ್ಲಿ ಪ್ರಬಲ ಭೂಕಂಪ

ಬ್ಯಾಂಕಾಕ್:‌ ಮ್ಯಾನ್ಮಾರ್‌ನಲ್ಲಿ ಎರಡೆರಡು ಬಾರಿ ಪ್ರಬಲ ಭೂಕಂಪ ಸಂಭವಿಸಿದ್ದು ಇದು ಸೂರ್ಯಗ್ರಹಣದ ಎಫೆಕ್ಟ್ ಎಂದು ಹೇಳಲಾಗುತ್ತಿದೆ.

ಮೊದಲ ಭೂಕಂಪ ಸಂಭವಿಸಿದ 15 ನಿಮಿಷಗಳಲ್ಲೇ ಮತ್ತೆ ಭೂಕಂಪ ಸಂಭವಿಸಿದೆ.

ರಿಕ್ಷರ್‌ ಮಾಪಕದಲ್ಲಿ ಮೊದಲ ಬಾರಿ ಭೂಕಂಪದ ತೀವ್ರತೆ 7.7, 2ನೇ ಬಾರಿಗೆ 6.4 ತೀವ್ರತೆ ದಾಖಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಇದರಿಂದ ಮಯನ್ಮಾರ್ ಗಡಿ ದೇಶವಾಗಿರುವ ಭಾರತದ ನವದೆಹಲಿ ಯಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಬೆಳಿಗ್ಗೆ 11.50ರ ಸುಮಾರಿಗೆ ಭೂಮಿಯ 10 ಕಿ.ಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ ಕೆಲ ಕಟ್ಟಡಗಳು
ಉರುಳಿವೆ.

ಮ್ಯಾನ್ಮಾರ್‌ನಲ್ಲಿ ಭೂಕಂಪ ಸಂಭವಿಸಿದ ಎಫೆಕ್ಟ್‌ ಬ್ಯಾಂಕಾಕ್‌ಗೂ ತಟ್ಟಿದೆ. ಬ್ಯಾಂಕಾಕ್ ಹಾಗೂ ಥೈಲ್ಯಾಂಡ್‌ನಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ. ಕಟ್ಟಡಗಳು ಅಲುಗಾಡಿವೆ, ಕೆಲವಡೆ ಮುಗಿಲೆತ್ತರದ ಕಟ್ಟಗಳು ಧ್ವಂಸವಾದ ದೃಶ್ಯಗಳು ಸೆರೆಯಾಗಿವೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಸಾಮಾಜಿಕ ಜಾಲತಾಣದಲ್ಲಿ ಭೂಕಂಪದ ತೀವ್ರತೆ ಬಗ್ಗೆ ಮಾಹಿತಿ ನೀಡಿದೆ.

ಬ್ಯಾಂಕಾಕ್‌ನಲ್ಲಿ ಭೂಕಂಪದ ಅನುಭವವಾದ ನಂತರ ಕಟ್ಟಡದ ಮೇಲ್ಛಾವಣಿಯಲ್ಲಿದ್ದ ಟ್ಯಾಂಕ್‌ನಿಂದ ನೀರು ಕೆಳಗೆ ಬೀಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮ್ಯಾನ್ಮಾರ್ ಕೇಂದ್ರಬಿಂದು ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಿಂದ 10 ಕಿ.ಮೀ ದೂರ ವ್ಯಾಪ್ತಿಯಲ್ಲಿ ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿ ನಿರ್ಮಾಣ ಹಂತದಲ್ಲಿದ್ದ 30 ಅಂತಸ್ತಿನ ಗಗನಚುಂಬಿ ಕಟ್ಟಡ ಕುಸಿದು 43 ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ಮತ್ತು ವೈದ್ಯರು ತಿಳಿಸಿದ್ದಾರೆ. ಬಲವಾದ ಭೂಕಂಪದಿಂದ ನಗರವು ನಲುಗಿಹೋಗಿದೆ.

ಥಾಯ್ ರಾಜಧಾನಿಯ ಉತ್ತರದಲ್ಲಿರುವ ಕಟ್ಟಡವು ಕೆಲವೇ ಸೆಕೆಂಡುಗಳಲ್ಲಿ ಉರುಳಿಬಿದ್ದಿವೆ, ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಇಂದು ಮಧ್ಯಾಹ್ನ ಸಾಗೈಂಗ್ ನಗರದ ವಾಯುವ್ಯಕ್ಕೆ 7.7 ತೀವ್ರತೆಯ ಕಂಪನವು ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಕೆಲವೇ ನಿಮಿಷಗಳ ನಂತರ ಅದೇ ಪ್ರದೇಶದಲ್ಲಿ 6.4 ತೀವ್ರತೆಯ ನಂತರದ ಭೂಕಂಪ ಮತ್ತೆ ಸಂಭವಿಸಿದೆ, ಥಾಯ್ ಅಧಿಕಾರಿಗಳು ಬ್ಯಾಂಕಾಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಎಂದು ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ತಿಳಿಸಿದ್ದಾರೆ.

ಮ್ಯಾನ್ಮಾರ್ ರಾಜಧಾನಿ ನೇಪಿಡಾವ್‌ನಲ್ಲಿ ಕಟ್ಟಡಗಳಿಂದ ಛಾವಣಿಗಳು ಬಿದ್ದು, ರಸ್ತೆಗಳು ಕುಸಿದುಹೋದ ಬಗ್ಗೆ ‌ವರದಿಯಾಗಿದೆ, ಇದು 20 ಲೇನ್‌ಗಳ ಅಗಲದ ಹೆದ್ದಾರಿಗಳನ್ನು ಹೊಂದಿರುವ ವಿಸ್ತಾರವಾದ ನಗರವಾಗಿದೆ. ಸಮವಸ್ತ್ರ ಧರಿಸಿದ ಸಿಬ್ಬಂದಿ ಹೊರಗೆ ಓಡಿಹೋದಾಗ ಸೀಲಿಂಗ್‌ನಿಂದ ತುಂಡುಗಳು ಬಿದ್ದಿದೆ, ಗೋಡೆಗಳು ಬಿರುಕು ಬಿಟ್ಟಿವೆ ಅವರಲ್ಲಿ ಕೆಲವರು ನಡುಗುತ್ತಾ ಕಣ್ಣೀರು ಸುರಿಸುತ್ತಿದ್ದಾರೆ.

ಭೂಕಂಪದ ನಂತರ ಸಾವುನೋವುಗಳ ಬಗ್ಗೆ ತಕ್ಷಣದ ವರದಿಗಳಿಲ್ಲ ಆದರೆ ಅವು ಉತ್ತರ ಥೈಲ್ಯಾಂಡ್‌ನ ಹತ್ತಿರದ ನಗರಗಳಲ್ಲಿ ಮತ್ತು ರಾಜಧಾನಿ ಬ್ಯಾಂಕಾಕ್‌ನಲ್ಲಿ ಭೀತಿಯನ್ನುಂಟುಮಾಡಿದೆ.

ಭೂಕಂಪವು ಬ್ಯಾಂಕಾಕ್‌ನಲ್ಲಿ ಕಟ್ಟಡಗಳಿಗೆ ಹಾನಿಯನ್ನುಂಟುಮಾಡಿದ್ದು, ನಗರದಲ್ಲಿ ಕೆಲವು ಮೆಟ್ರೋ ಮತ್ತು ಲಘು ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಚೀನಾದ ನೈಋತ್ಯ ಯುನ್ನಾನ್ ಪ್ರಾಂತ್ಯದಲ್ಲಿಯೂ ರಿಕ್ಟರ್ ಮಾಪಕದಲ್ಲಿ 7.9 ತೀವ್ರತೆಯ ಕಂಪನ ಸಂಭವಿಸಿದೆ.

ಮ್ಯಾನ್ಮಾರ್‌ನಲ್ಲಿ ಪ್ರಬಲ ಭೂಕಂಪ Read More

ಪಾಕ್ ಜೈಲಿನಲ್ಲಿ ಬಂಧಿಯಾಗಿದ್ದ ಭಾರತೀಯ ಮೀನುಗಾರ ಆತ್ಮಹತ್ಯೆ

ಕರಾಚಿ: ಕರಾಚಿಯ ಮಾಲಿರ್ ಜೈಲಿನಲ್ಲಿ ಭಾರತೀಯ ಮೀನುಗಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗೌರವ್ ರಾಮ್ ಆನಂದ್(52) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಲ್ಲಿನ‌ ಮಾಧ್ಯಮವೊಂದು ವರದಿ ಮಾಡಿದೆ.

ಅಕ್ರಮವಾಗಿ ಪಾಕಿಸ್ತಾನದ ಜಲಗಡಿ ಪ್ರವೇಶಿಸಿದ ಆರೋಪದ ಮೇಲೆ ಫೆಬ್ರವರಿ 2022 ರಲ್ಲಿ ಬಂಧಿಸಲ್ಪಟ್ಟಿದ್ದ ಆನಂದ್ ಅವರು ಜೈಲಿನ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಮಾಲಿರ್ ಜೈಲಿನ ಸೂಪರಿಂಟೆಂಡೆಂಟ್ ಅರ್ಷದ್ ಹುಸೇನ್ ಅವರು ಈ ಘಟನೆಯನ್ನು ದೃಢಪಡಿಸಿದ್ದು, ಕೈದಿ ಶೌಚಾಲಯಕ್ಕೆ ಹೋಗಿದ್ದ ವೇಳೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಜೈಲಿನ ಕರ್ತವ್ಯ ನಿರತ ವೈದ್ಯರು ಬೆಳಗಿನ ಜಾವ 2.20 ಕ್ಕೆ ಆನಂದ್ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಮ್ಯಾಜಿಸ್ಟ್ರೇಟ್, ಮುಂದಿನ ಕಾನೂನು ಕ್ರಮಗಳು ಮುಗಿಯುವವರೆಗೆ ಅವರ ದೇಹವನ್ನು ಸೊಹ್ರಾಬ್ ಗೋತ್‌ನಲ್ಲಿರುವ ಈಧಿ ಫೌಂಡೇಶನ್‌ನ ಕೋಲ್ಡ್ ಸ್ಟೋರೇಜ್ ಸ್ಥಳಾಂತರಿಸಲು ಆದೇಶಿಸಿದ್ದಾರೆ.

ಪಾಕ್ ಜೈಲಿನಲ್ಲಿ ಬಂಧಿಯಾಗಿದ್ದ ಭಾರತೀಯ ಮೀನುಗಾರ ಆತ್ಮಹತ್ಯೆ Read More

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ ನಿರ್ದೇಶಕ ಭಾರತೀಯ ಮೂಲದ ವಿಜ್ಞಾನಿ

ವಾಷಿಂಗ್ಟನ್: ಅಮೆರಿಕದ ಉನ್ನತ ಆರೋಗ್ಯ ಸಂಶೋಧನೆ ಮತ್ತು ಧನಸಹಾಯ ಸಂಸ್ಥೆಗಳಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ನಿರ್ದೇಶಕರಾಗಿ ಭಾರತೀಯ ಮೂಲದ ವಿಜ್ಞಾನಿ ನೇಮಕವಾಗಿದ್ದಾರೆ.

ಭಾರತೀಯ-ಅಮೆರಿಕನ್ ವಿಜ್ಞಾನಿ ಜೈ ಭಟ್ಟಾಚಾರ್ಯ ಅವರ ನೇಮಕವನ್ನು ಅಮೆರಿಕಾ ಸೆನೆಟ್ ದೃಢಪಡಿಸಿದೆ.

ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಆರೋಗ್ಯ ನೀತಿಯ ಪ್ರಾಧ್ಯಾಪಕ ಭಟ್ಟಾಚಾರ್ಯ ಅವರು 53-47 ಮತಗಳಿಂದ ನಿರ್ದೇಶಕರಾಗಿ ದೃಢಪಟ್ಟಿದ್ದಾರೆ ಎಂದು ಯುಎಸ್ ಸೆನೆಟ್‌ನ ಅಧಿಕೃತ ವೆಬ್‌ಸೈಟ್ ತಿಳಿಸಿದೆ.

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಭಟ್ಟಾಚಾರ್ಯರನ್ನು 18 ನೇ ಎನ್‌ಐಎಚ್ ನಿರ್ದೇಶಕರಾಗಿ ನಾಮನಿರ್ದೇಶನ ಮಾಡಿದ್ದರು.

ಡಾ. ಭಟ್ಟಾಚಾರ್ಯ ಅವರು ರಾಬರ್ಟ್ ಎಫ್ ಕೆನಡಿ ಜೂನಿಯರ್ ಅವರ ಜೊತೆಗೆ ರಾಷ್ಟ್ರದ ವೈದ್ಯಕೀಯ ಸಂಶೋಧನೆಯನ್ನು ನಿರ್ದೇಶಿಸಲು ಮತ್ತು ಆರೋಗ್ಯವನ್ನು ಸುಧಾರಿಸುವ, ಜೀವಗಳನ್ನು ಉಳಿಸುವ ಪ್ರಮುಖ ಆವಿಷ್ಕಾರಗಳನ್ನು ಮಾಡಲು ಕೆಲಸ ಮಾಡುತ್ತಾರೆ ಎಂದು ಟ್ರಂಪ್ ಮಾಹಿತಿ ನೀಡಿದ್ದರು.

ಇದೀಗ ಡಾ. ಭಟ್ಟಾಚಾರ್ಯ ಅವರ ನೇಮಕ ಆವಿಷ್ಕಾರ ಮಾಡಲು ಪ್ರೇರಣೆಯಾಗಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ ನಿರ್ದೇಶಕ ಭಾರತೀಯ ಮೂಲದ ವಿಜ್ಞಾನಿ Read More