ದುಬೈನಲ್ಲಿ ಪಾಕಿಸ್ತಾನಿ ಪ್ರಜೆಯಿಂದ ದಾಳಿ: ಇಬ್ಬರು ತೆಲಂಗಾಣ ಯುವಕರು ಸಾವು

ದುಬೈ: ದುಬೈನ ಬೇಕರಿಯೊಂದರಲ್ಲಿ ಪಾಕಿಸ್ತಾನಿ ಪ್ರಜೆ ಧಾರ್ಮಿಕ ಘೋಷಣೆಗಳನ್ನು ಕೂಗಿ ದಾಳಿ ಮಾಡಿದ ಪರಿಣಾಮ ತೆಲಂಗಾಣದ ಇಬ್ಬರು ಸಾವನ್ನಪ್ಪಿದ್ದಾರೆ.

ಸಾವನ್ನಪ್ಪಿದವರನ್ನು ನಿರ್ಮಲ್​ ಜಿಲ್ಲೆಯ ಸೋನ ಗ್ರಾಮದ ಅಷ್ಟಪು ಪ್ರೇಮ್​ಸಾಗರ್​ (35), ಹಾಗೂ ನಿಜಾಮಾಬಾದ್​ನ ಶ್ರೀನಿವಾಸ್​ ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ‌ ಸಾಗರ್​ ಎಂಬಾತ‌ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರೇಮಸಾಗರ್​ ಕಳೆದ ಐದಾರು ವರ್ಷಗಳಿಂದ ಘಟನೆ‌ ನಡೆದ ಬೇಕರಿಯಲ್ಲಿ ಉದ್ಯೋಗಿಯಾಗಿದ್ದರು. ಎರಡು ವರ್ಷಗಳ ಹಿಂದೆ ಊರಿಗೆ ಬಂದು ಹೋಗಿದ್ದರಂತೆ.

ಪ್ರೇಮಸಾಗರನ ಪಾರ್ಥೀವ ಶರೀರವನ್ನು ಭಾರತಕ್ಕೆ ತರಲು ಸರ್ಕಾರ ಸಹಾಯ ಮಾಡಬೇಕು. ಹಾಗೂ ಪ್ರೇಮಸಾಗರ್​ ಅವರ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅವರಿಗೆ ನೆರವು ನೀಡಬೇಕು ಎಂದು ಅವರ ಚಿಕ್ಕಪ್ಪ
ಮನವಿ ಮಾಡಿದ್ದಾರೆ.

ಈ ಬಗ್ಗೆ ಕೇಂದ್ರ ಸಚಿವ ಕಿಶನ್​ ರೆಡ್ಡಿ ಅವರು
ದುಃಖ ವ್ಯಕ್ತಪಡಿಸಿದ್ದು, ಪಾರ್ಥೀವ ಶರೀರಗಳನ್ನು ಭಾರತಕ್ಕೆ ತರಲು ಸಹಾಯಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​. ಜೈಶಂಕರ್​ ಅವರೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿರುವ ಕಿಶನ್​ ರೆಡ್ಡಿ,ದುಬೈನಲ್ಲಿ ತೆಲಂಗಾಣದ ಇಬ್ಬರು ಯುವಕರು ಹತ್ಯೆಯಾಗಿರುವುದು ತೀವ್ರ ಆಘಾತ ತಂದಿದೆ. ಈ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್​ ಅವರ ಜೊತೆಗೆ ಮಾತನಾಡಿದ್ದೇನೆ. ಅವರು ದುಃಖಿತ ಕುಟುಂಬಗಳಿಗೆ ಸಂಪೂರ್ಣ ಬೆಂಬಲ ನೀಡುವ ಹಾಗೂ ಪಾರ್ಥೀವ ಶರೀರಗಳನ್ನು ತುರ್ತು ಭಾರತಕ್ಕೆ ತರಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ದುಬೈನಲ್ಲಿ ಪಾಕಿಸ್ತಾನಿ ಪ್ರಜೆಯಿಂದ ದಾಳಿ: ಇಬ್ಬರು ತೆಲಂಗಾಣ ಯುವಕರು ಸಾವು Read More

ತಲೆಮರೆಸಿಕೊಂಡಿದ್ದ ವಜ್ರ ವ್ಯಾಪಾರಿ ಮೆಹುಲ್​ ಚೋಕ್ಸಿ ಅರೆಸ್ಟ್

ಬೆಲ್ಜಿಯಂ​: ಭಾರತೀಯ ತನಿಖಾ ಸಂಸ್ಥೆಗಳ ಕೋರಿಕೆಯ ಮೇರೆಗೆ ತಲೆಮರೆಸಿಕೊಂಡಿದ್ದ ವಜ್ರ ವ್ಯಾಪಾರಿ ಮೆಹುಲ್​ ಚೋಕ್ಸಿಯನ್ನು ಬಂಧಿಸಲಾಗಿದೆ ಎಂದು ಬೆಲ್ಜಿಯಂ ಫೆಡರಲ್​ ಪಬ್ಲಿಕ್​ ಸರ್ವಿಸ್​ ತಿಳಿಸಿದೆ.

ಮೆಹುಲ್​ ಚೋಕ್ಸಿ ಅವರನ್ನು ಏಪ್ರಿಲ್​ 12 ರಂದು ಬಂಧಿಸಲಾಗಿದ್ದು, ಭಾರತೀಯ ಕೇಂದ್ರ ತನಿಖಾ ದಳ ಹಾಗೂ ಜಾರಿ ನಿರ್ದೇಶನಾಲಯ ಈಗಾಗಲೇ ಆತನನ್ನು ಬೆಲ್ಜಿಯನಿಂದ ಹಸ್ತಾಂತರಿಸುವಂತೆ ಮನವಿ ಸಲ್ಲಿಸಿದೆ ಎಂದು ಎಫ್​ಪಿಎಸ್ ಬಹಿರಂಗಪಡಿಸಿದೆ.

ಮುಂದಿನ ನ್ಯಾಯಾಂಗ ಪ್ರಕ್ರಿಯೆಗಳಿಗಾಗಿ ಅವರನ್ನು ಬಂಧಿಸಲಾಗಿದೆ. ಅವರ ಕಾನೂನು ಸಲಹೆಗಾರರನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಎಫ್​ಪಿಎಸ್​ ಹೇಳಿದೆ.

ಪ್ರಕರಣ ಕುರಿತು ಪ್ರಾಷಿಕ್ಯೂಷನ್​ ಸೇವೆಗಳು ನಡೆಯುತ್ತಿರುವ ಕಾರಣ, ಈ ಹಂತದಲ್ಲಿ ಯಾವುದೇ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನ 13,850 ಕೋಟಿ ರೂ. ಸಾಲ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಮೆಹುಲ್​ ಚೋಕ್ಸಿ 2018 ಜನವರಿ 2 ರಂದು ಭಾರತದಿಂದ ಪಲಾಯನ ಮಾಡಿದ್ದರು.

ಪಿಎನ್​ಬಿಗೆ 13000 ಕೋಟಿ ರೂ. ವಂಚನೆ ಆರೋಪ ಪ್ರಕರಣದಲ್ಲಿ ಮೆಹುಲ್​ ಚೋಕ್ಸಿ ಹಾಗೂ ಅವರ ಸೋದರಳಿಯ ನೀರವ್​ ಮೋದಿ ಅವರನ್ನು ಕೇಂದ್ರ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ಹುಡುಕುತ್ತಿತ್ತು.

65 ವರ್ಷದ ಚೋಕ್ಸಿ ‘ರೆಸಿಡೆನ್ಸಿ ಕಾರ್ಡ್’ ಪಡೆದು ಬೆಲ್ಜಿಯಂನ ಆಂಟ್ವೆರ್ಪ್‌ನಲ್ಲಿ ತನ್ನ ಪತ್ನಿ, ಬೆಲ್ಜಿಯಂನ ಪ್ರಜೆಯಾಗಿರುವ ಪ್ರೀತಿ ಚೋಕ್ಸಿ ಅವರೊಂದಿಗೆ ವಾಸಿಸುತ್ತಿದ್ದರು. ಇದೀಗ ಉದ್ಯಮಿ ಅನಾರೋಗ್ಯ ಮತ್ತು ಇತರ ಕಾರಣಗಳನ್ನು ಉಲ್ಲೇಖಿಸಿ ಜಾಮೀನು ಪಡೆಯಲು ಪ್ರಯತ್ನ ನಡೆಸಿದ್ದಾರೆ.

ಭಾರತದಿಂದ ಪಾಲಾಯಾನ ಮಾಡಿದ್ದ ನೀರವ್​ ಮೋದಿ ಯುಕೆ ಜೈಲಿನಲ್ಲಿದ್ದಾರೆ. 2019 ರಲ್ಲಿ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಲಾಗಿದೆ. ನೀರವ್​ ಮೋದಿ ಅವರನ್ನು ಹಸ್ತಾಂತರಿಸುವಂತೆ ಭಾರತ ಮನವಿ ಸಲ್ಲಿಸಿದೆ. ಈ ಹಸ್ತಾಂತರ ಪ್ರಕ್ರಿಯೆಯನ್ನು ಪ್ರಶ್ನಿಸಿ ನೀರವ್​ ಮೋದಿ ಸಲ್ಲಿಸಿರುವ ಅರ್ಜಿ ಕೋರ್ಟ್​ನಲ್ಲಿದೆ.

ತಲೆಮರೆಸಿಕೊಂಡಿದ್ದ ವಜ್ರ ವ್ಯಾಪಾರಿ ಮೆಹುಲ್​ ಚೋಕ್ಸಿ ಅರೆಸ್ಟ್ Read More

ಪವಿತ್ರ ಪಾಮ್ ಸಂಡೆ ದಿನ 20 ಜನಬಲಿ;ಉಕ್ರೇನ್‌ ಸುಮಿ ಮೇಲೆ ರಷ್ಯಾದ ಕ್ಷಿಪಣಿ ದಾಳಿ

ಉಕ್ರೇನ್: ಉಕ್ರೇನಿಯನ್ ನಗರದ ಸುಮಿ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ನಗರದ ಹಂಗಾಮಿ ಮೇಯರ್ ತಿಳಿಸಿದ್ದಾರೆ.

ಅದೂ ಪಾಮ್ ಸಂಡೆ ದಿನವೇ ಈ ದಾಳಿ ನಡೆದಿದೆ.

ಪಾಮ್ ಸಂಡೆ ಆಚರಿಸಲು ಸ್ಥಳೀಯರು ಒಟ್ಟಿಗೆ ಸೇರುತ್ತಿದ್ದಾಗ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು ನಗರದ ಹೃದಯಭಾಗಕ್ಕೆ ಅಪ್ಪಳಿಸಿವೆ.

ಈ ಪವಿತ್ರ ಪಾಮ್ ಸಂಡೆಯಂದು, ನಮ್ಮ ಸಮುದಾಯವು ಭೀಕರ ದುರಂತವನ್ನು ಅನುಭವಿಸಿದೆ ಎಂದು ಆರ್ಟೆಮ್ ಕೊಬ್ಜಾರ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಇಂಧನ ಮೂಲಸೌಕರ್ಯದ ಮೇಲಿನ ದಾಳಿಯನ್ನು ನಿಲ್ಲಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಿಕೊಂಡ ತಾತ್ಕಾಲಿಕ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ರಷ್ಯಾ ಮತ್ತು ಉಕ್ರೇನ್‌ನ ಉನ್ನತ ರಾಜತಾಂತ್ರಿಕರು ಪರಸ್ಪರ ಆರೋಪ ಮಾಡಿಕೊಂಡ ಒಂದು ದಿನದ ಬಳಿಕ ಈ ದಾಳಿ ನಡೆದಿದೆ.

ಮೂರು ವರ್ಷಗಳ ಯುದ್ಧವನ್ನು ಕೊನೆಗೊಳಿಸಲು ಮಾತುಕತೆಗಳಲ್ಲಿನ ವಿಫಲತೆಯನ್ನು ಇದು ಎತ್ತಿ ತೋರಿಸಿದೆ.

ಶನಿವಾರ ಮುಂಜಾನೆ ಉಕ್ರೇನ್‌ನ ಕೀವ್‌ನಲ್ಲಿರುವ ಭಾರತೀಯ ಔಷಧ ಕಂಪನಿಯ ಗೋದಾಮಿನ ಮೇಲೂ ರಷ್ಯಾ ಕ್ಷಿಪಣಿ ದಾಳಿ ನಡೆಸಿತ್ತು.

ಭಾರತವನ್ನು ತಮ್ಮ ಆಪ್ತಮಿತ್ರ ಎಂದು ಹೇಳಿಕೊಳ್ಳುತ್ತಾ, ಉಕ್ರೇನ್‌ನಲ್ಲಿರುವ ಭಾರತೀಯ ವ್ಯವಹಾರಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ ಎಂದು ಉಕ್ರೇನ್ ಆರೋಪಿಸಿದೆ.

ನಾಶವಾದ ಗೋದಾಮು ಉಕ್ರೇನ್‌ನ ಅತಿದೊಡ್ಡ ಔಷಧ ಕಂಪನಿಗಳಲ್ಲಿ ಒಂದಾದ ಕುಸುಮ್ ಎಂಬ ಔಷಧ ಕಂಪನಿಗೆ ಸೇರಿದ್ದು, ಕುಸುಮ್ ಹೆಲ್ತ್‌ಕೇರ್ ಮಾನವೀಯ ಉದ್ದೇಶಗಳಿಗಾಗಿ ಬಳಸಲಾಗುವ ಅಗತ್ಯ ವೈದ್ಯಕೀಯ ಸರಬರಾಜುಗಳನ್ನು ಸಂಗ್ರಹಿಸುತ್ತಿತ್ತು. ಭಾರತೀಯ ಉದ್ಯಮಿ ರಾಜೀವ್ ಗುಪ್ತಾ ಈ ಕಂಪನಿಯ ಮಾಲೀಕರಾಗಿದ್ದಾರೆ.

ಪವಿತ್ರ ಪಾಮ್ ಸಂಡೆ ದಿನ 20 ಜನಬಲಿ;ಉಕ್ರೇನ್‌ ಸುಮಿ ಮೇಲೆ ರಷ್ಯಾದ ಕ್ಷಿಪಣಿ ದಾಳಿ Read More

ಮೆಲ್ಬೋರ್ನ್ ನಲ್ಲಿರುವ ಭಾರತೀಯ ದೂತವಾಸ ಕಚೇರಿಗೆ ಹಾನಿ

ಮೆಲ್ಬೋರ್ನ್: ಆಸ್ಟ್ರೇಲಿಯಾ ಮೆಲ್ಬೋರ್ನ್ ನಲ್ಲಿರುವ ಭಾರತೀಯ ದೂತವಾಸ ಕಚೇರಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.

ಇದರಿಂದಾಗಿ ಅಲ್ಲಿನ ಭಾರತೀಯರಲ್ಲಿ ಆತಂಕ ಮನೆಮಾಡಿದೆ.

ಭಾರತೀಯ ದೂತವಾಸ ಕಚೇರಿ ಆವರಣದ ಮುಂಭಾಗದ ಪ್ರವೇಶದ್ವಾರದಲ್ಲಿ ಇರುವ
ಫಲಕಗಳ ಮೇಲೆ ಕಿಡಿಗೇಡಿಗಳು ಗೀಚುವ ಮೂಲಕ ಹಾನಿ ಮಾಡಿದ್ದಾರೆ.

ಕಿಡಿಗೇಡಿಗಳ ಈ ಕೃತ್ಯದ ಬಗ್ಗೆ ಕ್ಯಾನ್‌ಬೆರಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಆಸ್ಟ್ರೇಲಿಯಾ ಸರಕಾರಕ್ಕೆ ದೂರು ಸಲ್ಲಿಸಿದೆ.

ಮೆಲ್ಬರ್ನ್ ನಲ್ಲಿ ಹಿಂದೂ ದೇವಾಲಯಗಳು ಮತ್ತು ಕಚೇರಿಗಳ ಮೇಲೆ ನಿರಂತರ ದಾಳಿ ನಡೆಯುತ್ತಿರುವುದರಿಂದ ಭಾರತ ಮೂಲದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮೆಲ್ಬೋರ್ನ್ ನಲ್ಲಿರುವ ಭಾರತೀಯ ದೂತವಾಸ ಕಚೇರಿಗೆ ಹಾನಿ Read More

ಹಡ್ಸನ್ ನದಿಗೆ ಹೆಲಿಕಾಪ್ಟರ್ ಅಪ್ಪಳಿಸಿ 6ಮಂದಿ ಸಾ*ವು

ನ್ಯೂಯಾರ್ಕ್: ಹೆಲಿಕಾಪ್ಟರ್ ಪತನಗೊಂಡು‌ ನದಿಗೆ ಬಿದ್ದ ಪರಿಣಾಮ ಪೈಲಟ್‌ ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಘಟನೆ ನ್ಯೂಯಾರ್ಕ್‌ನಲ್ಲಿ ನಡೆದಿದೆ.

ಮೃತರಲ್ಲಿ ನಾಲ್ವರು ಸ್ಪ್ಯಾನಿಷ್ ಮೂಲದ ಒಂದೇ ಕುಟುಂಬದವರಾಗಿದ್ದು, ಪ್ರವಾಸಕ್ಕಾಗಿ ನ್ಯೂಯಾರ್ಕ್‌ಗೆ ಬಂದಿದ್ದರು. ಮೃತಪಟ್ಟವರಲ್ಲಿ ಮೂವರು ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ಮಧ್ಯಾಹ್ನ ಪಿಯರ್ 40ರಲ್ಲಿ ಸಂಭವಿಸಿದ ಘಟನೆಯಲ್ಲಿ ಬೆಲ್ 206L-4 ಲಾಂಗ್‌ರೇಂಜರ್ IV ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ.

ಲೋವರ್​​ ಮ್ಯಾನ್‌ಹ್ಯಾಟನ್‌ನಿಂದ ಹೊರಟ ಹೆಲಿಕಾಪ್ಟರ್​​, ಲಿಬರ್ಟಿ ಪ್ರತಿಮೆಯನ್ನು ಸುತ್ತು ಹಾಕಿದ ಬಳಿಕ, ಉತ್ತರಕ್ಕೆ ಹಡ್ಸನ್ ನದಿಯ ಮೇಲಿಂದ ಜಾರ್ಜ್ ವಾಷಿಂಗ್ಟನ್ ಬ್ರಿಡ್ಜ್​​ನತ್ತ ಹೊರಟಿದೆ, ಏಕಾಏಕಿ ದಕ್ಷಿಣಕ್ಕೆ ತಿರುಗಿದ ಹೆಲಿಕಾಪ್ಟರ್ ನ್ಯೂಜೆರ್ಸಿ ಬಳಿ ನದಿಗೆ ಅಪ್ಪಳಿಸಿದೆ.

ಹೆಲಿಕಾಪ್ಟರ್‌ ಪತನದ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಡಿಯೋದಲ್ಲಿ ಬೆಲ್ 206 ಹೆಲಿಕಾಪ್ಟರ್‌ನ ಪತನಗೊಂಡ ಭಾಗಗಳು ಹಡ್ಸನ್ ನದಿಗೆ ಬೀಳುವುದು ಕಾಣುತ್ತದೆ.

ಹಡ್ಸನ್ ನದಿಗೆ ಹೆಲಿಕಾಪ್ಟರ್ ಅಪ್ಪಳಿಸಿ 6ಮಂದಿ ಸಾ*ವು Read More

ವಿಜಯ ಮಲ್ಯಗೆ ಲಂಡನ್‌ ಹೈಕೋರ್ಟ್‌ನಲ್ಲಿ ಭಾರೀ ಹಿನ್ನಡೆ

ಲಂಡನ್‌: ಎಸ್‌ಬಿಐ ಸೇರಿ ಭಾರತೀಯ
ಬ್ಯಾಂಕ್‌ಗಳಿಗೆ ವಂಚಿಸಿ ಪರಾರಿಯಾಗಿದ ಉದ್ಯಮಿ ವಿಜಯ ಮಲ್ಯಗೆ ಲಂಡನ್‌ ಹೈಕೋರ್ಟ್‌ನಲ್ಲಿ ಭಾರೀ ಹಿನ್ನಡೆಯಾಗಿದೆ.

ಬ್ಯಾಂಕ್‌ಗಳ ಒಕ್ಕೂಟ ತಮ್ಮನ್ನು ದಿವಾಳಿ ಎಂದು ಪರಿಗಣಿಸಿದ್ದನ್ನು ಪ್ರಶ್ನಿಸಿ ಮಲ್ಯ ಪ್ರಶ್ನಿಸಿದ್ದ ಅರ್ಜಿಯನ್ನು ಲಂಡನ್ ಹೈಕೋರ್ಟ್ ತಿರಸ್ಕರಿಸಿದೆ. ಕಿಂಗ್‌ಫಿಶ‌ರ್ ಏರ್‌ಲೈನ್ಸ್ ಪತನಗೊಂಡ ಬಳಿಕ ಮಲ್ಯ ಲಂಡನ್‌ಗೆ ಪರಾರಿಯಾಗಿ ನೆಲೆಸಿದ್ದರೆಂದು ಆರೋಪಿಸಲಾಗಿದೆ.

ಬ್ಯಾಂಕ್‌ಗಳ ಒಕ್ಕೂಟಕ್ಕೆ 11,000 ಕೋಟಿ ರೂ. ಸಾಲ ಬಾಕಿ ಉಳಿಸಿದ್ದಾರೆಂಬ ಆರೋಪ ಮಲ್ಯ ಮೇಲಿದೆ. ಹೀಗಾಗಿ, ಮಲ್ಯ ಅವರನ್ನು ದಿವಾಳಿ ಎಂದು ಘೋಷಿಸಿ ಆಸ್ತಿ ವಶಪಡಿಸಿಕೊಳ್ಳಬೇಕು ಎಂದು ಬ್ಯಾಂಕ್‌ಗಳು ತೀರ್ಮಾನಿಸಿದ್ದವು.

ಅಲ್ಲದೆ ಬ್ರಿಟನ್‌ನಲ್ಲಿಯೂ ಕೂಡ ಬ್ಯಾಂಕ್‌ಗಳ ಒಕ್ಕೂಟ ಕಾನೂನು ಹೋರಾಟ ನಡೆಸಿದ್ದವು. 2021ರಲ್ಲಿ ಮಲ್ಯರನ್ನು ಬ್ರಿಟನ್‌ ಕೋರ್ಟ್ ದಿವಾಳಿ ಎಂದು ಘೋಷಿಸಿತ್ತು. ಅದನ್ನು ಪ್ರಶ್ನಿಸಿ ಮಲ್ಯ ಮೇಲ್ಮನವಿ ಸಲ್ಲಿಸಿದ್ದರು.

ಬ್ಯಾಂಕ್‌ಗಳು ಈಗಾಗಲೇ ಸಾಲದ ಮೊತ್ತಕ್ಕೆ ಸರಿದೂಗುವಷ್ಟು ಮಲ್ಯ ಅವರ ಆಸ್ತಿಯನ್ನು ವಶಪಡಿಸಿಕೊಂಡಿವೆ.

ವಿಜಯ ಮಲ್ಯಗೆ ಲಂಡನ್‌ ಹೈಕೋರ್ಟ್‌ನಲ್ಲಿ ಭಾರೀ ಹಿನ್ನಡೆ Read More

ಡೊಮಿನಿಕನ್ ರಾಜಧಾನಿಯಲ್ಲಿ ಘೋರ ದುರಂತ:ಛಾವಣಿ ಕುಸಿದು 90 ಮಂದಿ ಸಾ*ವು

ಸ್ಯಾಂಟೊ ಡೊಮಿಂಗೊ: ಡೊಮಿನಿಕನ್ ರಾಜಧಾನಿಯಲ್ಲಿ ಘೋರ ದುರಂತ ಸಂಭವಿಸಿದ್ದು,90 ಕ್ಕೂ ಹೆಚ್ವು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.

ಐಕಾನಿಕ್ ನೈಟ್‌ಕ್ಲಬ್‌ನ ಛಾವಣಿ ಕುಸಿದು ಕನಿಷ್ಠ 90 ಸಾವನ್ನಪ್ಪಿದ್ದಾರೆ, 160ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರತಿಷ್ಠಿತ ನೈಟ್​ ಕ್ಲಬ್​​​ ನಲ್ಲಿ ನಡೆಯುತ್ತಿದ್ದ ಮೆರೆಂಗ್ಯೂ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ರಾಜಕಾರಣಿಗಳು, ಕ್ರೀಡಾಪಟುಗಳು ಮತ್ತು ಇತರೆ ಗಣ್ಯರು ಭಾಗವಹಿಸಿದ್ದರು.

ಜೆಟ್ ಸೆಟ್ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ದುರಂತದಲ್ಲಿ ಜನಪ್ರಿಯ ಗಾಯಕ, ಪ್ರಾಂತೀಯ ಗವರ್ನರ್ ಮತ್ತು ಇಬ್ಬರು ಮಾಜಿ ಮೇಜರ್ ಲೀಗ್‌ನ ಬೇಸ್‌ಬಾಲ್ (Baseball) ಆಟಗಾರರಾದ ಆಕ್ಟೇವಿಯೊ ಡೋಟೆಲ್ ಮತ್ತು ಟೋನಿ ಬ್ಲಾಂಕೊ ಮೃತಪಟ್ಟಿದ್ದಾರೆ.

ಸ್ಯಾಂಟೊ ಡೊಮಿಂಗೊದಲ್ಲಿನ ಒಂದು ಅಂತಸ್ತಿನ ಜೆಟ್ ಸೆಟ್ ನೈಟ್‌ಕ್ಲಬ್‌ನ ಅವಶೇಷಗಳಡಿ ಬದುಕುಳಿದು ಗಾಯಗೊಂಡವರ ರಕ್ಷಣೆಗೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ ಎಂದು ತುರ್ತು ಕಾರ್ಯಾಚರಣೆಗಳ ನಿರ್ದೇಶಕ ಜುವಾನ್ ಮ್ಯಾನುಯೆಲ್ ಮೆಂಡೆಜ್ ತಿಳಿಸಿದ್ದಾರೆ.

ನೈಟ್‌ಕ್ಲಬ್‌ನ ಛಾವಣಿ ಕುಸಿದು ಸುಮಾರು 12 ಗಂಟೆಗಳ ನಂತರ ರಕ್ಷಣಾ ಸಿಬ್ಬಂದಿಗಳು ಅವಶೇಷಗಳಡಿಯಿಂದ ಬದುಕುಳಿದವರನ್ನು ಹೊರತೆಗೆಯುತ್ತಿದ್ದಾರೆ. ಅಗ್ನಿಶಾಮಕ ದಳದವರು ಮುರಿದ ಕಾಂಕ್ರೀಟ್‌ ಬ್ಲಾಕ್‌ಗಳನ್ನು ತೆಗೆದು ಹಾಕುತ್ತಿದ್ದಾರೆ.

ರಕ್ಷಣಾ ಸಿಬ್ಬಂದಿ ಕ್ಲಬ್‌ನಲ್ಲಿನ ಮೂರು ಪ್ರದೇಶಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಮೆಂಡೆಜ್ ಮಾಹಿತಿ ನೀಡಿದ್ದಾರೆ.

ಡೊಮಿನಿಕನ್ ರಾಜಧಾನಿಯಲ್ಲಿ ಘೋರ ದುರಂತ:ಛಾವಣಿ ಕುಸಿದು 90 ಮಂದಿ ಸಾ*ವು Read More

ಯುರೋಪ್​ನ ಪ್ರಮುಖ ನದಿಗಳಲ್ಲೂಆತಂಕಕಾರಿ ಮೈಕ್ರೋಪ್ಲಾಸ್ಟಿಕ್ ಪತ್ತೆ

ಯುರೋಪ್​: ನಮ್ಮ ದೇಶದಲ್ಲಷ್ಟೇ ಅಲ್ಲಾ,ಸ್ವಚ್ಛ ನಗರಗಳಲ್ಲಿ ಒಂದಾದ ಯುರೋಪ್​ನ ಪ್ರಮುಖ ನದಿಗಳಲ್ಲೂ ಕಲುಶಿತ ಕಂಡು ಬಂದಿದೆ.

ಅಲ್ಲಿನ ನದಿಗಳಲ್ಲಿ ಆತಂಕಕಾರಿ ಮಟ್ಟದ ಮೈಕ್ರೋಪ್ಲಾಸ್ಟಿಕ್​ ಇರುವುದಾಗಿ ವಿಜ್ಞಾನಿಗಳು ನಡೆಸಿದ ಅಧ್ಯಯನಗಳಲ್ಲಿ ಬಯಲಾಗಿದೆ.

ವಿಜ್ಞಾನಿಗಳು ನಡೆಸಿದ 14 ಅಧ್ಯಯನಗಳು ನಿನ್ನೆ ಏಕಕಾಲದಲ್ಲಿ ಪ್ರಕಟವಾಗಿದ್ದು, ಎಲ್ಲ ಅಧ್ಯಯನಗಳು ಈ ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿವೆ.

ಯುರೋಪ್​ನ ಎಲ್ಲಾ ನದಿಗಳು ಮಲಿನಗೊಂಡಿರುವುದು ಅಧ್ಯಯನದಲ್ಲಿ ಗೊತ್ತಾಗಿದೆ ಎಂದು ಥೇಮ್ಸ್​ನಿಂದ ಟೈಬರ್​ವರೆಗಿನ ಒಂಬತ್ತು ಪ್ರಮುಖ ನದಿಗಳಲ್ಲಿ ದೊಡ್ಡ ಪ್ರಮಾಣದ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಫ್ರೆಂಚ್​ ವಿಜ್ಞಾನಿ ಜೀನ್​ – ಫ್ರಾಂಕೋಯಿಸ್​ ಘಿಗ್ಲಿಯೋನ್​ ತಿಳಿಸಿದ್ದಾರೆ.

ಪರಿಸರ ವಿಜ್ಞಾನ ಮತ್ತು ಮಾಲಿನ್ಯ ಸಂಶೋಧನಾ ಜರ್ನಲ್‌ನಲ್ಲಿ ಪ್ರಕಟವಾದ ವರದಿಯಲ್ಲಿ, ಮಲಿನಗೊಂಡಿರುವ ನದಿಗಳೆಲ್ಲದರಲ್ಲೂ ಸರಾಸರಿ ಪ್ರತಿ ಘನ ಮೀಟರ್ ನೀರಿಗೆ 3 ಮೈಕ್ರೋಪ್ಲಾಸ್ಟಿಕ್‌ ಗಳಿರುವುದು ಗೊತ್ತಾಗಿದೆ.

ವಿಶ್ವದ ಅತ್ಯಂತ ಕಲುಷಿತ ನದಿಗಳಾದ ಯೆಲ್ಲೋ ನದಿ, ಯಾಂಗ್ಟ್ಜೆ, ಮೆಕಾಂಗ್, ಗಂಗಾ, ನೈಲ್, ನೈಜರ್, ಸಿಂಧೂ, ಅಮುರ್, ಪರ್ಲ್ ಮತ್ತು ಹೈ ಗಳಲ್ಲಿ ಪ್ರತಿ ಘನ ಮೀಟರ್‌ಗೆ 40 ಮೈಕ್ರೋಪ್ಲಾಸ್ಟಿಕ್‌ಗಳಿರುವುದು ಈ ಹಿಂದಿನ ಹಲವು ಅಧ್ಯಯನ ವರದಿಗಳಿಂದ ತಿಳಿದು ಬಂದಿದೆ.

ಅತ್ಯಂತ ಕಲುಷಿತ 10 ನದಿಗಳು, ಹೆಚ್ಚಿನ ಪ್ಲಾಸ್ಟಿಕ್ ಉತ್ಪಾದಿಸುವ ಅಥವಾ ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಿಸುವ ದೇಶಗಳಲ್ಲಿ ಹರಿಯುತ್ತವೆ. ಆದರೆ, ಈ ಸಂಖ್ಯೆಗೆ ಹೋಲಿಸಿದರೆ ಯುರೋಪ್​ನ ನದಿಗಳು ಕಲುಷಿತ ಮಟ್ಟದಲ್ಲಿ ಬಹಳ ದೂರ ಇವೆ.

ಸೆಕೆಂಡಿಗೆ ಪ್ಲಾಸ್ಟಿಕ್​ 3000 ಕಣಗಳು: ಫ್ರಾನ್ಸ್​ನ ವ್ಯಾಲೆನ್ಸ್​ನಲ್ಲಿರುವ ರೋನ್​ ನದಿಯ ವೇಗದ ಹರಿವಿನಲ್ಲಿ ಪ್ರತಿ ಸೆಕೆಂಡಿಗೆ 3000 ಪ್ಲಾಸ್ಟಿಕ್​ ಕಣಗಳಿದ್ದರೆ, ಪ್ಯಾರಿಸ್​ನ ಸೀನ್​ ನದಿಯಲ್ಲಿ ಪ್ರತಿ ಸೆಕೆಂಡಿಗೆ ಸುಮಾರು 900 ಪ್ಲಾಸ್ಟಿಕ್​ ಕಣಗಳು ಪತ್ತೆಯಾಗಿವೆ ಎಂದು ವಿಜ್ಞಾನಿ ಘಿಗ್ಲಿಯೋನ್​ ತಿಳಿಸಿದ್ದಾರೆ.

ಬರಿಗಣ್ಣಿಗೆ ಕಾಣದ ಮೈಕ್ರೋಪ್ಲಾಸ್ಟಿಕ್‌ಗಳ ದ್ರವ್ಯರಾಶಿ ಗೋಚರಿಸುವ ಮೈಕ್ರೋಪ್ಲಾಸ್ಟಿಕ್​ಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿವೆ ಎಂದೂ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

ಯುರೋಪ್​ನ ಪ್ರಮುಖ ನದಿಗಳಲ್ಲೂಆತಂಕಕಾರಿ ಮೈಕ್ರೋಪ್ಲಾಸ್ಟಿಕ್ ಪತ್ತೆ Read More

ಟ್ರಂಪ್‌ ತೆರಿಗೆ ಸಮರದಿಂದ ಷೇರುಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ

ವಾಶಿಂಗ್ಟನ್,ಏ.7: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರಂಭಿಸಿದ ತೆರಿಗೆ ಸಮರದಿಂದ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವಾಗಿದ್ದು, ಇಂದು ಒಂದೇ ದಿನ ಹೂಡಿಕೆದಾರರಿಗೆ 19 ಲಕ್ಷ ಕೋಟಿ ರೂ. ನಷ್ಟವಾಗಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಭಾರೀ ಪ್ರಮಾಣದಲ್ಲಿ ಹೂಡಿಕೆಯನ್ನು ಹಿಂದಕ್ಕೆ ಪಡೆದ ಕಾರಣ ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚಂಕ್ಯ ನಿಫ್ಟಿ ಭಾರೀ ಇಳಿಕೆ ಕಂಡಿದೆ.

ಸೆನ್ಸೆಕ್ಸ್‌ ಆರಂಭದಲ್ಲಿ 4 ಸಾವಿರ ಅಂಕ ಪತನಗೊಂಡು ನಂತರ ಚೇತರಿಕೆ ಕಂಡಿತ್ತು. ಬೆಳಗ್ಗೆ 11 ಗಂಟೆ ವೇಳೆಗೆ 2,900 ಅಂಕ ಚೇತರಿಕೆಯಾಗಿ 72,423.48 ರಲ್ಲಿ ವ್ಯವಹಾರ ನಡೆಸುತ್ತಿತ್ತು. ನಿಫ್ಟಿ 900 ಅಂಕ ಇಳಿಕೆಯಾಗಿ 21,960.80 ರಲ್ಲಿ ವ್ಯವಹಾರ ನಡೆಸುತ್ತಿದೆ. ರಿಯಾಲ್ಟಿ, ಐಟಿ, ಆಟೋ ಮತ್ತು ಲೋಹ ಮುಂತಾದ ಕ್ಷೇತ್ರಗಳ ಷೇರುಗಳ ಮೌಲ್ಯ ಇಳಿಕೆಯಾಗಿದೆ.

ಸೋಮವಾರ ಬೆಳಿಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಏಷ್ಯಾದ ಎಲ್ಲ ಮಾರುಕಟ್ಟೆಗಳಲ್ಲಿ ಭಾರೀ ಇಳಿಕೆಯಾಗಿತ್ತು.

ಗಿಫ್ಟ್‌ ನಿಫ್ಟಿಯೂ ಅಂಕ ಇಳಿಕೆಯಾಗುತ್ತಿದ್ದಂತೆ ಭಾರತದಲ್ಲೂ ಪರಿಣಾಮ ಬೀರುವುದು ಖಚಿತವಾಗಿತ್ತು. ಬೆಳಗ್ಗೆಯವರೆಗೆ 19 ಲಕ್ಷ ಕೋಟಿ ನಷ್ಟ ಸಂಭವಿಸಿದ್ದು ನಿಫ್ಟಿ ಮತ್ತು ಸೆನ್ಸೆಕ್ಸ್‌ ಮತ್ತಷ್ಟು ಕುಸಿದರೆ ನಷ್ಟದ ಪ್ರಮಾಣ ಮತ್ತಷ್ಟು ಏರಿಕೆಯಾಗಲಿದೆ.

ಗಿಫ್ಟಿ ನಿಫ್ಟಿ 888, ಜಪಾನ್‌ನ ನಿಕ್ಕಿ 225 2,302 ಅಂಕ, ತೈವಾನ್‌ನ ವೈಯ್ಟೆಡ್ ಸೂಚ್ಯಂಕವೂ 2063 ಅಂಶ ಕುಸಿಯಿತು. ಹಾಂಕಾಂಗ್‌ನ ಹ್ಯಾಂಗ್‌ಸೆನ್‌ 2,677 ಅಂಕ ಕುಸಿದಿದೆ.

ಶುಕ್ರವಾರದಿಂದಲೇ ಅಮೆರಿಕ ಮಾಧ್ಯಮಗಳು ಹೆಸರಿನಲ್ಲಿ ಸೋಮವಾರ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಲಿದೆ ಎಂದು ವರದಿಗಳು ಬಿತ್ತರಿಸಿದ್ದವು. ನಿರೀಕ್ಷೆಯಂತೆ ಸೋಮವಾರ ವಿಶ್ವದ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವಾಗಿದ್ದು ಹೂಡಿಕೆದಾರರಿಗೆ ಭಾರೀ ನಷ್ಟವಾಗಿದೆ.

ಟ್ರಂಪ್‌ ತೆರಿಗೆ ಸಮರದಿಂದ ಷೇರುಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ Read More

ಬ್ರಿಟಿಷ್ ಸ್ಯಾಂಡ್ ಮಾಸ್ಟರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಕಲಾವಿದ ಸುದರ್ಶನ್

ಲಂಡನ್,ಏ.6: ವಿಶ್ವವಿಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರಿಗೆ ಬ್ರಿಟಿಷ್ ಸ್ಯಾಂಡ್ ಮಾಸ್ಟರ್ ಪ್ರಶಸ್ತಿ ಲಭ್ಯವಾಗಿದ್ದು
ಈ ಪ್ರಶಸ್ತಿ ಪಡೆದ ಮೊಟ್ಟಮೊದಲ ಕಲಾವಿದ ಎಂಬ ಖ್ಯಾತಿಗೂ ಅವರು ಪಾತ್ರರಾಗಿದ್ದಾರೆ.

ಸುದರ್ಶನ್ ಪಟ್ನಾಯಕ್ ಅವರು
ಬ್ರಿಟನ್ ನಲ್ಲಿ ದಿ ಫ್ರೆಡ್ ಡ್ಯಾರಿಂಗ್ಟನ್ ಸ್ಯಾಂಡ್ ಮಾಸ್ಟರ್ ಪ್ರಶಸ್ತಿ ಪಡೆದಿದ್ದಾರೆ.

ದಕ್ಷಿಣ ಇಂಗ್ಲೆಂಡ್‌ನ ಡಾರ್ಸೆಟ್ ಕೌಂಟಿಯ ವೇಮೌತ್‌ನಲ್ಲಿ ಶನಿವಾರ ಪ್ರಾರಂಭವಾದ ಸ್ಯಾಂಡ್‌ವರ್ಲ್ಡ್ 2025 ಅಂತರರಾಷ್ಟ್ರೀಯ ಮರಳು ಕಲಾ ಉತ್ಸವದಲ್ಲಿ, ಮರಳು ಶಿಲ್ಪ ಕಲೆಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ ಪಟ್ನಾಯಕ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಪ್ರಕಟಿಸಲಾಯಿತು.

ಉತ್ಸವದಲ್ಲಿ ವೇಮೌತ್‌ನ ಮೇಯರ್ ಜಾನ್ ಒರೆಲ್ ಅವರು ಪಟ್ನಾಯಕ್ ಅವರಿಗೆ ಪ್ರಶಸ್ತಿ ಮತ್ತು ಪದಕವನ್ನು ಪ್ರದಾನ ಮಾಡಿದ್ದಾರೆ.

ಸುದರ್ಶನ್ ಪಟ್ನಾಯಕ್ ಅವರು ಇದೇ ಉತ್ಸವದಲ್ಲಿ ವಿಶ್ವ ಶಾಂತಿ ಸಂದೇಶದೊಂದಿಗೆ 10 ಅಡಿ ಎತ್ತರದ ಗಣೇಶನ ಮರಳು ಶಿಲ್ಪವನ್ನು ರಚಿಸುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ.

ಸುದರ್ಶನ್ ಪಟ್ನಾಯಕ್ ಅವರು ಪ್ರತಿಷ್ಠಿತ ಅಂತರರಾಷ್ಟ್ರೀಯ ಮರಳು ಕಲಾ ಉತ್ಸವ ಸ್ಯಾಂಡ್‌ವರ್ಲ್ಡ್ 2025 ರಲ್ಲಿ ಫ್ರೆಡ್ ಡ್ಯಾರಿಂಗ್ಟನ್ ಅವರ ಬ್ರಿಟಿಷ್ ಸ್ಯಾಂಡ್ ಮಾಸ್ಟರ್ ಪ್ರಶಸ್ತಿ ಪಡೆದುದಕ್ಕೆ ಹಾಗೂ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಕಲಾವಿದ ಎಂಬ ಗೌರವಕ್ಕೆ ಪಾತ್ರನಾಗಿರುವುದು ಅತಿ ಹೆಚ್ಚು ಖುಷಿ ತಂದಿದೆ ಎಂದು ಹೇಳಿದ್ದಾರೆ.

ಬ್ರಿಟಿಷ್ ಸ್ಯಾಂಡ್ ಮಾಸ್ಟರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಕಲಾವಿದ ಸುದರ್ಶನ್ Read More