ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ಪಾದದಲ್ಲಿರುವ ಶ್ರೀ ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಯೋಗ ಪ್ರಾಣಾಯಾಮ ಹಾಗೂ ಸುದರ್ಶನ ಕ್ರಿಯೆ ಮತ್ತಿತರ ಶಿಬಿರ ಹಮ್ಮಿಕೊಳ್ಳಲಾಯಿತು.

ಈ ಆನಂದದ ಅನುಭೂತಿ ಶಿಬಿರದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ದೈಹಿಕ ಹಾಗೂ ಅಂದತ್ವವುಳ್ಳ 22 ಶಿಬಿರಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದರು.

ಮೈಸೂರಿನ ಸುತ್ತಮುತ್ತಲಿನ ವಿವಿಧ ಹಳ್ಳಿಗಳಿಂದ ಆಗಮಿಸಿದ ಸುಮಾರು 30 ಜನ ಶಿಬಿರಾರ್ಥಿಗಳು ಯುವ ನಾಯಕತ್ವ ತರಬೇತಿಯನ್ನು ಪಡೆದರು ಎಂದು ಸುರೇಶ್ ಅವರು ತಿಳಿಸಿದ್ದಾರೆ.