ಬೀರೂರು: ಬೀರೂರಿನ ಪಾಂಡುರಂಗ ಸ್ವಾಮಿ ದೇವಸ್ಥಾನದಲ್ಲಿ ಕೃಷ್ಣಾಷ್ಟಮಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಬೀರೂರು ಭಾವಸಾರ ಮಹಿಳಾ ಮಂಡಳಿ ವತಿಯಿಂದ ಕೃಷ್ಣಾಷ್ಟಮಿ ಹಮ್ಮಿಕೊಳ್ಳಲಾಗಿತ್ತು.
ಪುಟ್ಟ,ಪುಟ್ಟ ಮಕ್ಕಳು ರಾಧಾ,ಕೃಷ್ಣ ವೇಷ ಧರಿಸಿ ನೃತ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

ಬಾಲ ಕೃಷ್ಷನನ್ನು ತೊಟ್ಟಿಲಿನಲ್ಲಿಟ್ಟು ಭಾವಸಾರ ಮಹಿಳಾ ಮಂಡಳಿ ಸದಸ್ಯೆಯರು ಹಾಗೂ ಇತರೆ ಮಹಿಳೆಯರು ಲಾಲಿ ಹಾಡಿದ್ದು ವಿಶೇಷವಾಗಿತ್ತು.
ಭಾವಸಾರ ಮಹಿಳಾ ಮಂಡಳಿ ಅಧಕ್ಷೆ ಗೀತಾ ಬಿ.ಎಂ ಅವರ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ನೆರವೇರಿದವು.