ಬಿಹಾರ: ವಿಕಲಚೇತನ ತಂದೆಯೊಂದಿಗೆ ರೈಲ್ವೆ ನಿಲ್ದಾಣ ದಲ್ಲಿದ್ದಾಗ ಯುವತಿಯೊಬ್ಬಳನ್ನು ದುರುಳರು ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬಿಹಾರದ ಗೋಪಾಲ್ಗಂಜ್ನಲ್ಲಿ ನಡೆದಿದೆ.
ತಂದೆಗೆ ಚಿಕಿತ್ಸೆ ಕೊಡಿಸಲು ಸಂತ್ರಸ್ತೆ ಬಂದಿದ್ದಳು, ಕುಚಾಯ್ಕೋಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸಸಾ ಮುಸಾ ರೈಲು ನಿಲ್ದಾಣದಲ್ಲಿ ಈ ನೀಚ ಘಟನೆ ನಡೆದಿದೆ.
ಯುವತಿ ವೈದ್ಯಕೀಯ ಚಿಕಿತ್ಸೆಗಾಗಿ ತನ್ನ ತಂದೆಯೊಂದಿಗೆ ಗೋಪಾಲ್‌ಗಂಜ್‌ಗೆ ಬಂದಿದ್ದರು. ಶ್ಯಾಮ್‌ಪುರದ ಸ್ಥಳೀಯ ವೈದ್ಯರ ಚಿಕಿತ್ಸಾಲಯದಲ್ಲಿ ಆಕೆಯ ತಂದೆ ಚಿಕಿತ್ಸೆ ಪಡೆದ ನಂತರ, ಸಸಮುಸಾ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ,ಅಷ್ಟರಲ್ಲು ರೈಲು ಹೋಗಿದೆ.
ಹಾಗಾಗಿ ರಾತ್ರಿಯಿಡೀ ನಿಲ್ದಾಣದಲ್ಲಿ ಇರಬೇಕಾಯಿತು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಯುವತಿ ನೀರು ತರಲು ಹೋದಾಗ, ಮೂವರು ಪಿಶಾಚಿಗಳು ಆಕೆಯ ಬಾಯಿ ಮುಚ್ಚಿ ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಆಕೆ ಸಹಾಯಕ್ಕಾಗಿ ಕಿರುಚಿಕೊಂಡಿದ್ದು, ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕುಚಾಯ್ಕೋಟ್ ಪೊಲೀಸರು ಸ್ಥಳಕ್ಕೆ ಧಾವಿಸಿ, ಆಕೆಯ ಗುರುತಿನ ಆಧಾರದ ಮೇಲೆ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದ್ದಾರೆ.
ಗೋಪಾಲ್‌ಗಂಜ್‌ನ ಎಸ್‌ಪಿ ಅವಧೇಶ್ ದೀಕ್ಷಿತ್ ಬಂಧನವನ್ನು ದೃಢಪಡಿಸಿದ್ದು,ಉಳಿದ ಅಪರಾಧಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.