ಪ್ರಧಾನಿ ವಿರುದ್ಧ ಅವಹೇಳನಕಾರಿ ವೀಡಿಯೋ: ನಾಳೆಯಿಂದ ಬಿಜೆಪಿ ಪ್ರತಿಭಟನೆ

ಮೈಸೂರು: ದೇಶದ ಪ್ರಧಾನಿಯವರನ್ನು ನಿಂದಿಸಿರುವವರಿಗೆ ಕಠಿಣ ಶಿಕ್ಷೆ ಜಾರಿಯಾಗಬೇಕೆಂದು ಆಗ್ರಹಿಸಿ ನಾಳೆಯಿಂದ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಸಂಸದ ಯದುವೀರ್ ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುವ ವೀಡಿಯೋಗಳನ್ನು ಹರಿಯಬಿಟ್ಟಿರುವ ಫಾಹಾದ್‌, ಬಾಸಿಲ್‌, ಸಮೀರ್‌ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟು ಮಾತ್ರ ಸಾಲದು ಇವರಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಯದುವೀರ್‌ ಆಗ್ರಹಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಹೇಳಿಕೆ ನೀಡಿರುವ ಯದುವೀರ್, ಇಂಥವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ತಕ್ಕ ಪಾಠ ಕಲಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಗ ಬಂಧಿತರಾಗಿರುವವರಿಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.

ಈ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ಜಾರಿಯಾದರೆ ಮುಂದೆ ಇಂತಹ ಅಪರಾಧ ಎಸಗಲು ಭೀತಿ ಉಂಟಾಗಬೇಕು. ಈ ಸಂಬಂಧ ಪೊಲೀಸ್‌ ಅಧಿಕಾರಿಗಳೊಂದಿಗೆ ಈಗಾಗಲೇ ಮಾತನಾಡಿದ್ದು, ಕಠಿಣ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಯದುವೀರ್ ಹೇಳಿದ್ದಾರೆ.

ಪ್ರಧಾನಿ ವಿರುದ್ಧ ಅವಹೇಳನಕಾರಿ ವೀಡಿಯೋ: ನಾಳೆಯಿಂದ ಬಿಜೆಪಿ ಪ್ರತಿಭಟನೆ Read More

ಶೆಡ್ ನಲ್ಲಿ ಬೆಂಕಿ:55 ಲಕ್ಷ ರೂ ಮೌಲ್ಯದ ಕೊಬ್ಬರಿ ನಾಶ

ಮಂಡ್ಯ‌: ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಪುಟ್ಟೇಗೌಡರ ಪುತ್ರ ಜಿ.ಪಿ.ಪ್ರಸನ್ನ ಅವರು ಕಾಯಿ ವ್ಯಾಪಾರಿಯಾಗಿದ್ದು, ಕೊಬ್ಬರಿ ಖರೀದಿಸಿ ತಮ್ಮ ಶೆಡ್ಡನಲ್ಲಿ ಇಟ್ಟಿದ್ದರು ಬುಧವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡು ಕೊಬ್ಬರಿ ಜತೆಗೆ ಶೆಡ್ ನಲ್ಲಿದ್ದ ಎಲ್ಲಾ ವಸ್ತುಗಳು ನಾಶವಾಗಿದೆ.12 ಟನ್ ಕೊಬ್ಬರಿ ಸೇರಿ ಸುಮಾರು 55 ಲಕ್ಷ ರೂ.ನಷ್ಟವಾಗಿದೆ
ಕಿಡಿಗೇಡಿಗಳ ಕೃತ್ಯವೋ ಅಥವಾ ಆಕಸ್ಮಿಕವಾಗಿ ಬೆಂಕಿ ತಗುಲಿದೆಯೊ ತಿಳಿದುಬಂದಿಲ್ಲ.

ವಿಷಯ ತಿಳಿದು ಎರಡು ಅಗ್ನಿಶಾಮಕದಳ ತಂಡದ ಸಿಬ್ಬಂದಿಗಳ ಸತತ ಪ್ರಯತ್ನದಿಂದಾಗಿ ಬೆಂಕಿ ನಂದಿಸಿದರು.

ಮಧ್ಯಮ ಕುಟುಂಬ ವರ್ಗದ ಜಿ.ಪಿ.ಪ್ರಸನ್ನ ಅವರು ಕೊಬ್ಬರಿ, ಕಾಯಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು.ಈ ಅವಘಡದಿಂದ ಅವರು ಆತಂಕಗೊಂಡಿದ್ದು, ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ಗ್ರಾಮ ಲೆಕ್ಕಾಧಿಕಾರಿ ಸಹಾಯಕ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಶೆಡ್ ನಲ್ಲಿ ಬೆಂಕಿ:55 ಲಕ್ಷ ರೂ ಮೌಲ್ಯದ ಕೊಬ್ಬರಿ ನಾಶ Read More

ಕಾರಿನ ಮೇಲೆ ಇಳಿದ ವಿಮಾನ!

ಫ್ಲೋರಿಡಾ: ದೊಡ್ಡ‌ ವಿಮಾನವಾಗಲಿ,ಸಣ್ಣ ವಿಮಾನವಾಗಲಿ ಲ್ಯಾಂಡ್‌ ಆಗಲು ಏರ್ಪೋರ್ಟ್ ಇದ್ದೇ ಇರುತ್ತೆ,ಆದರೆ ಇಲ್ಲೊಂದು ವಿಮಾನ ಕಾರ್ ಮೇಲೆ ಇಳಿದಿದೆ!

ಫ್ಲೋರಿಡಾದಲ್ಲಿ ಸಣ್ಣ ವಿಮಾನವೊಂದು ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಇಳಿದು ಅಪಘಾತಕ್ಕೀಡಾಗಿದೆ.

ಈ ವಿಮಾನ ಅಪಘಾತದಿಂದ ಬಹಳ ಸಮಯದವರೆಗೆ ಸಂಚಾರ ದಟ್ಟಣೆ ಉಂಟಾಯಿತು.

27 ವರ್ಷ ವಯಸ್ಸಿನ ಇಬ್ಬರು ಯುವಕರನ್ನು ಹೊತ್ತೊಯ್ಯುತ್ತಿದ್ದ ಸಿಂಗಲ್ ಎಂಜಿನ್ ಬೀಚ್‌ಕ್ರಾಫ್ಟ್ 55 ವಿಮಾನದ ಎಂಜಿನ್‌ನಲ್ಲಿ ತೊಂದರೆ ಉಂಟಾಗಿತ್ತು.

ಹಾಗಾಗಿ‌ ಒರ್ಲ್ಯಾಂಡೊ ಬಳಿ ಇಂಟರ್‌ಸ್ಟೇಟ್ 95 ನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು.

ಹಾಗಾಗಿ ವಿಮಾನ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು ಟೊಯೋಟಾ ಕ್ಯಾಮ್ರಿ ಕಾರಿನ ಮೇಲೆ ಅಪ್ಪಳಿಸಿತು.
ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

ಕಾರಿನ ಮೇಲೆ ಇಳಿದ ವಿಮಾನ! Read More

ಆನ್ ಲೈನ್ ಗೇಮ್ ನಂಬಿ 40.71 ಲಕ್ಷ ಕಳೆದುಕೊಂಡ ಉದ್ಯಮಿ

ಮೈಸೂರು: ಮೋಸ ಹೋಗುವವರು ಇರುವ ತನಕ ಮೋಸದ ಆಟ ನಡೆಯುತ್ತಲೇ ಇರುತ್ತದೆ ಇದಕ್ಕೆ ಮೈಸೂರಿನಲ್ಲಿ ಒಂದು ಸ್ಪಷ್ಟ ಉದಾರಣೆ ಇದೆ.

ಆನ್ ಲೈನ್ ಗೇಮ್ ನಲ್ಲಿ ಹೆಚ್ಚಿನ ಲಾಭ ಗಳಿಸಬಹುದೆಂದು ನಂಬಿ ಹಣ ಹೂಡಿದ ಮೈಸೂರು ಉದ್ಯಮಿಯೊಬ್ಬರು 40.71 ಲಕ್ಷ ಹಣ ಕಳೆದುಕೊಂಡಿದ್ದಾರೆ.

ಅಶೋಕ ರಸ್ತೆಯ ಉದ್ಯಮಿ ರಾಕೇಶ್ ಹಣ ಕಳೆದುಕೊಂಡ ಉದ್ಯಮಿ.

ಪರಿಚಯದವರೊಬ್ಬರು ಹೇಳಿದ ಮಾತು ನಂಬಿ FUN IN MATCH 360 ಎಂಬ ಆಪ್ ಡೌನ್ ಲೋಡ್ ಮಾಡಿದ ರಾಕೇಶ್ ಎರಡು ಹಂತದಲ್ಲಿ 40.71 ಲಕ್ಷ ಹಣ ಹೂಡಿಕೆ ಮಾಡಿದ್ದಾರೆ.

ಖಾತೆಯಲ್ಲಿ ಹೆಚ್ಚಿನ ಲಾಭ ತೋರಿಸಿದೆ.ಹಣ ಡ್ರಾ ಮಾಡಲು ಮುಂದಾದಾಗ ತಾವು ವಂಚನೆಗೆ ಒಳಗಾಗಿರುವುದು ಖಚಿತವಾಗಿದೆ.
ಈ ಕುರಿತು ರಾಕೇಶ್ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆನ್ ಲೈನ್ ಗೇಮ್ ನಂಬಿ 40.71 ಲಕ್ಷ ಕಳೆದುಕೊಂಡ ಉದ್ಯಮಿ Read More

ಹನುಮಾನ್ ಜಯಂತಿ: ದೇವರಾಜ ಅರಸು ರಸ್ತೆಯಲ್ಲಿ ಅನ್ನದಾನ

ಮೈಸೂರು: ಹನುಮಾನ್ ಜಯಂತಿ ಅಂಗವಾಗಿ ಮೈಸೂರಿನ ದೇವರಾಜ ಅರಸು
ರಸ್ತೆಯಲ್ಲಿರುವ ಜಯದೇವ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ಶಾಸಕ ಹರೀಶ್ ಗೌಡ ಮತ್ತು ಅವರ ಪತ್ನಿ ಗೌರಿ ಅವರು ಪೂಜೆಯಲ್ಲಿ ಭಾಗಿಯಾಗಿ
ಆಂಜನೇಯ ಸ್ವಾಮಿಯ
ಆಶೀರ್ವಾದ ಪಡೆದರು.

ನಂತರ ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು.
ಈ ವೇಳೆ ರಾಮರಾಜ,
ಕಿಶನ್ ಹರೀಶ್ ಗೌಡ, ಪುರುಷೋತ್ತಮ್, ನವೀನ್, ಕನಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರವಿಚಂದ್ರ ಹಾಗೂ ಮತ್ತಿತರರು ಹಾಜರಿದ್ದರು.

ಹನುಮಾನ್ ಜಯಂತಿ: ದೇವರಾಜ ಅರಸು ರಸ್ತೆಯಲ್ಲಿ ಅನ್ನದಾನ Read More

ಕನ್ನಡ ನಾಮಫಲಕ:ಕನ್ನಡ ಹೋರಾಟಗಾರರ ತುರ್ತು ಸಭೆ ಕರೆಯಲು ತೇಜಸ್ವಿ ಆಗ್ರಹ

ಮೈಸೂರು: ಕನ್ನಡ ನಾಮಫಲಕ ವಿಷಯವಾಗಿ ಮೈಸೂರು ನಗರ ಪೋಲಿಸ್ ಆಯುಕ್ತರು ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ಕನ್ನಡ ಹೋರಾಟಗಾರರ ತುರ್ತು ಸಭೆ ನಡೆಸುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹಿಸಿದ್ದಾರೆ.

ಮೈಸೂರು ನಗರ ವ್ಯಾಪ್ತಿಯಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಈಗಾಗಲೇ ಸರ್ಕಾರ ಆದೇಶ ನೀಡಿದ್ದರೂ ಸಹ ಕೆಲವರು ಮೈಸೂರು ನಗರದ ನಾನಾ ಭಾಗಗಳಲ್ಲಿ ಆಂಗ್ಲ ಭಾಷೆಯಲ್ಲಿ ಮತ್ತು ಬೇರೆ ಬೇರೆ ಭಾಷೆಗಳಲ್ಲಿ ನಾಮಫಲಕ ಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನು ಖಂಡಿಸಿ ಕನ್ನಡ ಹೋರಾಟಗಾರರು ಮೈಸೂರಿನ ಕೆಲವು ಭಾಗಗಳಲ್ಲಿ ನಾಮಫಲಕಗಳನ್ನು ತೆರವು ಗೊಳಿಸುವ ಮತ್ತು ಮಸಿ ಬಳಿಯುವ ಅಭಿಯಾನ ಕಾರ್ಯಗಳನ್ನು ಆರಂಭಿಸಿದ್ದಾರೆ,
ಈ ಸಂದರ್ಭದಲ್ಲಿ ಅಂಗಡಿಗಳ ಮಾಲಿಕರಿಗು ಮತ್ತು ಹೋರಾಟಗಾರರ ನಡುವೆ ವಾಗ್ವಾದ ಉಂಟಗುತ್ತಿರುವುದು ಕಂಡುಬರುತ್ತಿದೆ.
ಆದ್ದರಿಂದ ಪೋಲಿಸ್ ಆಯುಕ್ತರು ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ತುರ್ತಾಗಿ ಕನ್ನಡ ಹೋರಾಟಗಾರರ ಸಭೆ ನಡೆಸಬೇಕು.

ಈಗಾಗಲೇ ಕನ್ನಡ ನಾಮಫಲಕ ವಿಷಯವಾಗಿ ಕಾವೇರಿರುವ ಮೈಸೂರು ನಗರವನ್ನು ಶಾಂತಿ ಗೊಳಿಸುವ ನಿಟ್ಟಿನಲ್ಲಿ ಕನ್ನಡ ಹೋರಾಟಗಾರರ ಸಭೆ ನಡೆಸಿ ಅಹವಾಲು ಸ್ವೀಕಾರ ಮಾಡಬೇಕು ಎಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಮೈಸೂರು ನಗರ ಪೋಲಿಸ್ ಆಯುಕ್ತರಿಗೆ ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತರನ್ನು ಒತ್ತಾಯಿಸಿದ್ದಾರೆ.

ಕನ್ನಡ ನಾಮಫಲಕ:ಕನ್ನಡ ಹೋರಾಟಗಾರರ ತುರ್ತು ಸಭೆ ಕರೆಯಲು ತೇಜಸ್ವಿ ಆಗ್ರಹ Read More

ದಿನೇಶ್‌ ಕುಮಾರ್‌ ಲೋಕಾಯುಕ್ತ ಪೊಲೀಸರ ಕಸ್ಟಡಿಗೆ

ಮೈಸೂರು: ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಅವರನ್ನು ಹೆಚ್ಚಿನ ವಿಚಾರಣೆಗೆ ಲೋಕಾಯುಕ್ತ ಪೊಲೀಸರ ಕಸ್ಟಡಿಗೆ ನೀಡಲು ಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಮೈಸೂರು ಲೋಕಾಯುಕ್ತ ಪೊಲೀಸರು, ಬೆಂಗಳೂರಿನಲ್ಲಿರುವ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಮುಡಾ ಹಗರಣದ ಹೆಚ್ಚಿನ ವಿಚಾರಣೆಗೆ ಮಾಜಿ ಆಯುಕ್ತ, ಹಾಲಿ ಜೈಲು ಶಿಕ್ಷೆಗೆ ಒಳಪಟ್ಟಿರುವ ದಿನೇಶ್‌ ಕುಮಾರ್‌ ಅವರನ್ನು ಕಸ್ಟಡಿಗೆ ನೀಡುವಂತೆ ಕೋರ್ಟ್‌ ಗೆ ಅರ್ಜಿ ಸಲ್ಲಿಸಿ ಕೋರಲಾಗಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಮೈಸೂರು ಲೋಕಾಯುಕ್ತ ಪೊಲೀಸರ ಅರ್ಜಿ ಪುರಸ್ಕರಿಸಿ ಡಿ. 12 ರಂದು ಕಸ್ಟಡಿಗೆ ನೀಡುವಂತೆ ಆದೇಶಿಸಿದೆ.

ದಿನೇಶ್‌ ಕುಮಾರ್‌ ಲೋಕಾಯುಕ್ತ ಪೊಲೀಸರ ಕಸ್ಟಡಿಗೆ Read More

ಮೃತಪಟ್ಟ ಸೆರೆಸಿಕ್ಕ ನಾಲ್ಕೂ ಹುಲಿಮರಿಗಳು

ಮೈಸೂರು: ಇತ್ತೀಚೆಗೆ ತಾಲ್ಲೂಕು ಗೌಡನಕಟ್ಟೆ ಬಳಿ ಸೆರೆ ಸಿಕ್ಕಿದ್ದ ನಾಲ್ಕೂ ಹುಲಿಮರಿಗಳು ತಾಯಿಯ ಆರೈಕೆ ಇಲ್ಲದೆ ಮೃತಪಟ್ಟಿವೆ.

ಗೌಡನಕಟ್ಟೆಯ ಪ್ರಕಾಶ್‌ ಎಂಬುವರ ಜೋಳದ ಹೊಲದಲ್ಲಿ ನ. 28ರಂದು ನಾಲ್ಕು ಮರಿಗಳೊಂದಿಗೆ ತಾಯಿ ಹುಲಿ ಕಾಣಿಸಿಕೊಂಡಿತ್ತು.

ಮದ್ಯರಾತ್ರಿ ತಾಯಿ ಹುಲಿ ಸೆರೆಸಿಕ್ಕಿತ್ತು,ಎರಡು ದಿನಗಳ ನಂತರ ನಾಲ್ಕು ಹುಲಿಮರಿಗಳು ಪತ್ತೆಯಾಗಿದ್ದವು. ಎರಡು ದಿನ ತಾಯಿಯಿಂದ ದೂರವಾಗಿದ್ದ ಮರಿಗಳು ಆಹಾರವಿಲ್ಲದೆ ಬಳಲಿದ್ದವು.

ಸೆರೆ ಹಿಡಿಯುವಾಗಲೇ ಬಹಳ ನಿತ್ರಾಣಗೊಂಡಿದ್ದವು,ಕೂಡಲೇ ಕೂರ್ಗಳ್ಳಿ
ಪುನರ್ವಸತಿ ಕೇಂದ್ರಕ್ಕೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಆದರೆ ತಾಯಿಯ ಆರೈಕೆ,ಹಾಲು ಇಲ್ಲದೆ ಗಾಬರಿಗೊಂಡಿದ್ದ ಮರಿಗಳು ಸೊರಗಿದ್ದವು.
ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ, ಅಸ್ವಸ್ಥಗೊಂಡಿದ್ದ ಹುಲಿ ಮರಿಗಳು ಸಾವನ್ನಪ್ಪಿದ್ದು,ಪಶುವೈದ್ಯರು ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ತಾಯಿ ಹುಲಿ ಆರೋಗ್ಯವಾಗಿದೆ,
ಹುಲಿಮರಿಗಳ ಅಂಗಾಗಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ,ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

ಮೃತಪಟ್ಟ ಸೆರೆಸಿಕ್ಕ ನಾಲ್ಕೂ ಹುಲಿಮರಿಗಳು Read More

ಕೇಂದ್ರ ಪ್ರವಾಸೋದ್ಯಮ ಸಚಿವರ ಭೇಟಿ ಮಾಡಿದ ಯದುವೀರ್‌ ಒಡೆಯರ್

ನವದೆಹಲಿ: ಕೇಂದ್ರ ಪ್ರವಾಸೋದ್ಯಮ ಸಚಿವ ಗಜೆಂದ್ರ ಸಿಂಗ್ ಶೇಖಾವತ್ ಅವರನ್ನು
ಸಂಸದ ಯದುವೀರ್ ಒಡೆಯರ್ ಭೇಟಿ ಮಾಡಿ ಮೈಸೂರಿನ ಪ್ರವಾಸೋದ್ಯಮ ಯೋಜನೆಗಳ ಬಗ್ಗೆ ಚರ್ಚಿಸಿದರು.

ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಮಾತನಾಡಿದ ಯದುವೀರ್ ಒಡೆಯರ್,
ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ ದರ್ಶನ 2.0 ಯೋಜನೆಯಡಿ ಮೈಸೂರಿನಲ್ಲಿ ಎರಡು ಪ್ರಮುಖ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ದೊರೆತಿದೆ ಎಂದು ತಿಳಿಸಿದ್ದಾರೆ.

ಈ ಎರಡೂ ಯೋಜನೆಗಳನ್ನು ಕರ್ನಾಟಕ ಪ್ರವಾಸೋದ್ಯಮ ಮೂಲ ಸೌಲಭ್ಯ ನಿಗಮ ಅನುಷ್ಠಾನಕ್ಕೆ ತರಲಿದೆ ಎಂದು ಹೇಳಿದರು
ಮೈಸೂರಿನಲ್ಲಿ ಇಕಾಲಜಿಕಲ್ ಎಕ್ಸ್‌ಪೀರಿಯನ್ಸ್ ಝೋನ್ ಅಭಿವೃದ್ಧಿಗೆ 18.47 ಕೋಟಿ ರೂ. ಹಾಗೂ ಮೈಸೂರಿನ ಟಾಂಗಾ ರೈಡ್ ಎಕ್ಸ್‌ಪೀರಿಯನ್ಸ್ ಝೋನ್ ಅಭಿವೃದ್ಧಿಗೆ 271.60 ಲಕ್ಷ ರೂಪಾಯಿ ಅನುಮೋದನೆ ನೀಡಲಾಗಿದೆ ಎಂದು ಸಂಸದರು ಮಾಹಿತಿ ನೀಡಿದರು.

ಈ ಯೋಜನೆಗೆ ಅಂತಿಮ ಅನುಮೋದನೆ ದೊರಕಿರುವುದು ಸಂತಸ ತಂದಿದೆ, ಈ ಯೋಜನೆಗಳಿಂದ ಮೈಸೂರಿನಲ್ಲಿ ಪ್ರವಾಸೋದ್ಯಮ ಮತ್ತಷ್ಟು ವೃದ್ಧಿಯಾಗಲಿದೆ. ಯೋಜನೆಗಳ ಅನುಷ್ಠಾನಕ್ಕಾಗಿ ಭೂಮಿ ಪೂಜೆ ನಡೆಸಲು ಶೀಘ್ರ ದಿನಾಂಕ ನಿಗದಿಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಸಚಿವರಾದ ಗಜೆಂದ್ರ ಸಿಂಗ್ ಶೇಖಾವತ್ ಅವರು ಯೋಜನೆಗೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.
ಮೈಸೂರಿನ ಇನ್ನೂ ಕೆಲವು ಪ್ರವಾಸೋದ್ಯಮ ಯೋಜನೆಗಳ ಬಗ್ಗೆ ಅನುಮತಿ ಪಡೆಯಲು ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಲಾಗುತ್ತದೆ ಎಂದು ತಿಳಿಸಿದರು.

ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಪ್ರವಾಸೋದ್ಯಮ ಕ್ಷೇತ್ರ ಉತ್ತೇಜನಕ್ಕೆ ಎಲ್ಲ ರೀತಿಯಿಂದಲೂ ನಮ್ಮ ಕೇಂದ್ರ ಬಿಜೆಪಿ ಸರ್ಕಾರ ಸಹಕಾರ ನೀಡಲಿದೆ. ಈ ಸಂಬಂಧ ನಾನು ಕೂಡ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಉನ್ನತಿಗೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಯದುವೀರ್‌ ಒಡೆಯರ್‌ ಭರವಸೆ ನೀಡಿದರು

ಕೇಂದ್ರ ಪ್ರವಾಸೋದ್ಯಮ ಸಚಿವರ ಭೇಟಿ ಮಾಡಿದ ಯದುವೀರ್‌ ಒಡೆಯರ್ Read More

ಪ್ರತಿಭಟನೆ ವೇಳೆ ರೈತ ತೀವ್ರ ಅಸ್ವಸ್ಥ

ಬೆಳಗಾವಿ: ಚಳಿಗಾಲದ ಅಧಿವೇಶನ ಮೂರನೇಯ ದಿನ ಕೂಡಾ ವಿವಿಧ ಸಂಘಟನೆಗಳ ಪ್ರತಿಭಟನೆ ತೀವ್ರಗೊಂಡಿದ್ದು,ಈ ವೇಳೆ ರೈತರೊಬ್ಬರು ತೀವ್ರವಾಗಿ ‌ಅಸ್ವಸ್ಥಗೊಂಡ ಪ್ರಸಂಗ ನಡೆದಿದೆ.

ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಕಾವು ಜೋರಾಗಿದೆ,
ಈ ಸಂದರ್ಭದಲ್ಲಿ ರಾಯಬಾಗ ತಾಲೂಕಿನ ಕುಡಚಿ ಗ್ರಾಮದ ರೈತ ಯಲ್ಲಪ್ಪಾ ಹಿರೇಕುರಬರ (35) ಅವರು ಅಸ್ವಸ್ಥರಾಗಿದ್ದಾರೆ.

ಬುಧವಾರ ಸುವರ್ಣಸೌಧದ ಪಕ್ಕದಲ್ಲಿರುವ ಪ್ರತಿಭಟನಾ ಸ್ಥಳದಲ್ಲಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾಗ ಭಾರೀ ಒತ್ತಡ, ಜನಸಮೂಹ ಹಾಗೂ ದೀರ್ಘ ಕಾಲದಿಂದ ಕೂಗಾಟ, ಘೋಷಣೆಗಳ ತೀವ್ರಗೊಂಡಿತು,ಆಗ ರೈತ ಯಲ್ಲಪ್ಪಾ ಹಿರೇಕುರಬರ ತಲೆ ಸುತ್ತಿ ನೆಲಕ್ಕೆ ಬಿದ್ದರು.

ತಕ್ಷಣ ಇತರೆ ರೈತರು, ಸಂಘಟಕರು ಹಾಗೂ ಪೊಲೀಸರು ಶಿಶ್ರೂಷೆ ಮಾಡಿದರು.
ಸ್ಥಳಕ್ಕೆ ವೈದ್ಯಕೀಯ ಸಿಬ್ಬಂದಿ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು.
ಇದರಿಂದ ಆತಂಕ ಹಾಗೂ ಗೊಂದಲ ವಾತಾವರಣ ನಿರ್ಮಾಣಕೊಂಡಿತ್ತು, ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು.

ಯಲ್ಲಪ್ಪಾ ಹಿರೇಕುರಬರ ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಆಸ್ಪತ್ರೆಗೆ ಮೂಲಗಳು ತಿಳಿಸಿವೆ.

ರೈತರ ಬೇಡಿಕೆಗಳನ್ನು ತ್ವರಿತವಾಗಿ ಮೌಲ್ಯಮಾಪನ ಮಾಡಿ ಈಡೇರಿಸಲು ಸರಕಾರ ಕೂಡಲೇ ಕ್ರಮ ಕೈಗೊಳಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ.

ಪ್ರತಿಭಟನೆ ವೇಳೆ ರೈತ ತೀವ್ರ ಅಸ್ವಸ್ಥ Read More