ಇಂಡಿಗೊ ವಿಮಾನಕ್ಕೆ ಬಾಂಬ್ ಬೆದರಿಕೆ:ತುರ್ತು ಭೂ ಸ್ಪರ್ಷ!

ಮುಂಬೈ: ಬಾಂಬ್ ಬೆದರಿಕೆ ಬಂದ ಕಾರಣ ಹೈದರಾಬಾದ್ ನಿಂದ ಕುವೈತ್ ಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಷ ಮಾಡಬೇಕಾಯಿತು.

ವಿಮಾನವನ್ನು ಮುಂಬೈ ನಿಲ್ದಾಣದಲ್ಲಿ ಸುರಕ್ಷಿತವಾಗಿ ಕೆಳಕ್ಕಿಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹೈದರಾಬಾದ್ ನಲ್ಲಿ ವಿಮಾನ ಲ್ಯಾಂಡಿಂಗ್ ಆದಾಗ ರಿಮೋಟ್ ಕಂಟ್ರೋಲ್ ನಿಯಂತ್ರಿತ ಸ್ಫೋಟಕ ಸಾಧನಗಳನ್ನು ಬಳಸಿ ದಾಳಿ ನಡೆಸಲು ಯೋಜಿಸಲಾಗಿದೆ ಎಂದು ಅನಾಮದೇಯ ಶಕ್ತಿಗಳು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆಯ ಇಮೇಲ್ ಕಳುಹಿಸಿದ್ದವು.

ಇ-ಮೇಲ್ ಬಂದ ಬಳಿಕ ಕುವೈತ್ ಗೆ ತೆರಳುತ್ತಿದ್ದ ವಿಮಾನವನ್ನು ಮುಂಬೈ ಕಡೆಗೆ ತಿರುಗಿಸಲು ಅಧಿಕಾರಿಗಳು ನಿರ್ಧರಿಸಿದರು. ಅಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಯಿತು,ಆದರೆ ಭದ್ರತಾ ಪರಿಶೀಲನೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂಡಿಗೊ ವಿಮಾನಕ್ಕೆ ಬಾಂಬ್ ಬೆದರಿಕೆ:ತುರ್ತು ಭೂ ಸ್ಪರ್ಷ! Read More

ಕೆಲಸ ಮಾಡುತ್ತಿದ್ದ ಬ್ಯಾಂಕ್‌ ಗೇ‌ 47.72 ಲಕ್ಷವಂಚಿಸಿದ ವಾಣಿಜ್ಯ‌ ವಿಭಾಗದ ವ್ಯವಸ್ಥಾಪಕ!

ಮೈಸೂರು : ವ್ಯಕ್ತಿಯೊಬ್ಬ ಕೆಲಸ ಬಿಟ್ಟ ನಂತರವೂ ಗ್ರಾಹಕರಿಂದ ಹಣ ಸಂಗ್ರಹಿಸಿ ಬ್ಯಾಂಕ್‌ಗೆ 47,72ಲಕ್ಷ ರೂ. ವಂಚಿಸಿರುವ ಪ್ರಸಂಗ‌ ನಡೆದಿದ್ದು,ಈ ಬಗ್ಗೆ ದೂರು ದಾಖಲಾಗಿದೆ.

ನಂಜನಗೂಡಿನ ನಿವಾಸಿ ಮಹದೇವ ಸ್ವಾಮಿ ಎಂಬಾತ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ ಗೆ ವಂಚಿಸಿದ ವ್ಯಕ್ತಿ.

ಮಹದೇವ ಸ್ವಾಮಿ ಈ ಹಿಂದೆ ಇಂಡಸ್ ಬ್ಯಾಂಕ್‌ನ ವಾಣಿಜ್ಯ ವಿಭಾಗದಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದನು.

ಕಳೆದ ಮೇ ತಿಂಗಳಿನಿಂದ ಆತ ಕೆಲಸಕ್ಕೆ ಬಂದಿರಲಿಲ್ಲ. ಅವರ ಮೊಬೈಲ್ ಕೂಡ ಬಂದ್ ಆಗಿತ್ತು. ಹಾಗಾಗಿ ಅನುಮಾನಗೊಂಡ ಸಿಬಂದಿ ಮಹದೇವಸ್ವಾಮಿ ಅವರು ಈ ಹಿಂದೆ ವಾಹನಗಳ ಸಾಲಗಳ ವಸೂಲಾತಿ ಮಾಡುತ್ತಿದ್ದವರ ಖಾತೆಗಳನ್ನು ಪರಿಶೀಲಿಸಿದ ವೇಳೆ ಹಲವು ಮಂದಿ ಸಾಲದ ಕಂತು ಕಟ್ಟಿಲ್ಲದಿರುವುದು ಪರಿಶೀಲನೆ ವೇಳೆ ತಿಳಿದುಬಂದಿದೆ.

ಹೀಗಾಗಿ ಲೆಕ್ಕ ಪತ್ರಗಳನ್ನು ಪರಿಶೀಲಿಸಿದ ವೇಳೆ ಆತ ೪೭,೭೨,೮೧೦ ರೂ. ಹಣವನ್ನು ಗ್ರಾಹಕರಿಂದ ಸಂಗ್ರಹಿಸಿ ಬ್ಯಾಂಕ್‌ಗೆ ಪಾವತಿಸಿಲ್ಲದಿರುವುದು ಗೊತ್ತಾಗಿದೆ,ಈಗ ಆತನ ವಿರುದ್ಧ ಬ್ಯಾಂಕ್‌ನ ಅಧಿಕಾರಿಗಳು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೆಲಸ ಮಾಡುತ್ತಿದ್ದ ಬ್ಯಾಂಕ್‌ ಗೇ‌ 47.72 ಲಕ್ಷವಂಚಿಸಿದ ವಾಣಿಜ್ಯ‌ ವಿಭಾಗದ ವ್ಯವಸ್ಥಾಪಕ! Read More

ಬೆಳಗಾವಿ ಅಧಿವೇಶದಲ್ಲಿ ಸಮರ್ಥವಾಗಿ ವಿಪಕ್ಷಗಳನ್ನು ಎದುರಿಸುತ್ತೇವೆ-ಸಿಎಂ

ಬೆಂಗಳೂರು: ಬೆಳಗಾವಿ ಅಧಿವೇಶದಲ್ಲಿ ಸಮರ್ಥವಾಗಿ ವಿಪಕ್ಷಗಳನ್ನು ಎದುರಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ‌ ಸಿಎಂ,ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿವೇಶನ ಕರೆಯಲಾಗಿದೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಹ್ವಾನದ ಮೇರೆಗೆ ಬೆಳಗಿನ ಉಪಹಾರಕ್ಕಾಗಿ ಅವರ ನಿವಾಸಕ್ಕೆ ಭೇಟಿ ನೀಡಿದೆ.ನಮ್ಮ ಪಕ್ಷದ ವಿಚಾರಗಳನ್ನು ಈ ವೇಳೆ ಚರ್ಚಿಸಲಾಗಿದೆ. ಡಿಸೆಂಬರ್ 8 ರಂದು ಬೆಳಗಾವಿ ಅಧಿವೇಶನ ಪ್ರಾರಂಭವಾಗಲಿದ್ದು, ವಿಪಕ್ಷಗಳನ್ನು ಎದುರಿಸಲು ಸರ್ಕಾರದ ರಣನೀತಿಗಳ ಬಗ್ಗೆ ಚರ್ಚಿಸಲಾಯಿತು ಎಂದು ‌ತಿಳಿಸಿದರು.

ವಿಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿರುವ ಮಾಹಿತಿ ಪತ್ರಿಕೆಗಳಿಂದ ತಿಳಿದು ಬಂದಿದೆ.ಅಲ್ಲದೇ ವಿಪಕ್ಷಗಳು ಕೇಳಬಹುದಾದ ಪ್ರಶ್ನೆಗಳನ್ನು ಸಮರ್ಥವಾಗಿ ಸರ್ಕಾರ ಎದುರಿಸಲಿದೆ. ಕಬ್ಬು, ಮೆಕ್ಕೆಜೋಳದ ಸಮಸ್ಯೆ ಸೇರಿದಂತೆ ರಾಜ್ಯದ ಸಮಸ್ಯೆಗಳಿಗೆ ಸಮರ್ಪಕ ಪರಿಹಾರಗಳನ್ನು ಕಂಡುಕೊಳ್ಳಲು ಈ ಅಧಿವೇಶನದಲ್ಲಿ ಪ್ರಯತ್ನಿಸಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.

ನಮ್ಮ ಸರ್ಕಾರ ರೈತಪರ ನಿಲುವನ್ನು ಹೊಂದಿದೆ. ಮೆಕ್ಕೆ ಜೋಳ ಖರೀದಿ ಬಗ್ಗೆ ರೈತರು, ಡಿಸ್ಟಲರಿ ಕಾರ್ಖಾನೆ ಮಾಲೀಕರ ಜೊತೆ ಚರ್ಚಿಸಲಾಗಿದೆ. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 2,400 ರೂ ಬೆಂಬಲ ಬೆಲೆ ನಿಗದಿಪಡಿಸಿದೆ ಆದರೆ ಮಾರುಕಟ್ಟೆ ದರ 1900 ರಿಂದ 2100 ರೂ.ವೆರೆಗೆ ಇರುವುದರಿಂದ ಡಿಸ್ಟಲರಿ ಕಂಪನಿಗಳು , ಎಂಎಸ್ ಪಿ ದರದಲ್ಲಿಯೇ ರೈತರಿಂದ ಮೆಕ್ಕೆಜೋಳವನ್ನು ಖರೀದಿಸಬೇಕೆಂದು ಮನವೊಲಿಸಲಾಗುತ್ತಿದೆ. ಅಂತೆಯೇ ಪೌಲ್ಟ್ರಿ ಫಾರಂಗಳು , ಪಶು ಆಹಾರಗಳಿಗಾಗಿ ಮೆಕ್ಕೆ ಜೋಳವನ್ನು ಬಳಸಲಾಗುತ್ತದೆ ಎಂದು ಸಿಎಂ‌ ತಿಳಿಸಿದರು.

ಹೈ ಕಮಾಂಡ್ ಸೂಚನೆಯಂತೆ ನಡೆದುಕೊಳ್ಳುವುದಾಗಿ ಮೊನ್ನೆ ಮತ್ತು ಇಂದೂ ಕೂಡ ಚರ್ಚಿಸಲಾಗಿದೆ,
ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಒಗ್ಗಟ್ಟಿನಿಂದ ಇದ್ದೇವೆ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಾನು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರರಿದ್ದಂತೆ, ಒಂದೇ ಪಕ್ಷದಲ್ಲಿದ್ದು, ಒಂದೇ ಸಿದ್ಧಾಂತ ನಂಬಿಕೊಂಡಿದ್ದೇವೆ. 2028 ರ ಚುನಾವಣೆಯಲ್ಲಿಯೂ ಒಟ್ಟಿಗೆ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ ಎಂದು ಮುಖ್ಯ ಮಂತ್ರಿಗಳು‌ ಸ್ಪಷ್ಟವಾಗಿ ಹೇಳಿದರು.

ಬೆಳಗಾವಿ ಅಧಿವೇಶದಲ್ಲಿ ಸಮರ್ಥವಾಗಿ ವಿಪಕ್ಷಗಳನ್ನು ಎದುರಿಸುತ್ತೇವೆ-ಸಿಎಂ Read More

ವೀರಾಂಜನೇಯ ಸ್ವಾಮಿಗೆ ಮೈಸೂರು ಯುವ ಬಳಗದಿಂದ ವಿಶೇಷ ಪೂಜೆ

ಮೈಸೂರು: ಹನುಮಾನ್ ಜಯಂತಿ ಪ್ರಯುಕ್ತ
ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿರುವ ವೀರಾಂಜನೇಯ ದೇವಸ್ಥಾನದಲ್ಲಿ ಮೈಸೂರು ಯುವ ಬಳಗ ವತಿಯಿಂದ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಯಿತು.

ಶಾಸಕರಾದ ಹರೀಶ್ ಗೌಡ ಅವರು
ಪೂಜೆಯಲ್ಲಿ ಪಾಲ್ಗೊಂಡು ಆಂಜನೇಯ ಸ್ವಾಮಿ ಆಶೀರ್ವಾದ ಪಡೆದರು

ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು.

ರಾಮರಾಜ್, ನವಕಾರ್ ಪ್ರವೀಣ್,ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಸಂದೀಪ್, ಶ್ರೀ ಕನಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ರವಿಚಂದ್ರ, ಗುರುರಾಜ್, ಪ್ರಮೋದ್, ಪ್ರಶಾಂತ್, ನವೀನ್, ನಂಜುಂಡಿ, ಹರೀಶ್ ಗೌಡ, ಮುಂತಾದರು ಸ್ವಾಮಿಯ ದರ್ಶನ ಪಡೆದರು.

ವೀರಾಂಜನೇಯ ಸ್ವಾಮಿಗೆ ಮೈಸೂರು ಯುವ ಬಳಗದಿಂದ ವಿಶೇಷ ಪೂಜೆ Read More

ನಿರಾಶ್ರಿತರಿಗೆ ಕಂಬಳಿ‌ ವಿತರಿಸಿ ಮಾನವೀಯತೆ ಮೆರೆದ ಕೆ ಎಂ ಪಿ ಕೆ ಟ್ರಸ್ಟ್

ಮೈಸೂರು: ಬೀದಿಬದಿ ಜೀವನ ಸಾಗಿಸುವ ನಿರ್ಗತಿಕರು ಹಾಗೂ ಬಡಜನರಿಗೆ ಚಳಿ ಹಾಗೂ ತಂಡಿಗಾಳಿಯಿಂದಾಗಿ ಆರೋಗ್ಯ ಸಮಸ್ಯೆ ಬರದಂತೆ ಮೈಸೂರಿನ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ನವರು ಕಂಬಳಿ‌ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸೋಮವಾರ ರಾತ್ರಿ ರೈಲ್ವೆ ನಿಲ್ದಾಣದ ಮುಂಭಾಗ ರಸ್ತೆ ಬದಿ ಮಲಗಿರುವ ಬಡವರ್ಗದವರಿಗೆ ಹೊದಿಕೆ ನೀಡುವ ಮೂಲಕ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಕೆ.ಬಿ ಲಿಂಗರಾಜು ಅವರು ಹೊದಿಕೆ‌‌ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿದರು.

ಈ‌ ವೇಳೆ ಮಾತನಾಡಿದ ಅವರು,
ಬಡವರಿಗೆ ಸೇವೆ ಸಲ್ಲಿಸಿದರೆ ದೇವರಿಗೆ ಸಲ್ಲುತ್ತದೆ, ಇಂತಹ ಸೇವೆ ಮೂಲಕ ಮಾನವೀಯತೆ ಮೈಗೂಡಿಸಿಕೊಂಡು ಜೀವನ ಸಾಗಿಸಿ ಬದುಕನ್ನು ಹಸನಗೊಳಿಸಿಕೊಳ್ಳುವಂತೆ ಕರೆ ನೀಡಿದರು.

ಕೆ ಎಮ್ ಪಿ ಕೆ ಚಾರಿಟೆಬಲ್ ಟ್ರಸ್ಟ್ ನ ಸೇವಾ ಕಾರ್ಯವನ್ನು ಲಿಂಗರಾಜು ಶ್ಲಾಘಿಸಿದರು.

ಕೆ.ಎಂ.ಪಿ.ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ,ಸ್ನೇಹಿತರ ಸಹಕಾರದೊಂದಿಗೆ ಕಳೆದ 6 ವರ್ಷದಿಂದ ನಿರಂತರವಾಗಿ ಡಿಸೆಂಬರ್ ಹಾಗೂ ಜನವರಿ ತಿಂಗಳಿನಲ್ಲಿ ಚಳಿಗಾಲ ಸಂದರ್ಭದಲ್ಲಿ
ನಗರದ ವಿವಿಧ ಸ್ಥಳಕ್ಕೆ ತೆರಳಿ ಅವರ ಸ್ಥಿತಿಗಳನ್ನು ನೋಡಿ ಹೊದಿಕೆ ಯನ್ನು ವಿತರಿಸುತ್ತಾ ಬಂದಿದ್ದೇವೆ‌ ಎಂದು ತಿಳಿಸಿದರು.

ಜೊತೆಗೆ ಕೆಲವೊಂದು ಹಾಡಿಗಳಿಗೂ ಭೇಟಿ ಕೊಟ್ಟಿ ಹಾಡಿ ಜನಾಂಗದವರಿಗೂ
ಹೂದಿಕೆ ಯನ್ನು ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಅಭಿಯಾನದಲ್ಲಿ ಬಿಜೆಪಿ ಮುಖಂಡ ಜೋಗಿ ಮಂಜು, ನಿರೂಪಕ ಅಜಯ್ ಶಾಸ್ತ್ರಿ, ಎಸ್ ಬಿ ರಾಮು,ಎಸ್ ಎನ್ ರಾಜೇಶ್, ಕಡಕೋಳ ಆರೋಗ್ಯ ಅಧಿಕಾರಿ ಮಂಜುನಾಥ್, ಸಚಿನ್ ನಾಯಕ್, ಅಮಿತ್ ಮತ್ತಿತರರು ಪಾಲ್ಗೊಂಡಿದ್ದರು.

ನಿರಾಶ್ರಿತರಿಗೆ ಕಂಬಳಿ‌ ವಿತರಿಸಿ ಮಾನವೀಯತೆ ಮೆರೆದ ಕೆ ಎಂ ಪಿ ಕೆ ಟ್ರಸ್ಟ್ Read More

ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಮತ್ತೆ 5 ವರ್ಷ ಜೈಲು ಶಿಕ್ಷೆ

ಢಾಕಾ: ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಇನ್ನೊಂದು ಪ್ರಕರಣದಲ್ಲಿ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಢಾಕಾ ನ್ಯಾಯಾಲಯ ಆದೇಶಿಸಿದೆ.

ಇನ್ನೊಂದು ಪ್ರಕರಣದಲ್ಲಿ ಮಾಜಿ ಶೇಖ್ ಹಸೀನಾ ಸಹೋದರಿ ಶೇಖ್ ರೆಹಾನಾಗೆ 7 ವರ್ಷಗಳ ಜೈಲು ಶಿಕ್ಷೆ, ಬ್ರಿಟಿಷ್ ಸಂಸದೆ ತುಲಿಪ್ ಸಿದ್ದಿಕ್ ಅವರಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಶೇಖ್ ಹಸೀನಾ ಅವರ ಪುತ್ರ ಸಜೀಬ್ ವಾಜೀದ್ ಜಾಯ್ ಅವರಿಗೆ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 1,00,000 ಬಾಂಗ್ಲಾದೇಶಿ ಟಕಾ ದಂಡ ವಿಧಿಸಿದೆ.

ಶೇಖ್ ಹಸೀನಾ ಅವರ ಪುತ್ರಿ ಸೈಮಾ ವಾಜೀದ್ ಪುಟುಲ್ ಅವರಿಗೂ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಪ್ಲಾಟ್ ವಂಚನೆ ಪ್ರಕರಣದಲ್ಲಿ ಢಾಕಾದ ವಿಶೇಷ ವ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.

ಬಾಂಗ್ಲಾದೇಶದ ಭ್ರಷ್ಟಾಚಾರ ನಿಗ್ರಹ ಆಯೋಗ (ಎಸಿಸಿ) ಶೇಖ್ ಹಸೀನಾ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಕಳೆದ ಜನವರಿಯಲ್ಲಿ ಢಾಕಾದ ಪುರ್ಬಾಚಲ್ ಪ್ರದೇಶದಲ್ಲಿ ಸರ್ಕಾರಿ ಪ್ಲಾಟ್‌ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪದ ಮೇಲೆ ಆರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಿಸಿತ್ತು.

ಈಗಾಗಲೆ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಶೇಖ್ ಹಸೀನಾ ಅವರಿಗೆ ಮರಣದಂಡನೆ ವಿಧಿಸಿದೆ. 2024ರ ಜುಲೈ ದೇಶದಲ್ಲಿ ನಡೆದ ಪ್ರತಿಭಟನೆ ಹತ್ತಿಕ್ಕಲು ಅವರು ಮಾಡಿದ ಪ್ರಯತ್ನಗಳಿಗಾಗಿ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಅವರು ತಪ್ಪಿತಸ್ಥರೆಂದು ತೀರ್ಪು ನೀಡಲಾಗಿದೆ.

ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್​​ ಹಸೀನಾ ಅವರನ್ನು ಹಸ್ತಾಂತರಿಸಲು ಮೊಹಮದ್​ ಯೂನಸ್​ ಅವರ ನೇತೃತ್ವದಲ್ಲಿ ರಚಿತವಾಗಿರುವ ಬಾಂಗ್ಲಾದೇಶ ಮಧ್ಯಂತರ ಸರ್ಕಾರ ಮನವಿ ಮಾಡಿದೆ.

ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಮತ್ತೆ 5 ವರ್ಷ ಜೈಲು ಶಿಕ್ಷೆ Read More

ಎಚ್.ಡಿ.ಕೋಟೆಯಲ್ಲಿ ಕಾಡಾನೆಗಳ ಕಾಟ

ಎಚ್.ಡಿ.ಕೋಟೆ: ಕಳೆದ ಕೆಲ ದಿನಗಳಿಂದ ಹುಲಿ ದಾಳಿಯಿಂದ ಕಂಗೆಟ್ಟಿದ್ದ ಎಚ್.ಡಿ.ಕೋಟೆ ತಾಲ್ಲೂಕಿನ ಜನತೆ ಈಗ ಕಾಡಾನೆಗಳ ಕಾಟದಿಂದ‌ ಬೇಸತ್ತು ಹೋಗಿದ್ದಾರೆ.

ತಾಲ್ಲೂಕಿನ ಬೂದನೂರು ಹಾಡಿ ಬೋಚಿಕಟ್ಟೆ ರಸ್ತೆಯಲ್ಲಿ ಕಾಡಾನೆ ದಾಂಧಲೆ ನಡೆಸಿದ್ದು, ಜಮೀನಿಗೆ ತೆರಳುತ್ತಿದ್ದ ರೈತರ ಮೇಲೆ ದಾಳಿ ಮಾಡಲು ಯತ್ನಿಸಿದೆ.ಆದರೆ ರೈತರು ಕ್ಷಣಾರ್ಧದಲ್ಲಿ ದಾಳಿಯಿಂದ ಪಾರಾಗಿದ್ದಾರೆ.

ಅಷ್ಟರಲ್ಲಿ ರೊಚ್ಚಿಗೆದ್ದ ಕಾಡಾನೆಯು ಮನೆ ಬಳಿ ಕಟ್ಟಿ ಹಾಕಿದ್ದ ಮೇಕೆ ಮೇಲೆ ದಾಳಿ ಮಾಡಿ ಕಾಲನ್ನು ಮುರಿದು ಹಾಕಿದೆ.

ಈ ಭಾಗದಲ್ಲಿ ಕಳೆದ ತಿಂಗಳು ಹುಲಿ ಕಾಟದಿಂದ ಜನರು ಆತಂಕಗೊಂಡಿದ್ದರು. ಈಗ ಆನೆಗಳ ಕಾಟ‌ ಪ್ರಾರಂಭವಾಗಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಚ್.ಡಿ.ಕೋಟೆಯಲ್ಲಿ ಕಾಡಾನೆಗಳ ಕಾಟ Read More

ಶಾಲಾ ಬಸ್ ಉರುಳಿ ವಿದ್ಯಾರ್ಥಿ ಸಾವು

ಮೈಸೂರು, ಡಿ.1: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸುಳೆ ಮುರ್ಕಿ ಬಳಿ ಪ್ರವಾಸಕ್ಕೆ ಬಂದಿದ್ದ ಶಾಲಾ ಬಸ್ ಉರುಳಿದ ಪರಿಣಾಮ ಮೈಸೂರಿನ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

ಮೈಸೂರಿನ ಪವನ್ (15) ಎಂಬ ವಿದ್ಯಾರ್ಥಿ ಮೃತಪಟ್ಟ ದುರ್ದೈವಿ.ಅಪಘಾತದಲ್ಲಿ 26 ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡ ವಿದ್ಯಾರ್ಥಿಗಳಿಗೆ ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ, ಕೆಲವರ ಸ್ಥಿತಿ ಗಂಭೀರವಾಗಿದೆ.

ಮೈಸೂರಿನ ತರಳಬಾಳು ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳು ಗೋಕರ್ಣಕ್ಕೆ ಪ್ರವಾಸಕ್ಕೆ ಹೊರಟಿದ್ದರು. ಸುಳೆ ಮುರ್ಕಿ ಕ್ರಾಸ್ ಬಳಿ ಬಸ್‌ ಚಾಲಕನ ನಿಯಂತ್ರಣ ಕಳೆದುಕೊಂಡು ಉರುಳಿಬಿದ್ದಿದೆ.

ಈ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶಾಲಾ ಬಸ್ ಉರುಳಿ ವಿದ್ಯಾರ್ಥಿ ಸಾವು Read More

ಏಡ್ಸ್ ಶೂನ್ಯ ರಾಜ್ಯ ಮಾಡಲು ಎಲ್ಲರೂ ಕೈ ಜೋಡಿಸಿ:ದಿನೇಶ್ ಗುಂಡೂರಾವ್

ಮೈಸೂರು,ಡಿ.1: ರಾಜ್ಯ ಸರ್ಕಾರ ಹೆಚ್.ಐ.ವಿ ತಡೆಗಟ್ಟಬೇಕೆಂಬ ಉದ್ದೇಶ ಹೊಂದಿದೆ, 2030ಕ್ಕೆ ಏಡ್ಸ್ ಶೂನ್ಯ ರಾಜ್ಯವನ್ನಾಗಿ ಮಾಡುವ ಗುರಿಯನ್ನು ಇಟ್ಟು ಕೊಂಡಿದ್ದು ಎಲ್ಲರೂ ಕೈ ಜೋಡಿಸಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜೆ.ಕೆ.ಗ್ರೌಂಡ್ಸ್ ನಲ್ಲಿ ಅಮೃತ ಮಹೋತ್ಸವ ಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ‌ಉದ್ಘಾಟಿಸಿ ಸಚಿವರು ಮಾತನಾಡಿದರು.

ಹೆಚ್.ಐ.ವಿ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಎ.ಆರ್.ಟಿ ಚಿಕಿತ್ಸೆ ನೀಡಿ ಹೆಚ್.ಐ.ವಿ ಸೋಂಕು ಏಡ್ಸ್ ಆಗಿ ಪರಿವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹೆಚ್‌.ಐ‌‌‌.ವಿ ಸೋಂಕು ಅಸುರಕ್ಷಿತ ಲೈಂಗಿಕ ಸಂಪರ್ಕ, ಹೆಚ್.ಐ.ವಿ ಸೋಂಕಿತ ಗಭಿರ್ಣಿ ಮಹಿಳೆಯರಿಂದ ಮಗುವಿಗೆ ಹಾಗೂ ಹೆಚ್ಚಾಗಿ ಒಬ್ಬರು ಬಳಸುವ ಡ್ರಗ್ಸ್ ಸೂಜಿಯನ್ನು‌ ಮತ್ತೊಬ್ಬರು ಬಳಸುವುದರಿಂದ ಸಾಮಾನ್ಯವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಹೆಚ್.ಐ.ವಿ ಹರಡುತ್ತಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ ಪುರುಷರಿಂದ ಪುರುಷರಿಗೆ
ಸಲಿಂಗ ಲೈಂಗಿಕ ಸಂಪರ್ಕದಿಂದ ಹೆಚ್.ಐ.ವಿ ಹರಡುತ್ತಿದೆ ಎಂದು ದಿನೇಶ್‌‌ ಗುಂಡೂರಾವ್ ಹೇಳಿದರು.

ಹೆಚ್.ಐ.ವಿ ಹರಡದಂತೆ ತಡೆಗಟ್ಟಲು ಹೆಚ್ಚಾಗಿ ಯುವ ಜನರು ಇರುವ ಹಾಸ್ಟಲ್, ಕಾಲೇಜು ಹಾಗೂ ಲೈಂಗಿಕ ಕಾರ್ಯಕರ್ತೆಯರು ವಾಸಿಸುವ ಸ್ಥಳಗಳಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಹೆಚ್.ಐ.ವಿ. ಸೋಂಕು ಒಟ್ಟಿಗೆ ಊಟ ಸೇವಿಸುವುದು, ನೆಗಡಿ ಕೆಮ್ಮಿನಿಂದ ಹರಡುವುದಿಲ್ಲ. ಹೆಚ್.ಐ.ವಿ ಸೋಂಕಿತರಿಗೂ ಸಹ ಸಮಾಜದಲ್ಲಿ ಗೌರವಯುತ ಬದುಕು ನಡೆಸುವ ಹಕ್ಕಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ. ಎನ್ ಮಂಜೇಗೌಡ ಅವರು ಮಾತನಾಡಿ, ಇಂದಿಗೂ ಈ ಖಾಯಿಲೆ ಅಂದರೆ ಎಲ್ಲರಿಗೂ ಭಯ ಇದೆ, ಮೊದಲಿಗೆ ದೇಶದಲ್ಲಿ ಇಷ್ಟೊಂದು ಆಸ್ಪತ್ರೆಗಳು ವೈದ್ಯರು ಇರಲಿಲ್ಲ ಹಾಗಾಗಿ ಸರಿಯಾದ ಪರೀಕ್ಷೆ ಆಗುತ್ತಿರಲಿಲ್ಲ ಆದರೆ ಇಂದು ಆಸ್ಪತ್ರೆಗಳು ವೈದ್ಯರ ಸಂಖ್ಯೆ ಹೆಚ್ಚಾಗುತ್ತಿದೆ ಶಸ್ತ್ರ ಚಿಕಿತ್ಸೆಗೆ ಒಳಪಡುವ ಪ್ರತಿಯೊಬ್ಬರನ್ನು ಏಡ್ಸ್ ಟೆಸ್ಟ್ ಮಾಡಿಯೇ ಮುಂದಿನ ಚಿಕಿತ್ಸೆ ಕೊಡುತ್ತಾರೆ ಹಾಗಾಗಿ ಯಾರು ಭಯ ಪಡುವ ಅವಶ್ಯಕತೆಯಿಲ್ಲ ಎಂದು ಹೇಳಿದರು.

ಏಡ್ಸ್ ಪ್ರಿವೆನ್ ಷನ್ ಸೊಸೈಟಿಯ ಯೋಜನಾ ನಿರ್ದೇಶಕರಾದ ಪದ್ಮ ಬಸವಂತಪ್ಪ ಅವರು ಮಾತನಾಡಿ,
ಕರ್ನಾಟಕದಲ್ಲಿ ಒಟ್ಟು 442 ಸ್ಟ್ಯಾಂಡ್ – ಅಲೋನ್ ಐಸಿಟಿಸಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ರಾಜ್ಯದಲ್ಲಿ 94 ಆ್ಯಂಟಿರೆಟ್ರೋ ವೈರಲ್ ಥೆರಫಿ ( ಎ.ಆರ್.ಟಿ) ಕೇಂದ್ರಗಳು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಲವು ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಕೆಲವು ಖಾಸಗಿ ವೈದ್ಯಕೀಯ ವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಹಾಗೂ 290 ಉಪ ಎ ಆರ್ ಟಿ ಕೇಂದ್ರಗಳು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಹಾಗೂ ಸಿ. ಹೆಚ್. ಚಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಐ.ಇ.ಸಿ ಸಾಮಗ್ರಿಗಳ ಬಿಡುಗಡೆ ಮಾಡಲಾಯಿತು. ಏಡ್ಸ್ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ವಿವಿಧ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನಿಸಲಾಯಿತು. ರಕ್ತದಾನ ಶಿಬಿರದ ವತಿಯಿಂದ ನೂತನ ವರ್ಷದ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು.

ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಪಿ. ಸಿ ಕುಮಾರಸ್ವಾಮಿ ಅವರು ಅತಿಥಿ ಗಣ್ಯರನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಡಾ. ವಸಂತ್ ಕುಮಾರ್ ಕೆ, ಮೂಡದ ಮಾಜಿ ಅಧ್ಯಕ್ಷರಾದ ಹೆಚ್.ವಿ ರಾಜೀವ್, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಕೆ. ಆರ್. ದ್ರಾಕ್ಷಯಿಣಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ. ಮೊಹಮ್ಮದ್ ಶಿರಾಜ್ ಅಹಮ್ಮದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ವಿಭಾಗೀಯ ಸಹ ನಿರ್ದೇಶಕರಾದ ಡಾ. ಮಲ್ಲಿಕಾ ಬಿ. ಮತ್ತಿತರು ಉಪಸ್ಥಿತರಿದ್ದರು.

ಏಡ್ಸ್ ಶೂನ್ಯ ರಾಜ್ಯ ಮಾಡಲು ಎಲ್ಲರೂ ಕೈ ಜೋಡಿಸಿ:ದಿನೇಶ್ ಗುಂಡೂರಾವ್ Read More

ರಮಣ ಜ್ಞಾನ ಕೇಂದ್ರದಲ್ಲಿ ಸಾಮೂಹಿಕ ಸರಸ್ವತಿ ಪೂಜಾ ಮಂತ್ರ ಕಲಿಕೆ

ಮೈಸೂರು: ಕುವೆಂಪು ನಗರದಲ್ಲಿರುವ ಶ್ರೀ ರಮಣ ಜ್ಞಾನ ಕೇಂದ್ರದಲ್ಲಿ ನಗರದ ಸಾಧನ ಮಂದಿರದ ಪೂಜ್ಯ ಸ್ವಾಮಿ ಹಂಸಾನಂದರ ಮಾರ್ಗದರ್ಶನದಲ್ಲಿ ಮಕ್ಕಳು ಮತ್ತು ಯುವಕರಿಗಾಗಿ ಸಾಮೂಹಿಕ ಸರಸ್ವತಿ ಪೂಜಾ ಮಂತ್ರ ಕಲಿಕೆ ಶಿಬಿರ ಆಯೋಜಿಸಲಾಗಿತ್ತು.

ಸುಮಾರು 15 ದಿನಗಳ ಕಾಲ ನಿರಂತರವಾಗಿ, ಮಕ್ಕಳಿಗೆ ಸರಸ್ವತಿ ಪೂಜೆಯ ಮಂತ್ರ ಉಚ್ಚಾರಣೆ, ಕ್ರಮ ವಿಧಿಗಳು ಮತ್ತು ಪೂಜೆಯ ತತ್ತ್ವಾರ್ಥಗಳನ್ನು ವಿವರವಾಗಿ ಬೋಧಿಸಲಾಯಿತು.

ಈ ಮೂಲಕ ಮಕ್ಕಳಲ್ಲಿ ಸಂಸ್ಕಾರ, ಶ್ರದ್ಧೆ ಮತ್ತು ನೈತಿಕ ಮೌಲ್ಯಗಳನ್ನೂ ಬೆಳೆಸುವ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿತ್ತು.

ಶಿಬಿರವು ಸೋಮವಾರ ಯಶಸ್ವಿಯಾಗಿ ಸಂಪನ್ನಗೊಂಡಿತು. ಶಿಬಿರದ ಅಂತ್ಯದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಕಾರ್ಯಕ್ರಮದ ಉಸ್ತುವಾರಿಯನ್ನು ಪೂಜ್ಯ ಸ್ವಾಮಿ ಹಂಸಾನಂದರು ವಹಿಸಿದ್ದರು.
ಕೇಂದ್ರದ ಕಾರ್ಯದರ್ಶಿ ಗೀತಾ ಚರಣ್, ವ್ಯವಸ್ಥಾಪಕ ಶಶಿಕುಮಾರ್, ಕೇಂದ್ರದ ಅಧ್ಯಾಪಕರು ಹಾಗೂ ಭಕ್ತರು ಮತ್ತು ಪೋಷಕರು ಕಾರ್ಯಕ್ರಮಕ್ಕೆ ಸಾಥ್ ನೀಡಿದರು.

ಈ ವೇಳೆ ಸ್ವಾಮಿ ಹಂಸಾನಂದರು ಮಾತನಾಡಿ,ಬಾಲ್ಯದಲ್ಲೇ ಧಾರ್ಮಿಕ ಜ್ಞಾನ ಮತ್ತು ಸಂಸ್ಕಾರಗಳನ್ನು ನೀಡುವುದು ಜೀವನ ರೂಪಿಸುವ ಮಹತ್ವದ ಹೆಜ್ಜೆ, ಮಕ್ಕಳು ಪೂಜಾ ವಿಧಾನ ಕಲಿಯುವುದು ನಮ್ಮ ಸಂಸ್ಕೃತಿ ಉಳಿಯುವ ದಾರಿ
ಎಂದು ತಿಳಿಹೇಳಿದರು.

ರಮಣ ಜ್ಞಾನ ಕೇಂದ್ರದಲ್ಲಿ ಸಾಮೂಹಿಕ ಸರಸ್ವತಿ ಪೂಜಾ ಮಂತ್ರ ಕಲಿಕೆ Read More