ಸರ್ಕಾರಿ ಸ್ಕೂಲ್ ಟೂರ್ ಮಾಡಿ ಬನ್ನಿ ಸ್ವಾಮಿ-ಸಿಎಂ ಗೆ ಅಶೋಕ್ ಟಾಂಗ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನವರೇ,
ಕಾಂಗ್ರೆಸ್ ಪಕ್ಷಕ್ಕೆ ಸೇರಿ ಸುಮಾರು 20 ವರ್ಷಗಳಾದ ಮೇಲೆ ಮೊಟ್ಟಮೊದಲ ಬಾರಿಗೆ ಡಿಸಿಎಂ ಡಿ‌.ಕೆ ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿ, ನಾಟಿಕೋಳಿ ತಿಂಡಿ ತಿಂದು ಹೋಮ್ ಟೂರ್ ಮಾಡಿಕೊಂಡು ಬಂದಿದ್ದೀರಿ.ಮುಂದಿನ ಬ್ರೇಕ್ ಫಾಸ್ಟ್ ಮೀಟಿಂಗ್ ಎಲ್ಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಛೇಡಿಸಿದ್ದಾರೆ.
ಯಾರ ಜೊತೆ ಅಂತ ನಿಮ್ಮ ಹೈಕಮಾಂಡ್ ಏಜೆಂಟ್ ವೇಣುಗೋಪಾಲ್ ಅವರು ಆದೇಶ ಕೊಡುವುದಕ್ಕೂ ಮುಂಚೆ ಒಮ್ಮೆ ಸರ್ಕಾರಿ ಸ್ಕೂಲ್ ಟೂರ್ ಮಾಡಿ ಬನ್ನಿ ಸ್ವಾಮಿ ಎಂದು ಟ್ವೀಟ್ ಮಾಡಿ‌ ಸಿಎಂ ಕಾಲೆಳೆದಿದ್ದಾರೆ.
ಶೌಚಾಲಯಗಳೇ ಇಲ್ಲದ ಶಾಲೆಗಳು, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳು, ಬಿದ್ದು ಹೋಗುತ್ತಿರುವ ಗೋಡೆಗಳು, ಶಿಕ್ಷಕರಿಲ್ಲದ ತರಗತಿಗಳನ್ನು ಒಮ್ಮೆ ಕಣ್ತುಂಬಿಕೊಂಡು ಬನ್ನಿ ಸಿದ್ದರಾಮಯ್ಯನವರೇ.
ಇಂತಹ ಲಜ್ಜೆಗೆಟ್ಟ ಸರ್ಕಾರವನ್ನ ಇಡೀ ಪ್ರಪಂಚದ ಇತಿಹಾಸದಲ್ಲೇ ಕಾಣಲು ಸಾಧ್ಯವಿಲ್ಲ ಎಂದು ಅಶೋಕ್ ಟೀಕಿಸಿದ್ದಾರೆ.

ಸರ್ಕಾರಿ ಸ್ಕೂಲ್ ಟೂರ್ ಮಾಡಿ ಬನ್ನಿ ಸ್ವಾಮಿ-ಸಿಎಂ ಗೆ ಅಶೋಕ್ ಟಾಂಗ್ Read More

ದತ್ತಪೀಠದಲ್ಲಿ ಹನುಮ ಜಯಂತಿ ಸಂಭ್ರಮ: ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ

ಮೈಸೂರು: ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ‌ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ ಕಾರ್ಯಸಿದ್ಧಿ ಆಂಜನೇಯನ ಮಹತ್ವ ಮತ್ತು ರಾಮಾಯಣದ ಹಿನ್ನೆಲೆಯನ್ನು ವಿವರಿಸಿದರು.
ರಾಮಾಯಣದಲ್ಲಿ ಶ್ರೀರಾಮನು ಸೀತೆಯನ್ನು ಹುಡುಕಿಕೊಡುವಂತೆ ಹನುಮಂತನಿಗೆ ಕೇಳಿಕೊಂಡಾಗ ಮತ್ತು ಲಂಕಾ ಪ್ರವೇಶದ ನಂತರ ಸೀತೆಯು ಶ್ರೀರಾಮನನ್ನು ಸೇರಿಸುವಂತೆ ಹನುಮಂತನನ್ನು ಕೋರಿದಾಗ, ಇಬ್ಬರೂ “ನನ್ನ ಕಾರ್ಯಸಿದ್ಧಿ ಮಾಡಿಕೊಡು” ಎಂದು ಹನುಮಂತನನ್ನೇ ಪ್ರಾರ್ಥಿಸಿದ್ದರು. ಹಾಗಾಗಿ ಹನುಮಂತನು ಭಕ್ತರ ಪಾಲಿನ ‘ಕಾರ್ಯಸಿದ್ಧಿ ಹನುಮಂತ’ನಾಗಿದ್ದಾನೆ ಎಂದು ಶ್ರೀಗಳು ತಿಳಿಸಿದರು.
ಸಾಮಾನ್ಯವಾಗಿ ಭಾರತದಲ್ಲಿ ವರ್ಷಕ್ಕೆ ಆರು ಬಾರಿ ಹನುಮ ಜಯಂತಿ ಬರುತ್ತದೆ. ಆದರೆ ದತ್ತಪೀಠದಲ್ಲಿರುವ ಹನುಮಂತನು ವಿಶೇಷವಾಗಿದ್ದು, ಆಕಾಶ, ಭೂಮಿ ಮತ್ತು ಪಾತಾಳ ಹೀಗೆ ಮೂರು ಲೋಕಗಳನ್ನು ಪ್ರತಿನಿಧಿಸುವ ವಿಶ್ವರೂಪವನ್ನು ಹೊಂದಿದ್ದಾನೆ.
ದಶಕಂಠ ರಾವಣ, ಶತಕಂಠ ಮತ್ತು ಪಾತಾಳ ರಾವಣ (ಮೈರಾವಣ) ಎಂಬ ಮೂವರು ರಾವಣರನ್ನು ಸಂಹರಿಸಿ, ಆ ಅಸುರರಿಗೆ ಮುಕ್ತಿಯನ್ನು ನೀಡಿ ತನ್ನಲ್ಲೇ ಐಕ್ಯ ಮಾಡಿಕೊಂಡ ಸಂಕೇತವಾಗಿ ಇಲ್ಲಿನ ವಿಗ್ರಹವಿದೆ ಎಂದು ತಿಳಿಸಿದರು.
ಇಲ್ಲಿ ‘ಫಲ ಸಮರ್ಪಣೆ’ ಮಾಡುವುದು ಅತ್ಯಂತ ಪ್ರಸಿದ್ಧ ವ್ರತವಾಗಿದ್ದು, ಭಕ್ತರು ಕೇವಲ ಒಂದು ತೆಂಗಿನ ಕಾಯಿ ಸಮರ್ಪಿಸಿದರೆ ಸಾಕು, ಹನುಮಂತನು ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂದು ಹೇಳಿದರು.
ಜಗತ್ತಿನಲ್ಲಿ ಯುದ್ಧದ ಭೀತಿ ತೊಲಗಿ, ಎಲ್ಲೆಡೆ ಶಾಂತಿ ನೆಲೆಸಲಿ ಮತ್ತು ಸಮಸ್ತ ಜನರಿಗೂ ಒಳಿತಾಗಲಿ ಎಂದು ಈ ಶುಭದಿನದಂದು ಸ್ವಾಮೀಜಿ ಪ್ರಾರ್ಥಿಸಿದರು.
ಭಕ್ತರು ಜೈ ವೀರ ಹನುಮಾನ್ ಎಂಬ ಘೋಷಣೆ ಕೂಗುತ್ತಾ ಪ್ರಾರ್ಥನೆ ಮಾಡಿದರು.
ಗರ್ ವಾಪಸಿ:
ಇದೆ ವೇಳೆ ಚಾಮರಾಜನಗರ, ಗುಂಡ್ಲುಪೇಟೆ ಮತ್ತಿತರ ಕಡೆಯಿಂದ ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದವರು ಇಂದು ಸ್ವಾಮೀಜಿಯವರ ಸಮ್ಮುಖದಲ್ಲಿ ಮತ್ತೆ ಹಿಂದೂ ಧರ್ಮಕ್ಕೆ ವಾಪಸಾಗಿದ್ದು ನಿಜಕ್ಕೂ ವಿಶೇಷವಾಗಿತ್ತು.
ಶ್ರೀ‌ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಹಿಂದೂ ಧರ್ಮಕ್ಕೆ ವಾಪಸಾದವರೆಲ್ಲರಿಗೂ ಆಶೀರ್ವಾದ ನೀಡಿ,ಪ್ರತಿದಿನ ಯಾವುದಾದರೂ ಒಂದು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ದೇವರಿಗೆ‌ ನಮಸ್ಕರಿಸಬೇಕೆಂದು ಸಲಹೆ ನೀಡಿದರು.
ಒಂದು ವೇಳೆ ದೇವಸ್ಥಾನಕ್ಕೆ ಹೋಗಲಾಗದೇ ಇದ್ದರೆ ನಾವೇ ಒಂದು ದೇವಸ್ಥಾನವನ್ನೇ ಕಟ್ಟೋಣ ಎಂದು ನುಡಿದರು.
ಈ‌ ವೇಳೆ ಶ್ರೀಗಳು ಮಹಿಳೆಯರಿಗೆ ಸೀರೆಗಳನ್ನು ವಿತರಿಸಿ ಆಶೀರ್ವದಿಸಿ ದರು.

ದತ್ತಪೀಠದಲ್ಲಿ ಹನುಮ ಜಯಂತಿ ಸಂಭ್ರಮ: ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ Read More

ಜ್ಯೋತಿಷ್ಯ ಮತ್ತು ವಾಸ್ತು ಕುರಿತು ವಿಚಾರ ಸಂಕಿರಣ

ಮೈಸೂರು: ಭಾರತೀಯ ಜ್ಯೋತಿಷ್ಯ ವಿಜ್ಞಾನ ಮಂಡಳಿ ಮೈಸೂರು ಅಧ್ಯಾಯವು ಜ್ಯೋತಿಷ ದ್ವಾರ ಎಂಬ ಶೀರ್ಷಿಕೆ ಕುರಿತು ವಿಚಾರ ಸಂಕಿರಣ‌ ಹಮ್ಮಿಕೊಂಡಿತು.
ವಿಚಾರ ಸಂಕಿರಣದಲ್ಲಿ ಮೈಸೂರಿನ ವಿದ್ಯಾರ್ಥಿಗಳು, ಜ್ಯೋತಿಷ್ಯ ಮತ್ತು ವಾಸ್ತು ವಿದ್ಯಾ ಅನ್ವೇಷಕರು ಭಾಗವಹಿಸಿದ್ದರು.
ಈ ಕಾರ್ಯಕ್ರಮವು ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಮತ್ತು ಶಿಕ್ಷಣ ಮಂಡಳಿಯ ಅಧ್ಯಕ್ಷರ ಉಪಸ್ಥಿತಿಯಲ್ಲಿ ನಡೆಯತು, ಅವರು ವೈದಿಕ ಜ್ಯೋತಿಷ್ಯ ಮತ್ತು ವಾಸ್ತುವಿನ ಪ್ರಾಯೋಗಿಕ ಅನ್ವಯಿಕೆಗಳ ಕುರಿತು ಪ್ರಬುದ್ಧ ಉಪನ್ಯಾಸಗಳ ಸರಣಿಯನ್ನು ನೀಡಿದರು.
ವಿಶೇಷ ದೃಷ್ಟಿ: ಚಾರ್ಟ್ ವಿಶ್ಲೇಷಣೆಯಲ್ಲಿ ವಿಶೇಷ ದೃಷ್ಟಿಯ ಚಲನಶಾಸ್ತ್ರ ಅಂದರೆ ಸಾಮಾನ್ಯವಾಗಿ ತಿಳಿದಿರುವ ಏಳನೇ ದೃಷ್ಟಿಯನ್ನು ಮೀರಿ ಗ್ರಹಗಳ ವಿಶೇಷ ದೃಷ್ಟಿಗಳ ಆಳವಾದ ಪರಿಣಾಮ
ವಾಸ್ತು ದೋಷಗಳು: ವಾಸ್ತು ದೋಷಗಳನ್ನು ಅರ್ಥಮಾಡಿಕೊಳ್ಳುವುದು, ಆರೋಗ್ಯ ಮತ್ತು ಸಮೃದ್ಧಿಯ ಮೇಲೆ ವಾಸ್ತು-ಸಂಬಂಧಿತ ಪ್ರಭಾವಗಳನ್ನು ಗುರುತಿಸುವ ಮತ್ತು ಸರಿಪಡಿಸುವ ಬಗ್ಗೆ ಅಮೂಲ್ಯವಾದ ಒಳನೋಟ.
ಜಾತಕ ವಿಶ್ಲೇಷಣೆಯಲ್ಲಿ ಆರೂಢದ ಬಳಕೆ ನಿಖರವಾದ ಚಾರ್ಟ್ ಮೌಲ್ಯಮಾಪನಕ್ಕಾಗಿ ಆರೂಢ ಪರಿಕಲ್ಪನೆಗಳನ್ನು ಬಳಕೆ ಜಾತಕ ವಿಶ್ಲೇಷಣೆಗಾಗಿ ನಕ್ಷತ್ರ ಮತ್ತು ಅದರ ವಾದ ನಕ್ಷತ್ರಗಳು ಹಾಗೂ ಪಾದಗಳ ಮೂಲಕ ಜಾತಕವನ್ನು ನಿಖರವಾಗಿ ಅರ್ಥೈಸಿಕೊಳ್ಳುವುದು.
ಐಸಿಎಎಸ್ ರಾಷ್ಟ್ರೀಯ ಉಪಾಧ್ಯಕ್ಷರಾದ ಸೌಮ್ಯ ಕುಮಾರ್ ಮತ್ತು ಮೈನೂರು ಅಧ್ಯಾಯದ ಅಧ್ಯಕ್ಷ ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ಸುಬ್ರಹ್ಮಣ್ಯ ತಂತ್ರಿ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.
ಭಾಗವಹಿಸಿದ ಎಲ್ಲರಿಗೂ ಭಾಗವಹಿಸುವಿಕೆಯ ಪ್ರಮಾಣಪತ್ರಗಳನ್ನು ನೀಡಲಾಯಿತು. ಹೆಚ್ಚುವರಿಯಾಗಿ, ಜ್ಯೋತಿಷ ಪ್ರವೀಣ.
ಜ್ಯೋತಿಷ ದ್ವಾರಕಾರ್ಯಕ್ರಮವು ಸಮಾಜದ ಪ್ರಯೋಜನಕ್ಕಾಗಿ ಅಧಿಕೃತ ವೈದಿಕ ಜ್ಞಾನವನ್ನು ಎತ್ತಿಹಿಡಿಯುವ ಮತ್ತು ಪ್ರಸಾರ ಮಾಡುವ ಐಸಿಎಎನ್ ಮೈಸೂರು ಅಧ್ಯಾಯದ ಬದ್ಧತೆಯನ್ನು ಪುನರುಚ್ಚರಿಸಿತು.
ಕಾರ್ಯದರ್ಶಿ ರವೀಂದ್ರ ಭಟ್, ಮೋಹನ್ ಬಾಬು, ರಘೋಥಮ್, ಎಸ ಸುಜಾತ ಜೋಶಿ, ಶ್ರೀದೇವಿ ಮತ್ತಿತರರು ಹಾಜರಿದ್ದರು

ಜ್ಯೋತಿಷ್ಯ ಮತ್ತು ವಾಸ್ತು ಕುರಿತು ವಿಚಾರ ಸಂಕಿರಣ Read More

ಸಿದ್ದಾರ್ಥ ನಗರದಲ್ಲಿ ಹನುಮ ಜಯಂತಿ

ಮೈಸೂರು: ಮೈಸೂರಿನ ‌ಸಿದ್ದಾರ್ಥ ನಗರದ
ಶ್ರೀ ವೀರಭದ್ರೇಶ್ವರ ಮೆಡಿಕಲ್ ಮುಂಭಾಗ ಹನುಮ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಯುವರಾಜ್ ಕುಮಾರ್ ನೇತೃತ್ವದಲ್ಲಿ ಆರ್. ಮನು ಕುಮಾರ್, ಸೋಮಣ್ಣ, ಮುದ್ದುರಾಜ್ ಮಂಜುನಾಥ್, ಎನ್ ಮಹೇಶ್, ಮಧು, ಶಿವು, ಸಂದೇಶ, ಚೆನ್ನಪ್ಪ ಮತ್ತು ಹನುಮ ಭಕ್ತರುಗಳ ನೆರವಿನಲ್ಲಿ ಹನುಮ ಜಯಂತಿ ನೆರವೇರಿಸಲಾಯಿತು.

ಸಿದ್ದಾರ್ಥ ನಗರದಲ್ಲಿ ಹನುಮ ಜಯಂತಿ Read More

ರವಿಚಂದ್ರ, ಸಿಂಚನಗೌಡಗೆ ಸನ್ಮಾನ

ಮೈಸೂರು: ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಕನಕದಾಸ ಪತ್ತಿನ ಸಹಕಾರ ಸಂಘದ ನೂತನ ನಿರ್ದೇಶಕ ಎಂ. ರವಿಚಂದ್ರ ಮತ್ತು ಎಂ ಎಂ ಗ್ರೂಪ್ಸ್ ನವರು ನೀಡಿರುವ ಕರ್ನಾಟಕ ಅಚೀವರ್ಸ್ ಅವಾರ್ಡ್ ಪುರಸ್ಕೃತ ಸಿಂಚನಗೌಡ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ವಿದ್ಯಾ, ದೇವ ರತ್ನ,ರಾಜೇಶ್ ಕುಮಾರ್,ಮಹೇಶ, ಶ್ರೀಧರ್, ಮಹದೇವಸ್ವಾಮಿ, ದತ್ತ ಮತ್ತಿತರರು ಹಾಜರಿದ್ದರು.

ರವಿಚಂದ್ರ, ಸಿಂಚನಗೌಡಗೆ ಸನ್ಮಾನ Read More

ದಲಿತರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್‌ಗೆ ಸೀಮಿತವಾಗಿಸಿದೆ: ನಾರಾಯಣಸ್ವಾಮಿ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಬಿಜೆಪಿಯ ಯಾರೋ ಒಬ್ಬರು ತಲೆ ಕೆಟ್ಟು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದನ್ನೇ ಕಾಂಗ್ರೆಸ್‌ನವರು ಇನ್ನೂ ಜನತೆ ಮುಂದೆ ಹೇಳಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟಾಂಗ್ ನೀಡಿದರು

ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಸಂವಿಧಾನ ಸಮರ್ಪಣಾ ದಿನ, ಸಂವಿಧಾನ ಜಾಗೃತಿಗಾಗಿ ಭೀಮ ನಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ನಾಯಕ ಎಂಬುದನ್ನು ಇಡೀ ದೇಶದ ಜನರೇ ಒಪ್ಪಿದ್ದಾರೆ. ಹಿಂದೆ ದೇಶದಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿತ್ತು. ಆದರೆ ಈಗ ಕಾಂಗ್ರೆಸ್ ತನ್ನ ಆಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ  ಕಾಂಗ್ರೆಸ್ ದಲಿತರನ್ನು ವೋಟ್ ಬ್ಯಾಂಕ್‌ಗೆ ಮಾತ್ರ ಸೀಮಿತವಾಗಿಸಿದೆ. 75 ವರ್ಷಗಳ ಕಾಲ ದೇಶದಲ್ಲಿ ಕಾಂಗ್ರೆಸ್ ದಲಿತರನ್ನು ಗುಲಾಮರನ್ನಾಗಿಸಿಕೊಂಡಿದೆ. ದೇಶದಲ್ಲಿ ಎಲ್ಲಿಯೂ ಕೂಡ ದಲಿತರಿಗೆ ಮುಖ್ಯಮಂತ್ರಿಸ್ಥಾನ ನೀಡಲಿಲ್ಲ ಎಂದು ಆರೋಪಿಸಿದರು.

ಬಿಜೆಪಿಯನ್ನು ಮೀಸಲಾತಿ ವಿರೋಧಿ ಪಕ್ಷ ಎಂದು ಹೇಳುವ ಕಾಂಗ್ರೆಸ್ಸಿಗರು ಕರ್ನಾಟಕದಲ್ಲಿ ಎಸ್ಸಿಗೆ ಶೇ.15 ರಿಂದ ಶೇ.18 ಗೆ, ಎಸ್ ಟಿಗೆ 3 ರಿಂದ 7 ರಷ್ಟು ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ ಸರ್ಕಾರ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ‌ತಿರುಗೇಟು ನೀಡಿದರು.

ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರೋವರೆಗೂ ಸಂವಿಧಾನ ಬದಲಾವಣೆ ಮಾತೇ ಇಲ್ಲ, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜೀವವನ್ನು ಕೈಯಲ್ಲಿ ಹಿಡಿದು ಬದುಕುತ್ತಿದ್ದ ಜಮ್ಮು-ಕಾಶ್ಮೀರದ ಜನರಿಗೆ 370 ನೇ ವಿಧಿಯನ್ನು ರದ್ದುಗೊಳಿಸಿ, ಎಲ್ಲಾ ಮೂಲಭೂತ ಸೌಕರ್ಯ ಸಿಗುವಂತೆ ಮಾಡಲಾಗಿದೆ ಎಂದು ತಿಳಿಸಿದರು.

ಡಿಕೆಶಿ ಯಾವತ್ತೂ ಸಿಎಂ ಸಿದ್ದರಾಮಯ್ಯ ಮನೆಗೆ ಹೋದವರಲ್ಲ, ಸಿದ್ದರಾಮಯ್ಯ ಕೂಡ ಯಾವತ್ತೂ ಡಿಕೆಶಿ ಮನೆ ಹೋಗಿಲ್ಲ. ಅಧಿಕಾರದ ಆಸೆ, ಸಿಎಂ ಸ್ಥಾನ ಉಳಿಸಿಕೊಳ್ಳಬೇಕೆಂಬ ಹಪಾಹಪಿಯಿಂದ ಅವರ ಮನೆಗೆ ಹೋಗಿದ್ದಾರೆ. ಮನಸ್ಸುಗಳೇ ಬ್ರೇಕ್ ಆಗಿರುವಾಗ ಬ್ರೇಕ್ ಫಾಸ್ಟ್ ತೇಪೆ ಹಚ್ಚುತ್ತಾರೆ ಎಂದು ‌ಟೀಕಾಪ್ರಹಾರ ನಡೆಸಿದರು ‌

ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತಿಸಲು ಸೇರಿದ್ದಾರಾ, ದಲಿತರ ಸಮಸ್ಯೆ, ರೈತರ ಸಮಸ್ಯೆ ಬಗೆಹರಿಸಲು ಏನಾದ್ರೂ ಸೇರಿದ್ದಾರಾ ಬ್ರೇಕ್ ಫಾಸ್ಟ್, ಪಾರ್ಟಿ ಮಾಡಿಕೊಂಡು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಲ್ಲಿ ದಲಿತರಿಗೆ ಕುರ್ಚಿ ಇಲ್ಲ ಅಂತಾ ಸಾಬೀತಾಗಿದೆ. ಸಂಪುಟ ಪುನರ್ ರಚನೆಯಾದರೆ ಸಂಪುಟದಿಂದ ಪರಮೇಶ್ವರ್, ಮಹದೇವಪ್ಪ ಹಾಗೂ ಮುನಿಯಪ್ಪ ಔಟ್ ಆಗುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಇನ್ನೊಬ್ಬ ದಲಿತರನ್ನು ಸಿಎಂ ಆಗಲೂ ಬಿಡಲ್ಲ, ಸಿಎಂ ಆದ್ರೆ ಪ್ರಿಯಾಂಕ ಖರ್ಗೆಗೆ ಮಾತ್ರ ಅವಕಾಶ,ಅವರನ್ನ ಸಿಎಂ ಅಥವಾ ಡಿಸಿಎಂ ಮಾಡುತ್ತಾರೆ ಎಂದು ಭವಿಷ್ಯ ನುಡಿದರು.

ಮಾಜಿ ಶಾಸಕ ಎನ್ ಮಹೇಶ್ ಮಾತನಾಡಿ,
ಬಿಜೆಪಿರವರು ಸಂವಿಧಾನದ ವಿರೋಧಿಗಳು ಅವರು ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್ ನವರು ಆರೋಪಿಸುತ್ತಾರೆ, ಕೇಂದ್ರದಲ್ಲಿ 12 ವರ್ಷ ಬಿಜೆಪಿ ಅಧಿಕಾರದಲ್ಲಿದೆ ಮತ್ತು ಅಟಲ್ ಬಿಹಾರಿ ವಾಜಪೇಯಿ ರವರ ಕಾಲದಲ್ಲಿ 5 ವರ್ಷ ಅಧಿಕಾರದಲ್ಲಿತ್ತು ನಾವು ಸಂವಿಧಾನವನ್ನು ಬದಲಾಯಿಸಿದ್ದಿವಾ ಎಂದು ಪ್ರಶ್ನಿಸಿದರು.

ಡಾ. ಅಂಬೇಡ್ಕರ್ ಅವರು ಸಂವಿಧಾನವನ್ನು ಆಯಾ ಕಾಲಕ್ಕೆ ಅನುಗುಣವಾಗಿ ಸರ್ಕಾರಗಳು ಮಾಡಿಕೊಡಲು ಅವಕಾಶ ಇತ್ತು. ಕಾಂಗ್ರೆಸ್, ಬಿಜೆಪಿ ಹಾಗೂ ಜನತಾ ಪಕ್ಷಗಳು ಸೇರಿ ಇಲ್ಲಿವರೆಗೂ 106 ಭಾರಿ ಸಂವಿಧಾನ ತಿದ್ದುಪಡಿ ಮಾಡಿವೆ. ಇದರ ಬಗ್ಗೆ ಜನರು ಸರಿಯಾಗಿ ಗಮನ ಹರಿಸಬೇಕು ಎಂದು ತಿಳಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಲ್ಲಾ ಸದಸ್ಯರ ಅಭಿಪ್ರಾಯವನ್ನು ಸಂಗ್ರಹ ಮಾಡಿ 4,700 ತಿದ್ದುಪಡಿಗಳನ್ನು ಮಾಡಿ 1949 ರ ನವಂಬರ್ 26 ರಂದು ದೇಶಕ್ಕೆ ಸಮರ್ಪಣೆ ಮಾಡಿದ್ದಾರೆ.1949 ರಲ್ಲಿ ಮೊದಲನೇ ಸಾರ್ವತ್ರಿಕ ಚುನಾವಣೆ ನಡೆಯಿತು. 1951 ರಿಂದ 2025 ವರೆಗೆ ವಿವಿಧ ಸರ್ಕಾರಗಳು 106 ತಿದ್ದುಪಡಿಗಳನ್ನು ಮಾಡಿವೆ. ಈ 106 ತಿದ್ದುಪಡಿಗಳಲ್ಲಿ ಕಾಂಗ್ರೆಸ್ ಸರ್ಕಾರದಲ್ಲೇ 75 ತಿದ್ದುಪಡಿಗಳು ಆಗಿವೆ. ಕಾಂಗ್ರೆಸ್ಸೇತರ ಸರ್ಕಾರಗಳು 31 ತಿದ್ದುಪಡಿಗಳನ್ನು ಮಾತ್ರ ಮಾಡಿವೆ ಎಂದು ಮಹೇಶ್ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ಸಿ.ಎಸ್ ನಿರಂಜನ್ ಕುಮಾರ್, ಮಾಜಿ ಶಾಸಕರಾದ ಎಸ್ ಬಾಲರಾಜ್, ಪ್ರೊ ಮಲ್ಲಿಕಾರ್ಜುನಪ್ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಕೊಡ ಪ್ರಕಾಶ್, ಹೊನ್ನೂರು ಮಹಾದೇವಸ್ವಾಮಿ, ಮಾಜಿ ನಿಗಮ ಮಂಡಳಿ ಅಧ್ಯಕ್ಷ ಎಂ ರಾಮಚಂದ್ರ, ಹಿಂದುಳಿದ ಮೋರ್ಚಾಗಳ ಅಧ್ಯಕ್ಷ ಹನೂರು ವೆಂಕಟೇಶ್, ನೂರೊಂದಶೆಟ್ಟಿ, ಜಯ ಸುಂದರ, ಆರ್ ಸುಂದರ ಮೂರ್ತಿ, ಚಂದ್ರು, ಜಿಲ್ಲಾ  ಉಪಾಧ್ಯಕ್ಷ ಅರಕಲವಾಡಿ ನಾಗೇಂದ್ರ, ನಟರಾಜ್ ಗೌಡ, ರೇವಣ್ಣ, ಬೂದಿ ತಿಟ್ಟು ಶಿವಕುಮಾರ್,ಮಹೇಶ್, ಮಂಡಲ ಅಧ್ಯಕ್ಷರುಗಳಾದ ಚಿಂತು ಪರಮೇಶ್, ಅನಿಲ್, ವೃಷಬೇಂದ್ರೆ, ಸಾಹಿತಿ ಕೋಡಿ ಉಗನೇ ಮಂಜು, ಶ್ರೀ ಧರ್ ಎಸ್.ಸಿ ಮೋರ್ಚಾ ಮಂಡಲ್ ಸಿದ್ದಪ್ಪ ವಿವಿಧ ಮೋರ್ಚಾಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು.

ದಲಿತರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್‌ಗೆ ಸೀಮಿತವಾಗಿಸಿದೆ: ನಾರಾಯಣಸ್ವಾಮಿ Read More

ಬಲೂಚಿಸ್ತಾನ್ ಅರೆಸೇನಾ ಪಡೆ ಕಚೇರಿ ಬಳಿ ಮಹಿಳಾ ಆತ್ಮಹುತಿ ಬಾಂಬರ್ ಸ್ಪೋಟ

ಕರಾಚಿ: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದಲ್ಲಿರುವ ಅರೆಸೇನಾ ಪಡೆಯ ಪ್ರಧಾನ ಕಚೇರಿ ಪ್ರವೇಶದ್ವಾರದಲ್ಲಿ ನಿಷೇಧಿತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯ ಮಹಿಳಾ ಆತ್ಮಹುತಿ ಬಾಂಬರ್ ಒಬ್ಬಾಕೆ ತನ್ನನ್ನೇ ಸ್ಫೋಟಿಸಿಕೊಂಡ‌‌ ಘಟನೆ ನಡೆದಿದೆ.

ಈ‌ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿದ್ದು ಆರು ಉಗ್ರರನ್ನು ಉಡೀಸ್ ಮಾಡಲಾಗಿದೆ.

ತನ್ನನ್ನು ತಾನು ಸ್ಪೋಟಿಸಿಕೊಂಡ ಬಾಂಬರ್‌ ಮಹಿಳೆಯನ್ನು ಜಿನಾಟಾ ರಫೀಕ್ ಎಂದು ಗುರುತಿಸಲಾಗಿದೆ.

ಸ್ಫೋಟದ ನಂತರ, ಆರು ಉಗ್ರರು ಪ್ರಧಾನ ಕಚೇರಿಗೆ ನುಗ್ಗಲು ಯತ್ನಿಸಿದ್ದಾರೆ, ತಕ್ಷಣ ಎಚ್ಚೆತ್ತ ಭದ್ರತಾ ಪಡೆಗಳು ಪ್ರವೇಶದ್ವಾರದ ಬಳಿಯೇ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು, ಉಳಿದ ಮೂವರು ಎಫ್‌ಸಿ ಸಿಬ್ಬಂದಿ ಸುತ್ತುವರಿಯುವ ಮೊದಲೇ ಆವರಣ ಪ್ರವೇಶಿಸಿದ್ದಾರೆ, ಆಗ ಮೂವರನ್ನೂ ಹತ್ಯೆ ಮಾಡಲಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಸಂಜೆಯವರೆಗೆ ಪ್ರಧಾನ ಕಚೇರಿಯ ಒಳಗಿನಿಂದ ಗುಂಡಿನ ಸದ್ದು ಮತ್ತು ಸ್ಫೋಟಗಳು ಕೇಳಿಬಂದವು ಎಂದು ಸ್ಥಳೀ ವಾಸಿಗಳು ತಿಳಿಸಿದ್ದಾರೆ.

ಬಲೂಚಿಸ್ತಾನದಲ್ಲಿ ಅತ್ಯಂತ ಸಕ್ರಿಯ ಮತ್ತು ಸುಸಜ್ಜಿತ ದಂಗೆಕೋರ ಗುಂಪು ಎಂದು ಪರಿಗಣಿಸಲಾದ ಬಿಎಲ್‌ಎ, ಮಹಿಳಾ ಆತ್ಮಹುತಿ ದಾಳಿಕೋರಳನ್ನು ಬಳಸಿಕೊಂಡು ಮೂರನೇ ಬಾರಿ ದಾಳಿ ಮಾಡಿದೆ.

ಬಲೂಚಿಸ್ತಾನ್ ಅರೆಸೇನಾ ಪಡೆ ಕಚೇರಿ ಬಳಿ ಮಹಿಳಾ ಆತ್ಮಹುತಿ ಬಾಂಬರ್ ಸ್ಪೋಟ Read More

ಇಮ್ರಾನ್ ಖಾನ್ ಭೇಟಿಯಾದ‌ ಸಹೋದರಿ:ಸಾವಿನ ವದಂತಿಗಳಿಗೆ ತೆರೆ

ಪಾಕಿಸ್ತಾನ: ಪಾಕ್ ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಾವಿನ ಊಹಾಪೋಹದ ಸುದ್ದಿ ಹರಡಿದ್ದರ ಬೆನ್ನಲ್ಲೆ ಜೈಲಿನಲ್ಲಿ ಇಮ್ರಾನ್ ರನ್ನು ಸಹೋದರಿ ಡಾ.ಉಜ್ಮಾ ಖಾನಮ್ ಭೇಟಿಯಾಗಿ‌ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ವದಂತಿಗಳ ನಡುವೆ ಪಾಕಿಸ್ತಾನ ಸರ್ಕಾರ ಜೈಲಿನಲ್ಲಿ ಇಮ್ರಾನ್ ಖಾನ್ ಭೇಟಿಯಾಗಲು ಅವರ ಸಹೋದರಿಗೆ ಅವಕಾಶ ನೀಡಿತ್ತು.

ಮಂಗಳವಾರ ರಾವಲ್ಪಿಂಡಿಯ ಅಡಿಯಾಲ ಜೈಲಿನ ಅಧಿಕಾರಿಗಳು ಸಹೋದರನನ್ನು ಭೇಟಿ ಮಾಡಲು ಉಜ್ಮಾ ಖಾನಮ್ ಅವರಿಗೆ ಅನುಮತಿ ನೀಡಿತ್ತು.

ಇಮ್ರಾನ್ ಖಾನ್ ಅವರ ಭೇಟಿಯನ್ನು ನಿರ್ಬಂಧಿಸಲಾಗಿದೆ ಎಂದು ಆರೋಪಿಸಿ ಪಿಟಿಐ ಸದಸ್ಯರು ಇಸ್ಲಾಮಾಬಾದ್ ಹೈಕೋರ್ಟ್ ಮತ್ತು ಅಡಿಯಾಲ ಜೈಲಿನ ಹೊರಗೆ ಪ್ರತಿಭಟನೆ ಕೂಡಾ ನಡೆಸಿದ್ದರು.

ಕಳೆದ ವಾರ, ಇಮ್ರಾನ್ ಖಾನ್ ಅವರ ಮಗ ಮತ್ತು ಸಹೋದರಿ ಇಬ್ಬರೂ ಜೈಲಿನಲ್ಲಿರುವ ಇಮ್ರಾನ್‌ ಜೀವಂತವಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಕುಟುಂಬಕ್ಕೆ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ನ್ಯಾಯಾಲಯದ ಅನುಮತಿ ನೀಡಿದ್ದರೂ, ಅವರ ಸಹೋದರಿಯರಿಗೆ ಮತ್ತು ‌ಮಕ್ಕಳಿಗೆ ಅವರನ್ನು ಭೇಟಿ ಮಾಡಲು ಅವಕಾಶ ನಿರಾಕರಿಸಲಾಗಿದೆ ಎಂದು ವರದಿಯಾದ ನಂತರ ಅವರ ಸಾವಿನ ವದಂತಿಗಳು ಹರಡಿದವು.

ಯಾವುದೇ ಫೋನ್ ಕರೆಗಳು ಬಂದಿಲ್ಲ. ಯಾವುದೇ ಸಭೆಗಳು ನಡೆದಿಲ್ಲ. ಜೀವನದ ಬಗ್ಗೆ ಯಾವುದೇ ಪುರಾವೆಗಳಿಲ್ಲ. ನನ್ನ ಸಹೋದರ ಮತ್ತು ನಾನು ನಮ್ಮ ತಂದೆಯೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಇಮ್ರಾನ್ ಪುತ್ರ ಖಾಸಿಮ್ ಖಾನ್ ಹೇಳಿದ್ದಾರೆ.

ನನ್ನ ಸಹೋದರ ಇಮ್ರಾನ್ ಜೀವಂತವಾಗಿದ್ದರೂ ಏಕಾಂತ ಬಂಧನದಲ್ಲಿ ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ ಎಂದು ಅವರ ಸಹೋದರಿ ಡಾ. ಉಜ್ಮಾ ಖಾನ್ ಹೇಳಿದ್ದಾರೆ.

ಇಮ್ರಾನ್ ಖಾನ್ ಭೇಟಿಯಾದ‌ ಸಹೋದರಿ:ಸಾವಿನ ವದಂತಿಗಳಿಗೆ ತೆರೆ Read More

ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

ಮೈಸೂರು: ಹನುಮ ಜಯಂತಿ ಪ್ರಯುಕ್ತ ಮೈಸೂರಿನ ಜೆಎಸ್‌ಎಸ್ ವಿದ್ಯಾಪೀಠದ ಎದುರು ಇರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ವಿಜಯನಗರದ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಅವರು ಪೂಜಾ-ಕೈಂಕರ್ಯಗಳನ್ನು ನೆರವೇರಿಸಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಿದರು.

ನೂರಾರು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು.

ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ Read More

ಎಟಿಎಂ ಯಂತ್ರ ಹೊತ್ತೊಯ್ದ ಕತರ್ನಾಕ್ ಕಳ್ಳರು!

ಬೆಳಗಾವಿ: ಕತರ್ನಾಕ್‌ ಕಳ್ಳರು ಎಟಿಎಂ ಯಂತ್ರವನ್ನೇ ಹೊತ್ತೊಯ್ದಿರುವ ಘಟನೆ ಬೆಳಗಾವಿ‌ ತಾಲೂಕಿನಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇಂಡಿಯಾ ಎಂಟಿಎಂ ಯಂತ್ರವನ್ನು ಕಳ್ಳರು ಹೊತ್ತೊಯ್ದಿದ್ದಾರೆ.

ತಳ್ಳುಗಾಡಿ ಸಮೇತ ಎಟಿಎಂ ಬಳಿ ಬಂದ ಮೂವರು, ಮೊದಲು ಎಟಿಎಂಗೆ ನುಗ್ಗಿ ಅಲ್ಲಿದ್ದ ಸೆನ್ಸಾರ್ ಶಬ್ಧ ಮಾಡದಂತೆ ಬ್ಲ್ಯಾಕ್ ಸ್ಪ್ರೇ ಸಿಂಪಡಿಸಿದ್ದಾರೆ.

ನಂತರ ಎಟಿಎಂ ಮಷಿನ್ ಹೊರ ತೆಗೆದು ಅದನ್ನು ತಳ್ಳೊ ಗಾಡಿಯಲ್ಲಿಟ್ಟುಕೊಂಡು ಹೋಗಿ ಅಲ್ಲಿಂದ ತಮ್ಮ ವಾಹನಕ್ಕೆ ಯಂತ್ರವನ್ನು ಹಾಕಿಕೊಂಡು ಪರಾರಿ ಆಗಿದ್ದಾರೆ.

ಕಾಕತಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

ಎಟಿಎಂ ಯಂತ್ರ ಹೊತ್ತೊಯ್ದ ಕತರ್ನಾಕ್ ಕಳ್ಳರು! Read More