ಅಪಹರಣವಾಗಿದ್ದ ಕೆಲ ಗಂಟೆಗಳಲ್ಲೇ ಲೋಕೇಶ್ ರನ್ನು ರಕ್ಷಿಸಿದ ಪೊಲೀಸರು

ಮೈಸೂರು: ಮೈಸೂರು ವಿಜಯನಗರ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಅಪಹರಣವಾಗಿದ್ದ ಕೆಲವೇ ಗಂಟೆಗಳಲ್ಲಿ ಫೈನಾನ್ಷಿಯರ್ ಲೋಕೇಶ್ ಅವರನ್ನು ರಕ್ಷಿಸಿದ್ದಾರೆ.

ಒಂದು ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ನಾಲ್ವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂತೋಷ್ ಹೆಚ್ ಎಂ,ಅಭಿಷೇಕ್ ಹೆಚ್ ಎಸ್, ಪ್ರಜ್ವಲ್ ಆರ್ ಹಾಗೂ ದರ್ಶನ್ ಬಿ.ಎನ್ ಬಂಧಿತ ಆರೋಪಿಗಳು.
ಡಿ. 6 ರಂದು ರಾತ್ರಿ 8.15 ರ ಸಮಯದಲ್ಲಿ ವಿಜಯನಗರ 3ನೇ ಹಂತ ಹೆರಿಟೇಜ್ ಕ್ಲಬ್ ನಿಂದ ಮನೆಗೆ ಹೋಗಲು ಹೊರಗೆ ಬಂದ ಲೋಕೇಶ್ ಅವರ ಮೇಲೆ ಅಟ್ಯಾಕ್ ಮಾಡಿದ ಈ ನಾಲ್ಕು ಮಂದಿ ಕಣ್ಣಿಗೆ ಖಾರದ ಪುಡಿ ಎರಚಿ ಬಲವಂತವಾಗಿ ಒಂದು ಟಾಟಾ ಸುಮೋ ವಾಹನದಲ್ಲಿ ಹಾಕಿಕೊಂಡು ಅಪಹರಿಸಿದ್ದರು.

ನಂತರ ಲೋಕೇಶ್ ಅವರನ್ನು ಒತ್ತೆಯಾಳಗಿರಿಸಿಕೊಂಡು ಒಂದು ಕೋಟಿ ರೂ ಗಳಿಗೆ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಕಿಡ್ನಾಪ್ ಆದ ಲೋಕೇಶ್ ಪತ್ನಿ ನಯನ ಅವರು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತಕ್ಷಣ ಅಲರ್ಟ್ ಆದ ವಿಜಯನಗರ ಠಾಣೆ ಪೊಲೀಸರು ಕೆಲವೇ ಘಂಟೆಗಳಲ್ಲಿ ಆರೋಪಿಗಳನ್ನು ಕೆ ಆರ್ ನಗರದ ಹಂಪಾಪುರ ಬಳಿ ವಶಕ್ಕೆ ಪಡೆದು ಲೋಕೇಶ್ ಅವರನ್ನು ರಕ್ಷಿಸಿದ್ದಾರೆ.
ಲೋಕೇಶ್ ಕುಟುಂಬ ದಿಂದ ಹಣ ಪಡೆಯಲು ಹೋಗಿದ್ದ ಮತ್ತೊಬ್ಬ ಆರೋಪಿ ಪ್ರೀತಮ್ ತಲೆಮರೆಸಿಕೊಂಡಿದ್ದು, ಶೀಘ್ರವೆ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸಂತೋಷ್ ಮೂಲತಃ ಮಂಡ್ಯ ಜಿಲ್ಲೆ, ಕೆ ಆರ್ ಎಸ್ ರಸ್ತೆಯ ಪಂಪ್ ಹೊಸಳ್ಳಿ ಗ್ರಾಮದವನು,ಈತನಿಗೆ ಲೋಕೇಶ್ ಪರಿಚಯವಿತ್ತು ಮತ್ತು ಲೋಕೇಶ್ ಫೈನಾನ್ಸ್, ರಿಯಲ್ ಎಸ್ಟೇಟ್ ನಲ್ಲಿ ಹಣ ಮಾಡಿರುವ ವಿಚಾರ ಗೊತ್ತಿದ್ದು ಈತ ತನ್ನ ಗ್ರಾಮದವರೇ ಆದ ಪ್ರಜ್ವಲ್, ಪ್ರೀತಮ್, ದರ್ಶನ್ ಹಾಗೂ ಮೇಟಗಳ್ಳಿ ನಿವಾಸಿ ಅಭಿಷೇಕ್ ಅವರೊಂದಿಗೆ ಸೇರಿ ಲೋಕೇಶ್ ರನ್ನು ಕಿಡ್ನಾಪ್
ಮಾಡಲು ಸಂಚು ರೂಪಿಸಿದ್ದರು.

ಲೋಕೇಶ್ ರನ್ನು ಒತ್ತೆಯಾಳಾಗಿ ಇರಿಸಿಕೊಂಡು ಹಣ ಮಾಡಿಕೊಳ್ಳಬಹುದು ಎಂಬ ದುರುದ್ದೇಶ ದಿಂದ ಸುಮಾರು 15 ದಿನ ಅವರನ್ನು ಹಿಂಬಾಲಿಸಿ ಹೊಂಚು ಹಾಕಿದ್ದರು.
ಡಿ.6 ರಂದು ರಾತ್ರಿ ಹೇರಿಟೇಜ್ ಕ್ಲಬ್ ನಿಂದ ಹೊರಬಂದ ಲೋಕೇಶ್ ರನ್ನ ಅಪಹರಿಸಿ ಪತ್ನಿ ಗೆ ಒಂದು ಕೋಟಿ ರೂ ಹಣ ಕಳುಹಿಸುವಂತೆ ಡಿಮ್ಯಾಂಡ್ ಮಾಡಿದ್ದರು. ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಈ ಬಗ್ಗೆ ಪತ್ನಿ ನಯನ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಿ ಎರಡು ಮೂರು ತಂಡಗಳನ್ನ ರಚಿಸಿ ಕಾರ್ಯಾಚರಣೆ ಆರಂಭಿಸಲಾಯಿತು.
ಘಟನೆ ನಡೆದ ಕೆಲವೇ ಗಂಟೆ ಗಳಲ್ಲಿ ಪೊಲೀಸರು ಕೆ ಆರ್ ನಗರ ಹಂಪಾಪುರ ಬಳಿ ಲೋಕೇಶ್ ರನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ವಿಜಯನಗರ ಎಸಿಪಿ ರವಿ ಪ್ರಸಾದ್, ಇನ್ಸ್ಪೆಕ್ಟರ್ ಎಸ್ ಡಿ ಸುರೇಶ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಗಳಾದ ಜೈ ಕೀರ್ತಿ ಎಂ, ಆನಂದ್ ಹಾಗೂ ಸಿಬ್ಬಂದಿ ಶಂಕರ್, ವೆಂಕಟೇಶ್, ಸುನೀಲ್, ಗಂಗಾಧರ್, ಲಿಖಿತ್, ಮಂಜುನಾಥ್, ಲೋಕೇಶ್, ಚಾಲಕ ಗಿರೀಶ್ ಭಾಗವಹಿಸಿದ್ದರು.

ಅಪಹರಣವಾಗಿದ್ದ ವ್ಯಕ್ತಿಯನ್ನ ರಕ್ಷಿಸಿ ಆರೋಪಿಗಳನ್ನು ಬಂಧಿಸಿದ ಇಡೀ ತಂಡಕ್ಕೆ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಉಪ ಪೊಲೀಸ್ ಆಯುಕ್ತರುಗಳಾದ ಬಿಂದುಮಣಿ ಹಾಗೂ ಸುಂದರರಾಜ್ ಅಭಿನಂದಿಸಿದ್ದಾರೆ.

ಅಪಹರಣವಾಗಿದ್ದ ಕೆಲ ಗಂಟೆಗಳಲ್ಲೇ ಲೋಕೇಶ್ ರನ್ನು ರಕ್ಷಿಸಿದ ಪೊಲೀಸರು Read More

ಡಾ. ಬಿ ಆರ್ ಅಂಬೇಡ್ಕರ್ 69ನೇ ಮಹಾ ಪರಿನಿಬ್ಬಾಣ ದಿನ-ಸೇವಾಕಾರ್ಯ

ಮೈಸೂರು: .ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ 69ನೇ ಮಹಾ ಪರಿನಿಬ್ಬಾಣ ದಿನದ ಪ್ರಯುಕ್ತ‌ ಸೇವಾಕಾರ್ಯ ಹಮ್ಮಿಕೊಳ್ಳಲಾಯಿತು.

ನಗರದ ಸರಸ್ವತಿಪುರಂನಲ್ಲಿರುವ ಸಾನಿಧ್ಯ ವೃದ್ಧಾಶ್ರಮದ ಹಿರಿಯ ನಾಗರಿಕ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು ಹಂಪಲು ವಿತರಿಸುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿಬ್ಬಾಣ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಗೌರವ ನಮನ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಹಿರಿಯ ಕ್ರೀಡಾಪಟು ಮಹದೇವ್, ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ 69ನೇ ಮಹಾಪರಿ ನಿಬ್ಬಣ ದಿನವನ್ನು ಇಂದಿನ ಯುವಪೀಳಿಗೆ ಸ್ಮರಿಸಬೇಕು ಎಂದು ಹೇಳಿದರು.
ಅಂಬೇಡ್ಕರ್ ಅವರ ಆದರ್ಶ, ತತ್ವ ಸಿದ್ಧಾಂತವನ್ನು ಅಳವಡಿಸಿಕೊಂಡು ಅವರು ನೀಡಿರುವ ಸಂವಿಧಾನ ಅಡಿಯಲ್ಲಿ ಎಲ್ಲರೂ ಶಾಂತಿಯುತವಾಗಿ ಸಹ ಬಾಳ್ವೆಯೊಂದಿಗೆ ಬಾಳಬೇಕು ಎಂದು ತಿಳಿಸಿದರು.

ಸ್ನೇಹ ಬಳಗವು ಸೇವಾ ಕಾರ್ಯದೊಂದಿಗೆ ಗೌರವ ನಮನ ಸಲ್ಲಿಸುತ್ತಿರುವುದು ಅತ್ಯಂತ ಸಂತೋಷಕರ ಸಂಗತಿ ಎಂದು ಹೇಳಿದರು.
ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್ ಮಾತನಾಡಿ,ಡಾ. ಬಿ. ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವನ್ನು ಭಾರತದ ಪ್ರತಿಯೊಬ್ಬ ಪ್ರಜೆಯು ಅಳವಡಿಸಿಕೊಂಡು ಬದುಕುತ್ತಿದ್ದೇವೆ ಎಂದು ತಿಳಿಸಿದರು.

ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ಮತದಾನದ ಹಕ್ಕನ್ನು ನೀಡಿರುವ ಈ ಆದರ್ಶ ಪುರುಷ ಭೌತಿಕವಾಗಿ ನಮ್ಮ ಜೊತೆ ಇಲ್ಲದೆ ಇರಬಹುದು ಆದರೆ ಅವರ ನಡೆದು ಬಂದ ಹಾದಿ ಅವರ ಆದರ್ಶ ವ್ಯಕ್ತಿತ್ವ ನಮಗೆಲ್ಲರಿಗೂ ಸದಾ ಪ್ರೇರಣೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮ ದಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್,ಸಿಂಚನಗೌಡ (ಮಂಗಳಮುಖಿ), ವಿದ್ಯಾ, ಛಾಯಾ,ಗಾಯಕ ಯಶವಂತ್ ಕುಮಾರ್, ರಾಜೇಶ್ ಕುಮಾರ್, ಮಹೇಶ, ನಿರೀಕ್ಷಿತ್,ದತ್ತ ಮತ್ತಿತರರು ಹಾಜರಿದ್ದರು.

ಡಾ. ಬಿ ಆರ್ ಅಂಬೇಡ್ಕರ್ 69ನೇ ಮಹಾ ಪರಿನಿಬ್ಬಾಣ ದಿನ-ಸೇವಾಕಾರ್ಯ Read More

ಬೆಳಗಾವಿ ವಿಧಾನ ಮಂಡಲ ಅಧಿವೇಶನ:ಮಾಧ್ಯಮ ಕೇಂದ್ರ ಸ್ಥಾಪನೆ

ಬೆಳಗಾವಿ: ಸೋಮವಾರ ದಿಂದ ಡಿ.19 ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಮಾಧ್ಯಮ ಪ್ರತಿನಿಧಿಗಳ ಕರ್ತವ್ಯ ನಿರ್ವಹಣೆಗಾಗಿ ಸುವರ್ಣ ವಿಧಾನಸೌಧದ 2ನೇ ಮಹಡಿಯಲ್ಲಿ ಸುಸಜ್ಜಿತ ಮಾಧ್ಯಮ ಕೇಂದ್ರ ಸ್ಥಾಪನೆ ಮಾಡಲಾಗಿದೆ.
80 ಕ್ಕೂ ಅಧಿಕ ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದ್ದು, ಹೈ ಸ್ಪೀಡ್ ಇಂಟರ್ನೆಟ್ ಹಾಗೂ ವೈ ಫೈ ಸೌಲಭ್ಯ ಕಲ್ಪಿಸಲಾಗಿದೆ.
ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಕಾರ್ಯ ಕಲಾಪಗಳ ನೇರಪ್ರಸಾರಕ್ಕೆ ಕೂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ರಾಷ್ಟ್ರ ಮತ್ತು ರಾಜ್ಯಮಟ್ಟದ ಮಾಧ್ಯಮ ಸಂಸ್ಥೆಗಳು ಸೇರಿದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಅರ್ಹ ಮಾಧ್ಯಮ ಸಂಸ್ಥೆಗಳ ನೋಂದಾಯಿತ ಪ್ರತಿನಿಧಿಗಳಿಗೆ ಜಿಲ್ಲಾಡಳಿತದ ಸಹಯೋಗದಲ್ಲಿ ವಸತಿ,ಉಟೋಪಹಾರ ಹಾಗೂ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ತಿಳಿಸಿದ್ದಾರೆ

ಬೆಳಗಾವಿ ವಿಧಾನ ಮಂಡಲ ಅಧಿವೇಶನ:ಮಾಧ್ಯಮ ಕೇಂದ್ರ ಸ್ಥಾಪನೆ Read More

ಗೋವಾ ನೈಟ್ ಕ್ಲಬ್ ನಲ್ಲಿ ಸಿಲಿಂಡರ್ ಸ್ಫೋಟ:20 ಮಂದಿ ದುರ್ಮರಣ

ಗೋವಾ: ಉತ್ತರ ಗೋವಾದ‌ ಪಣಜಿಯ ನೈಟ್ ಕ್ಲಬ್ ವೊಂದರಲ್ಲಿ ಇಂದು ಮುಂಜಾನೆ 1 ಗಂಟೆ ವೇಳೆ ಸಿಲಿಂಡರ್ ಸ್ಫೋಟಗೊಂಡು 20 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಶನಿವಾರ ತಡರಾತ್ರಿ ಅಥವಾ ಭಾನುವಾರ ಮುಂಜಾನೆ ಒಂದು ಗಂಟೆ ಸುಮಾರಿಗೆ ಉತ್ತರ ಗೋವಾದ ಅರಪೋರಾದ ರೋಮಿಯೋ ಲೇನ್ ನ ಬಿರ್ಚ್ ನೈಟ್ ಕ್ಲಬ್ ನಲ್ಲಿ ಈ ಅವಘಡ ಸಂಭವಿಸಿದೆ.

ಪ್ರವಾಸಿಗರು ಪಾರ್ಟಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಸಿಲಿಂಡರ್ ಸ್ಪೋಟ ವಾಗಿದೆ, ಏನಾಗಿದೆ ಎಂದು ಗೊತ್ತಾಗುವಷ್ಟರಲ್ಲಿ 20 ಮಂದಿ ದಹನವಾಗಿದ್ದಾರೆ.

ಈ ಅವಘಡದಲ್ಲಿ ಕ್ಲಬ್ ನ ಸಿಬ್ಬಂಧಿ ಮೃತಪಟ್ಟಿದ್ದಾರೆ.ಸ್ಥಳಕ್ಕೆ‌ ಉತ್ತರ ಗೋವಾ ಜಿಲ್ಲೆಯ ಪೊಲೀಸರು, ಅಗ್ನಿಶಾಮಕ ಹಾಗೂ ತುರ್ತು ಸೇವಾ ಸಿಬ್ಬಂಧಿ ತೆರಳಿ ರಕ್ಷಣಾ ಕಾರ್ಯ ಕೈಗೊಂಡರು.

ಘಟನೆಗೆ ಗೋವಾ ಮುಖ್ಯ ಮಂತ್ರಿ ಪ್ರಮೋದ್ ಸಾವಂತ್ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ಗೋವಾ ನೈಟ್ ಕ್ಲಬ್ ನಲ್ಲಿ ಸಿಲಿಂಡರ್ ಸ್ಫೋಟ:20 ಮಂದಿ ದುರ್ಮರಣ Read More

ಸ್ಕಂದ ಪರ್ವತ ಪಾರ್ವತಿ ಬೆಟ್ಟಕ್ಕೆ ನಾಳೆ ಗಣಪತಿ ಶ್ರೀ‌ ಭೇಟಿ

ಮೈಸೂರು: ಮೈಸೂರಿ ಅವಧೂತ ದತ್ತಪೀಠದ‌ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಸ್ಕಂದ ಪರ್ವತ ಪಾರ್ವತಿ ಬೆಟ್ಟಕ್ಕೆ ನಾಳೆ ಬೆಳಿಗ್ಗೆ 9.30 ಕ್ಕೆ ತೆರಳಲಿದ್ದಾರೆ.

ಗುಂಡ್ಲುಪೇಟೆ ತಾಲೂಕಿನಲ್ಲಿರುವ ಕಂದೇಗಾಲ ಸ್ಕಂದ ಪರ್ವತ ಪಾರ್ವತಿ ಬೆಟ್ಟಕ್ಕೆ
50 ವರ್ಷಗಳ ನಂತರ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ಹಾಗೂ ಆಶ್ರಮದ ಕಿರಿಯ ಸ್ವಾಮೀಜಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಭೇಟಿ ನೀಡಿ ದೇವಿಯ ದರ್ಶನ ಪಡೆಯಲಿದ್ದಾರೆ.

ಭಕ್ತಾದಿಗಳು ಆಗಮಿಸಿ ಶ್ರೀಗಳ ಆಶೀರ್ವಾದಕ್ಕೆ ಪಾತ್ರರಾಗಬಹುದಾಗಿದೆ.

ಸ್ಕಂದ ಪರ್ವತ ಪಾರ್ವತಿ ಬೆಟ್ಟಕ್ಕೆ ನಾಳೆ ಗಣಪತಿ ಶ್ರೀ‌ ಭೇಟಿ Read More

ಚಳಿಗಾಲದ ಅಧಿವೇಶನ:ಸರ್ಕಾರಕ್ಕೆ ಪ್ರತಿಭಟನೆ ಬಿಸಿ-ಸ್ಥಳ ವೀಕ್ಷಿಸಿದ ಪೊಲೀಸರು

ಬೆಳಗಾವಿ: ಸೋಮವಾರದಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದ ವೇಳೆ ಬಿಜೆಪಿ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಲಿರುವ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.
ಸುವರ್ಣಸೌಧದ ಬಳಿ
ಡಿಸೆಂಬರ್ 9 ರಂದು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದ್ದು, ನಗರ ಪೊಲೀಸರು ಬಿಜೆಪಿ‌ ಮುಖಂಡರೊಂದಿಗೆ ಸ್ಥಳ ಪರಿಶೀಲಿಸಿದರು.
ರೈತರ ಜಟಿಲ ಸಮಸ್ಯೆಗಳು ಹಾಗೂ ಉತ್ತರ ಕರ್ನಾಟಕ ಭಾಗದ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕು ಎಂದು ಬಿಜೆಪಿ ಒತ್ತಾಯಿಸಿ ಸುವರ್ಣಸೌಧ ಮುತ್ತಿಗೆ ಹಾಕಲು ಪ್ಲ್ಯಾನ್ ಮಾಡಿಕೊಂಡಿದೆ.
ಪ್ರತಿಭಟನೆ ನಡೆಯಲಿರುವ ಸ್ಥಳಕ್ಕೆ ಬೆಳಗಾವಿ ನಗರ ಡಿಸಿಪಿ ಬಾರಾಯಣ ಭರಮನಿ ಹಾಗೂ ಹಿರಿಯ ಅಧಿಕಾರಿಗಳು ಮತ್ತು
ಬಿಜೆಪಿ ನಾಯಕರು ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿ ಕುಮಾರ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು.
ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಬೆಳಗಾವಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ ಹಾಜರಿದ್ದರು.

ಚಳಿಗಾಲದ ಅಧಿವೇಶನ:ಸರ್ಕಾರಕ್ಕೆ ಪ್ರತಿಭಟನೆ ಬಿಸಿ-ಸ್ಥಳ ವೀಕ್ಷಿಸಿದ ಪೊಲೀಸರು Read More

ಹೊದಿಕೆ ವಿತರಣಾ ಅಭಿಯಾನ 6ನೇದಿನಕ್ಕೆ

ಮೈಸೂರು: ಮೈಸೂರಿನ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ
ಚಳಿಗಾಲದ ಹೊದಿಕೆ ವಿತರಣಾ ಅಭಿಯಾನವು 6ನೇದಿನ ಕೂಡಾ ಮುಂದುವರೆಯಿತು.

ಚಾಮರಾಜ ಜೋಡಿ ರಸ್ತೆ, ಅಗ್ರಹಾರ ರಸ್ತೆಯಲ್ಲಿ ರಸ್ತೆ ಬದಿ ಮಲಗಿರುವ ನಿರಾಶ್ರಿತರಿಗೆ ಹೊದಿಕೆ ವಿತರಿಸಲಾಯಿತು.
ಹೊದಿಕೆ ವಿತರಣೆ ಕೈಜೋಡಿಸಿದ
ಯುವ ಭಾರತ್ ಸಂಘಟನೆಯ ಅಧ್ಯಕ್ಷರಾದ ಜೋಗಿ ಮಂಜು,ಬೆಳಕು ಸಂಸ್ಥೆಯ ಅಧ್ಯಕ್ಷರಾದ ಕೆಎಂ ನಿಶಾಂತ್ ಅವರಿಗೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ ಅಭಿನಂದನೆ ಸಲ್ಲಿಸಿದ್ದಾರೆ.

ಹೊದಿಕೆ ವಿತರಣಾ ಅಭಿಯಾನ 6ನೇದಿನಕ್ಕೆ Read More

ಅಲಾಸ್ಕಾ-ಕೆನಡಾದ ಯುಕಾನ್ ಪ್ರದೇಶದಲ್ಲಿ ಪ್ರಭಲ ಭೂಕಂಪ

ವಾಷಿಂಗ್ಟನ್‌: ಅಲಾಸ್ಕಾ ಮತ್ತು ಕೆನಡಾದ ಯುಕಾನ್ ಪ್ರದೇಶದ ನಡುವಿನ ಗಡಿಯ ಸಮೀಪ 7.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.

ಕೇಂದ್ರಬಿಂದುವು ಅಲಾಸ್ಕಾದ ರಾಜಧಾನಿ ಜುನೌದಿಂದ ವಾಯುವ್ಯಕ್ಕೆ ಸುಮಾರು 370 ಕಿಲೋಮೀಟರ್ ದೂರದಲ್ಲಿ ಮತ್ತು ಕೆನಡಾದ ವೈಟ್‌ಹಾರ್ಸ್‌ನಿಂದ ಪಶ್ಚಿಮಕ್ಕೆ ಸುಮಾರು 250 ಕಿಲೋಮೀಟರ್ ದೂರದಲ್ಲಿತ್ತು. ಸಾವಿರಾರು ಕಿಲೋಮೀಟರ್ ದೂರದ ಜನರು ಭೂಮಿ ಕಂಪಿಸುತ್ತಿರುವಂತೆ ಅನುಭವಿಸಿದ್ದಾರೆ.ಆದರೆ‌ ಯಾವುದೇ‌ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಕೆನಡಾದ ವೈಟ್‌ಹಾರ್ಸ್‌ನಲ್ಲಿರುವ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಅಧಿಕಾರಿ ಕ್ಯಾಲಿಸ್ಟಾ ಮ್ಯಾಕ್‌ಲಿಯೋಡ್ ಭೂಕಂಪ ಕುರಿತು ನಡುಕವು ಸಾಕಷ್ಟು ಬಲವಾಗಿ ಅನುಭವಿಸಿದೆ. ಹೆಚ್ಚಿನ ಸಂಖ್ಯೆಯ ಜನರು ತಮ್ಮ ಮನೆಗಳು ನಡುಗಿವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವರದಿ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಎರಡೂ ಪ್ರದೇಶಗಳಲ್ಲಿನ ಜನರು ತುಂಬಾ ಆತಂಕಕ್ಕೀಡಾಗಿದ್ದಾರೆ. ಭೂಕಂಪದ ಆಳವು ಸುಮಾರು 10 ಕಿಲೋಮೀಟರ್ ಎಂದು ವರದಿಯಾಗಿದೆ, ಅಂದರೆ ಅದು ಮೇಲ್ಮೈಗೆ ಬಹಳ ಹತ್ತಿರದಲ್ಲಿದೆ, ಇದು ಕಂಪನವನ್ನು ಇನ್ನಷ್ಟು ಅನುಭವಿಸುವಂತೆ ಮಾಡುತ್ತದೆ. ಹಲವಾರು ಸಣ್ಣ ನಂತರದ ಆಘಾತಗಳು ದಾಖಲಾಗಿದ್ದು, ಇದು ಜನರಲ್ಲಿ ಭಯ,ಆತಂಕವನ್ನು ಹೆಚ್ಚುಸುತ್ತಲೇ ಇದೆ.

ಭೂಕಂಪಕ್ಕೆ ಹತ್ತಿರದ ಕೆನಡಾದ ಪಟ್ಟಣ ಹೈನ್ಸ್ ಜಂಕ್ಷನ್ ಎಂದು ವರದಿಯಾಗಿದೆ, ಇದು ಕೇಂದ್ರಬಿಂದುದಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿದೆ. ಅಮೆರಿಕದ ಯಾಕುಟಾಟ್ ಪಟ್ಟಣವು ಕೇಂದ್ರಬಿಂದುದಿಂದ ಕೇವಲ 90 ಕಿಲೋಮೀಟರ್ ದೂರದಲ್ಲಿದೆ.
ಭೂಕಂಪದ ಕೇಂದ್ರಬಿಂದುವಿಗೆ ಹತ್ತಿರದಲ್ಲಿರುವ ಕೆನಡಾದ ಸಮುದಾಯವು ಹೈನ್ಸ್ ಜಂಕ್ಷನ್ ಆಗಿದ್ದು, ಸುಮಾರು 80 ಮೈಲುಗಳು (130 ಕಿಲೋಮೀಟರ್) ದೂರದಲ್ಲಿದೆ.

ಅಲಾಸ್ಕಾ-ಕೆನಡಾದ ಯುಕಾನ್ ಪ್ರದೇಶದಲ್ಲಿ ಪ್ರಭಲ ಭೂಕಂಪ Read More

ಭುವನೇಶ್ವರಿ ದೇವಿಯನ್ನು ನಾಡ ದೇವತೆಯಾಗಿ ಘೋಷಣೆ ಮಾಡಲು ಮನವಿ

ಮೈಸೂರು: ಕರ್ನಾಟಕ ರಾಜ್ಯದ ನಾಡ ದೇವತೆಯಾಗಿ ಕನ್ನಡ ತಾಯಿ ಭುವನೇಶ್ವರಿ ದೇವಿ ಯನ್ನು ಅಧಿಕೃತವಾಗಿ ಘೋಷಣೆ ಮಾಡುವಂತೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಕೋರಿದ್ದಾರೆ.

ಪ್ರಸ್ತುತ ಚಾಮುಂಡೇಶ್ವರಿ ದೇವಿಯನ್ನು ನಾಡ ದೇವತೆಯಾಗಿ ಕರೆಯಲಾಗುತ್ತಿದೆ ಆದರೆ ಚಾಮುಂಡೇಶ್ವರಿ ದೇವಿಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ( ಬೀದರ್ ಇಂದ ಚಾಮರಾಜನಗರ ) ವರೆಗೂ ಹೆಚ್ಚಾಗಿ ಪೂಜಿಸುವುದು ಕಡಿಮೆ ಸುಮಾರು ನಾಲ್ಕು, ಐದು, ಜಿಲ್ಲೆಗಳಲ್ಲಿ ಹೆಚ್ಚಾಗಿ ಪೂಜಿಸುತ್ತಾರೆ.
ಅಖಂಡ ಕರ್ನಾಟಕದಾದ್ಯಂತ ಕನ್ನಡಿಗರು ಕನ್ನಡ ತಾಯಿ ಭುವನೇಶ್ವರಿ ದೇವಿ ಯನ್ನು ಪೂಜಿಸಿ ಆರಾಧಿಸುತ್ತಿದ್ದಾರೆ,ರಾಜ್ಯ ಸರ್ಕಾರ ವಿಧಾನ ಸೌಧದಲ್ಲಿ ಕನ್ನಡ ತಾಯಿ ಭುವನೇಶ್ವರಿ ದೇವಿಯ ಭವ್ಯ ಪ್ರತಿಮೆ ಯನ್ನು ಸ್ಥಾಪಿಸಿರುವುದೇ ಸಾಕ್ಷಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ ಈಗಾಗಲೇ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕನಾಗಿ ವಿಶ್ವ ಗುರು ಬಸವಣ್ಣ ನವರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ
ಆದ ಕಾರಣ ರಾಜ್ಯ ಸರ್ಕಾರ ಈ ಮೇಲಿನ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ಕೂಡಲೇ ನಾಡ ದೇವತೆಯಾಗಿ ಭುವನೇಶ್ವರಿ ದೇವಿಯನ್ನು ಅಧಿಕೃತವಾಗಿ ಘೋಷಣೆ ಮಾಡಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.

ಭುವನೇಶ್ವರಿ ದೇವಿಯನ್ನು ನಾಡ ದೇವತೆಯಾಗಿ ಘೋಷಣೆ ಮಾಡಲು ಮನವಿ Read More

ನನ್ನದು ಕೃಷ್ಣತತ್ತ್ವ, ಕಾಂಗ್ರೆಸ್ ಪಕ್ಷದ್ದು ಕಂಸತತ್ತ್ವ:ಹೆಚ್ ಡಿ ಕೆ ತಿರುಗೇಟು

ನವದೆಹಲಿ: ಭಗವದ್ಗೀತೆಯನ್ನು ಶಾಲಾ ಮಕ್ಕಳಿಗೆ ಬೋಧಿಸಬೇಕು ಎಂದು ಪುನರುಚ್ಚರಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು,ನಾನು ಕೃಷ್ಣತತ್ತ್ವ ನಂಬಿದವನೇ ಹೊರತು ಕಂಸ ಹಿಂಸೆಯನ್ನಲ್ಲ
ಎಂದು ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಹೆಚ್ ಡಿ ಕೆ,ನನ್ನನ್ನು ಮನುವಾದಿ ಎಂದಿರುವ ಮುಖ್ಯಮಂತ್ರಿ, ಸೈದ್ಧಾಂತಿಕ ಅಧಃಪತನ ಎಂದು ತಾಳ ಹಾಕಿದ ಸಚಿವ ಮಹದೇವಪ್ಪ, ಇವರಿಬ್ಬರೂ ಶಾಲಾ ಮಕ್ಕಳಿಗೇನು ಬೋಧಿಸುತ್ತಾರೆ ಎಂಬುದನ್ನು ಹೇಳಲಿ ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ ಎಂದು ಕಾರವಾಗಿ ಟೀಕಿಸಿದ್ದಾರೆ.

ಭಗವದ್ಗೀತೆ ಜಗದ ಬೆಳಕು, ಅರಿವು. ಸನ್ಮಾರ್ಗದ ದೀವಿಗೆ. ಆದರ್ಶಗಳ ಮಹಾಸಾರ. ಮಕ್ಕಳನ್ನು ಬಾಲ್ಯದಿಂದಲೇ ಒಳ್ಳೇ ಮಾರ್ಗದಲ್ಲಿ ನಡೆಸುವ ಸುದುದ್ದೇಶದಿಂದ ನಾನು ಕೇಂದ್ರದ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್‌ ಅವರಿಗೆ ಪತ್ರ ಬರೆದು ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು ಎಂದು ವಿನಂತಿಸಿದ್ದೇನೆ. ಬಹುಶಃ; ಮಹದೇವಪ್ಪನವರಿಗೆ ಭಗವದ್ಗೀತೆಯ ಸಾರ ಗೊತ್ತಿಲ್ಲ. ಅವರಿಗೆ ಇನ್ನಾವುದೋ ಗ್ರಂಥದ ಸಾರ ಗಾಢವಾಗಿ ಇಳಿದಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.
ನಾನೂ ಸೇರಿ ಜನಪ್ರತಿನಿಧಿಗಳೆಲ್ಲರೂ ಪ್ರಮಾಣ ಸ್ವೀಕರಿಸುವುದು ಸಂವಿಧಾನಬದ್ಧವಾಗಿಯೇ. ದೇವರು, ತಂದೆ ತಾಯಿ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುತ್ತೇವೆ. ಇದು ಕೂಡ ಸನ್ಮಾರ್ಗವೇ. ಹಾಗಾದರೆ ಮಹದೇವಪ್ಪನವರ ಮಾರ್ಗ ಯಾವುದು ಕಂಸ ಮಾರ್ಗವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮಹದೇವಪ್ಪನವರೇ.. ನಿಮಗೆ ತಿಳಿದಿರಲಿ. ಇವತ್ತು ಭಾರತದ ರಾಜನೀತಿ ನಿಂತಿರುವುದೇ ಕೃಷ್ಣತತ್ತ್ವದ ಮೇಲೆ. ಸಮರ, ರಾಜಕೀಯ, ಜ್ಞಾನ, ಆಡಳಿತ, ಮನುಷ್ಯ ಸಂಬಂಧಗಳು ಎಲ್ಲಕ್ಕೂ ಭಗವದ್ಗೀತೆಯೇ ದೀವಿಗೆ. ಕೃಷ್ಣಬೋಧೆ ಸಾರ್ವಕಾಲಿಕ, ಭಗವದ್ಗೀತೆ ಕಾಲಾತೀತ. ನಿಮ್ಮನ್ನು ಅಜ್ಞಾನಿ ಎನ್ನುವುದು ನನಗೆ ಇಷ್ಟವಿಲ್ಲ. ಸಂವಿಧಾನ, ಪ್ರಜಾಪ್ರಭುತ್ವ ಎಂದು ಸದಾ ಜಪಿಸುವ ನೀವು, ಭಗವದ್ಗೀತೆಯ ಜತೆಗೆ ರಾಮಾಯಣ, ಮಹಾಭಾರತವನ್ನೂ ಓದಿ. ಇದು ನನ್ನ ಸಲಹೆಯಷ್ಟೇ. ಭಗವದ್ಗೀತೆ ಓದಬೇಡಿ ಎಂದು ನಾನೆಂದೂ ಹೇಳಿಲ್ಲ,ಹೇಳುವುದೂ ಇಲ್ಲ ಎಂದು ಹೆಚ್ ಡಿ ಕೆ ತಿಳಿಸಿದ್ದಾರೆ.

ನನ್ನದು ಕೃಷ್ಣತತ್ತ್ವ, ಕಾಂಗ್ರೆಸ್ ಪಕ್ಷದ್ದು ಕಂಸತತ್ತ್ವ:ಹೆಚ್ ಡಿ ಕೆ ತಿರುಗೇಟು Read More