ಆಸ್ಟ್ರೇಲಿಯಾ ಚುನಾವಣೆ:ಗೆಲುವು ಸಾಧಿಸಿಮತ್ತೆ ಪ್ರಧಾನಿ ಗಾದಿಗೇರಿದ ಅಲ್ಬನೀಸ್

Spread the love

ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ನಡೆದ ಚುನಾವಣೆಯಲ್ಲಿ ಆಂಥೋನಿ ಅಲ್ಬನೀಸ್ ಅವರ ನೇತೃತ್ವದ ಲೇಬ‌ರ್ ಪಕ್ಷ ಭಾರೀ ಗೆಲುವು ಸಾಧಿಸಿದೆ.

ಈ ಗೆಲುವಿನ ಹಿನ್ನೆಲೆಯ ಅಲ್ಬನೀಸ್ ಅವರು ಮತ್ತೆ ಆಸ್ಟ್ರೇಲಿಯಾ ಪ್ರಧಾನಿಯಾಗಿ ಆಯ್ಕೆಯಾಗಿದ್ದು ಅಧಿಕಾರದ ಗದ್ದುಗೆ ಅಲಂಕರಿಸಿದ್ದಾರೆ.

ಕಳೆದ 21 ವರ್ಷಗಳಲ್ಲಿ ಎರಡನೇ ಅವಧಿಗೆ ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಅಲ್ಬನೀಸ್ ಪಾತ್ರರಾಗಿದ್ದಾರೆ.

ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರದ ವಿಜಯೋತ್ಸವದಲ್ಲಿ ಮಾತನಾಡಿದ ಅಲ್ಬನೀಸ್ ಅವರು, ಇಂದು ನಮ್ಮ ಜನರು ದೇಶದ ಮೌಲ್ಯಗಳಿಗಾಗಿ ಮತ ಹಾಕಿದ್ದಾರೆ ಎಂದು ತಿಳಿಸಿದರು.

150 ಸದಸ್ಯಬಲದ ಸಂಸತ್ತಿನಲ್ಲಿ ಲೇಬ‌ರ್ ಪಕ್ಷವು 85 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ವಿರೋಧ ಪಕ್ಷವಾದ ಕನ್ಸರ್‌ವೇಟಿವ್ 41 ಕ್ಷೇತ್ರಗಳಲ್ಲಿ, 9 ಕ್ಷೇತ್ರಗಳಲ್ಲಿ ಇತರರು ಜಯ ಸಾಧಿಸಿದ್ದಾರೆ.15 ಕ್ಷೇತ್ರಗಳಲ್ಲಿ ಯಾರು ಗೆಲುವಿನ ನಗೆ ಬೀರಬಹುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಸುದ್ದಿಸಂಸ್ಥೆ ಅಂದಾಜಿಸಿದೆ.

ಅಲ್ಬನೀಸ್ ಅವರ ಸ್ಥಿರವಾದ ನಾಯಕತ್ವವು ಅವರನ್ನು ಗೆಲುವಿಗೆ ಮುಖ್ಯ ಕಾರಣ ಎಂದು ಪ್ರಮುಖ ನಾಯಕರು ಬಣ್ಣಿಸಿದ್ದಾರೆ.

ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಲ್ಬನೀಸ್ ಅವರು ಎರಡನೆ ಬಾರಿಗೆ ಆಸ್ಟ್ರೇಲಿಯಾ ದೇಶದ ಪ್ರಧಾನಿಯಾಗಿರುವುದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ದೇಶಗಳ ಅಗ್ರಗಣ್ಯ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.