ಮೈಸೂರು: ಕೃಷ್ಣನ ಸಂದೇಶವನ್ನು ಅಳವಡಿಸಿಕೊಂಡರೆ ಬದುಕಿನ ಅನೇಕ ಸವಾಲುಗಳಿಗೆ ದಾರಿ ಗೋಚರಿಸುತ್ತದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಿ ಆರ್ ನಟರಾಜ್ ಜೋಯಿಸ್ ಹೇಳಿದರು.
ನಗರದ ತ್ಯಾಗರಾಜ ರಸ್ತೆಯಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಅರಸು ಮಹಿಳಾ ಜಾಗೃತಿ ಸಭ ಟ್ರಸ್ಟ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಏರ್ಪಡಿಸಿದ್ದ ಶ್ರೀ ಕೃಷ್ಣ ಮತ್ತು ರಾಧೆಯರ ಸಮಾಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಿಕ್ಕಂದಿನಲ್ಲಿಯೇ ಕೃಷ್ಣನ ಕಥೆಗಳನ್ನು ಶಾಲೆಗಳಲ್ಲಿ ಮತ್ತು ಪೋಷಕರು ಮನೆಗಳಲ್ಲಿ ಹೇಳುವುದರಿಂದ ವಿದ್ಯಾರ್ಥಿ ಗಳಿಗೂ ಕೃಷ್ಣ ಭಕ್ತಿ ಬರಲಿದೆ. ನ್ಯಾಯ, ನೀತಿ, ಧರ್ಮವನ್ನು ಉಳಿಸುವ ಪಾಠವನ್ನು ಚಿಕ್ಕಂದಿನಿಂದಲೇ ಕಲಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಹೇಳಿದರು.
ವಿದ್ಯಾ ಸ್ಪಂದನ ಅಧ್ಯಕ್ಷ ಪುನೀತ್ ಜಿ ಕೂಡ್ಲೂರು ಅವರು ಧಾರ್ಮಿಕದ ಬಗ್ಗೆ ಅರಿವು ಮೂಡಿಸಿದರು.
ಮಕ್ಕಳು ಶ್ರೀಕೃಷ್ಣ ರಾಧೆ ವೇಷ ಧರಿಸಿ ಗಮನ ಸೆಳೆದರು.
ಕರ್ನಾಟಕ ಅರಸು ಮಹಾಮಂಡಳಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀಧರ ರಾಜೇ ಅರಸ್, ವಕೀಲರಾದ ದೇವಕಿ ಅರಸ್, ಸಾಹಿತಿ ಎಂ ಜಿ ಆರ್ ಅರಸ್, ಅರಸು ಮಹಿಳಾ ಜಾಗೃತಿ ಸಭಾ ಟ್ರಸ್ಟ್ ಅಧ್ಯಕ್ಷೆ ಇಂದುಕಳ ಅರಸ್, ಗೌರವ ಕಾರ್ಯದರ್ಶಿ ವಿಜಯ ಅರಸ್, ಅಂಬಿಕಾ ಅರಸ್, ರೂಪ ಅರಸ್, ಜಮುನಾ ಅರಸ್, ಬೇಬಿ ಅರಸ್ ಮತ್ತಿತರ ಸದಸ್ಯರು ಪಾಲ್ಗೊಂಡಿದ್ದರು.