ಬೆಲೀಜ್: ಚಾಕು ತೋರಿಸಿ ವಿಮಾನವನ್ನು ಹೈಜಾಕ್ ಮಾಡಲು ಬಂದ ವ್ಯಕ್ತಿ ಪ್ರಯಾಣಿಕರೊಬ್ಬರು ಹಾರುಸಿದ ಗುಂಡಿಗೆ ಬಲಯಾದ ಘಟನೆ ಬೆಲೀಜ್ನಲ್ಲಿ ನಡೆದಿದೆ.
ಅಮೆರಿಕದ ಪ್ರಜೆಯೊಬ್ಬ ಚಾಕು ತೋರಿಸಿ ವಿಮಾನ ಹೈಜಾಕ್ ಮಾಡಲು ಯತ್ನಿಸಿದ್ದ,ತಕ್ಷಣ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಪರವಾನಗಿ ಹೊಂದಿರುವ ಪಿಸ್ತೂಲಿನಿಂದ ಆರೋಪಿಗೆ ಗುಂಡು ಹಾರಿಸಿದ್ದಾರೆ.ಹಾಗಾಗಿ ಆತ ಅಲ್ಲೇ ಸಾವನ್ನಪ್ಪಿದ್ದಾನೆ.
ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.
ಸ್ಯಾನ್ ಪೆಡ್ರೊಗೆ ತೆರಳುತ್ತಿದ್ದ ವಿಮಾನ ಆಕಾಶದಲ್ಲಿ ಹಾರುತ್ತಿದ್ದಾಗ ವ್ಯಕ್ತಿ ಪ್ರಯಾಣಿಕರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ.
ಆಗ ಪ್ರಯಾಣಿಕರು ಆತಂಕದಿಂದ ಕಿರುಚಾಡತೊಡಗಿದ್ದಾರೆ.ತಕ್ಷಣ ಪ್ರಯಾಣಿಕರೊಬ್ಬರು ಎಚ್ಚತ್ತು ತಮ್ಮ ಬಳಿ ಇದ್ದ ಪಿಸ್ತೂಲಿನಿಂದ ದಾಳಿಕೋರನಿಗೆ ಗುಂಡು ಹಾರಿಸಿದ್ದಾರೆ. ಆತ ಅಲ್ಲೇ ಮೃತಪಟ್ಟಿದ್ದಾನೆ.ಸಧ್ಯ ಬಚಾವಾದೆವಲ್ಲ ಎಂದು ಸಹ ಪ್ರಯಾಣಿಕರು ಗುಂಡು ಹಾರಿಸಿದಾತನಿಗೆ ಧನ್ಯವಾದ ಹೇಳಿದ್ದಾರೆ.
ಬೆಲೀಜ್ ಪೊಲೀಸ್ ಆಯುಕ್ತ ಚೆಸ್ಟರ್ ವಿಲಿಯಮ್ಸ್ ಅವರ ಪ್ರಕಾರ, ದಾಳಿಕೋರನನ್ನು ಅಮೆರಿಕದ ಪ್ರಜೆ ಅಕಿನ್ಯೆಲಾ ಸಾವಾ ಟೇಲರ್ ಎಂದು ಗುರುತಿಸಲಾಗಿದೆ ಎಂದು ಬೆಲೀಜ್ ಪೊಲೀಸ್ ಆಯುಕ್ತ ಚೆಸ್ಟರ್ ವಿಲಿಯಮ್ಸ್ ತಿಳಿಸಿದ್ದಾರೆ.ಜತೆಗೆ ಗುಂಡು ಹಾರಿಸಿದ ಪ್ರಯಾಣಿಕನನ್ನು ಹೊಗಳಿದ್ದಾರೆ.