ಬ್ಯಾಂಕಾಕ್: ಮ್ಯಾನ್ಮಾರ್‌ನ ಸಾಗೈಂಗ್ ಪ್ರದೇಶದ ಬೌದ್ಧ ಮಠವೊಂದರ ಮೇಲೆ ನಡೆದ ವಾಯುದಾಳಿಯಲ್ಲಿ 23 ಮಂದಿ ಮೃತ ಪಟ್ಟಿದ್ದಾರೆ.
ಸಾಗೈಂಗ್ ಪಟ್ಟಣದ ಲಿನ್ ಟಾ ಲು ಗ್ರಾಮದಲ್ಲಿರುವ ಮಠದ ಮೇಲೆ ರಾತ್ರಿಯಿಡೀ ವೈಮಾನಿಕ ದಾಳಿ ನಡೆಸಲಾಗಿದೆ.
ಈ ದಾಳಿಯಲ್ಲಿ ಸುಮಾರು 30 ಮಂದಿ ಗಾಯಗೊಂಡಿದ್ದು ಅವರ ಪೈಕಿ 10 ಮಂದಿ ಸ್ಥಿತಿ ಗಂಭೀರವಾಗಿದೆ.
ಬೆಳಗಿನ ಜಾವ 1 ಗಂಟೆ ಸುಮಾರಿಗೆ ಮಠದ ಕಟ್ಟಡದ ಮೇಲೆ ಫೈಟರ್ ಜೆಟ್ ಸ್ಫೋಟಗಳನ್ನು ಬೀಳಿಸಿದ ನಂತರ ನಾಲ್ಕು ಮಕ್ಕಳು ಸೇರಿದಂತೆ 23 ಮಂದಿ ಮೃತಪಟ್ಟಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಈ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ತಪ್ಪಿಸಿಕೊಳ್ಳಲು ಹತ್ತಿರದ ಹಳ್ಳಿಗಳ 150ಕ್ಕೂ ಹೆಚ್ಚು ಜನರು ಮಠದಲ್ಲಿ ಆಶ್ರಯ ಪಡೆದಿದ್ದರು.
ಈ ದಾಳಿಯನ್ನು ಯಾರು, ಯಾವಕಾರಣಕ್ಕಾಗಿ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ.