ಸುಣ್ಣದಕೇರಿ, ಬೆಸ್ತರಗೇರಿ ಯಲ್ಲಿ ಶಾಸಕ ಶ್ರೀವತ್ಸ ಪಾದಯಾತ್ರೆ

Spread the love

ಮೈಸೂರು: ಮೈಸೂರು ನಗರಪಾಲಿಕೆ ೫೦ನೇ ವಾರ್ಡ್ ವ್ಯಾಪ್ತಿಯ ಸುಣ್ಣದಕೇರಿ ಹಾಗೂ ಬೆಸ್ತರಗೇರಿ ಭಾಗದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ ಅವರು‌ ಪದಯಾತ್ರೆ ನಡೆಸಿ ನಿವಾಸಿಗಳ ಸಮಸ್ಯೆ ಆಲಿಸಿದರು.

ಸುಣ್ಣದಕೇರಿಯ ೪ನೇ ಕ್ರಾಸ್‌ನಿಂದ ೯ನೇ ಕ್ರಾಸ್‌ವರೆಗೆ ಪಾದಯಾತ್ರೆ ನಡೆಸಿದ ಅವರು, ನಿವಾಸಿಗಳ ಕುಂದು-ಕೊರತೆ ಆಲಿಸಿದರು.

ಈ ವೇಳೆ ಕಳೆದ ಎರಡು ಮೂರು ದಿನಗಳಿಂದ ಸುಣ್ಣದಕೇರಿಗೆ ನೀರು ಸರಬರಾಜಿನಲ್ಲಿ ತೊಂದರೆಯಾಗಿದ್ದು ಪರಾಡುವಂತಾಗಿದೆ ಎಂದು ಮಹಿಳೆಯರು ಬೇಸರ ವ್ಯಕ್ತಪಡಿಸಿದರು.

ಒಳಚರಂಡಿ ವ್ಯವಸ್ಥೆ ಸರಿಯಿಲ್ಲ, ಕೆಲ ರಸ್ತೆಗಳು ಹಾಳಾಗಿವೆ,ಪಾಲಿಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಕೆಲವರು ಆರೋಪಿಸಿದರು.

ಮತ್ತೆ ಕೆಲವರು ಕೂಡಲೇ ಕುಡಿಯುವ ನೀರು ಸರಬರಾಜು ಮಾಡಿ ಎಂದು ಮನವಿ ಮಾಡಿದರು.

ನಿವಾಸಿಗಳ ಮನವಿಗೆ ಸ್ಪಂದಿಸಿದ ಶಾಸಕರು, ನೀರು ಸರಬರಾಜಿನ ಪೈಪ್‌ಲೈನ್ ವಾಲ್ವ್ ಬ್ಲಾಕ್ ಆಗಿರುವುದರಿಂದ ಸರಬರಾಜಿನಲ್ಲಿ ತೊಂದರೆಯಾಗಿದೆ. ಕೂಡಲೇ ದುರಸ್ಥಿ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಶ್ರೀವತ್ಸ ಸೂಚಿಸಿದರು.

ಸುಣ್ಣದಕೇರಿ ೯ನೇ ಕ್ರಾಸ್ ಸಮೀಪದ ರಸ್ತೆಬದಿಯಲ್ಲಿ ಮೂತ್ರ ವಿರ್ಸಜನೆ ಮಾಡುತ್ತಿದ್ದಾರೆಂಬ ನಿವಾಸಿಗಳ ದೂರಿನ ಮೇರೆಗೆ ತಡೆಗೋಡೆ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಸುಣ್ಣದಕೇರಿ ೭ ಮತ್ತು ೯ ನೆ ಕ್ರಾಸ್ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿ, ಕಾಂಕ್ರೀಟ್ ರಸ್ತೆ ಅಭಿವೃದ್ಧಿಯಲ್ಲಿ ಯಾವುದೇ ಲೋಪವಾಗಬಾರದು ಎಂದು ಗುತ್ತಿಗೆದಾರರಿಗೆ ಶಾಸಕರು ಎಚ್ಚರಿಸಿದರು.

ಪಾಲಿಕೆ ಎಇಇ ಧನುಷ್, ಎಇ ಪ್ರಶಾಂತ್, ವಾಟರ್ ಇನ್ಸ್‌ಫೆಕ್ಟರ್ ಮಧು, ಬಿಜೆಪಿ ಮುಖಂಡರಾದ ಜೋಗಿ ಮಂಜು, ಕೃಷ್ಣನಾಯಕ, ಜೋಗಪ್ಪ, ರಾಕೇಶ್‌ಗೌಡ, ಲೋಕೇಶ್, ಜಯಸಿಂಹ, ಜಗದೀಶ್, ರಾಜೇಶ್, ಪ್ರದೀಪ್, ಕಿಶೋರ್,ಕೀರ್ತಿ, ಸ್ಥಳೀಯ ನಿವಾಸಿಗಳಾದ ದಾಸಪ್ಪ, ಅಶ್ವಥ್, ಮಹೇಶ್ ನಾಯಕ್ ಮತ್ತಿತರರು ಈ ವೇಳೆ ಹಾಜರಿದ್ದರು.