ವಯ ವಂದನ ಯೋಜನೆಯಡಿ ನೋಂದಣಿ ಕಾರ್ಯಕ್ಕೆ ಚಾಲನೆ

Spread the love

ಮೈಸೂರು: ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದ ಯುವ ಮೋರ್ಚಾ ವತಿಯಿಂದ ಪ್ರಧಾನ ಮಂತ್ರಿ ಜನ ಆರೋಗ್ಯ ವಯ ವಂದನ ಯೋಜನೆಯಡಿ ನೋಂದಣಿ ಕಾರ್ಯ ಹಮ್ಮಿಕೊಳ್ಳಲಾಯಿತು.

70 ವರ್ಷ ಹಾಗು ಮೇಲ್ಪಟ್ಟ ಹಿರಿಯರನ್ನು ನೋಂದಣಿ ಮಾಡಿಸುವ ಯುವಕರಿಂದ ಹಿರಿಯರಿಗೆ ನಮನ ಕಾರ್ಯಕ್ರಮವನ್ನು ಬೋಗಾದಿಯ ಟೆಲಿಕಾಮ್ ಬಡಾವಣೆ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಬಿಜೆಪಿ ಹಿರಿಯ ಮುಖಂಡರಾದ ಗೋಪಾಲ ರಾವ್ ಚಾಲನೆ ನೀಡಿದರು,

ಆಧಾರ್ ಸಂಪರ್ಕ ಹೊಂದಿರುವ ದೂರವಾಣಿ ಮೂಲಕ 120 ಜನರಿಗೆ ಸ್ಥಳದಲ್ಲಿಯೇ ಯೋಜನೆಗೆ ನೋಂದಾಯಿಣಿ ಮಾಡಿಸಲಾಯಿತು.

ಕಾರ್ಯಕ್ರಮ ಆಯೋಜನೆ ಮಾಡಿದ್ದ ಮಂಡಲದ ಯುವ ಮೋರ್ಚಾ ಅಧ್ಯಕ್ಷ ಮಧು ಸೋಮಶೇಖರ್ ಮಾತನಾಡಿ,ಕೇಂದ್ರ ಸರ್ಕಾರದ ಉತ್ತಮ ಯೋಜನೆಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ಕ್ಷೇತ್ರದ ನಗರ ಪಾಲಿಕೆ ವ್ಯಾಪ್ತಿಯ ಬಡಾವಣೆಗಳಲ್ಲಿ ಜನವರಿ 12ರ ಯುವ ದಿನದವರೆಗೆ ಈ ಸೇವಾ ಕಾರ್ಯಕ್ರಮ ಮುಂದುವರೆಯಲಿದೆ ಎಂದು ತಿಳಿಸಿದರು.

ಉಚಿತವಾಗಿ ಲಭಿಸುತ್ತಿರುವ ಈ ಯೋಜನೆಯನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಈ ಸೇವಾ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಬಿಎಂ ರಘು, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ರಾಕೇಶ್ ಭಟ್, ಯುವ ಮೋರ್ಚಾ ನಗರ ಅಧ್ಯಕ್ಷ ರಾಕೇಶ್ ಗೌಡ, ಮಂಡಲದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಎಸ ಟಿ ಮೋರ್ಚಾ ನಗರ ಉಪಾಧ್ಯಕ್ಷ ತ್ಯಾಗರಾಜ್, ಯುವ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿಗಳಾದ ಲೋಹಿತ್, ಸಚ್ಚಿನ್ ಗೌಡ, ಮಂಡಲದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಚಂದನ್ ಗೌಡ, ಸಾಗರ್ ಸಿಂಗ್, ಉಪಾಧ್ಯಕ್ಷರಾದ ರಾಘವೇಂದ್ರ. ಸಿ, ಸಂಜಯ್ ಪ್ರಸನ್ನ, ಸೂರ್ಯ ಪ್ರಕಾಶ್, ಮುಖಂಡರಾದ ಮಧು ಸಿ.ಎಸ್, ಶಿವು ಎಸ್, ಅವಿನಾಶ್, ಕ್ಷೇತ್ರದ ಪದಾಧಿಕಾರಿಗಳಾದ ರಾಘವೇಂದ್ರ, ಸೋಮಣ್ಣ, ರಂಗೇಶ್, ಪ್ರತಾಪ್, ಶುಭಶ್ರೀ, ಶಶಿಕಾಂತ್, ಲೋಕೇಶ್, ರಾಜ ನಾಯಕ್, ಕಾಂತರಾಜ ಅರಸು, ಭಾರ್ಗವ ಗೌಡ, ಭರತ್, ರಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.