ಪೌರಕಾರ್ಮಿಕ ನಿವಾಸಿಗಳಿಗೆ ಕಂಬಳಿವಿತರಿಸಿ 68ನೇ ಪರಿನಿರ್ವಾಣ ದಿನ ಆಚರಣೆ

Spread the love

ಮೈಸೂರು: ಮೈಸೂರಿನ ಜೀವದಾರ
ರಕ್ತ ನಿಧಿ ಕೇಂದ್ರದ ಆವರಣದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರ ಹಾಗೂ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ
ಅಂಬೇಡ್ಕರ್ ಮಹಾ‌ ಪರಿನಿರ್ವಾಣ ದಿನವನ್ನು ವಿಶೇಷವಾಗಿ ಆಚರಿಸಲಾಯಿತು.

ಪೌರಕಾರ್ಮಿಕರ ನಿವಾಸಿಗಳಿಗೆ ಕಂಬಳಿ ವಿತರಿಸುವ ಮೂಲಕ ಅಂಬೇಡ್ಕರ್ ಮಹಾ‌ ಪರಿನಿರ್ವಾಣ ದಿನವನ್ನು ಅರ್ಥಪೂರ್ಣವಾಗಿ ಮಾಡಲಾಯಿತು.

ಈ‌ ವೇಳೆ ಮಾತನಾಡಿದ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,
ದೇಶದ ಶೋಷಿತರಿಗೆ ಸಮಾನತೆ ನೀಡಲು ಜೀವನವನ್ನೇ ಮುಡಿಪಾಗಿಟ್ಟ ಡಾ.ಬಿ.ಆರ್.ಅಂಬೇಡ್ಕರ್ ಹೃನ್ಮನಗಳಲ್ಲಿ ಸದಾ ಜೀವಂತ ಎಂದು ಬಣ್ಣಿಸಿದರು.

ದೇಶ, ವಿದೇಶಗಳಲ್ಲಿ ಶಿಕ್ಷಣ ಪಡೆದು ಶೋಷಿತರ ಸಮಾನತೆಗಾಗಿ ಶಾಸನ ಬದ್ಧ ಹಕ್ಕು ನೀಡಲು ಸಂವಿಧಾನ ರಚಿಸಿದರು. ಹಣ, ಅಧಿಕಾರದ ಲಾಲಸೆಗೊಳಗಾಗದೆ ನಿಸ್ವಾರ್ಥ ಸೇವೆ ಸಲ್ಲಿಸಿದರು. ವಿಶ್ವ ಸಂಸ್ಥೆ ಅವರ ಜನ್ಮ ದಿನವನ್ನು ವಿಶ್ವ ಜ್ಞಾನ ದಿನಾಚರಣೆಯನ್ನಾಗಿ ಆಚರಿಸಲು ಘೋಷಣೆ ಮಾಡಿದೆ. ಅವರನ್ನು ವಿಶ್ವ ಗುರುಗಳನ್ನಾಗಿ ಸ್ವೀಕರಿಸುವ ಮನಸ್ಸುಗಳು ಹುಟ್ಟಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರೋಹಳ್ಳಿ ತಾಲೂಕ್ ಪಂಚಾಯಿತಿ ಸದಸ್ಯರಾದ ಸುರೇಶ್, ಉಮೇಶ್, ಮಮತಾ, ಸೂರಜ್, ಸದಾಶಿವ, ಚಂದ್ರು ಮತ್ತಿತರರು ಹಾಜರಿದ್ದರು.