ಮೈಸೂರು: ಗೋವಾದಲ್ಲಿ ನೆಡೆದ ವಿಶ್ವ ಕರಾಟೆ ಪಂದ್ಯಾವಳಿಯಲ್ಲಿ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ
ಸ್ಕಂದ ಅವರು ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿ ನಾಡಿಗೆ ಕೀರ್ತಿ ತಂದಿದ್ದಾರೆ.

14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಭಾಗವಹಿಸಿ ಕತಾ ಶಾಖೆಯ ಕರಾಟೆ ಪ್ರದರ್ಶನದಲ್ಲಿ ಅವರು ಪ್ರಥಮ ಬಹುಮಾನ ಪಡೆದರು.
ಪ್ರಶಸ್ತಿ ಪಡೆದ ಸ್ಕಂದ ಅವರನ್ನು ಕೂಡ್ಲೂರಿನ ಅವರ ಮನೆಯಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಕಂದ ನನಗೆ ಒದಗಿ ಬಂದ ಅವಕಾಶದ ಸದುಪಯೋಗ ಮಾಡಿಕೊಂಡು ಈ ಸಾಧನೆ ಮಾಡಿದೆ,ನಿರಂತರ ಪ್ರಯತ್ನ, ಪರಿಶ್ರಮ ಹಾಗೂ ಆಹಾರದಲ್ಲಿನ ಪಥ್ಯ ನಾನು ಸ್ಪರ್ಧೆಯಲ್ಲಿ ಗೆಲ್ಲಲು ಪೂರಕವಾಯಿತು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಯತ್ನ ಮಾಡಿ ನಮ್ಮ ದೇಶಕ್ಕೆ ಕರಾಟೆಯಲ್ಲಿ ಮತ್ತಷ್ಟು ಕೀರ್ತಿ ತರಲು ಶ್ರಮಿಸುತ್ತೇನೆ ಎಂದು ತಿಳಿಸಿದರು.
ಪೋಷಕರಿಗೆ, ಸೇವಾ ಭಾರತಿ ಶಿಕ್ಷಣ ಸಂಸ್ಥೆ ಗೆ ಹಾಗೂ ಶೊಟಕಾನ್ ಕರಾಟೆ ಸಂಸ್ಥೆಯ ತರಬೇತುದಾರರಾದ ಮುರುಳಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಸಂಚಾಲಕ ಪುನೀತ್ ಜಿ ಕೂಡ್ಲೂರು, ಪೋಷಕರಾದ ಕೆ.ಆರ್.ಮಂಜು , ಜ್ಯೋತಿ, ವೈಷ್ಣವಿ, ಇಂದಿರಮ್ಮ, ಕೃಷ್ಣ, ರಂಗರಾಜು, ನಾಗರಾಜು , ಶ್ರೇಯಸ್ , ಲತಾ, ಉಮಾ, ಭಾಗ್ಯ ಸೇರಿದಂತೆ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.