ಮೈಸೂರು: ಮೈಸೂರಿನ ಪಿಜಿಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನದಲ್ಲಿ ಚಿರಜೀವ ಸೇವಾ ಟ್ರಸ್ಟ್ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹಿರಿಯ ತಾಯಂದಿರ ಸಮ್ಮುಖದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಹಿರಿಯ ತಾಯಂದಿರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ಸಂಸ್ಥೆಯ ರಾಜ್ಯಾಧ್ಯಕ್ಷರಾದ ಯಾದವ್ ಹರೀಶ್, ರಾಜ್ಯ ಸಹಕಾರ್ಯ ದರ್ಶಿ ರಕ್ತದಾನಿ ಮಂಜು, ಗೌರವ ಅಧ್ಯಕ್ಷರಾದ ಸವಿತಾ ಹಾಗೂ ಎಲ್ಲಾ ತಾಯಂದಿರು ಭಾಗವಹಿಸಿದ್ದರು.
ಈ ವೇಳೆ ರಕ್ತದಾನಿ ಮಂಜು ಅವರು ಸ್ವಾತಂತ್ರ್ಯದ ಮಹತ್ವದ ಕುರಿತು ಮಾತನಾಡುತ್ತಾ,ನಮ್ಮ ತಾಯಂದಿರು ಸ್ವಾತಂತ್ರ್ಯ ಪಡೆದು, ನೆಮ್ಮದಿಯಿಂದ ಹಾಗೂ ಗೌರವದಿಂದ ಬದುಕುತ್ತಿರುವುದು ಇಂದಿನ ಈ ಸ್ವಾತಂತ್ರ್ಯ ದಿನಾಚರಣೆಗೆ ಅರ್ಥ ನೀಡಿದೆ ಎಂದು ತಿಳಿಸಿದರು.
ಆಶ್ರಮದಲ್ಲಿ ಅವರಿಗೆ ಆಶ್ರಯ, ಆರೈಕೆ ಮತ್ತು ಪ್ರೀತಿಯ ವಾತಾವರಣ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
