ಮೈಸೂರು: ನೇತಾಜಿ ಸುಭಾಷ್ ಚಂದ್ರ ಬೋಸ್ ಯೂತ್ ಮೋಟಿವೇಷನ್ ಟೀಮ್ ವತಿಯಿಂದ ಮಕ್ಕಳಿಗೆ ಮಾದಕ ವಸ್ತುಗಳನ್ನ ಉಪಯೋಗಿಸಿದರೆ ಏನೆಲ್ಲಾ ದುಷ್ಪರಿಣಾಮಗಳಾಗುತ್ತವೆ ಎಂಬ ಕುರಿತು ಅರಿವು ಮೂಡಿಸಲಾಯಿತು.
ನೇತಾಜಿ ಸುಭಾಷ್ ಚಂದ್ರ ಬೋಸ್ ಯೂತ್ ಮೋಟಿವೇಷನ್ ಟೀಮ್ ಮಾದಕ ವಸ್ತು ಗಳ ದುಷ್ಪರಿಣಾಮ ಕುರಿತು ಇಂದಿನಿಂದ ಶಾಲಾ,ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಹಾಮ್ಮಿಕೊಂಡಿದ್ದು,
ಬೀರಿಹುಂಡಿ ಜ್ಞಾನಜೋತಿ ವಿದ್ಯಾ ಶಾಲೆಯಲ್ಲಿ
ಉದ್ಘಾಟಿಸಲಾಯಿತು.
ಮಕ್ಕಳಲ್ಲಿ ಸಾಮಾಜಿಕವಾಗಿ, ಮತ್ತು ರಾಜಕೀಯವಾಗಿ ಆಸಕ್ತಿ ಇಲ್ಲದಿರುವುದು,ಸಮಾಜದ, ಏಳಿಗಾಗಿ ಹೇಗೆಲ್ಲ ಶ್ರಮಿಸಬೇಕೆಂದು, ಅರಿವು ಮೂಡಿಸಲಾಯಿತು ಹಾಗೂ ನಶಾ ಮುಕ್ತ ಭಾರತ ಮಾಡಲು ಮಕ್ಕಳಲ್ಲಿ ಜಾಗೃತಿ ಮಾಡಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲಚಂದ್ರ, ಮಾಲ್ತೇಶ್, ಶ್ರೀನಿವಾಸ್, ವೀರಭದ್ರ, ಜ್ಞಾನಜ್ಯೋತಿ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ, ಸೋಮಶೇಖರ್, ರಾಘವೇಂದ್ರ ಡಿ, ರಾಘವೇಂದ್ರ ಎ.ಸಿ, ಶ್ರೀನಿವಾಸ್, ಹರ್ಷಿತ, ಮಂಜುನಾಥ್, ಮತ್ತಿತರರು ಭಾಗವಹಿಸಿದ್ದರು.
