ಮೈಸೂರು: ಆಷಾಢ ಮಾಸದ ಕಡೆಯ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಆಗಮಿಸಿ,ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ ಹಿಂದೂ ರಾಷ್ಟ್ರ ಆಗಬಾರದು ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಸರಿಯಲ್ಲ ಎಂದು ಟೀಕಿಸಿದರು.
ಯತೀಂದ್ರ ಅವರು ಹೋಗಿ ತಮ್ಮ ತಾಯಿಯ ಬಳಿ ಈ ಬಗ್ಗೆ ಪ್ರಶ್ನೆ ಕೇಳಲಿ. ನಾವು ಯಾರು, ನಮ್ಮ ಸಂಸ್ಕೃತಿ ಯಾವುದು, ನಮ್ಮ ಧರ್ಮ ಯಾವುದು, ನಾವು ಯಾವುದನ್ನು ಆಚರಣೆ ಮಾಡುತ್ತೇವೆ ಎಂಬುದನ್ನು ಯತೀಂದ್ರ ಅವರ ತಾಯಿಯ ಬಳಿ ಕೇಳಲಿ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಯತೀಂದ್ರರನ್ನು ಹೆತ್ತು ಹೊತ್ತ ಸಿದ್ದರಾಮಯ್ಯನವರ ಪತ್ನಿಯವರೇ ಮಗನಿಗೆ ಸರಿಯಾದ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.
ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಕುರಿತು ಮಾತನಾಡಿದ ಸಚಿವರು, ಆಷಾಡ ಶುಕ್ರವಾರಗಳ ಮಹತ್ವ ಹಾಗೂ ದೇವಿಯ ಅನುಗ್ರಹದ ಬಗ್ಗೆ ವಿವರಿಸಿದರು.
