ಮೈಸೂರು: ಮೆಲ್ಲಹಳ್ಳಿ ಗ್ರಾಮದಲ್ಲಿರುವ ವೆಂಕಟಾರ್ಜುನ ಧ್ಯಾನ ಮಂದಿರದಲ್ಲಿ ಶ್ರೀ ಅರ್ಜುನ ಅವಧೂತ ಮಹಾರಾಜರ ಸಾನಿಧ್ಯದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಸರಸ್ವತಿ ಹೋಮ ಹಮ್ಮಿಕೊಳ್ಳಲಾಯಿತು.

ಈ ವೇಳೆ ಮೇಘಾಲಯ ರಾಜ್ಯಪಾಲರಾದ ಸಿ .ಎಚ್. ವಿಜಯಶಂಕರ್ ರವರು ಪೂರ್ಣಾಹುತಿಯಲ್ಲಿ ಪಾಲ್ಗೊಂಡಿದ್ದರು
ಈ ವೇಳೆ ಮಾತನಾಡಿದ ಸಿ.ಎಚ್. ವಿಜಯ ಶಂಕರ್,ನವರಾತ್ರಿ ಉತ್ಸವವು ಜನರ ಬದುಕಿನಲ್ಲಿ ಅಜ್ಞಾನದಿಂದ ಜ್ಞಾನದ ಬೆಳಕನ್ನು ನೀಡುತ್ತದೆ, ಇದರಲ್ಲಿ ವಿಜಯದಶಮಿಯ ದಿನ ವಿಜಯದ ಪತಾಕೆ ಹಾರಿಸುವುದರ ಮೂಲಕ ಭರತಖಂಡವು ಹಬ್ಬದ ವಾತಾವರಣದಲ್ಲಿರುತ್ತದೆ ಎಂದು ಹೇಳಿದರು.
ವೆಂಕಟಾರ್ಜುನ ಧ್ಯಾನ ಮಂದಿರದಲ್ಲಿ ದೈವಶಕ್ತಿ ಇದೆ, ಇನ್ನೊಂದು ಕಡೆ ಈ ನೆಲದ ವನಶಕ್ತಿಯೂ ಇದ್ದು ಇಂತಹ ಧ್ಯಾನ ಮಂದಿರದಲ್ಲಿ ಧ್ಯಾನ ಮಾಡಿದರೆ ಎಲ್ಲರಿಗೂ ಪುಣ್ಯ ಸಿಗುತ್ತದೆ ಎಂದು ತಿಳಿಸಿದರು.
ಈ ಧ್ಯಾನ ಮಂದಿರದಿಂದ ಈ ಭಾಗದ ಜನರಿಗೆ ಧಾರ್ಮಿಕ,ಸಾಂಸ್ಕೃತಿಕ ಸೇವೆ ಈ ಜಿಲ್ಲೆಯ ಈ ಭಾಗದ ಎಲ್ಲಾ ಜನರಿಗೂ ಲಭ್ಯವಾಗಲಿ ಎಂದು ಆಶಿಸಿದರು.
ಈ ಜಾಗದಲ್ಲಿ ಹೋಮ ಹವನ ನಡೆಯುವುದರ ಮೂಲಕ ಈ ಭೂಮಿಯು ದೇವ ಭೂಮಿಯಾಗಿ ಪರಿವರ್ತನೆಯಾಗಲಿ ಈ ನೆಲದಲ್ಲಿ ಶಾಂತಿ, ನೆಮ್ಮದಿ ಸಿಗಲಿ ಈಗಿನ ಯುವಕರಿಗೆ ನೈತಿಕತೆಯ ಮಾರ್ಗದರ್ಶನವಾಗಲಿ ಭರತ ಖಂಡದ ಹೆಸರುವಾಸಿಯಾಗಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತೃಶ್ರೀ ರಂಗಲಕ್ಷ್ಮಿ,ನ್ಯಾಯಾಧೀಶರಾದ ಜಯಂತಿ, ಉದಯಗೌಡ ಮುಂತಾದವರು ಹಾಜರಿದ್ದರು