ಮೈಸೂರು: ಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಅವರು ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾ ಬೆಳೆದು ಬಂದ ಹಾದಿ ಕುರಿತು ಪೋಟೋ ಪ್ರದರ್ಶನ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಎರಡು ದಶಕಗಳ ಹಿಂದಿನ ಕಪ್ಪು ಬಿಳುಪಿನ ಅಪರೂಪದ ಛಾಯಾಚಿತ್ರಗಳ ಸಂಗ್ರಹ ಅಮೂಲ್ಯವಾದದ್ದು ಹಾಗೂ ಸಿನಿಮಾ ಛಾಯಾಗ್ರಾಹಕರಾದ ಪ್ರಗತಿ ಅಶ್ವಥ್ ನಾರಾಯಣ್ ಸೆರೆಹಿಡಿದಿರುವ ಹಾಗೂ ಸಂಗ್ರಹಿಸಿರುವ ಕೆಲಸ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯತ್ರಿ, ಚಲನಚಿತ್ರೋತ್ಸವ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಡಾ ಕೆ.ವಿ.ಬಸವರಾಜು, ಕಾರ್ಯದರ್ಶಿ ಹರೀಶ್ ಟಿ.ಕೆ., ಚಲನಚಿತ್ರೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕೃಪಾಕರ್ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.