ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರೂಫ್ಟಾಪ್ ಹೋಟೆಲ್ಗಳು, ಬಾರ್ಗಳು,ರೆಸ್ಟೋರೆಂಟ್ಗಳು ಹಾಗೂ ಇತರೆ ಉದ್ದಿಮೆಗಳಲ್ಲಿ ನಿಯಮ ಪಾಲನೆ ಪರಿಶೀಲಿಸಿ ಎಚ್ಚರಿಕೆ ನೀಡಲಾಯಿತು.
ಈ ಕಾರ್ಯಾಚರಣೆಯಲ್ಲಿ ಸಹಾಯಕ ಆಯುಕ್ತರು, ಅಭಿವೃದ್ಧಿ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಪರಿಸರ ಅಭಿಯಂತರರು, ಸಿವಿಲ್ ಅಭಿಯಂತರರು ಹಾಗೂ ಆರೋಗ್ಯ ಸಿಬ್ಬಂದಿ ತಮ್ಮ ತಮ್ಮ ವಲಯಗಳ ವ್ಯಾಪ್ತಿಯಲ್ಲಿ ಉದ್ದಿಮೆಗಳಿಗೆ ಭೇಟಿ ನೀಡಿ ವ್ಯಾಪಾರ ಪರವಾನಗಿ, ಅಗ್ನಿ ಸುರಕ್ಷತೆ, ಸಾರ್ವಜನಿಕ ಸುರಕ್ಷತೆ, ಸ್ವಚ್ಛತೆ, ನೈರ್ಮಲ್ಯ ಹಾಗೂ ಕಟ್ಟಡ,ಸ್ಥಳ ಬಳಕೆಯ ಸುರಕ್ಷತೆ ಕುರಿತು ಪರಿಶೀಲನೆ ನಡೆಸಿದರು.
9 ವಲಯಗಳು, 31 ಉದ್ದಿಮೆಗಳು,
9 ಮುಚ್ಚಲಾದ ಉದ್ದಿಮೆಗಳಲ್ಲಿ ಪರಿಶೀಲನೆ ನಡೆಸಲಾಯಿತು.
16 ಉದ್ದಿಮೆಗಳಿಗೆ ನೋಟಿಸ್ ನೀಡಲು ಉದ್ದೇಶಿಸಲಾಯಿತು.
3 ಉದ್ದಿಮೆಗಳಿಗೆ ಅಗ್ನಿ ಸುರಕ್ಷತಾ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
3 ಉದ್ದಿಮೆಗಳಿಗೆ ನಾಳೆ ಮುಚ್ಚುವ ಕ್ರಮಕ್ಕೆ
ಪ್ರಸ್ತಾಪಿಸಲಾಯಿತು.
ವಲಯ 1: Grand Serene ಮತ್ತು Soko by House of Commons ರೂಫ್ಟಾಪ್ ರೆಸ್ಟೋರೆಂಟ್ಗಳನ್ನು ಪರಿಶೀಲಿಸಲಾಗಿದ್ದು, ನೋಟಿಸ್ ನೀಡಲಾಗುವುದು.
ವಲಯ 2: The Crave, ವಾರ್ಡ್ 62 ಮತ್ತು Hotel Soho, ವಾರ್ಡ್ 56 ಪರಿಶೀಲಿಸಲಾಗಿದ್ದು, ನೋಟಿಸ್ ನೀಡಲಾಗುವುದು.
ವಲಯ 3: Harsha Bar, Elan Resto Bar ಮತ್ತು Kapoors Cafe Mysuru ಪರಿಶೀಲಿಸಲಾಗಿದ್ದು, ಅಗ್ನಿ ಸುರಕ್ಷತಾ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ನಾಳೆ ಮುಚ್ಚುವ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ.
ವಲಯ 4: Lee Terrace ಮತ್ತು Timberyard ರೂಫ್ಟಾಪ್ ರೆಸ್ಟೋರೆಂಟ್ಗಳನ್ನು ಮುಚ್ಚಲಾಗಿದೆ. Onesta Rooftop Restaurant, Biriyani Bi Kio ಮತ್ತು Cure Food Private Limited ಗೆ ನೋಟಿಸ್ ನೀಡಲಾಗಿದೆ.
ವಲಯ 5: Tipsy Top, Top Sip ಮತ್ತು H Cube Restaurants ಗೆ ಅಗ್ನಿ ನಂದಕಗಳನ್ನು ಅಳವಡಿಸಲು ಸೂಚಿಸಲಾಯಿತು.
Purple Haze Restaurant ಅನ್ನು ಅಬಕಾರಿ ಇಲಾಖೆಯ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಮುಚ್ಚಲಾಗಿದೆ.
ವಲಯ 6: Ambara, Roopa ಹಾಗೂ Paivista – Gufa and Andhra Ruchulu ಸೇರಿದಂತೆ 3 ರೂಫ್ಟಾಪ್ ರೆಸ್ಟೋರೆಂಟ್ಗಳನ್ನು ಪರಿಶೀಲಿಸಿ ಮುಚ್ಚಲಾಗಿದೆ.
ವಲಯ 7: The Urban Deck Rooftop Restaurant ಮತ್ತು Ashirvad Grand Hotel Rooftop Hall ಮುಚ್ಚಲಾಗಿದೆ. Noor Hotel, Siddiq Taj Hotel, Ethihad Hotel, Dawn Hotel ಮತ್ತು Banyan Leaf Restaurant ಗೆ ನೋಟಿಸ್ ನೀಡಲಾಗುವುದು.
ವಲಯ 8: Shiraz Old Tyre Stock Shop, Roof Top Cafe and Restaurant, Tippu Hotel ಮತ್ತು Bismilla Hotel ಪರಿಶೀಲಿಸಿ ನೋಟಿಸ್ ನೀಡಲಾಗಿದೆ.
ವಲಯ 9: ವಾರ್ಡ್ ಸಂಖ್ಯೆ 30, ಮಹದೇವಪುರ ಮೇನ್ ರಸ್ತೆಯಲ್ಲಿ ಸೆಲ್ಲರ್ನಲ್ಲಿ ಅಗ್ನಿ ಸುರಕ್ಷತೆ, ಎಕ್ಸಾಸ್ಟ್ ಫ್ಯಾನ್ ಹಾಗೂ ಸ್ವಚ್ಛತೆ ಇಲ್ಲದೆ ನಡೆಯುತ್ತಿದ್ದ ಉದ್ದಿಮೆಯನ್ನು ಪರಿಶೀಲಿಸಿ ಮುಚ್ಚಲಾಗಿದೆ.
ಪರಿಶೀಲನೆ ಸಂದರ್ಭದಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಕೊರತೆ, ಅಸ್ವಚ್ಛತೆ, ಸೆಲ್ಲರ್ನ ಅಸುರಕ್ಷಿತ ಬಳಕೆ, ಸರಿಯಾದ ಗಾಳಿಚಲನೆ/ಎಕ್ಸಾಸ್ಟ್ ವ್ಯವಸ್ಥೆಯ ಕೊರತೆ, ವ್ಯಾಪಾರ ಪರವಾನಗಿ ಮತ್ತು ಇತರೆ ಅನ್ವಯಿಸುವ ನಿಯಮಗಳ ಉಲ್ಲಂಘನೆ ಕಂಡುಬಂದಿದೆ.
ಮೈಸೂರು ಮಹಾನಗರ ಪಾಲಿಕೆಯು ಎಲ್ಲಾ ವಾಣಿಜ್ಯ ಉದ್ದಿಮೆಗಳಿಗೆ ಸಾರ್ವಜನಿಕ ಸುರಕ್ಷತೆ, ಸ್ವಚ್ಛತೆ, ನೈರ್ಮಲ್ಯ, ಅಗ್ನಿ ಸುರಕ್ಷತೆ ಹಾಗೂ ನಿಯಮ ಪಾಲನೆ ಕಡ್ಡಾಯ ಎಂದು ಸ್ಪಷ್ಟಪಡಿಸಿದೆ ಮುಂದಿನ ದಿನಗಳಲ್ಲಿಯೂ ಪರಿಶೀಲನೆ ಮತ್ತು ಜಾರಿ ಕಾರ್ಯಾಚರಣೆ ಮುಂದುವರಿಯಲಿದ್ದು, ನಿಯಮ ಉಲ್ಲಂಘಿಸುವ ಉದ್ದಿಮೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ಎಲ್ಲಾ ಹೋಟೆಲ್ಗಳು, ಬಾರ್ಗಳು, ರೆಸ್ಟೋರೆಂಟ್ಗಳು, ರೂಫ್ಟಾಪ್ ಉದ್ದಿಮೆಗಳು ಹಾಗೂ ಇತರೆ ವ್ಯಾಪಾರ ಉದ್ದಿಮೆಗಳು ಅಗತ್ಯ ಪರವಾನಗಿ, ಅಗ್ನಿ ಸುರಕ್ಷತಾ ಕ್ರಮಗಳು, ಸ್ವಚ್ಛತೆ, ನೈರ್ಮಲ್ಯ ಮತ್ತು ಸಾರ್ವಜನಿಕ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ನಗರ ಪಾಲಿಕೆ ಆಯುಕ್ತರು ಎಚ್ಚರಿಸಿದ್ದಾರೆ.
