ಮೈಸೂರು: ಮೈಸೂರಿನಲ್ಲಿ ಶ್ರೀ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್ 107 ನೇ ಸಂಸ್ಥಾಪನಾ ದಿನದ ಸಮಾರಂಭ ಯಶಸ್ವಿಯಾಗಿ ನೆರವೇರಿತು.
ನಗರದ ಅಗ್ರಹಾರದ ಮಾಧವಾಚಾರ್ ವೃತ್ತದಲ್ಲಿರುವ ಶ್ರೀ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಬ್ಯಾಂಕ್ ಸಂಸ್ಥಾಪಕರಾದ ಶಟ್ಟಪ್ಪ ಸಿದ್ದಪ್ಪ ಅವರ ಪುತ್ಥಳಿಗೆ ಜಿಲ್ಲಾ ಪತ್ರಕರ್ತರ ಅಧ್ಯಕ್ಷ ಕೆ.ದೀಪಕ್
ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು
ಈ ವೇಳೆ ಸಮಾರಂಭ ಕುರಿತು ಮಾತನಾಡಿದ ದೀಪಕ್, ಶ್ರೀ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್ ನಡೆಸುವ ಸಂಕಷ್ಟಗಳು ಮತ್ತು ಅದರ ಏರು ಪೇರುಗಳು ಇಂತಹ ಅದೆಷ್ಟೇ ಸಹಕಾರ ಬ್ಯಾಂಕ್’ಗಳ ನಿರ್ಮಾತೃ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆಗಳನ್ನು ವಿವರಿಸಿದರು.
ಜೊತೆಗೆ ನಾಲ್ವಡಿ ಯವರ ಕೊಡುಗೆ ಮರೆತ ಜನರ ಬಗ್ಗೆ ವಿಷಾದಿಸಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೃಷ್ಣರಾಜ ಪೊಲೀಸ್ ಠಾಣೆಯ ಉಪವಿಭಾಗದ ಸಹಾಯಕ ಉಪ ಪೊಲೀಸ್ ಆಯುಕ್ತರಾದ ಕೆ ಸಿ ಪ್ರಕಾಶ್, ಬ್ಯಾಂಕ್ ಅಧ್ಯಕ್ಷರಾದ ಡಿ ಬಸವರಾಜು (ಬಸಪ್ಪ), ಉಪಾಧ್ಯಕ್ಷೆ ಹೆಚ್ ಎನ್ ಸರ್ವಮಂಗಳ, ಪ್ರ.ವ್ಯವಸ್ಥಾಪಕರಾದ ಶಾಂತಲಾ ಸೇರಿದಂತೆ ಬ್ಯಾಂಕ್ ನ ನಿರ್ದೇಶಕರುಗಳಾದ ಎಚ್ ವಾಸು, ನo ಸಿದ್ದಪ್ಪ, ಜಿ ಎಂ ಪಂಚಾಕ್ಷರಿ, ಎಂ ಡಿ ಪಾರ್ಥಸಾರಥಿ, ಎಚ್ ವಿ ಭಾಸ್ಕರ್, ಪ್ರತಿಧ್ವನಿ ಪ್ರಸಾದ್, ಅರುಣ್ ಸಿದ್ದಪ್ಪ, ನಾಗಜ್ಯೊತಿ, ಎಂ ಎನ್ ನವೀನ್ ಕುಮಾರ್, ತಾಯೂರು ಗಣೇಶ್ ಮೂರ್ತಿ, ಎಂ ಶಿವಪ್ರಕಾಶ್, ಎಚ್ ಕೆ ಅನಂತು, ಶ್ರೀನಿವಾಸ್ ಶೆಟ್ಟಿ, ನಾಗ ಬಸವಣ್ಣ ಹಾಗು ಸಿಬ್ಬಂದಿ ಉಪಸ್ಥಿತರಿದ್ದರು.
