ಯಳಂದೂರು: ಯಳಂದೂರು ಪಟ್ಟಣದ ಕೆಪಿಎಸ್ ಶಾಲೆಯ ಆಂಗ್ಲ ಮಾಧ್ಯಮದ ಎಲ್ ಕೆ ಜಿ, ಯು ಕೆ ಜಿ ಗೆ ದಾಖಲಾತಿ ಪ್ರಕ್ರಿಯೆ ಶುಕ್ರವಾರ ನಡೆದಿದ್ದು,ಮಕ್ಕಳ ದಾಖಲಾತಿಗೆ ಪೈಪೋಟಿ ವುಂಟಾಯಿತು.
ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಲ್ ಕೆ ಜಿ, ಯು ಕೆ ಜಿ ತರಗತಿಗೆ (ಇಂಗ್ಲಿಷ್ ಮಾಧ್ಯಮ) ಮಕ್ಕಳನ್ನು ಸೇರಿಸಲು ಪ್ರತಿ ವರ್ಷ ಪಾಲಕರಲ್ಲಿ ತೀವ್ರ ಪೈಪೋಟಿ ಏರ್ಪಡುತ್ತಿದ್ದು, ವಿದ್ಯಾರ್ಥಿಗಳ ಆಯ್ಕೆಗೆ ಚೀಟಿ ಎತ್ತುವ ಪದ್ಧತಿ ಅನುಸರಿಸಲಾಗುತ್ತಿದೆ.
ಎಲ್ಕೆಜಿ ಮತ್ತು ಯುಕೆಜಿಗೆ ಪ್ರವೇಶ ಪಡೆಯಲು ಸರ್ಕಾರದ ನಿಯಮದಂತೆ 40 ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶವಿದೆ. ಆದರೆ ಇಲ್ಲಿ 67 ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಸಲಾಗಿದು ಇದರಲ್ಲಿ 40 ವಿದ್ಯಾರ್ಥಿಗಳಿಗೆ ಅವಕಾಶ ಇರುವುದರಿಂದ ಲಾಟರಿ ಚೀಟಿ ಎತ್ತುವ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.
ಮಕ್ಕಳ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಕರ್ನಾಟಕಪಬ್ಲಿಕ್ ಶಾಲೆ ಉಪ ಪ್ರಾಂಶುಪಾಲರಾದ ಆರ್. ನಂಜುಂಡಯ್ಯ ಮಾತನಾಡಿ ‘ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಶಿಕ್ಷಕರು ಶ್ರಮಿಸುತ್ತಿದ್ದಾರೆ. ಎಸ್ಡಿಎಂಸಿ ಸದಸ್ಯರು, ಪೋಷಕರ ಪ್ರೋತ್ಸಾಹವೂ ಇದೆ. ಬಡವರು, ಕೂಲಿ ಕಾರ್ಮಿಕರು, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದವರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಓದುತ್ತಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಬಿ ಇ ಒ ಮಾರಯ್ಯ,ವೈ. ಎಂ.ಮಲ್ಲಿಕಾರ್ಜುನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವಿಜಯ್, ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಮಹೇಶ್, ಹಾಗೂ ಶಾಲೆಯ ಶಿಕ್ಷಕರು,ಪೋಷಕರು ವಿದ್ಯಾರ್ಥಿಗಳು ಹಾಜರಿದ್ದರು.
