ಮೈಸೂರು: ಇರಾನ್ ದೇಶದ ಯುದ್ದದಿಂದ ಕುಸಿದ ಭಾರತದ ಆರ್ಥಿಕತೆ ಸದೃಢತೆಗೆ ಲೋಕಸಭೆ, ರಾಜ್ಯಸಭೆ ಸದಸ್ಯರು, ಕೇಂದ್ರ ಸಚಿವರು, ರಾಜ್ಯ ವಿಧಾನಸಭೆ, ವಿಧಾನ ಪರಿಷತ್ ಸದಸ್ಯರು, ಸಚಿವರು ಆರು ತಿಂಗಳ ವೇತನವನ್ನ ಬಿಡುವಂತೆ ಕರೆ ನೀಡಬೇಕೆಂದು ಚಾಮುಂಡೇಶ್ವರಿ ಬಳಗದ ಅಧ್ಯಕ್ಷ ನಜರ್ಬಾದ್ ನಟರಾಜ್ ಪ್ರಧಾನ ಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಈಗಾಗಲೇ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಮಿತವಾಗಿ ಬಳಸಲು ಕರೆ ನೀಡಿದ್ದಾರೆ, ದೇಶದ 28 ರಾಜ್ಯಗಳಲ್ಲಿ ಬಿಜೆಪಿ ಆಳ್ವಿಕೆ ಇದೆ. ಅಲ್ಲದೇ ಎನ್ಡಿಎ ಅಡಿಯಲ್ಲಿ ಹಲವು ಪಕ್ಷಗಳು ಮಿಲನಗೊಂಡಿವೆ. ಹೀಗಾಗಿ ಕನಿಷ್ಠ ಆರು ತಿಂಗಳ ವೇತನ ವಾಪಾಸ್ ನೀಡಿದರೆ ಸರ್ಕಾರಕ್ಕೆ ಹಣ ಹರಿದು ಬರಲಿದೆ ಎಂದಿದ್ದಾರೆ.
ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸೈನಿಕರು ಯುದ್ಧ ಮಾಡುವ ವೇಳೆ ಆರ್ಥಿಕ ಸಮಸ್ಯೆ ತಲೆದೋರಿದಾಗ ಸಮಸ್ತ ನಾಗರಿಕರಿಗೂ ಒಂದು ದಿನದ ಊಟ ಬಿಡುವಂತೆ ಕರೆ ನೀಡಿದ್ದರು. ಅವರ ಕರೆಗೆ ಓಗಟ್ಟ ದೇಶದ ಜನತೆ ಒಂದು ದಿನದ ಊಟ ಬಿಟ್ಟು ಮಾದರಿಯಾಗಿದ್ದರು ಎಂದು ನಜರಬಾದ್ ನಟರಾಜ್ ಸ್ಮರಿಸಿದ್ದಾರೆ.
ಅದೇ ಮಾದರಿಯಲ್ಲಿ ದೇಶದ ಜನಪ್ರತಿನಿಧಗಳು ಆರ್ಥಿಕ ಸದೃಢತೆಗಾಗಿ ವೇತನ ಬಿಟ್ಟುಕೊಟ್ಟು ಮಾದರಿಯಾಗಲಿ ಎಂದು ಅವರು ಹೇಳಿದ್ದಾರೆ.
