ಮೈಸೂರು: ನಗರ ವ್ಯಾಪ್ತಿಯಲ್ಲಿ ರಿಂಗ್ ರೋಡ್ ಒಳ ಭಾಗದಲ್ಲಿ ಹಾಲಿ ಇರುವ 11 ಕೆ.ವಿ. ಓವರ್ ಹೆಡ್ ವಿದ್ಯುತ್ ಮಾರ್ಗಗಳನ್ನು ಭೂಗತ ಕೇಬಲ್ನಿಂದ ಬದಲಾಯಿಸುವ ಕಾಮಗಾರಿಯನ್ನು ಸಿಎಂ ಸಿದ್ದರಾಮಯ್ಯ
ಪರಿಶೀಲಿಸಿದರು.
ಗುರುವಾರ ಸಿಎಂ ಶ್ರೀರಾಂಪುರದ ಬಳಿ ಇರುವ ನಾಯ್ಡು ಸ್ಟೋರ್ ಬಳಿ ಪರಿಶೀಲನೆ ನಡೆಸಿದರು.
ಕಾಮಗಾರಿಯ ಒಟ್ಟು ಕಾರ್ಯಾಪ್ರೇಷಣಾ ಮೊತ್ತ ರೂ. 588.24 ಕೋಟಿ, ಕಾಮಗಾರಿಯನ್ನು ಪೂರ್ಣಗೊಳಿಸಲು 2 ವರ್ಷ ಅವಧಿಯನ್ನು ನಿಗಧಿಪಡಿಸಲಾಗಿದೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದಿಂದ ಮೈಸೂರು ನಗರ ವ್ಯಾಪ್ತಿಯಲ್ಲಿ ರಿಂಗ್ ರೋಡ್ ಒಳ ಭಾಗದಲ್ಲಿ ಹಾಲಿ ಇರುವ 11 ಕೆ.ವಿ. ಓವರ್ ಹೆಡ್ ವಿದ್ಯುತ್ ಮಾರ್ಗಗಳನ್ನು ಭೂಗತ ಕೇಬಲ್ನಿಂದ ಬದಲಾಯಿಸುವ ಕಾಮಗಾರಿಯು ಪ್ರಗತಿಯಲ್ಲಿದೆ, ಕಾಮಗಾರಿಯಲ್ಲಿ ಒಟ್ಟು 871.09 ಕಿ.ಮೀ ಭೂಗತ ಕೇಬಲ್ ಅಳವಡಿಕೆ, 474 ಸಂಖ್ಯೆಗಳ ಆರ್.ಎಂ.ಯು ಹಾಗೂ 11 ಸಂಖ್ಯೆಯ ಕಾಂಪ್ಯಾಕ್ಟ್ ಸಬ್ಸ್ಟೇಷನ್ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ,ಈ ಕಾಮಗಾರಿಯನ್ನು ನಿರ್ವಹಿಸಲು 4 ವಿವಿಧ ಗುತ್ತಿಗೆದಾರರಿಗೆ ಮಾರ್ಚ್-2025 ರಲ್ಲಿ ಕಾರ್ಯಾಪ್ರೇಷಣೆಯನ್ನು ನೀಡಲಾಗಿದೆ ಎಂದು ಹೇಳಿದರು.
ಕಾಮಗಾರಿಯು ಪ್ರಗತಿಯಲ್ಲಿದ್ದು, ಈಗಾಗಲೇ 227.12 ಕಿ.ಮೀ ಭೂಗತ ಕೇಬಲ್ ಮತ್ತು 160 ಸಂಖ್ಯೆಯ ಆರ್.ಎಂ.ಯು ಗಳನ್ನು ಅಳವಡಿಸಲಾಗಿದ್ದು, ಶೇಕಡ 26.07 ರಷ್ಟು ಪ್ರಗತಿ ಸಾಧಿಸಲಾಗಿರುತ್ತದೆ. ಕಾಮಗಾರಿಯನ್ನು ನಿರ್ಧಿಷ್ಟ ಸಮಯದಲ್ಲಿ ಪೂರ್ಣಗೊಳಿಸಲು ಅವಶ್ಯವಿರುವ ಎಲ್ಲಾ ಕ್ರಮವಹಿಸಲಾಗಿರುತ್ತದೆ.
ಭೂಗತ ವಿದ್ಯುತ್ ವಿತರಣಾ ವ್ಯವಸ್ಥೆಯಿಂದ ಹೆಚ್ಚಿನ ವಿಶ್ವಾಸಾರ್ಹತೆ, ಕಡಿಮೆ ನಿರ್ವಹಣಾ ವೆಚ್ಚ,ಕಡಿಮೆ ವಿದ್ಯುತ್ ಅಡಚಣೆ, ನಗರದ ಸೌಂರ್ಧಯ ಹೆಚ್ಚಿಸುವಿಕೆ, ಕಡಿಮೆ ಮರ ಕತ್ತರಿಸುವಿಕೆ, ದೀರ್ಘ ಆಯುಷ್ಯ,ಕಡಿಮೆ ವಿದ್ಯುತ್ ಅಪಘಾತಗಳು,
ಸುಧಾರಿತ ವ್ಯವಸ್ಥೆಯ ಸಾಮರ್ಥ್ಯದಿಂದ ಪ್ರಯೋಜನವಾಗಲಿದೆ.
