ಬ್ರೆಜಿಲ್: ಐದು ಜನರನ್ನು ಕರೆದೊಯ್ಯುತ್ತಿದ್ದ ಪುಟ್ಟ ವಿಮಾನ ಆಗ್ನೇಯ ಬ್ರೆಜಿಲ್ನ ಬೆಲೊ ಹೊರಿಜಾಂಟೆಯಲ್ಲಿ ವಸತಿ ಕಟ್ಟಡಕ್ಕೆ ಅಪ್ಪಳಿಸಿದ್ದು ಮೇಯರ್ ಪುತ್ರ ಸೇರಿ ಮೂವರು ಮೃತಪಟ್ಟಿದ್ದಾರೆ.
ಈ ವಿಮಾನ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನವು ಕಟ್ಟಡಕ್ಕೆ ಡಿಕ್ಕಿ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಗರ ಕೇಂದ್ರದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಪಂಪುಲ್ಹಾ ವಿಮಾನ ನಿಲ್ದಾಣದಿಂದ ವಿಮಾನ ಹಾರಿದ ಸ್ವಲ್ಪ ಸಮಯದಲ್ಲೇ ಪತನಗೊಂಡಿದೆ.
ಸಾವೊ ಪಾಲೊಗೆ ತೆರಳುತ್ತಿದ್ದ ವಿಮಾನವು ಪತನಗೊಂಡಿತ್ತು. ಅಪಘಾತದಲ್ಲಿ ಪೈಲಟ್, ಮೇಯರ್ ಪುತ್ರ ಹಾಗೂ ಮತ್ತೊಬ್ಬರು ಮೃತಪಟ್ಟಿದ್ದಾರೆ.
