ಹಾಸನ: ಹಾಸನ ಸಂಚಾರಿ ಪೊಲೀಸ್ ಠಾಣೆ ವಿರುದ್ಧ ಸಾರ್ವಜನಿಕರು ಸಿಡಿದೆದ್ದಿದ್ದಾರೆ.
ಹಾಸನ ಸಂಚಾರಿ ಪೊಲೀಸ್ ಠಾಣೆ ಈಗ ನಿಯಮ ಪಾಲಿಸದೆ ಕಾನೂನು ಗಾಳಿಗೆ ತೂರಿದೆ ಎಂದು ವಿನಾಯಕ ನಗರ ನಾಗರೀಕರು ಆರೋಪಿಸಿದ್ದಾರೆ.
ಸಂಚಾರಿ ಪೊಲೀಸರು ಸೀಸ್ ಮಾಡಿದ ದೊಡ್ಡ ದೊಡ್ಡ ವಾಹನಗಳನ್ನು ನಿಲ್ಲಿಸಲು ಚನ್ನಪಟ್ಟಣದಲ್ಲಿ 16 ಕುಂಟೆ ಜಾಗ ಕೊಡಲಾಗಿದೆ,ಆದರೆ ಈ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ವಿನಾಯಕ ನಗರ ಸಾರ್ವಜನಿಕರು ದೂರಿದ್ದಾರೆ.
ವಿನಾಯಕ ನಗರದಲ್ಲಿ ಇತ್ತೀಚಿಗಷ್ಟೇ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲಾಗಿದೆ, ಇದೇ ರಸ್ತೆಯಲ್ಲಿ ಸಂಚಾರಿ ಪೊಲೀಸ್ ಠಾಣೆಯವರು ಸೀಸ್ ಮಾಡಿದ ದೊಡ್ಡ ದೊಡ್ಡ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರೀ ವಾಹನ ನಿಲ್ಲಿಸುವುದರಿಂದ ರಸ್ತೆಯಲ್ಲಿ ಗುಂಡಿ ಬಿದ್ದು ಕಿತ್ತು ಹೋಗಿದೆ ಇದರಿಂದ ವಿನಾಯಕ ನಗರ ನಿವಾಸಿಗಳಿಗೆ ಬಾರಿ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಸಂಚಾರಿ ಪೊಲೀಸರು ಭಾರೀ ವಾಹನಗಳನ್ನು ರಸ್ತೆಗೆ ನಿಲ್ಲಿಸುವುದರಿಂದ ರಸ್ತೆ ಕಿತ್ತು ಹೋಗಿ ಹಾಳಾಗಿದ್ದು ಇಲ್ಲಿ ನಮ್ಮ ವಾಹನ ಸಂಚರಿಸಲು ಸಾಧ್ಯವಾಗದೆ ಪರದಾಡುವಂತಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಶೀಘ್ರದಲ್ಲೇ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
